ನಟಿ ರಚಿತಾ ರಾಮ್ ಕನ್ನಡದ ಬಹುಬೇಡಿಕೆಯ ನಟಿಯಾಗಿ ದಶಕಗಳಿಂದ ಸಕ್ರಿಯರಾಗಿದ್ದಾರೆ. ಬಿಂದಿಯಾ ರಾಮ್ ಮೂಲ ಹೆಸರಿನ ನಟಿ, ದರ್ಶನ್ ನಟನೆಯ 'ಬುಲ್ ಬುಲ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ರಚಿತಾ ರಾಮ್ ಹೆಸರಿನಿಂದ..
ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ (Rachita Ram) ಅವರು ತಿರುಪತಿಗೆ ಭೇಟಿ ನೀಡಿದ್ದಾರೆ. ಅಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದ ನಟಿ ರಚಿತಾ ರಾಮ್ ಅವರು ರಥಬೀದಿಯಲ್ಲಿ ಹಲವರಿಗೆ ಪ್ರಸಾದ ಹಂಚಿದ್ದಾರೆ. ನಟಿ ರಚಿತಾ ರಾಮ್ ಅವರನ್ನು ನೋಡಲು ಅಲ್ಲಿ ಬಹಳಷ್ಟು ಜನರು ಸೇರಿದ್ದರು. ಈ ವೇಳೆ, ರಚಿತಾ ಬಳಿ ಸೆಲ್ಪಿಗೆ ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಫ್ಯಾನ್ಸ್ ಸೆಲ್ಫೀ ಬೇಡಿಕೆಯನ್ನು ಕೂಲ್ ಆಗಿಯೇ ಹ್ಯಾಂಡಲ್ ಮಾಡಿದ ರಚಿತಾ ರಾಮ್ ಅವರು ಮುಖದಲ್ಲಿ ಸ್ಮೈಲ್ ಕೊಡುತ್ತಿದ್ದರು.
ಹೌದು, ನಟಿ ರಚಿತಾ ರಾಮ್ ಕನ್ನಡದ ಬಹುಬೇಡಿಕೆಯ ನಟಿಯಾಗಿ ದಶಕಗಳಿಂದ ಸಕ್ರಿಯರಾಗಿದ್ದಾರೆ. ಬಿಂದಿಯಾ ರಾಮ್ ಮೂಲ ಹೆಸರಿನ ನಟಿ, ದರ್ಶನ್ ನಟನೆಯ 'ಬುಲ್ ಬುಲ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ರಚಿತಾ ರಾಮ್ ಹೆಸರಿನಿಂದ ಖ್ಯಾತಿ ಪಡೆದರು. ಆ ಬಳಿಕ, ಕ್ರಾಂತಿ, ಅಂಬರೀಷ, ಜಗ್ಗುದಾದಾ ಹೀಗೆ ಸಾಲುಸಾಲು ಚಿತ್ರಗಳಲ್ಲಿ ನಟ ದರ್ಶನ್ ಜೋಡಿಯಾಗಿ ನಟಿಸಿದ್ದಾರೆ. ಸದ್ಯ ಜೈದ್ ಖಾನ್ (Zaid Khan) ಜೋಡಿಯಾಗಿ ಕಲ್ಟ್ (Cult) ಸಿನಿಮಾ ಶೂಟಿಂಗ್‌ನಲ್ಲಿ ರಚಿತಾ ಬ್ಯುಸಿಯಾಗಿದ್ದಾರೆ.
ಮುಂಗಾರು ಮಳೆಯಲ್ಲಿ ನೆಂದ ಹಾಗೆ ಇನ್ನು ಕಡಲ ಸೌಂದರ್ಯ ತೋರಿಸ್ತಾರಾ ಭಟ್ರು?
ನಾಗಶೇಖರ್ ನಿರ್ದೇಶನದ 'ಸಂಜು ವೆಡ್ಸ್ ಗೀತಾ-2' ಹಾಗೂ 'ಕಲ್ಟ್' ಸಿನಿಮಾಗಳು ಸದ್ಯವೇ ತೆರೆಗೆ ಬರಲಿವೆ. ಜೊತೆಗೆ, ಪರಭಾಷೆಯ ಚಿತ್ರಗಳಲ್ಲಿ ಕೂಡ ನಟಿ ರಚಿತಾ ರಾಮ್ ನಟಿಸುತ್ತಿದ್ದಾರೆ. ದರ್ಶನ್ ಚಿತ್ರದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟಿರುವ ಕಾರಣಕ್ಕೆ ರಚಿತಾ ದರ್ಶನ್ ಅವರನ್ನು ತನ್ನ 'ಗುರು' ಎಂದೇ ಕರೆದು ಅವರಿಗೆ ಕೃತಜ್ಞತೆ ಸಲ್ಲಿಸುತ್ತಾರೆ. ಒಂದು ದಶಕಗಳಿಗೂ ಹೆಚ್ಚು ಕಾಲ ನಿರಂತರವಾಗಿ ಸಿನಿಮಾ ನಟನೆ ಮಾಡುತ್ತಿರುವ ಮೂಲಕ ರಚಿತಾ, ಇನ್ನೂ ಕೂಡ ಚಾಲ್ತಿಯಲ್ಲಿದ್ದಾರೆ.
ಒಟ್ಟಿನಲ್ಲಿ, ಸದ್ಯ ತಿರುಪತಿಗೆ ಭೇಟಿ ನೀಡಿರುವ ರಚಿತಾ ತಮ್ಮ ಅಭಿಮಾನಿಗಳಿಗೆ ಸೆಲ್ಫೀಗೆ ಅವಕಾಶ ನೀಡಿ ಮೆಚ್ಚುಗೆ ಗಳಿಸಿದ್ದಾರೆ. ಜೊತೆಗೆ, ಕನ್ನಡದ ಟಾಪ್ ಹೀರೋಯಿನ್ ಆಗಿದ್ದರೂ ಕೂಡ ಯಾವುದೇ ಅಹಂ ಇಲ್ಲದೇ ತಿರುಪತಿಯ ಬೀದಿಯಲ್ಲಿ ಕೆಂಪು ಮೆರೂನ್ ಬಣ್ಣದ ಸೀರೆಯಲ್ಲಿ ಲಕ್ಷಣವಾಗಿ ಮಿಂಚುತ್ತಿದ್ದಾರೆ. ದೇವಾಲಯದ ಆವರಣದಲ್ಲಿ ಸೀರೆಯಲ್ಲಿ ಸುಂದರಿಯಾಗಿ ಕಾಣಿಸುತ್ತಿರುವ ರಚಿತಾ ರಾಮ್ ಲುಕ್ ಎಲ್ಲರನ್ನೂ ಸೆಳೆಯುತ್ತಿದೆ.
ಅಪ್ಪು ಫ್ಯಾನ್ಸ್‌ಗೆ ಶಿವಣ್ಣ ಖಡಕ್ ಸಂದೇಶ; ಇವರೆಗೂ ಯಾರೂ ಹೀಗೆ ಮಾಡಿರಲಿಲ್ಲ ಯಾಕೆ?