
ರಾಜ್ಯ ಬಜೆಟ್‌ನಲ್ಲಿ ಸಿನಿಮಾ ರಂಗಕ್ಕೆ ನೀಡಿದ ಕೊಡುಗೆ ಬಗ್ಗೆ ನಟಿ ರಮ್ಯಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕನ್ನಡ ಚಲನಚಿತ್ರೋದ್ಯಮವನ್ನು ಪುನರುಜ್ಜೀವನಗೊಳಿಸಲು ಕರ್ನಾಟಕ ಸರ್ಕಾರ ಕೈಗೊಂಡಿರುವ ಕ್ರಮ ಶ್ಲಾಘನೀಯ ಎಂದು ಅವರು ಎಕ್ಸ್ ಖಾತೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೆಚ್ಚುಗೆ ಸೂಚಿಸಿದ ನಟಿ ರಮ್ಯಾ!
“2025ರ ಆರಂಭದಲ್ಲಿ, 75 ಚಿತ್ರಗಳು ಬಿಡುಗಡೆಯಾಗಿವೆ. ಯಾವುದೂ ಉತ್ತಮ ಪ್ರದರ್ಶನ ನೀಡಿಲ್ಲ. ಸಾಮಾನ್ಯ ಜನರಿಗೆ ಸಿನಿಮಾ ಅನುಭವ ದುಬಾರಿಯಾಗಿದೆ. 1000 ಟಿಕೆಟ್ ದರ, ಪಾಪ್‌ಕಾರ್ನ್ ಎಲ್ಲವೂ ಸಾಮಾನ್ಯ ಪ್ರೇಕ್ಷಕನಿಗೆ ಹೊರೆಯಾಗಿದೆ. ರೂ. 200 ಕ್ಕೆ ಟಿಕೆಟ್‌ಗಳನ್ನು ಸೀಮಿತಗೊಳಿಸುವುದು ಕನ್ನಡ ಸಿನಿಮಾ ವೀಕ್ಷಕರನ್ನು ಮತ್ತೆ ಚಿತ್ರಮಂದಿರಗಳಿಗೆ ಕರೆತರುತ್ತದೆ ಎಂಬ ಭರವಸೆಯಿದೆ” ಎಂದು ರಮ್ಯಾ ಅವರು ಹೇಳಿದ್ದಾರೆ.
Karnataka Budget 2025: ಎಲ್ಲ ಮಲ್ಟಿಪ್ಲೆಕ್ಸ್, ಸಿನಿಮಾ ಥಿಯೇಟರ್‌ಗಳಲ್ಲಿ 200 ರೂ. ಟಿಕೆಟ್ ಫಿಕ್ಸ್!
OTT ಸೃಷ್ಟಿ ಕೂಡ ಒಳ್ಳೆಯ ನಡೆ
“OTT ಪ್ಲಾಟ್‌ಫಾರ್ಮ್‌ಗಳು ಇತರ ಭಾಷೆಗಳ ಕಡೆಗೆ ಪಕ್ಷಪಾತ ಮಾಡ್ತಿವೆ. ಅವು ಕನ್ನಡ ಚಿತ್ರಗಳನ್ನು ಖರೀದಿಸುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರಿ ವೇದಿಕೆಗೆ ನಿರ್ಮಿಸುತ್ತಿರುವುದು ಮತ್ತೊಂದು ಉತ್ತಮ ಹೆಜ್ಜೆ ಎಂದು ನಟಿ ರಮ್ಯಾ ಅವರು ಪೋಸ್ಟ್ ಮಾಡಿದ್ದಾರೆ
ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ತಮ್ಮ 16ನೇ ಬಜೆಟ್ ಮಂಡನೆ ವೇಳೆ “ಕನ್ನಡ ಚಿತ್ರರಂಗದ ಪ್ರೋತ್ಸಾಹಕ್ಕಾಗಿ OTT ವೇದಿಕೆ ಸೃಷ್ಟಿ ಮಾಡಲಿದ್ದೇವೆ. ಇನ್ನು ರಾಜ್ಯದ ಎಲ್ಲ ಮಲ್ಟಿಪ್ಲೆಕ್ಸ್, ಚಿತ್ರಮಂದಿರಗಳಲ್ಲಿ 200 ರೂಪಾಯಿ ಟಿಕೆಟ್ ದರ ಫಿಕ್ಸ್ ಮಾಡೋದಾಗಿ ಹೇಳಿದ್ದರು. ಈ ನಡೆ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸಿನಿಮಾ ಟಿಕೆಟ್ ದರ ಹೆಚ್ಚಾಗಿದ್ದಕ್ಕೆ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಯ್ತ? | K Manju | Vishnu Priya Movie
ಈ ಹಿಂದೆಯೂ ಮಂಡನೆ ಆಗಿತ್ತು!
ರಾಜ್ಯದಲ್ಲಿ 2018ರ ಬಜೆಟ್‌ನಲ್ಲಿ ಸಿನಿಮಾ ಹಾಲ್‌ಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ ಮಾಡೋದಾಗಿ ಘೋಷಿಸಲಾಗಿತ್ತು. ಅಷ್ಟೇ ಅಲ್ಲದೆ 2018ರ ಅಧಿಸೂಚನೆಯೂ ಬಂದಿತ್ತು. ಕರ್ನಾಟಕದಲ್ಲಿ 200 ರೂಪಾಯಿ ಸಿನಿಮಾ ಟಿಕೆಟ್ ದರ ಎಂದು ನಿಗದಿ ಮಾಡಿದ್ದರು. ಆದರೆ ಥಿಯೇಟರ್ ಮಾಲೀಕರು ಮಾತ್ರ ಕೋರ್ಟ್‌ಗೆ ಹೋಗಿ ಈ ಘೋಷಣೆ ವಿರುದ್ಧ ತಡೆ ತಂದಿದ್ದರು. ಹೀಗಾಗಿ ಸರ್ಕಾರ ಆ ಆದೇಶವನ್ನು ವಾಪಾಸ್ ಪಡೆಯಿತು. ಈಗ 100-150 ಸೀಟ್ ಇರುವ ಮಲ್ಟಿಫ್ಲೆಕ್ಸ್‌ಗಳಲ್ಲಿ ಸಿನಿಮಾ ಟಿಕೆಟ್ ದರ ಜಾಸ್ತಿ ಇದೆ. ಅಲ್ಲಿ ಸಿಗುವ ನೀರು, ತಿಂಡಿಗಳ ಬೆಲೆ ದುಪ್ಪಟ್ಟು ಇರುತ್ತದೆ. ಹೀಗಾಗಿ ಟಿಕೆಟ್ ದರ ನಿಯಂತ್ರಣ ಮಾಡಬೇಕು ಎಂದು ಗೃಹಸಚಿವ ಜಿ ಪರಮೇಶ್ವರ್ ಅವರು ಹೇಳಿದ್ದಾರೆ.
ಇನ್ನು ಸ್ಟಾರ್ ಸಿನಿಮಾಗಳ ರಿಲೀಸ್ ಆದಾಗ, ಬೇರೆ ಭಾಷೆ ಸಿನಿಮಾಗಳು ಕನ್ನಡದಲ್ಲಿ ರಿಲೀಸ್ ಆದಾಗಲಂತೂ ಮಲ್ಟಿಫ್ಲೆಕ್ಸ್‌ಗಳು ಒಂದು ಸಿನಿಮಾ ಟಿಕೆಟ್‌ಗೆ ಸಾವಿರಕ್ಕೂ ಹೆಚ್ಚು ಹಣವನ್ನು ಪಡೆಯುತ್ತವೆ. ಈಗ ದರ ನಿಗದಿ ಆಗಿರೋದು ಯಾವ ರೀತಿ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.