'ಭಿಕ್ಷೆ ಅಂತ ಆದರೂ ಹೇಳಿ ಪರವಾಗಿಲ್ಲ, ಸಹಾಯ ಬೇಕಿದೆ'

By Suvarna NewsFirst Published Sep 27, 2021, 7:54 PM IST
Highlights

* ನನ್ನ ಅಕ್ಕ ಉಷಾ ಅವರಿಗೆ ಚಿಕಿತ್ಸೆ ಕೊಡಬೇಕು

* ನನ್ನ ಅಕ್ಕನಿಗೆನ ಸಾಕಷ್ಟು ಸಮಸ್ಯೆ ಎದುರಾಗಿತ್ತು

* ನೀವೆಲ್ಲಾ ಇದ್ದೀರಾ ನಾನು ಧೈರ್ಯವಾಗಿ ಇರುತ್ತೇನೆ, ಮಾಧ್ಯಮದವರ ಸಹಾಯ ಬೇಕು

* ನಟಿ ವಿಜಯಲಕ್ಷ್ಮೀ ನೊಂದು ನುಡಿದಿದ್ದಾರೆ

ಬೆಂಗಳೂರು(ಸೆ. 27) 'ನಾಗಮಂಡಲ' ವಿಜಯಲಕ್ಷ್ಮಿ ಅವರ ತಾಯಿ ವಿಜಯ ಸುಂದರಂ ಸೆ.27ರಂದು ಕೊನೆ ಉಸಿರೆಳೆದಿದ್ದಾರೆ. ಕಾರವಾರದ ಮನೆ ಒಂದರಲ್ಲಿ ವಾಸವಿದ್ದ ವಿಜಯಲಕ್ಷ್ಮಿ ಮೂರು ದಿನಗಳಿಂದ ಬೆಂಗಳೂರಿನ (Bengaluru) ಗಾಂಧಿನಗರದಲ್ಲಿರುವ ಸಂತೃಪ್ತಿ ರೆಸಿಡೆನ್ಸಿ ಹೊಟೇಲ್‌ನಲ್ಲಿ ತಂಗಿದ್ದರು. ತಾಯಿ ಅವರ ದಿಢೀರ್ ನಿಧನದಿಂದ ವಿಜಯಲಕ್ಷ್ಮಿ (Vijayalakshmi) ಶಾಕ್ ಆಗಿದ್ದಾರೆ.

75 ವರ್ಷದ ವಿಜಯ ಸುಂದರಂ ಅವರ ಅಂತ್ಯಕ್ರಿಯೆ (Cremation) ಎಲ್ಲಿ ಮಾಡಬೇಕು ಎಂದು ಚಿಂತಿಸುತ್ತಿದ್ದಾರೆ. ಆರ್ಥಿಕ ಸಮಸ್ಯೆ (Financial Crisis) ಇರುವ ಕಾರಣ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chambers) ಮಾಜಿ ಕಾರ್ಯದರ್ಶಿ ಬಾ.ಮಾ ಹರೀಶ್ ಹೋಟೆಲ್‌ಗೆ ತೆರಳಿ ಸಾಂತ್ವಾನ ಹೇಳುತ್ತಿದ್ದಾರೆ. 

ಚೆನ್ನೈಯಲ್ಲಿ ಸಮಸ್ಯೆ ಆಗಿ ಬೆಂಗಳೂರಿಗೆ ಬಂದೆವು,  ತಾಯಿ, ಅಕ್ಕನನ್ನು ಕರೆದುಕೊಂಡು ಬೆಂಗಳೂರಿಗೆ ಬಂದೆ. ಅಕ್ಕ, ತಾಯಿ ನನ್ನ ಮಕ್ಕಳ ಸಮ. ಬೆಳಗ್ಗೆ 12 ಗಂಟೆಗೆ ಅಮ್ಮನ ನೋಡಿ ಆಘಾತ ಆಯ್ತು. ಕೂಡಲೇ ಹೋಟೆಲ್ ಸಿಬ್ಬಂದಿಯನ್ನು ಕರೆಸಿ ನೋಡಿದಾಗ ಅವರು ಇನ್ನಿಲ್ಲ  ಎಂಬ ಸಂಗತಿ ಗೊತ್ತಾಯಿತು.

"

ನಟಿ ನೋವಿಗೆ ಸ್ಪಂದಿಸಿದ ಹುಚ್ಚ ವೆಂಕಟ್

ಕೂಡಲೇ ಬಾ. ಮಾ ಹರೀಶ್ ಅವರಿಗೆ ತಿಳಿಸಿದೆ, ಅವರು ಬಂದು ಸಹಾಯ ಮಾಡ್ತಿದ್ದಾರೆ. ಸಾಕಷ್ಟು ಹೊಡೆತ ತಿಂದಿದ್ದೇನೆ, ನೀವೆಲ್ಲ ಜೊತೆಗೆ ಇದ್ದೀರಾ. ಅನಾಥ ಆಶ್ರಮಕ್ಕೆ ಕರೆದುಕೊಂಡು ಹೋಗಿ ಅಂತ್ಯ ಕ್ರಿಯೆ ನಡೆಸುತ್ತೇವೆ. ನನ್ನ ಅಕ್ಕ ಉಷಾ ಅವರಿಗೆ ಚಿಕಿತ್ಸೆಗೆ ಹಣ ಹೊಂದಿಸಬೇಕಾಗಿದೆ.

ನನ್ನ ಅಕ್ಕನಿಗೆ ಸಾಕಷ್ಟು ಸಮಸ್ಯೆ ಎದುರಾಗಿತ್ತು. ನಾನು ಮಾತನಾಡೋದು ಒರಟು ಅನ್ನಿಸಬಹುದು. ಅಕ್ಕನಿಗೆ ಎಲ್ಲಾ ರೀತಿಯ ಸೇವೆ ನಾನು ಮಾಡುತ್ತಿದ್ದೇನೆ. ಅಮ್ಮ ಬಿಟ್ಟು ಹೋದ ಮೇಲೆ ನಾನು ಬದಲಾಗುತ್ತೇನೆ. ನಾನು ಇನ್ನು ಮುಂದೆ ತಮಿಳುನಾಡಿಗೆ ಹೋಗಲ್ಲ. ಇಲ್ಲೇ ಇರುತ್ತೇನೆ ಇಲ್ಲೇ ಜೀವನ ಸಾಗಿಸುತ್ತೇನೆ. ಅಕ್ಕನಿಗೆ ಸಮಸ್ಯೆ ಆದಮೇಲೆ ಅಮ್ಮನಿಗೆ ಮಾನಸಿಕವಾಗಿ  ನೊಂದಿದ್ದರು. ನೀವೆಲ್ಲಾ ಇದ್ದೀರಾ ನಾನು ಧೈರ್ಯವಾಗಿ ಇರುತ್ತೇನೆ. ಮಾಧ್ಯಮದವರ ಸಹಾಯ ಬೇಕು. ಎಲ್ಲರ ಸಹಾಯ ಬೇಕು, ಭಿಕ್ಷೆ ಅಂತ ಆದರೂ ಹೇಳಿ ಪರವಾಗಿಲ್ಲ ಎಂದು  ನಟಿ ವಿಜಯಲಕ್ಷ್ಮಿ ತಮ್ಮ ನೋವು ತೋಡಿಕೊಂಡಿದ್ದಾರೆ.

 

click me!