ತಾಯಿ ಜೊತೆಗೂ ಜಗಳ, ದರ್ಶನ್ ಪ್ರಕರಣದಿಂದ ಮನನೊಂದ ಮೀನಾ ಸಂತೈಸಲು ಆಗಮಿಸಿದ ಮೊಮ್ಮಗ!

Published : Jun 12, 2024, 03:13 PM ISTUpdated : Jun 12, 2024, 03:45 PM IST
ತಾಯಿ ಜೊತೆಗೂ ಜಗಳ, ದರ್ಶನ್ ಪ್ರಕರಣದಿಂದ ಮನನೊಂದ ಮೀನಾ ಸಂತೈಸಲು ಆಗಮಿಸಿದ ಮೊಮ್ಮಗ!

ಸಾರಾಂಶ

ಕೊಲೆ, ಮಗನ ಸೆರೆಮನೆವಾಸದಿಂದ ತೀವ್ರವಾಗಿ ನೊಂದಿರುವ ದರ್ಶನ್ ತಾಯಿ ಮೌನಕ್ಕೆ ಜಾರಿದ್ದಾರೆ. ಕಳೆದೆರಡು ದಿನದಿಂದ ಮನೆಯಿಂದ ಹೊರಬರದ ಮೀನಾ ತೂಗುದೀಪ್ ಕಣ್ಣಿರಿಟ್ಟಿದ್ದಾರೆ. ಅಜ್ಜಿಯನ್ನು ಸಂತೈಸಲು ಮೊಮ್ಮೊಗ ಓಡೋಡಿ ಬಂದಿದ್ದಾರೆ.  

ಮೈಸೂರು(ಜೂ.12) ಕೊಲೆ ಪ್ರಕರಣದಲ್ಲಿ ದರ್ಶನ್ ಅರೆಸ್ಟ್ ಆಗಿ ಪೊಲೀಸ್ ಕಸ್ಟಡಿ ಸೇರಿಕೊಂಡಿದ್ದಾರೆ. ಈ ಪ್ರಕರಣದಲ್ಲಿ  ದರ್ಶನ್ ಸೇರಿದಂತೆ 12 ಆರೋಪಿಗಳನ್ನು ಬಂಧಧಿಸಲಾಗಿದೆ. ಎರಡನೇ ಪತ್ನಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದಾನೆ ಅನ್ನೋ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಯಿಸಿ ಹತ್ಯೆ ಮಾಡಿದ ಗಂಭೀರ ಆರೋಪ ದರ್ಶನ್ ಮೇಲಿದೆ. ಈಗಾಗಲೇ ದರ್ಶನ್ ನಡತೆಯಿಂದ ತೀವ್ರ ನೊಂದಿರುವ ದರ್ಶನ್ ತಾಯಿ ಮೀನಾ ತೂಗುದೀಪ್ ಇದೀಗ ತೀವ್ರ ಆಘಾತವಾಗಿದೆ. ಕಳೆದೆರಡು ದಿನದಿಂದ ಮನೆಯೊಳಗೆ ಉಳಿದುಕೊಂಡಿರುವ ಮೀನಾ ತೂಗುದೀಪ್ ಯಾರೊಂದಿಗೂ ಮಾತನಾಡಲು ಬಯಸುತ್ತಿಲ್ಲ.

ಮೈಸೂರಿನ ಸಿದ್ಧಾರ್ಥ ನಗರದಲ್ಲಿರುವ ದರ್ಶನ್ ಮನೆಯಲ್ಲಿರುವ ಮೀನಾ ತೂಗುದೀಪ್ ಮನಗ ಘಟನೆಯಿಂದ ಕಣ್ಣಿರಿಟ್ಟಿದ್ದಾರೆ. ಆಘಾತ, ನೋವಿನಿಂದ ಜರ್ಝಿರಿತಗೊಂಡಿರುವ ಅಜ್ಜಿಯನ್ನು ಸಂತೈಸಲು ಮೊಮ್ಮಗ ಚಂದನ್ ಮೈಸೂರಿಗೆ ಆಗಮಿಸಿದ್ದಾನೆ. ದರ್ಶನ್ ತಾಯಿ ಆರೈಕೆಗೆ ಆಗಮಿಸಿರುವ ದರ್ಶನ್ ಅಕ್ಕನ ಮಗ ಚಂದನ್, ಅಜ್ಜಿಯ ಆರೈಕೆಯಲ್ಲಿ ತೊಡಗಿದ್ದಾನೆ. ಬೆಂಗಳೂರಿನಿಂದ ಮೈಸೂರಿಗೆ ತೆರಳಿದ ಚಂದನ್, ಹಣ್ಣು ಹಂಪಲು, ಊಟ, ತಿಂಡಿ ತಂದು ನೀಡಿದ್ದಾರೆ. ಸದ್ಯ ಮೀನಾ ತೂಗುದೀಪ್ ಜೊತೆಯಲ್ಲೇ ಇರುವ ಚಂದನ್, ಅಜ್ಜಿಯನ್ನು ಸಮಾಧಾನಿಸುವ ಪ್ರಯತ್ನ ಮಾಡಿದ್ದಾನೆ.

ನಟ ದರ್ಶನ್ ಆಗಲಿ ಯಾರೇ ಆಗಿರಲಿ, ಎಲ್ಲರಿಗೂ ಒಂದೇ ಕಾನೂನು; ಗೃಹ ಸಚಿವ ಡಾ.ಜಿ. ಪರಮೇಶ್ವರ

ದರ್ಶನ್ ಇತ್ತೀಚೆಗೆ ತಾಯಿ ಜೊತೆಗೂ ಜಗಳವಾಡಿದ್ದಾರೆ. ತಾಯಿಯೊಂದಿಗೆ ಜಗಳ ಮಾಡಿ ಮಾತು ಬಿಟ್ಟಿದ್ದಾರೆ. ಹಲವು ದಿನಗಳಿಂದ ದರ್ಶನ್ ತಾಯಿ ಮನೆಗೆ ಭೇಟಿ ನೀಡಿಲ್ಲ, ತಾಯಿ ಜೊತೆಗೂ ಮಾತನಾಡಿಲ್ಲ. ದರ್ಶನ್ ಕೊಲೆ ಪ್ರಕರಣದ ಬಳಿಕ ತಾಯಿ ಮೀನಾ ತೂಗುದೀಪ್ ಮೌನಕ್ಕೆ ಜಾರಿದ್ದಾರೆ. ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಮಗ ದರ್ಶನ್ ಕುರಿತು ಮಾತನಾಡಲು ಮೀನಾ ತೂಗುದೀಪ್ ನಿರಾಕರಿಸಿದ್ದಾರೆ.

ಮತ್ತೊಬ್ಬ ಪುತ್ರ ದಿನಕರ್ ತೂಗುದೀಪ ಜೊತೆಗಿರುವ ಮೀನಾ ತಮ್ಮ ನೋವು ತೋಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಮನೆ ಒಳಗೆಡೆ ಇರುವ ದರ್ಶನ್ ತಾಯಿ, ಸಹೋದರ ಹಾಗೂ ಕುಟುಂಬಸ್ಥರು, ಒಳಗಿನಿಂದ ಗೇಟ್‌ಗೆ ಬೀಗ ಹಾಕಿದ್ದಾರೆ.  

ಅಭಿಮಾನಿ ಅಶ್ಲೀಲ ಸಂದೇಶಕ್ಕೆ ಕಾನೂನು ಕೈಗೆತ್ತಿಕೊಂಡಿದ್ಯಾಕೆ ನಟ ದರ್ಶನ್? ಅಜ್ಞಾನದ ಪರಮಾವಧಿಯೇ?

ಇತ್ತ ದರ್ಶನ್ ಹಾಗೂ ಆತನ ಗ್ಯಾಂಗ್ 6 ದಿನ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇತ್ತ ವಿಚಾರಣೆ ತೀವ್ರಗೊಳ್ಳುತ್ತಿದೆ. ಚಿತ್ರದುರ್ಗದ ನಿವಾಸಿ ರೇಣುಕಾಸ್ವಾಮಿ ಸಾಮಾಜಿಕ ಮಾಧ್ಯಮ,ಮೆಸೇಜ್ ಮೂಲಕ  ದರ್ಶನ್ 2ನೇ ಪತ್ನಿ ಪವಿತ್ರಾ ಗೌಡಾಗೆ ಅಶ್ಲೀಲವಾಗಿ ಸಂದೇಶವನ್ನ ಕಳುಹಿಸಿದ್ದ ಅನ್ನೋ ಆರೋಪದಡಿ ಈ ಕೊಲೆ ನಡೆದಿದೆ. ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕಿಡ್ನಾಪ್ ಮಾಡಿಸಿದ ದರ್ಶನ್ ಗ್ಯಾಂಗ್ ಬಳಿಕ ತೀವ್ರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದೆ. ಮೃತದೇಹವನ್ನು ಮೋರಿಗೆ ಎಸೆದು ಪರಾರಿಯಾಗತ್ತು. ಬಳಿಕ ದರ್ಶನ್ ಗ್ಯಾಂಗ್‌ನ ಮೂವರಿಗೆ ಹಣದ ಆಮೀಷ ನೀಡಿ ತಾವೇ ಕೊಲೆ ಮಾಡಿದ್ದು ಎಂದು ಶರಣಾಗುವಂತೆ ಮಾಡಲಾಗಿದೆ. ವಿಚಾರಣೆಯಿಂದ ದರ್ಶನ್ ಕೈವಾಡ ಬಯಲಾಗುತ್ತಿದ್ದಂತೆ ಜೂನ್ 11ರಂದು ದರ್ಶನ್ ಬಂಧಿಸಲಾಗಿದೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12 ಗಿಲ್ಲಿ ನಟನ ಗುಣ ಹೇಳುತ್ತಲೇ Bigg Boss Winner ಯಾರೆಂದು​ ಹಿಂಟ್​ ಕೊಟ್ಟೇ ಬಿಟ್ರು ಶಿವರಾಜ್​ ಕುಮಾರ್!
BBK 12: ಗೆಲ್ತಾರಾ ಗಿಲ್ಲಿ ನಟ..? ಈ ಮಂಡ್ಯದ ಹೈದ ನಟರಾಜ್‌ನ ಪ್ಲಸ್ & ಮೈನಸ್ ಏನು? ಸೀಕ್ರೆಟ್ ರಿವೀಲ್..!