ಆ್ಯಟಿಟ್ಯೂಡ್ ಮಾತ್ರ ಪರ್ಫೆಕ್ಟ್, ಮಕ್ಕಳ ಕ್ಯೂಟ್ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್!

By Chethan Kumar  |  First Published Jul 1, 2024, 8:26 PM IST

ಯಶ್ ಹಾಗೂ ರಾಧಿಕಾ ಪಂಡಿತ್ ಮಕ್ಕಳ ಕ್ಯೂಟ್ ಫೋಟೋ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಅವರು ಧರಿಸಿದ ಶೂ ಹಾಗೂ ಹೀಲ್ಡ್ ದೊಡ್ಡಾಗಿದೆ. ಆದರೆ ಅವರ ಆ್ಯಟಿಟ್ಯೂಡ್ ಮಾತ್ರ ಫಿಟ್ ಆಗುತ್ತಿದೆ ಎಂದಿದ್ದಾರೆ. 


ಬೆಂಗಳೂರು(ಜು.01) ಟಾಕ್ಸಿಕ್ ಚಿತ್ರದಲ್ಲಿ ಬ್ಯೂಸಿಯಾಗಿರುವ ಕೆಜಿಎಪ್ ಸ್ಟಾರ್ ನಟ ಯಶ್ ಮತ್ತೆ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಇತ್ತ ಯಶ್ ಪತ್ನಿ, ನಟಿ ರಾಧಿಕಾ ಪಂಡಿತ್ ಮಕ್ಕಳ ಕ್ಯೂಟ್ ಫೋಟೋ ಹಂಚಿಕೊಂಡಿದ್ದಾರೆ. ಐರಾ ಗಾಗೂ ಯಥರ್ವ ಯಶ್ ಇಬ್ಬರ ಒಂದೇ ಫ್ರೇಮ್ ಫೋಟೋ ಹಂಚಿಕೊಂಡ ರಾಧಿಕಾ, ಅವರ ಪಾದಗಳು ನಮ್ಮ ಶೂಗಳಿಗೆ ಸರಿಹೊಂದುತ್ತಿಲ್ಲ. ಆದರೆ ಇವರಿಬ್ಬರ ಆ್ಯಟಿಟ್ಯೂಡ್ ಸರಿಯಾಗಿ ಫಿಟ್ ಆಗುತ್ತಿದೆ ಎಂದು ರಾಧಿಕ ಬರೆದುಕೊಂಡಿದ್ದಾರೆ.

ಮಗ ಯಥರ್ವ ಯಶ್ ರಾಕಿಂಗ್ ಸ್ಟಾರ್ ಯಶ್ ರೀತಿ ಪೋಸ್ ನೀಡಿದ್ದರೆ, ಪುತ್ರಿ ಐರಾ, ಸೇಮ ರಾಧಿಕಾ ಪಂಡಿತ್ ರೀತಿ ಪೋಸ್ ನೀಡಿದ್ದಾರೆ. ಇವರಿಬ್ಬರ ಆ್ಯಟಿಟ್ಯೂಡ್ ಮಾತ್ರ ಪೋಷಕರ ರೀತಿಯೇ ಇದೆ. ಹಲವರು ಈ ಫೋಟೋಗೆ ಕಮೆಂಟ್ ಮಾಡಿದ್ದಾರೆ. ಇಬ್ಬರು ಪೋಷಕರ ಆ್ಯಟಿಟ್ಯೂಡ್ ತೋರಿಸಿದ್ದಾರೆ ಎಂದಿದ್ದಾರೆ. ಜ್ಯೂನಿಯರ್ ಯಶ್ ಹಾಗೂ ರಾಧಿಕಾ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಇದೇ ವೇಳೆ ಈ ಫೋಟೋ ತೆಗೆದವರು ಯಾರು ಯಶ್ ಅಥವಾ ರಾಧಿಕಾ ಎಂದು ಪ್ರಶ್ನಿಸಿದ್ದಾರೆ.

Tap to resize

Latest Videos

undefined

ಪರಶುರಾಮನಾಗಿ ಯಶ್..ವೈರಲ್ ಆಯ್ತು ಪೋಸ್ಟರ್: ಪ್ರಭಾಸ್ ಕಲ್ಕಿ ಪಾರ್ಟ್ 2ನಲ್ಲಿ ರಾಕಿಂಗ್‌ ಸ್ಟಾರ್‌ !

ಮದುವೆ ಬಳಿಕ ರಾಧಿಕಾ ಪಂಡಿತ್ ಸಿನಿಮಾ ಕ್ಷೇತ್ರದಿಂದ ದೂರ ಉಳಿದಿದ್ದಾರೆ. ಇಬ್ಬರು ಮಕ್ಕಳ ಪಾಲನೆ ಮಾಡುತ್ತಾ, ಮನೆಯ ಜವಾಬ್ದಾರಿ, ಯಶ್ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಸಿನಿ ಕ್ಷೇತ್ರದಿಂದ ದೂರ ಉಳಿದರೂ ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಸಕ್ರಿಯವಾಗಿದ್ದಾರೆ. ಸದಾ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಹಲವು ಬಾರಿ ಇಬ್ಬರು ಮಕ್ಕಳ ಪೋಟೋ ಹಂಚಿಕೊಂಡಿದ್ದಾರೆ. ಆದರೆ ಈ ಬಾರಿ ಕ್ಯೂಟ್ ಫೋಟೋ ಭಾರಿ ಸಂಚಲನ ಸೃಷ್ಟಿಸಿದೆ. 

 

 

ಇತ್ತ ಯಶ್ ತಮ್ಮ ಬಹುನಿರೀಕ್ಷೆಯ ಟಾಕ್ಸಿಕ್ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಶೂಟಿಂಗ್‌ ಆರಂಭಗೊಂಡಿದೆ. ಡ್ರಗ್ ಮಾಫಿಯಾ, ಡಾನ್, ಕಳ್ಳ ಸಾಗಾಣೆ ಕುರಿತು ಈ ಚಿತ್ರದಲ್ಲಿ ಯಶ್ ಡಾನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋ ಮಾಹಿತಿಗಲು ಬಯಲಾಗಿದೆ. ಬೆಂಗಳೂರು ಹಾಗೂ ಗೋವಾ ನಡುವಿನ ಡ್ರಗ್ ಮಾಫಿಯಾ ಹಾಗೂ ಸಾಗಣೆ ಕುರಿತ ಚಿತ್ರ ಭಾರಿ ನಿರೀಕ್ಷೆ ಹುಟ್ಟಿಸಿದೆ. ಬೆಂಗಳೂರು, ಗೋವಾ ಸೇರಿದಂತೆ ಕೆಲೆವಡೆ ಶೂಟಿಂಗ್ ಮಾಡಲಿದೆ. ಬಳಿಕ ಲಂಡನ್ ಸೇರಿದಂತೆ ವಿದೇಶದಲ್ಲೂ ಕೆಲ ಭಾಗದ ಚಿತ್ರೀಕರಣ ನಡೆಯಲಿದೆ. ಗೀತು ಮೋಹನ್‌ ದಾಸ್‌ ನಿರ್ದೇಶಿಸಿ, ಕೆವಿಎನ್‌ ಪ್ರೊಡಕ್ಷನ್‌ ನಿರ್ಮಿಸುತ್ತಿರುವ ಈ ಚಿತ್ರದ ಮೇಲಿನ ನಿರೀಕ್ಷೆಗಳು ಬೆಟ್ಟದಷ್ಟಾಗಿದೆ.  

ರಾಕಿಂಗ್ ಸ್ಟಾರ್ ಫಾರ್ಮುಲಾ ಹೈಜಾಕ್ ಆಯ್ತಾ, KGF ನಟ ಯಶ್ ಸಕ್ಸಸ್ ಸೂತ್ರದ ಗುಟ್ಟು ರಟ್ಟಾಯ್ತು!
 

click me!