ಅಪ್ಪು ಫ್ಯಾನ್ಸ್‌ಗೆ ಶಿವಣ್ಣ ಖಡಕ್ ಸಂದೇಶ; ಇವರೆಗೂ ಯಾರೂ ಹೀಗೆ ಮಾಡಿರಲಿಲ್ಲ ಯಾಕೆ?

By Shriram Bhat  |  First Published Nov 29, 2024, 12:19 PM IST

ಫೋಟೋ ಹಾಕಿ ದೂರ ತಳ್ಳಲು ಇಷ್ಟಪಡುವುದಿಲ್ಲ...ನನ್ನ ತಮ್ಮನನ್ನು ಹೇಗೆ ಪ್ರೀತಿಸಿಬೇಕು ಎಂಬುದು ನನಗೆ ಗೊತ್ತು. ಸಿನಿಮಾವನ್ನು ಸಿನಿಮಾ ರೀತಿಯಲ್ಲಿಯೇ ನೋಡಿ..' ಎಂದು ಶಿವಣ್ಣ ಪುನೀತ್ ಅಭಿಮಾನಿಗಳಿಗೆ ಖಡಕ್..


ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shiva Rajkumar) ಅವರು ಇತ್ತೀಚೆಗೆ ಒಂದು ಆರೋಪವನ್ನು ಎದುರಿಸಿದ್ದು ಗೊತ್ತೇ ಇದೆ. ಅವರದೇ ಹೋಮ್‌ ಪ್ರೊಡಕ್ಷನ್ ನಿರ್ಮಾಣ ಹಾಗೂ ನಟನೆಯ 'ಭೈರತಿ ರಣಗಲ್' ಚಿತ್ರದ (Bhairathi Ranagal) ಬಿಡುಗಡೆ ದಿನದಂದು ನಟ ಶಿವಣ್ಣ ಅವರಿಗೆ ಅಪ್ಪು ಅಭಿಮಾನಿಗಳ ಕಡೆಯಿಂದ ಬೇಸರದ ಮಾತೊಂದು ಬಂತು. ಶಿವಣ್ಣ ತಮ್ಮ ನಿರ್ಮಾಣ ಹಾಗೂ ನಟನೆಯ ಸಿನಿಮಾದಲ್ಲಿ ಶುರವಿನಲ್ಲಿ ತಮ್ಮ ತಮ್ಮ'ಅಪ್ಪು' ಚಿತ್ರವನ್ನು ಬಳಸಿಲ್ಲ ಎಂಬುದು. ಅದಕ್ಕೆ ನಟ ಶಿವಣ್ಣ ಅವರು ಮಾರ್ಮಿಕ ಉತ್ತರ ನೀಡಿದ್ದು ಇದೀಗ ವೈರಲ್ ಆಗುತ್ತಿದೆ. 

ಹಾಗಿದ್ದರೆ ಶಿವಣ್ಣ ಹೇಳಿದ್ದೇನು? 'ನನ್ನ ಮನದಲ್ಲಿ ಅಪ್ಪು (Puneet Rajkumar) ಕಾಣಿಸುತ್ತಿಲ್ಲವೇ? ನನ್ನ ಪಾಲಿಗೆ ಆತ ಇನ್ನೂ ಸತ್ತಿಲ್ಲ.. ಸದಾಕಾಲ ನನ್ನೊಂದಿಗೇ ಇರುತ್ತಾನೆ. ಫೋಟೋ ಹಾಕಿ ದೂರ ತಳ್ಳಲು ಇಷ್ಟಪಡುವುದಿಲ್ಲ. ಪುನೀತ್ ಯಾವಾಗಲೂ ನನ್ನೊಂದಿಗೇ ಇರುತ್ತಾನೆ. ನನ್ನ ತಮ್ಮನನ್ನು ಹೇಗೆ ಪ್ರೀತಿಸಿಬೇಕು ಎಂಬುದು ನನಗೆ ಗೊತ್ತು. ಸಿನಿಮಾವನ್ನು ಸಿನಿಮಾ ರೀತಿಯಲ್ಲಿಯೇ ನೋಡಿ..' ಎಂದು ಶಿವಣ್ಣ ಪುನೀತ್ ಅಭಿಮಾನಿಗಳಿಗೆ ಖಡಕ್ ಸಂದೇಶ ನೀಡಿದ್ದಾರೆ. 

Tap to resize

Latest Videos

ಶಂಕರ್‌ ನಾಗ್ ಸಾವು ಪೂರ್ವ ನಿರ್ಧಾರಿತ, ಅವ್ರು ಮುನ್ಸೂಚನೆ ಕೊಟ್ಟಿದ್ದರು: ಅನಂತ್‌ ನಾಗ್!

ಮೇಲ್ನೊಟಕ್ಕೆ ಇವೆಲ್ಲಾ ಸಣ್ಣ ಸಂಗತಿ ಎನಿಸಿದರೂ ದೊಡ್ಡ ಸ್ಟಾರ್ ಒಬ್ಬರಿಂದ ಇಂಥ ಹೇಳಿಕೆ ಹೊರಬಿದ್ದಾಗ ಆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಕಾಮೆಂಟ್‌ಗಳು ಹರಿದಾಡುತ್ತವೆ. ಅದರಲ್ಲಿ ಒಬ್ಬರು ತುಂಬಾ ಮಾರ್ಮಿಕವಾಗಿ ಬರೆದಿದ್ದಾರೆ. 'ಶಿವಣ್ಣ ಹೇಳಿರುವುದು ನೂರಕ್ಕೆ ನೂರರಷ್ಟು ಸರಿಯಾಗಿದೆ. ಯಾವುದೇ ನಟನ ಅಭಿಮಾನಿಗಳು ಅತಿರೇಕಕ್ಕೆ ಹೋಗಬಾರದು. ಅದು ದರ್ಶನ್ (Darshan) ಅಭಿಮಾನಿಗಳೇ ಇರಲಿ, ಪುನೀತ್ ಅಭಿಮಾನಿಗಳೇ ಇರಲಿ, ಎಲ್ಲರಿಗೂ ಇದು ಅನ್ವಯಿಸುತ್ತದೆ. 

ಅಂದು ಡಾ ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ಅಭಿಮಾನಿಗಳು ಅತಿರೇಕದ ವರ್ತನೆ ತೋರಿಸುತ್ತಿದ್ದರು. ಆ ಕಾರಣಕ್ಕೇ ಕೊನೆಯವರೆಗೂ ಅಣ್ಣಾವ್ರು ಆಗಲೀ ಅಥವಾ ವಿಷ್ಣು ಅವರಾಗಲೀ ಸಾರ್ವಜನಿಕವಾಗಿ 'ನಮ್ಮಿಬ್ಬರಲ್ಲಿ ಮನಸ್ತಾಪ ಇಲ್ಲ, ನಾವಿಬ್ಬರೂ ಚೆನ್ನಾಗಿದ್ದೇವೆ' ಎಂದು ತೋರಿಸಿಕೊಳ್ಳಲು ಆಗಲೇ ಇಲ್ಲ. ಅವರಿಬ್ಬರ ಮಧ್ಯೆ ಕಂದಕ ಸೃಷ್ಟಿಸಿದ್ದು ಅಭಿಮಾನಿಗಳ ಅತಿರೇಕದ ವರ್ತನೆ. ಅದು ಇಂದೂ ಕೂಡ ಮುಂದುವರೆದಿರುವುದು ದುರದೃಷ್ಟಕರ. 

ನೀನು ಹೀರೋ ಆಗ್ತೀಯ, ನನ್ನ ಮ್ಯಾನೇಜರ್ ಆಗಿ ಇಟ್ಕೋ ಅಂದಿದ್ದ ರಜನಿಕಾಂತ್; ನಟ ಅಶೋಕ್!

ಆವತ್ತು ಎಲ್ಲ ಹಿರಿಯ ಕಲಾವಿದರೂ 'ಸಿನಿಮಾವನ್ನು ಸಿನಿಮಾ ರೀತಿ ನೋಡಿ. ಪರ್ಸನಲ್ ವಿಷಯಗಳನ್ನು ತೂರಿಸಲು ಯತ್ನಿಸಬೇಡಿ' ಎಂದು ಹೇಳಿದ್ದರೆ ಹಲವು ಸಮಸ್ಯೆಗಳು ಬಹುಶಃ ನಿವಾರಣೆಯಾಗುತ್ತಿತ್ತು. ಈಗ ಶಿವಣ್ಣ ಮಾಡಿದಂತೆ 'ಸಿನಿಮಾವನ್ನು ಸಿನಿಮಾದಂತೆ ನೋಡಿ, ಎಲ್ಲ ಕಲಾವಿದರನ್ನು ಗೌರವಿಸಿ ಕಲಾವಿದರಂತೆ ನೋಡಿ' ಎಂಬ ಸಂದೇಶ ಕೊಟ್ಟಿದ್ದರೆ ಚೆನ್ನಾಗಿತ್ತು. ಆದರೆ ಆ ಕೆಲಸವನ್ನು ಈಗ ಶಿವರಾಜ್‌ಕುಮಾರ್ ಅವರು ಮಾಡಿದ್ದಾರೆ. ಇದು ತುಂಬಾ ಮೊದಲೇ ಆಗಬೇಕಿತ್ತು.

ಕೇವಲ ದರ್ಶನ್ ಅಭಿಮಾನಿಗಳು ಮಾತ್ರವಲ್ಲ, ಪುನೀತ್ ಅಭಿಮಾನಿಗಳೂ ಕೂಡ ಅತಿರೇಕದ ವರ್ತನೆ ಮಾಡಬೇಡಿ. ಇದನ್ನು ಉಳಿದ ಎಲ್ಲಾ ನಟರ ಅಭಿಮಾನಿಗಳು ಕೂಡ ಅನುಸರಿಸಬೇಕು. ಅಂಧ ಅಭಿಮಾನ ಎಲ್ಲ ಸಿನಿಮಾನಟರಿಗೂ ಒಂದಲ್ಲ ಮತ್ತೊಂದು ದಿನ ಸಮಸ್ಯೆ ತರುತ್ತವೆ' ಎಂದಿದ್ದಾರೆ ನೆಟ್ಟಿಗರೊಬ್ಬರು. ಅವರು ಮಾತು ತುಂಬಾ ಸತ್ಯ ಎನ್ನಿಸುತ್ತದೆ ಅಲ್ಲವೇ? 'ಇನ್ನಾದರೂ ಅಭಿಮಾನಿಗಳು ಇಂಥ ಸೂಕ್ಷ್ಮ ಸಂಗತಿಗಳನ್ನು ಅರ್ಥ ಮಾಡಿಕೊಳ್ಳಬಹುದೇ..' ಎಂದಿದ್ದಾರೆ ಸೋಷಿಯಲ್ ಮೀಡಿಯಾ ಸ್ಟಾರ್!

ಪುನೀತ್‌ನಂತೆ ನನಗೂ ಹಾರ್ಟ್ ಅಟ್ಯಾಕ್ ಆಗಿತ್ತು, ಅದು ನಮ್ಮ ಹೆರಿಡಿಟರಿ ಸಮಸ್ಯೆ: ವಿನೋದ್ ರಾಜ್!

click me!