ಬ್ಯಾನ್ ಆಗಿದ್ದ ಕಾದಂಬರಿಯನ್ನೇ ಸಿನಿಮಾ ಮಾಡಿದ್ದ ಪುಟ್ಟಣ್ಣ ಕಣಗಾಲ್; ನೀವೂ ನೋಡಿರಬಹುದು!

By Shriram BhatFirst Published Jun 12, 2024, 4:12 PM IST
Highlights

ಜಯಂತಿ ಹಾಗೂ ಚಂದ್ರಶೇಖರ್ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ 'ಎಡಕಲ್ಲು ಗುಡ್ಡದ ಮೇಲೆ' ಸಿನಿಮಾ ಸೂಪರ್ ಹಿಟ್ ದಾಖಲಿಸಿತು. ಬಹಳಷ್ಟು ಜನರ ಆಕ್ರೋಶಕ್ಕೆ ಸಿನಿಮಾ ಕಾರಣವಾಗಿದ್ದರೂ ಅದನ್ನು ನೋಡಿದ ಸಿನಿಪ್ರೇಕ್ಷಕರು ಕಮ್ಮಿ ಇರಲಿಲ್ಲ.

ಎಡಕಲ್ಲು ಗುಡ್ಡದ ಮೇಲೆ ಸಿನಿಮಾ ಪುಟ್ಟಣ್ಣ ಕಣಗಾಲ್ ನಿರ್ದೇಶನದ 7ನೇ ಕಾದಂಬರಿ ಆಧಾರಿತ ಸಿನಿಮಾ. ಈ ಸಿನಿಮಾಗಿಂತ ಮೊದಲು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಕಾದಂಬರಿ ಆಧರಿಸಿ 6 ಸಿನಿಮಾ ಮಾಡಿ ಗೆದ್ದಿದ್ದರು. ಪುಟ್ಟಣ್ಣ ಅವರ ಎಲ್ಲ ಸಿನಿಮಾಗಳಲ್ಲಿ ಹೆಣ್ಣಿನ ಮನಸ್ಥಿತಿ ಅಥವಾ ಪರಿಸ್ಥಿತಿಗಳೇ ಸಿನಿಮಾ ವಸ್ತುವಿಷಯ ಆಗಿದ್ದು, ಅದೇ ಹೈಲೈಟ್ ಆಗಿರುತ್ತಿತ್ತು. ಈ ಎಡಕಲ್ಲು ಗುಡ್ಡದ ಮೇಲೆ ಸಿನಿಮಾ ಕೂಡ

ಡಿ ಹೆಚ್ ಲಾರೆನ್ಸ್ ಅವರು ಬರೆದ 'ಲೇಡಿ ಚಾಟರ್ಲೀಸ್' ಕಾದಂಬರಿಯಿಂದ ಸ್ಪೂರ್ತಿ ಪಡೆದು ಭಾರತೀಸುತ ಅವರು ಈ ಕಾದಂಬರಿಯನ್ನು ಬರಿತಾರೆ. ಸುಧಾ ವಾರಪತ್ರಿಕೆಯಲ್ಲಿ ಈ ಕಾದಂಬರಿ ಪ್ರಕಟವಾಗಿ ಬಹುಮಾನವನ್ನು ಕೂಡ ಪಡೆದಿತ್ತು. ಅದರ ಆಧಾರದ ಮೇಲೆಯೇ ಪುಟ್ಟಣ್ಣ ಕಣಗಾಲ್ ಅವರು ಅದಕ್ಕೊಂದು ಚೆಂದದ ಚಿತ್ರಕಥೆ ಬರೆದು ಅದನ್ನು ಸಿನಿಮಾರೂಪದಲ್ಲಿ ತೆರೆಯ ಮೇಲೆ ತರುವ ಪ್ರಯತ್ನ ಮಾಡ್ತಾರೆ. ಆದರೆ. ಈ ಲೇಡಿ ಚಾಟರ್ಲೀಸ್‌ ಕಾದಂಬರಿ ಒಮ್ಮೆ ಬಂದ ಮೇಲೆ ನಾಲ್ಕು ದಶಕಗಳ ಕಾಲ ಅದನ್ನು ಮರು-ಮುದ್ರಣ ಆಗಲು ಬಿಟ್ಟಿರಲಿಲ್ಲವಂತೆ.  

Latest Videos

ಶೆಡ್‌ನಲ್ಲಿ ಕೂಡಿಹಾಕಿ ರೇಣುಕಾಸ್ವಾಮಿಗೆ ಚಿತ್ರಹಿಂಸೆ ಕೊಡುವಾಗ ನಟ ದರ್ಶನ್ ಹೇಳಿದ್ದೇನು?

ಕಾರಣ, ಈ ಕಾದಂಬರಿಯಲ್ಲಿ ಬಹಳಷ್ಟು ಅಡಲ್ಟ್ ಕಂಟೆಟ್ ಇತ್ತು. ಆ ಕಾರಣಕ್ಕೆ ಕೆಲವು ದೇಶಗಳಲ್ಲಿ ಅದನ್ನು ಬ್ಯಾನ್ ಕೂಡ ಮಾಡಿದ್ರು. ಭಾರತದಲ್ಲಿ ಕೂಡ ಆ ಕಾದಂಬರಿ ಬ್ಯಾನ್ ಆಗಿತ್ತು. ಆದರೆ, ಅಂತಹ ಕಥೆಯೊಂದರ ಸ್ಪೂರ್ತಿ ಪಡೆದು ಕಾದಂಬರಿಕಾರ ಭಾರತೀಸುತ ಅವರು ಸುಂದರವಾದ ಕಥೆಯೊಂದನ್ನು ಬರೆದು ಓದುಗರ ಮುಂದಿಟ್ಟರು. ಕನ್ನಡದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಆ ಕಾದಂಬರಿಯನ್ನು ತೆರೆಗೆ ತರುವಾಗ ತುಂಬಾ ಜಾಗರೂಕತೆ ವಹಿಸಿದ್ದರು. 

ಅಭಿಮಾನಿ ಅಶ್ಲೀಲ ಸಂದೇಶಕ್ಕೆ ಕಾನೂನು ಕೈಗೆತ್ತಿಕೊಂಡಿದ್ಯಾಕೆ ನಟ ದರ್ಶನ್? ಅಜ್ಞಾನದ ಪರಮಾವಧಿಯೇ?

ಜಯಂತಿ ಹಾಗೂ ಚಂದ್ರಶೇಖರ್ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ 'ಎಡಕಲ್ಲು ಗುಡ್ಡದ ಮೇಲೆ' ಸಿನಿಮಾ ಸೂಪರ್ ಹಿಟ್ ದಾಖಲಿಸಿತು. ಬಹಳಷ್ಟು ಜನರ ಆಕ್ರೋಶಕ್ಕೆ ಸಿನಿಮಾ ಕಾರಣವಾಗಿದ್ದರೂ ಅದನ್ನು ನೋಡಿದ ಸಿನಿಪ್ರೇಕ್ಷಕರು ಕಮ್ಮಿ ಇರಲಿಲ್ಲ. ಜತೆಗೆ, ಒಮ್ಮೆ ನೋಡಿದವರೇ ಮತ್ತೆ ಮತ್ತೆ ನೋಡುವ ಮೂಲಕ ಆ ಸಿನಿಮಾವನ್ನು ಬ್ಲಾಕ್ ಬಸ್ಟರ್ ಸಿನಿಮಾವನ್ನಾಗಿ ಮಾಡಿದ್ದರು. ಆದರೆ, ಸಿನಿಮಾ ವಯಸ್ಕರು ಮಾತ್ರ ನೋಡುವಂತೆ ಇದೇ ಎಂಬ ಗುಲ್ಲು ಅಂದು ಬಹಳವಾಗಿ ಹಬ್ಬಿತ್ತು. 

ರಿಯಲೀ ಅದೊಂದೇ ಕಾರಣ, ನಮ್ಮಿಬ್ಬರ ಡಿವೋರ್ಸ್‌ಗೆ ಮತ್ತೇನೂ ಕಾರಣವಿರಲಿಲ್ಲ; ಚಂದನ್ ಶೆಟ್ಟಿ

click me!