
ಸ್ಯಾಂಡಲ್‌ವುಡ್ ನಟಿ ಶ್ವೇತಾ ಶ್ರೀವಾಸ್ತವ್ ಪ್ರೇಮಿಗಳ ದಿನದ ವಿಶೇಷ ಫೋಟೋವನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿದ್ದಾರೆ. ವ್ಯಾಲೆಂಟೈನ್ಸ್ ಡೇ ಸಂಭ್ರಮದಲ್ಲಿ ಗಂಡನ ಜೊತೆಗಿನ ಫೋಟೋ ಸೋಷಿಯಲ್ ಮೀಡಿಯಾಗೆ ಅಪ್ ಮಾಡಿದ್ದಾರೆ.
ಜೀನ್ಸ್ ಮೇಲೆ ಶಾರ್ಟ್ ಬಾಕ್ಸ್ ಪ್ರಿಂಟೆಡ್ ಟಾಪ್ ಧರಿಸಿ ಪತಿಯ ಜೊತೆ ಪೋಸ್ ಕೊಟ್ಟಿದ್ದಾರೆ. ನನ್ನ ಜೀವನದಲ್ಲಿ ಅವನು ನನಗೆ ಭಯವಿಲ್ಲದೆ ಕನಸು ಕಾಣುವುದಕ್ಕೆ ಮತ್ತು ಮಿತಿ ಇಲ್ಲದೆ ಪ್ರೀತಿಸುವುದನ್ನು ಕಲಿಸಿದ ಎಂದು ಬರೆದಿದ್ದಾರೆ ಶ್ವೇತಾ.
ಸಿಂಪಲ್ಲಾಗ್ ಒಂದ್ ಅಮ್ಮ-ಮಗಳ ಸ್ಟೋರಿ! ಇದು ಶ್ವೇತಾ - ಆಶ್ಮಿತಾ ಫೋಟೋಸ್!
ಮಿತಿ ಇಲ್ಲದೆ ನೀನು ನನಗಾಗಿ ಮಾಡುವ ಎಲ್ಲದಕ್ಕೂ ಧನ್ಯವಾದಗಳು ಎಂದು ಬರೆದು ಪ್ರೇಮಿಗಳ ದಿನ ಪತಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಸದ್ಯ ಗೋವಾದಲ್ಲಿರುವ ನಟಿ ಗಂಡ ಮತ್ತು ಮಗಳೊಂದಿಗೆ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ.
ತಮ್ಮ ವೆಕೇಷನ್ ಫೋಟೋ, ವಿಡಿಯೋಗಳನ್ನು ನಟಿ ಇನ್‌ಸ್ಟಾಗ್ರಾಂ ಸ್ಟೋರಿಯ ಮೂಲಕ ಫ್ಯಾನ್ಸ್ ಜೊತೆ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ನಟಿ ಮುದ್ದು ಮಗಳ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.