ಈಗೀಗ ಹೆಸರೂ ನೆನಪಿರೋಲ್ಲ, ವಿಪರೀತ ಮರೆವು ಶುರುವಾಗಿದೆ: Tara Anuradha

Suvarna News   | Asianet News
Published : Dec 30, 2021, 10:24 AM IST
ಈಗೀಗ ಹೆಸರೂ ನೆನಪಿರೋಲ್ಲ, ವಿಪರೀತ ಮರೆವು ಶುರುವಾಗಿದೆ: Tara Anuradha

ಸಾರಾಂಶ

ವೈರಲ್ ಆಗುತ್ತಿದೆ ನಟ ರಂಗಾಯಣ ರಘು ಮತ್ತು ತಾರಾ ಅನುರಾಧ ಕಾಂಬಿನೇಷನ್‌ ವಿಡಿಯೋ. ಯಾಕೆ ಹೆಸರು ಮರೆಯುತ್ತಾರೆ ನಟಿ? 

ಇಡೀ ಕನ್ನಡ ಚಿತ್ರರಂಗವೇ (Sandalwood) ಮೆಚ್ಚಿ ಕೊಂಡಾಡುತ್ತಿರುವ ಸಿನಿಮಾ ಬಡವ ರಾಸ್ಕಲ್ (Badava Rascal). ಡಾಲಿ ಧನಂಜಯ್‌ಗೆ (Dolly Dhananjay) ತಂದೆ ತಾಯಿ ಪಾತ್ರದಲ್ಲಿ ರಂಗಾಯಣ ರಘು (Rangayana Raghu) ಮತ್ತು ತಾರಾ ಅನುರಾಧ (Tara Anuradha) ನಟಿಸಿದ್ದಾರೆ. ಇಬ್ಬರೂ ಹಿರಿಯ ಕಲಾವಿದರಾಗಿದ್ದು, ಸೆಟ್‌ನಲ್ಲಿದ್ದ ಸಣ್ಣ ಆರ್ಟಿಸ್ಟ್‌ನಿಂದ ಹಿಡಿದು ಟೆಕ್ನಿಷಿಯನ್‌ರನ್ನು ತುಂಬಾನೇ ಆತ್ಮೀಯತೆಯಿಂದ ಮಾತನಾಡಿಸಿಕೊಂಡು ಲೈವ್ಲಿ ಆಗಿದ್ದರು ಎಂದು ಪ್ರೆಸ್‌ಮೀಟ್‌ ವೇಳೆ ತಂಡದವರು ಹೇಳಿರುವುದನ್ನು ಕೇಳಿದ್ದೀವಿ. 

ತಾರಾ ಮಾತು: 
ಸಿನಿಮಾ ಪ್ರಚಾರ ಮತ್ತು ಯಶಸ್ಸು ಕಾರ್ಯಕ್ರಮವನ್ನು ನಡೆಸಿಕೊಟ್ಟ ನಿರೂಪಕಿ ಅನುಶ್ರೀ (Anushree) ಅವರು ನಟಿ ತಾರಾ ಅನುರಾಧ ಅವರಿಗೆ ಮಾತನಾಡಲು ಹೇಳುತ್ತಾರೆ. ಈ ವೇಳೆ ಅವರು ಹಲವರ ಹೆಸರನ್ನು ಮರೆಯುತ್ತಾರೆ. ಅದಕ್ಕೆ ಕ್ಷಮೆ ಕೂಡ ಕೇಳಿದ್ದರು.

'ವಿಜಯ್  (Vijay), ಸತೀಶ್ (Sathish) ನಮ್ಮ ...ಸಾರಿ ನಿಮ್ಮ ಹೆಸರನ್ನು ನಾನು ಮರೆತು ಮರೆತು ಹೋಗ್ತೀನಿ. ಲೂಸ್ ಮಾದಾ (Loose Mada) ಅಲ್ಲ ಕಣೋ ನೀನು ಯಾರಿಗೆ ಗೊತ್ತಿಲ್ಲ ಹೇಳು ನೀನು...ಹಾ ವಸಿಷ್ಠಿ ಸಿಂಹ (Vasistha Simha). ಅಯ್ಯೋ ಈ ನಡ್ವೆ ಯಾರ್ದೋ ಹೆಸರು ಯಾರ್ಗೋ ಹೇಳ್ಬಿಡ್ತೀನಿ ಕ್ಷಮಿಸಿ. ವಿಜಯ್ ಪ್ರಸಾದ್‌ (Vijay Prasad) ಪಾಪ ನನಗೆ ಒಂದು ಪಾರ್ಟ್‌ನಲ್ಲಿ ಚಾನ್ಸೇ ಕೊಟ್ಟಿರಲಿಲ್ಲ ಸಿನಿಮಾದಲ್ಲಿ. ಅವನು ನನಗೆ ಕಥೆ ಹೇಳೋಕೆ ಬಂದಿದ್ದ, ಹಿಂದಿನ ದಿನ ನನ್ನ ಹತ್ರ ಮಾತನಾಡಿದ್ದ ಮಾರನೇ ದಿನ ಶೂಟಿಂಗ್ ಸ್ಪಾಟ್‌ನಲ್ಲಿ ಬಂದು, ನೀವು ನನ್ನ ನೋಡಿ ಗುರುತಿಸಲಿಲ್ಲ ಅಂತ ನನಗೆ ಪಾರ್ಟ್‌ ಕೊಡಲೇ ಇಲ್ಲ ಅವನು,' ಎಂದು ತಾರಾ ಮಾತನಾಡಿದ್ದಾರೆ. 

'ಪದೇ ಪದೇ ಮರೆತು ಹೋಗುವುದು ನನ್ನ ದೊಡ್ಡ weakness ಕಣ್ಣಪ್ಪ. ಯಾರ್ದೋ ಹೆಸರನ್ನ ಯಾರ್ಗೋ ಕರೆದು ಬಿಡ್ತೀನಿ. ಆದರೆ ಅವರು ನನಗೆ ಗುರುತು ಇರುತ್ತಾರೆ ಅಷ್ಟೆ. ದಯವಿಟ್ಟು ಎಲ್ಲರೂ ಅಡ್ಜೆಸ್ಟ್‌ (Adjust) ಮಾಡಿಕೊಳ್ಳಬೇಕು ಅಷ್ಟೆ,' ಎಂದು ತಾರಾ ಹೇಳಿದ್ದಾರೆ. 

Badava Rascal Press Meet: ಕನ್ನಡ ಧ್ವಜ ಸುಟ್ಟವರ ವಿರುದ್ಧ ಆಕ್ರೋಶ ಹೊರ ಹಾಕಿದ ತಾರಾ-ರಂಗಾಯಣ ರಘು

'ಸಿನಿಮಾ ತುಂಬಾ ಚೆನ್ನಾಗಿದೆ ಅಂತ ಎಲ್ಲರೂ ಹೇಳಿದ್ದಾರೆ. ಬಡವ ರಾಸ್ಕಲ್ ನಿರ್ದೆಶಕನಿಂದ ಹಿಡಿದು ಎಲ್ಲಾ ಹೊಸ ತಂಡ ಚಿತ್ರದಲ್ಲಿ ಕೆಲಸ ಮಾಡಿದೆ,' ಎಂದು ಮಾತನಾಡುತ್ತಿದ್ದ ತಾರಾ ಇದ್ದಕ್ಕಿದ್ದಂತೆ ನಗುವುದಕ್ಕೆ ಶುರು ಮಾಡುತ್ತಾರೆ. ಯಾರ ಹೆಸರು ಬೇಕು ಹೇಳಿ ನೆನಪಿಸುವೆ ಎಂದು ಅನುಶ್ರೀ ಕೇಳುತ್ತಾರೆ. ಪಕ್ಕದಲ್ಲಿದ್ದ ರಂಗಾಯಣ ರಘು ಅವರು ನಾಯಕಿ ಹೆಸರು ಅಮೃತಾ ಅಯ್ಯಂಗಾರ್‌ (Amrutha Iyengar) ಎಂದು ಹೇಳುತ್ತಾರೆ. 'ಅಮೃತಾ ಒಳ್ಳೆಯ ಆರ್ಟಿಸ್ಟ್‌. ನಮ್ಮ ನಿರ್ದೇಶಕರನ್ನು ರಘು ಅವರು ಶಂಕರ್ ಗುರು (Shankar Guru) ಎಂದು ಕರೆಯುತ್ತಾರೆ. ನಾನು ಅವರಿಗೆ ತುಂಬಾ ಸಲ ಕಾಲ್ ಮಾಡಿದ್ದೀನಿ. ಆದರೆ ಸಡನ್ ಆಗಿ ಕೇಳಿದಾಗ ಇದ್ಯಾರೋ ಅನಿಸುತ್ತಿತ್ತು. ಆಮೇಲೆ ಗೊತ್ತಾಗಿದ್ದು ಗುರು ಅಂದ್ರೆ ಯಾರು ಅಂತ. ಗುರು ಪ್ರಸಾದ್ (Guru Prasad) ಅವರ ಹೆಸರನ್ನ ನೀನು ಕಟ್ ಮಾಡಿ ಇಟ್ಕೊಂಡಿದ್ಯಾ ಅಲ್ವಾ?' ಎಂದು ತಾರಾ ವೇದಿಕೆ ಮೇಲಿಂದ ಕೇಳುತ್ತಾರೆ. 

ನಿರ್ದೇಶಕ ಶಂಕರ್ ಅವರು ತಾವು ಅಣ್ಣಾವ್ರ (Dr.Rajkumar) ಫ್ಯಾನ್ ಅದಿಕ್ಕೆ ಈ ಹೆಸರು ಮತ್ತು ಟೈಟಲ್ ಕೊಟ್ಟಿರುವುದು ಎಂದು ಹೇಳುತ್ತಾರೆ. ತಕ್ಷಣವೇ ತಾರಾ ಅವರು 'ಅಣ್ಣಾವ್ರ ಫ್ಯಾನಾ ನೀನು. ಅಯ್ಯೋ ತಪ್ಪಾಯಿತ್ತು ಕಣ್ಣಪ್ಪ. ನಾನು ಮೊದಲು ಸ್ಟೇಜ್‌ (Stage) ಹತ್ತುವ ಮುನ್ನ ನೀನು ನನಗೆ ಇದೆಲ್ಲಾ ಹೇಳಿಕೊಡಬೇಕು ಕಣೋ,' ಎಂದು ಜೋರಾಗಿ ನಕ್ಕಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ