ಮಹಿಳಾ ದಿನದಂದು ಹೆಣ್ಮಕ್ಕಳಿಗೆ ಸ್ಪೆಷಲ್ ಮೆಸೇಜ್ ಕೊಟ್ಟ ಪವಿತ್ರಾ ಗೌಡ

Published : Mar 08, 2025, 03:06 PM ISTUpdated : Mar 08, 2025, 03:54 PM IST
ಮಹಿಳಾ ದಿನದಂದು ಹೆಣ್ಮಕ್ಕಳಿಗೆ ಸ್ಪೆಷಲ್ ಮೆಸೇಜ್ ಕೊಟ್ಟ ಪವಿತ್ರಾ ಗೌಡ

ಸಾರಾಂಶ

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆಯಾದ ನಟಿ ಪವಿತ್ರಾ ಗೌಡ,  ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕಪ್ಪು ಬಿಳುಪಿನ ಸೀರೆಯಲ್ಲಿ ಗುಲಾಬಿ ಹಿಡಿದು ವಿಡಿಯೋ ಹಂಚಿಕೊಂಡಿದ್ದಾರೆ. "ನಿಮ್ಮನ್ನು ಪ್ರೀತಿಸಿ, ಗುರಿ ಬೆನ್ನಟ್ಟಿ, ಕೃತಜ್ಞರಾಗಿರಿ" ಎಂದು ಮಹಿಳೆಯರಿಗೆ ಶುಭ ಕೋರಿದ್ದಾರೆ. 

ಕನ್ನಡ ಚಿತ್ರರಂಗದ ನಟಿ, ಮಾಡೆಲ್ ಹಾಗೂ  ಫ್ಯಾಷನ್ ಡಿಸೈನರ್ ಅಗಿರುವ ಪವಿತ್ರಾ ಗೌಡ (Pavithra Gowda) ತಮ್ಮ ರೆಡ್‌ ಕಾರ್ಪೆಟ್‌ ಸ್ಟುಡಿಯೋ ರೀ-ಓಪನ್ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದರು. ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಜೊತೆ ಜೈಲು ಸೇರಿದ್ದ ನಟಿ, ಬಿಡುಗಡೆಯಾದ ಮೇಲೆ ಹೆಚ್ಚಾಗಿ ದೇವಸ್ಥಾನ ದರ್ಶನ, ಪೂಜೆ, ಪುನಸ್ಕಾರಗಳನ್ನು ಮಾಡೋದ್ರಲ್ಲಿ ಬ್ಯುಸಿಯಾಗಿದ್ದರು. ನಂತರ ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋ ರೀ ಓಪನ್ ಕೂಡ ಮಾಡಿಸಿದ್ದರು. ಸದ್ಯಕ್ಕಂತೂ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಡಿಸೈನರ್ ವೇರ್ ಗಳ ಫೋಟೋ ಶೂಟ್, ವೀಡಿಯೋಗಳನ್ನು ಅಪ್ ಲೋಡ್ ಮಾಡುವ ಮೂಲಕ ತಾವು ಸಂಪೂರ್ಣವಾಗಿ ಕಂ ಬ್ಯಾಕ್ ಮಾಡಿದ್ದೇನೆ ಅನ್ನೋದನ್ನು ತೋರಿಸಿದ್ದಾರೆ. 

ದರ್ಶನ್ ಲೈಫ್‌ನಲ್ಲಿ ಈಗ ಪವಿತ್ರಾ ಗೌಡಗೆ ಸ್ಥಾನ ಇಲ್ಲ, ವಿಜಯಲಕ್ಷ್ಮಿ, ದಿನಕರ್ ಕೈಯಲ್ಲಿ ಕಂಪ್ಲೀಟ್ ಕೀ..

ಇದೀಗ ಪವಿತ್ರಾ ಗೌಡ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ, ವಿಶೇಷವಾದ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. Happy Women’s Day ಎಂದು ಮಹಿಳೆಯರಿಗೆ ಶುಭಾಶಯ ಕೋರುವುದರ ಜೊತೆಗೆ, ಕಪ್ಪು ಬಿಳುಪಿನ ಸೀರೆಯುಟ್ಟು ಗಿಡದಿಂದ ಕೇಸರಿ ಬಣ್ಣದ ಗುಲಾಬಿ ಹೂವನ್ನು ಕೊಯ್ದು ಕೈಯ್ಯಲ್ಲಿ ಹಿಡಿಯುತ್ತಾ, ನಸು ನಗು ಬೀರುತ್ತಿರುವ ತಮ್ಮ ವಿಡಿಯೋ ಒಂದನ್ನು ಶೇರ್ ಮಾಡಿ, ಅದರ ಜೊತೆಗೊಂದು ಸ್ವೀಟ್ ಆಗಿರುವ ಮೆಸೇಜ್ ಕೂಡ ನೀಡಿದ್ದಾರೆ. ಈ ಮೆಸೇಜ್ ಮಹಿಳೆಯರಿಗಾಗಿಯೇ ನೀಡಿದ್ದು, ಅಷ್ಟಕ್ಕೂ ಪವಿತ್ರಾ ಗೌಡ ಮಹಿಳಾ ದಿನದಂದು ಹೆಣ್ಣು ಮಕ್ಕಳಿಗೆ ನೀಡಿರುವ ಮೆಸೇಜ್ ಏನು ಅನ್ನೋದನ್ನು ನೋಡೋಣ ಬನ್ನಿ. 

ಡಿಯರ್ ಮಿ, ನಿನ್ನನ್ನು ನಿನ್ನೆಗಿಂತ ಇವತ್ತು ಸ್ವಲ್ಪ ಹೆಚ್ಚಾಗಿಯೇ ಪ್ರೀತಿಸು, ಇತರಿಗಿಂತ ಮೊದಲು ನಿಮಗೆ ನೀವು ಆದ್ಯತೆಯನ್ನು (priority) ಕೊಟ್ಟುಬಿಡಿ, ನಿಮ್ಮ ಗುರಿಗಳನ್ನು ಬೆನ್ನಟ್ಟಿ, ನಿಮ್ಮ ಬಳಿ ಏನು ಇದೆಯೋ ಅದಕ್ಕಾಗಿ ನೀವು ಕೃತಜ್ಞರಾಗಿರಿ, ನಿಮ್ಮ ಬಗ್ಗೆ ನೀವು ಹೆಮ್ಮೆ ಪಡಿ, ಜೊತೆಗೆ ನೀವೋಬ್ಬ ಅದ್ಭುತ ಮಹಿಳೆ ಅನ್ನೋದನ್ನು ನೆನೆಪಿಸಿಕೊಂಡು ಈ ದಿನವನ್ನು ಸೆಲೆಬ್ರೇಟ್ ಮಾಡಿ ಎನ್ನುತ್ತಾ ಪವಿತ್ರಾ ತಮಗೆ ತಾವೇ ಪ್ರೇರಣೆ ನೀಡುವ ಮೂಲಕ, ಪ್ರಪಂಚದ ಎಲ್ಲಾ ಮಹಿಳೆಯರಿಗೂ ಮಹಿಳಾ ದಿನದ ಶುಭಾಶಯವನ್ನು ಕೋರಿದ್ದಾರೆ.

ಪವಿತ್ರಾ ಗೌಡ ರೆಡಿಯಾಗುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್!

 ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ (Renuka Swamy murder case) ಪ್ರಮುಖ ಆರೋಪಿಯಾಗಿರುವ ಪವುತ್ರಾ ಗೌಡ ಸದ್ಯ ಬೇಲಿನ ಮೇಲೆ ಹೊರಗೆ ಬಂದಿದ್ದಾರೆ. ಆದರೆ ಅವರು ಕೋರ್ಟ್ ಅನುಮತಿ ಇಲ್ಲದೇ ಬೇರೆ ಜಾಗಗಳಿಗೆ ಹೋಗುವಂತಿಲ್ಲ. ವ್ಯವಹಾರ ಸಂಬಂಧ ದೆಹಲಿ ಹಾಗೂ ಮುಂಬೈಗೆ ಹೋಗಲು ಅನುಮತಿ ನೀಡುವಂತೆ ಪವಿತ್ರಾಗೌಡ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.ಇದೀಗ 57ನೇ ಸಿಸಿಹೆಚ್‌ ಕೋರ್ಟ್‌ ಅರ್ಜಿ ಪುರಸ್ಕರಿಸಿದ್ದು, ಮಾರ್ಚ್ 3 ರಿಂದ 10 ರವರೆಗೆ ಹಾಗೂ ಮಾರ್ಚ್‌ 17 ರಿಂದ 26 ರವರೆಗೆ ಭೇಟಿ ನೀಡಲು ಕೋರ್ಟ್ ಅನುಮತಿ ನೀಡಿದೆ. ಕೆಲ ದಿನಗಳ ಹಿಂದೆ ಪವಿತ್ರಾ ಗೌಡ, ಮುಂಬೈಗೆ ತೆರಳಿದ್ದು, ಶಿರಡಿ ಸಾಯಿ ಬಾಬಾನ ದರ್ಶನ ಪಡೆದು ಬಂದಿದ್ದರು. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ