80ರ ದಶಕದಲ್ಲಿ ಬೆಂಗಳೂರಿನ ತ್ರಿವೇಣಿ ಥಿಯೇಟರ್‌ನಲ್ಲಿ ತೆರೆಗೆ ಬಂದಿದ್ದ 'ಬಂಧನ' ಚಿತ್ರವು, 24 ಆಗಸ್ಟ್ 2024ರಂದು ಕರ್ನಾಟಕದಾದ್ಯಂತ ಬಿಡುಗಡೆಗಿತ್ತು. ವಿಶೇಷವಾಗಿ ಮೊದಲ ದಿನ ಈ ಕಟೌಟ್‌ಗೆ ಕ್ಷೀರಾಭಿಷೇಕ ಮಾಡಿರೋರು ಸ್ಯಾಂಡಲ್‌ವುಡ್‌ನ ಹಾಸ್ಯ ಕಲಾವಿದನಂತೆ.
80ರ ದಶಕದಲ್ಲಿ ಬೆಂಗಳೂರಿನ ತ್ರಿವೇಣಿ ಥಿಯೇಟರ್‌ನಲ್ಲಿ ತೆರೆಗೆ ಬಂದಿದ್ದ 'ಬಂಧನ' ಚಿತ್ರವು, 24 ಆಗಸ್ಟ್ 2024ರಂದು ಕರ್ನಾಟಕದಾದ್ಯಂತ ಬಿಡುಗಡೆ ಕಂಡು, ಬರೋಬ್ಬರಿ 100 ಕೋಟಿಗೂ ಅಧಿಕ ಕಲೆಕ್ಷನ್ ದಾಖಲಿಸಿತ್ತು. 18 ಥಿಯೇಟರ್‌ಗಳಲ್ಲಿ 469 ದಿನಗಳಷ್ಟು ಹೌಸ್‌ಫುಲ್ ಪ್ರದರ್ಶನ ಕಂಡಿರುವ ಖ್ಯಾತಿ ಬಂಧನ ಚಿತ್ರದ್ದು. ತ್ರಿವೇಣಿ ಥಿಯೇಟರ್ ಅಂಗಳದಲ್ಲಿ ಅತಿ ದೊಡ್ಡ ಕಟೌಟ್ ನಿಲ್ಲಿಸಲಾಗಿತ್ತು. ಆ ಕಟೌಟ್‌ನ ಪ್ರಮುಖ ಆಕರ್ಷಣೆ ಸಾಹಸ ಸಿಂಹ ವಿಷ್ಣುವರ್ಧನ್ ಆಗಿದ್ದರು. ಇದೇ ಕಟೌಟ್‌ನಲ್ಲಿ ಇನ್ನೂ ಒಂದು ಸೆಳೆತ ಇತ್ತು. ಹೌದು, ವಿಷ್ಣುದಾದಾ ಕೈಯಲ್ಲಿ ಒಂದು ಗುಲಾಬಿ ಇತ್ತು. ವಿಶೇಷವಾಗಿ ಮೊದಲ ದಿನ ಈ ಕಟೌಟ್‌ಗೆ ಕ್ಷೀರಾಭಿಷೇಕ ಮಾಡಿರೋದು ಸ್ಯಾಂಡಲ್‌ವುಡ್‌ನ ಹಾಸ್ಯ ಕಲಾವಿದನಂತೆ.
ಸಾಹಸ ಸಿಂಹ ವಿಷ್ಣುವರ್ಧನ್ ಎಲ್ಲರಿಗೂ ಇಷ್ಟ ಆಗುತ್ತಾರೆ. ಮೋಸ್ಟ್ ಹ್ಯಾಂಡ್ಸಮ್ ಹೀರೋ ಅನ್ನೋದು ಗೊತ್ತೇ ಇದೆ. ಯಾವುದೇ ಆ್ಯಂಗಲ್‌ನಲ್ಲಿ ವಿಷ್ಣು ಅದ್ಭುತವಾಗಿಯೇ ಕಾಣಿಸುತ್ತಿದ್ದರು. ಅಷ್ಟು ಸ್ಪುರದ್ರೂಪಿ ನಟನ ಅಭಿಮಾನಿಗಳು ಎಲ್ಲೆಡೆ ಈಗಲೂ ಇದ್ದಾರೆ. ಆದರೆ, ಕನ್ನಡದ ಹಾಸ್ಯ ಕಲಾವಿದ ಸಾಧು ಕೋಕಿಲ ಮೊದಲು ವಿಷ್ಣು ಅವರ ಅಭಿಮಾನಿ ಆಗಿರಲ್ಲಿಲ್ಲ. ಆದರೆ, ವಿಷ್ಣು ಸಿನಿಮಾ ನೋಡಿದ್ಮೇಲೆ ವಿಷ್ಣು ಫ್ಯಾನ್ ಆಗಿ ಹೋದ್ರು. ಅದೆಷ್ಟು ಅಂದರೆ, ವಿಷ್ಣು ಸಿನಿಮಾ ಬಂದ್ರೆ, ಮೊದಲ ದಿನವೇ ಥಿಯೇಟರ್‌ಗೆ ಹೋಗಿ ಹಬ್ಬ ಮಾಡೋವಷ್ಟು ಫ್ಯಾನ್ ಆಗಿ ಹೋದ್ರು. ಅದಕ್ಕೂ ಹೆಚ್ಚಾಗಿ ಸಾಧು ಕೋಕಿಲ ಇನ್ನೂ ಒಂದು ಕೆಲಸ ಕೂಡ ಮಾಡಿದ್ದರು.
ಕೊಡವ ಭಾಷೆ ನಮಗೂ ಕಲಿಸಿಕೊಡಿ, ಇಲ್ಲಾ ಕನ್ನಡದಲ್ಲೂ ಮಾತಾಡಿ ರಶ್ಮಿಕಾ ಮೇಡಂ ಅಂತಿದಾರೆ ಫ್ಯಾನ್ಸ್!
ವಿಷ್ಣುವರ್ಧನ್ ಬೃಹತ್ ಕಟೌಟ್‌ಗೆ ಸಾಧು ಕೋಕಿಲ ಕ್ಷೀರಾಭಿಷೇಕ ಮಾಡಿದ್ದರು. ಅತಿ ದೊಡ್ಡ ಕಟೌಟ್ ಏರಿ ಹಾಲು ಹಾಕಿ ಅಭಿಮಾನ ಮರೆದಿದ್ದರು. ತಮ್ಮ ಈ ಅಭಿಮಾನವನ್ನ ವಿಷ್ಣುವರ್ಧನ್ ಅವರ ಪ್ರತಿ ಚಿತ್ರದ ಮೊದಲ ದಿನ ತೋರುತ್ತಿದ್ದರು. ವಿಷ್ಣುವರ್ಧನ್ ಅಂದ್ರೆ ಸಾಧು ಅವರಿಗೆ ವಿಶೇಷ ಗೌರವ ಮತ್ತು ಅಭಿಮಾನವೂ ಇತ್ತು. ವಿಷ್ಣುವರ್ಧನ್ ಸಿನಿಮಾ ನೋಡುತ್ತಲೇ ಮಹಾನ್ ಅಭಿಮಾನಿಯಾದ ಸಾಧು ಕೋಕಿಲ, ತಮ್ಮ ಅಭಿಮಾನದ ಈ ಕಥೆಯನ್ನ ಕಾಮಿಡಿ ಶೋದಲ್ಲಿಯೇ ಇದೀಗ ಹೇಳಿಕೊಂಡಿದ್ದಾರೆ.
ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋದಲ್ಲಿ ಈ ವಾರ ಒಂದು ಸ್ಕಿಟ್ ಇತ್ತು. ಇದು ಒಂದು ರೀತಿ ವಿಷ್ಣುವರ್ಧನ್ ಅವರ ಬಂಧನ ಚಿತ್ರದ ರೀ-ಕ್ರಿಯೇಷನ್ ಆಗಿತ್ತು. ಇದನ್ನ ನೋಡಿದ ಸಾಧು ಕೋಕಿಲ ತುಂಬಾನೆ ಖುಷಿಪಟ್ಟಿದ್ದಾರೆ. ಈ ಒಂದು ಸ್ಕಿಟ್ ಬಳಿಕ ತೀರ್ಪುಗಾರರಾದ ಸಾಧು ಈ ಸ್ಕಿಟ್ ಬಹುವಾಗಿಯೇ ಮೆಚ್ಚಿಕೊಂಡಿದ್ದಾರೆ. ಇದಾದ್ಮೇಲೆ ತಾವು ವಿಷ್ಣುವರ್ಧನ್ ಅಭಿಮಾನಿ ಅನ್ನೋದನ್ನ ಹೇಳಿಕೊಂಡಿದ್ದಾರೆ. ತ್ರಿವೇಣಿ ಥಿಯೇಟರ್‌ನಲ್ಲಿ ತಾವು ಹೇಗೆಲ್ಲ ಬಂಧನ ಸಿನಿಮಾದ ಆಗಮವನ್ನ ಸೆಲೆಬ್ರೆಟ್ ಮಾಡಿದ್ದೇವೆ ಅನ್ನೋದನ್ನ ಹೇಳಿಕೊಂಡಿದ್ದಾರೆ. ವಿಷ್ಣುವರ್ಧನ್ ಅವರ ದೊಡ್ಡ ಕಟೌಟ್ ಏರಿ ಕ್ಷೀರಾಭಿಷೇಕ ಮಾಡಿರೋ ವಿಷಯವನ್ನ ಕೂಡ ಅಷ್ಟೇ ಅಭಿಮಾನದಿಂದಲೇ ಹೇಳಿಕೊಂಡಿದ್ದಾರೆ.
ಮೂರೇ ವರ್ಷದಲ್ಲಿ ನಾನು ಹೇಗೆ ಬೆಳೆದೆ ಎಂದು ಎಲ್ಲರೂ ಕೇಳುತ್ತಾರೆ. ಅದರ ಹಿಂದೆ....: ರಕ್ಷಕ್ ಬುಲೆಟ್ ವಿಡಿಯೋ ರಿಲೀಸ್!
ಬಂಧನ ಚಿತ್ರವನ್ನ ಡೈರೆಕ್ಟರ್ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡಿದ್ದರು. ಸುಹಾಸಿನಿ ಹಾಗೂ ಜೈಜಗದೀಶ್ ಈ ಚಿತ್ರದಲ್ಲಿ ವಿಷ್ಣುವರ್ಧನ್ ಎದುರು ಆ್ಯಕ್ಟ್ ಮಾಡಿದ್ದರು. ತ್ರಿವೇಣಿ ಚಿತ್ರಮಂದಿರದ ಅಂಗಳದಲ್ಲಿ ವಿಷ್ಣುವರ್ಧನ್ ಅವರ ಒಂದು ದೊಡ್ಡ ಕಟೌಟ್ ಕೂಡ ನಿಲ್ಲಿಸಲಾಗಿತ್ತು. ಈ ಕಟೌಟ್‌ಗೆ ವಿಷ್ಣು ಅಭಿಮಾನಿಗಳು ಪೂಜೆ ಸಲ್ಲಿಸಿದ್ದರು. ಕ್ಷೀರಾಭಿಷೇಕ ಮಾಡಿದ್ದರು. ಮೊದಲಬಾರಿಗೆ ನಟ ವಿಷ್ಣುವರ್ಧನ್ ಅವರು ತಮ್ಮ ಹಳೆಯ ಆ್ಯಂಗ್ರಿ ಯಂಗ್‌ಮ್ಯಾನ್ ಇಮೇಜ್ ಕಳಚಿಕೊಂಡು 'ಡೀಪ್ ಲವರ್' ಅಂದರೆ, ಅಮರಪ್ರೇಮಿಯಾಗಿ ಕಾಣಿಸಿಕೊಂಡರು. ಬಂಧನ ಚಿತ್ರದ ಮೂಲಕ ನಟ ವಿಷ್ಣುವರ್ಧನ್ ಹಾಗು ನಟಿ ಸುಹಾಸಿನಿ ಜೋಡಿ ತುಂಬಾ ಜನಪ್ರಿಯವಾಯಿತು.