Dvipathra Movie: ಕ್ರೈಂ-ಥ್ರಿಲ್ಲರ್ 'ದ್ವಿಪಾತ್ರ'ದಲ್ಲಿ ಸೈಬರ್ ಹ್ಯಾಕರ್!

Kannadaprabha News   | Asianet News
Published : Dec 30, 2021, 10:34 AM IST
Dvipathra Movie: ಕ್ರೈಂ-ಥ್ರಿಲ್ಲರ್ 'ದ್ವಿಪಾತ್ರ'ದಲ್ಲಿ ಸೈಬರ್ ಹ್ಯಾಕರ್!

ಸಾರಾಂಶ

ಈ ಚಿತ್ರದ ಹೆಸರು ‘ದ್ವಿಪಾತ್ರ’. ಶ್ರೀವತ್ಸ ಆರ್‌ ನಿರ್ದೇಶನದ ಈ ಚಿತ್ರಕ್ಕೆ ಸಂಪೂರ್ಣವಾಗಿ ಚಿತ್ರೀಕರಣ ಮುಕ್ತಾಯವಾಗಿದೆ. ಅವಿನಾಶ್‌, ಸುಚೇಂದ್ರ ಪ್ರಸಾದ್‌, ಚಂದು ಗೌಡ, ಸತ್ಯಾಶ್ರಯ, ಮಾಳವಿಕಾ, ಪಾಯಲ್‌ ಚಂಗಪ್ಪ, ಅಶ್ವತ್ಥ್ ನೀನಾಸಂ ಮುಂತಾದವರು ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ಈ ಚಿತ್ರದ ಹೆಸರು ‘ದ್ವಿಪಾತ್ರ’ (Dvipathra). ಶ್ರೀವತ್ಸ ಆರ್‌ (Srivatsa R) ನಿರ್ದೇಶನದ ಈ ಚಿತ್ರಕ್ಕೆ ಸಂಪೂರ್ಣವಾಗಿ ಚಿತ್ರೀಕರಣ ಮುಕ್ತಾಯವಾಗಿದೆ. ಅವಿನಾಶ್‌, ಸುಚೇಂದ್ರ ಪ್ರಸಾದ್‌, ಚಂದು ಗೌಡ, ಸತ್ಯಾಶ್ರಯ, ಮಾಳವಿಕಾ, ಪಾಯಲ್‌ ಚಂಗಪ್ಪ, ಅಶ್ವತ್ಥ್ ನೀನಾಸಂ ಮುಂತಾದವರು ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಚಿತ್ರದ ಪಾತ್ರಧಾರಿಗಳಲ್ಲಿ ದ್ವಂದ್ವ ವ್ಯಕ್ತಿತ್ವ ಇರುತ್ತದೆ. ಈ ಕಾರಣಕ್ಕೆ ಅವರಲ್ಲಿ ಎರಡು ರೀತಿಯ ಮುಖವಾಡಗಳನ್ನು ಈ ಸಿನಿಮಾ ತೆರೆದಿಡಲಿದ್ದು, ಚಿತ್ರಕ್ಕೆ ‘ದ್ವಿಪಾತ್ರ’ ಎಂದು ಹೆಸರಿಡಲಾಗಿದೆ. ಚಂದು ಗೌಡ (Chandu Gowda) ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡರೆ, ರಘು ಗೌಡ (Raghu Gowda) ಸೈಬರ್ ಹ್ಯಾಕರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. 

ಬೆಂಗಳೂರು ನಗರದಲ್ಲಿ ಸರಣಿ ಕೊಲೆಗಳು ನಡೆಯುತ್ತವೆ. ಇದ ಹಿಂದೆ ಯಾರಿದ್ದಾರೆ ಎಂದು ತನಿಖೆ ಮಾಡುವ ಮೂಲಕ ಚಿತ್ರದ ಪಾತ್ರಧಾರಿಗಳು ಒಂದೊಂದಾಗಿ ತೆರೆ ಮೇಲೆ ಮೂಡುತ್ತವೆ. ಇಲ್ಲಿ ನಿಜವಾದ ಅಪರಾಧಿಗಳು ಯಾರು ಎಂದು ಪತ್ತೆ ಹಚ್ಚುವುದೇ ಚಿತ್ರದ ಕ್ಲೈಮ್ಯಾಕ್ಸ್‌.ಸತ್ಯಾಶ್ರಯ, ಹೆಬ್ಬಗೋಡಿ, ಮಧುಸೂದನ್‌, ಜಯಶ್ರೀ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಹೇಮಂತ್‌ ಕೌಶಿಕ್‌ ಸಂಭಾಷಣೆ, ಜೈಜು ಪೋಫ್ಸ್‌ ಸಂಗೀತ, ಅಮರ್‌ ಗೌಡ ಛಾಯಾಗ್ರಾಹಣವಿದೆ. ಬೆಂಗಳೂರು, ಸಕಲೇಶಪುರ, ಹಾಸನ, ಚಿಕ್ಕಬಳ್ಳಾಪುರ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಟೀಸರ್‌ ಹಾಗೂ ಚಿತ್ರದ ಟ್ರೇಲರ್‌ ಬಿಡುಗಡೆಗೆ ಚಿತ್ರತಂಡ ತಯಾರಿ ಮಾಡಿಕೊಂಡಿದೆ.

Ramesh Aravind: ಹೊಸ ವರ್ಷಕ್ಕೆ ರಮೇಶ್‌ ಅರವಿಂದ್‌ ಸ್ಫೂರ್ತಿ ಮಾತುಕತೆ

ದ್ವಿಪಾತ್ರ ಸರಣಿ ಕೊಲೆಗಾರನ ಬಗೆಗಿನ ಆಸಕ್ತಿದಾಯಕ ವಿಷಯವಾಗಿದೆ. ಚಿತ್ರದ ಟೈಟಲ್ ಸೈಕೋಪಾತ್ ಕೊಲೆಗಾರನ ಬಹು ಅಸ್ವಸ್ಥತೆಯ ಗುಣಲಕ್ಷಣವನ್ನು ವಿವರಿಸುತ್ತದೆ. ನಾನು ಡಿಸಿಪಿ ಅಧಿಕಾರಿಯ ಪಾತ್ರವನ್ನು ನಿರ್ವಹಿಸುತ್ತೇನೆ. ಇದು ವಿಷಯ-ಆಧಾರಿತ ಮತ್ತು ಗಂಭೀರವಾದ ಚಿತ್ರಕಥೆಯಾಗಿದ್ದು, ನಾಯಕಿಯ ಪಾತ್ರವರ್ಗ ಸೃಷ್ಟಿಲಾಗಿಲ್ಲ ಎಂದು ಚಂದು ಹೇಳಿದರು. ಬೆಂಗಳೂರು, ಸಕಲೇಶಪುರ, ಹಾಸನ, ಚಿಕ್ಕಬಳ್ಳಾಪುರ ಮತ್ತು ಗುಲ್ಬರ್ಗ ಹಾಗೂ ಮುಂತಾದ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದೆ. ಆರ್‌.ಜೆ. ಸಿನಿಕ್ರಿಯೇಷನ್ಸ್‌ ಮತ್ತು ಪ್ರೈಮ್‌ಸ್ಟಾರ್‌ ಸ್ಟುಡಿಯೋ ಲಾಂಛನದ ಅಡಿಯಲ್ಲಿ ಈ ಚಿತ್ರ ಮೂಡಿಬರುತ್ತಿದೆ.

ಇನ್ನು ಈ ಚಿತ್ರದ ನಾಯಕ ಚಂದು ಗೌಡ ಕೆಲ ತಿಂಗಳ ಹಿಂದೆ ಖಾಸಗಿ ಸಂದರ್ಶನವೊಂದರಲ್ಲಿ 'ಬೆಂಗಳೂರಿನಲ್ಲಿ ಇರುವ ಶೇ.70 ರಿಂದ ಶೇ.80ರಷ್ಟು ಮಂದಿ ತೆಲುಗು ಜನರೇ ಇದ್ದಾರೆ' ಎಂದು ಹೇಳಿದ್ದರು.  ಇಬ್ಬರೂ ಕರ್ನಾಟಕದಲ್ಲಿ ಹುಟ್ಟಿ, ಬೆಳೆದು ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡು, ಇದೀಗ ತೆಲುಗು ಚಿತ್ರರಂಗಕ್ಕೆ ಹಾರಿದ ತಕ್ಷಣ ನಿಮ್ಮ ದಾಟಿ ಬದಲಾಗಿದೆ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದರು.  ವಿಷಯ ಗಂಭೀರ ಆಗುತ್ತಿದ್ದಂತೆ, ವಿಡಿಯೋ ಮೂಲಕ ಕ್ಷಮೆ ಕೇಳಿದ್ದರು. 'ನಾನು ಹುಟ್ಟಿ, ಬೆಳದಿದ್ದು ಬೆಂಗಳೂರಿನಲ್ಲಿ. 

Arjun Gowda: ರಾಮು ನಿರ್ಮಾಣದ ಕೊನೆ ಚಿತ್ರಕ್ಕೆ ಸ್ಟಾರ್‌ ಸಪೋರ್ಟ್‌

ಕನ್ನಡ ನನ್ನ ಮಾತೃಭಾಷೆ.  ಶೇ.1ರಷ್ಟು ಅದರ ಮೇಲಿರುವ ಪ್ರೇಮವೂ ಕಡಿಮೆ ಆಗುವುದಿಲ್ಲ. ಆ ಸಂದರ್ಶನವನ್ನು ದಯವಿಟ್ಟು ಪೂರ್ತಿಯಾಗಿ ನೋಡಿದರೆ ನಾವು ಅದರಲ್ಲಿ ತಪ್ಪಾಗಿ ಮಾತನಾಡಿಲ್ಲ ಎಂಬುವುದು ನಿಮಗೆ ಗೊತ್ತಾಗುತ್ತದೆ. ನಾನು ಕನ್ನಡ ಭಾಷೆಯನ್ನು ಅಗೌರವಿಸುವ ಕೆಲಸವನ್ನು ಎಂದಿಗೂ ಮಾಡುವುದಿಲ್ಲ. ದುಡ್ಡಿಗೋಸ್ಕರ ಕನ್ನಡವನ್ನು ಮಾರಿಕೊಳ್ಳುತ್ತಿದ್ದಾರೆ ಎಂದು ನಮ್ಮ ಮೇಲೆ ಅರೋಪ  ಮಾಡಲಾಗುತ್ತಿದೆ. ಅಷ್ಟು ಕೀಳು ಮಟ್ಟಕ್ಕೆ ನಾವು ಇಳಿದಿಲ್ಲ,' ಎಂದು ಚಂದು ಗೌಡ ಮಾತನಾಡಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ