
ಕರ್ನಾಟಕ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಜೊತೆ ಬಾಲಿವುಡ್ ಕ್ರೇಜಿ ಕಪಲ್ ರಿತೇಷ್ ಮತ್ತು ಜೆನಿಲಿಯಾ ಕಾಣಿಸಿಕೊಂಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬಾಲಿವುಡ್‌ನ ಅನೇಕ ಮಂದಿ ಸುದೀಪ್‌ಗೆ ತುಂಬಾನೇ ಆತ್ಮೀಯರಾಗಿದ್ದು ಇವರ ಬಾಂಧವ್ಯದ ಬಗ್ಗೆ ಜೆನಿಲಿಯಾ ಪೋಸ್ಟ್ ಮಾಡಿದ್ದಾರೆ.
25 ವರ್ಷದ ಸಿನಿ ಜರ್ನಿಯನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಆಚರಿಸಿಕೊಂಡ ಕಿಚ್ಚ!
ಜೆನಿ ಪೋಸ್ಟ್:
'ಅಮೇಜಿಂಗ್ ವ್ಯಕ್ತಿ ಜೊತೆಗೆ ಒಳ್ಳೆ ಸಮಯ ಕಳೆದ ಕ್ಷಣವಿದು. ಸುದೀಪ್ ಥ್ಯಾಂಕ್ ಯು ನಿಮ್ಮ ಜೊತೆ ಮಾತನಾಡುತ್ತಾ ಈ ಸಂಜೆ ಕಳೆದ ದಿನ. ರಿತೇಷ್ ಮತ್ತು ನನಗೆ ತುಂಬಾ ಖುಷಿಯಾಗಿದೆ. ಪ್ರಿಯಾ ಹಾಗೂ ಸಾನ್ವಿನ ಮಿಸ್ ಮಾಡಿಕೊಂಡೆವು' ಎಂದು ಜೆನಿಲಿಯಾ ಬರೆದುಕೊಂಡಿದ್ದಾರೆ.
ಸುದೀಪ್ ಪೋಸ್ಟ್:
'ನಿಮ್ಮಿಬ್ಬರ ಬಗ್ಗೆ ಹೆಚ್ಚು ತಿಳಿದುಕೊಳ್ಳುತ್ತಿದ್ದಂತೆ ನೀವು ತುಂಬಾನೇ ಇಷ್ಟವಾಗುತ್ತೀರಾ, ಹತ್ತಿರವಾಗುತ್ತೀರ. ಮುಂದಿನ ಭೇಟಿಗೆ ಕಾಯುವೆ' ಎಂದು ಸುದೀಪ್ ಬರೆದುಕೊಂಡಿದ್ದಾರೆ.
ಕೆಲ ತಿಂಗಳುಗಳ ಹಿಂದೆ ರಿತೇಷ್ ಹಾಗೂ ಜೆನಿಲಿಯಾ ಸಸ್ಯಹಾರಿಗಳಾಗಿ ಬದಲಾದರು. ಈ ವಿಚಾರ ತಿಳಿಯುತ್ತಿದ್ದಂತೆ ಸುದೀಪ್ ಇವರಿಬ್ಬರಿಗೂ ಸ್ಪೆಷಲ್ ಊಟದ ವ್ಯವಸ್ತೆ ಮಾಡಿಸಿದ್ದರು. 'ನಮಗಾಗಿ ವೇಗನ್ ಅಡುಗೆ ಮಾಡಲು ಕೈ ಮೀರಿ ಮಾಡಿದ ಪ್ರಯತ್ನಕ್ಕೆ ತುಂಬಾನೇ ಥ್ಯಾಂಕ್ಸ್. ನಮಗೆ ಇಷ್ಟವಾಯ್ತು' ಎಂದು ಜೆನಿಲಿಯಾ ಹೇಳಿಕೊಂಡಿದ್ದಾರೆ.
ಭಾರತದ ಮಾರುಕಟ್ಟೆಗೆ ರಿತೇಶ್ ದಂಪತಿಯಿಂದ 'ಹೊಸ ಮಾಂಸ ರುಚಿ'
ಮೂವರು ಸ್ಟಾರ್ ನಟರು ಭೇಟಿಯಾಗಿರುವುದನ್ನು ಕಂಡು ನೆಟ್ಟಿಗರು ಸಾಕಷ್ಟು ಪ್ರಶ್ನೆ ಕೇಳಿದ್ದಾರೆ. ಸಿನಿಮಾ ಮಾತುಕತೆನಾ ಅಥವಾ ಬಿಗ್ ಬಾಸ್ ಕನ್ನಡ ಸೀಸನ್‌ನಲ್ಲಿ ಇವರಿಬ್ಬರು ಕಾಣಿಸಿಕೊಳ್ಳಲಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.