Troll Matter: ರಶ್ಮಿಕಾ ಬೆನ್ನಿಗೆ ನಿಂತ ರಮ್ಯಾ..! ಹೊತ್ತಿಕೊಂಡ ಬೆಂಕಿಗೆ ನೆಟ್ಟಿಗರ ಕಾಮೆಂಟ್ ಏನು?

Published : Mar 08, 2025, 01:18 PM ISTUpdated : Mar 08, 2025, 03:35 PM IST
Troll Matter: ರಶ್ಮಿಕಾ ಬೆನ್ನಿಗೆ ನಿಂತ ರಮ್ಯಾ..! ಹೊತ್ತಿಕೊಂಡ ಬೆಂಕಿಗೆ ನೆಟ್ಟಿಗರ ಕಾಮೆಂಟ್ ಏನು?

ಸಾರಾಂಶ

ಒಂದ್ ಕಡೆ ರಮ್ಯಾ ಸಿನಿಮಾ ಕಮ್​ ಬ್ಯಾಕ್​ ಬಗ್ಗೆ ಮತ್ತೆ ಟಾಕ್ ಎದ್ದಿದೆ. ಇದರ ಜೊತೆಗೆ ಹೆಣ್ಣುಮಕ್ಕಳ ಪರವಾಗಿ ಧ್ವನಿ ಎತ್ತೋ ರಮ್ತಾ ಈಗ ನ್ಯಾಷನಲ್ ಕ್ರಶ್​ ರಶ್ಮಿಕಾ ಮಂದಣ್ಣ ಪರ ಬ್ಯಾಟಿಂಗ್‌ ಮಾಡಿದ್ದಾರೆ. ಇದೀಗ ನೆಟ್ಟಿಗರು ಏನಂತಿದಾರೆ..? ಗುಟ್ಟು ರಟ್ಟಾಗಿದೆ.. 

ಒಂದ್ ಕಡೆ ರಮ್ಯಾ (Ramya) ಸಿನಿಮಾ ಕಮ್​ ಬ್ಯಾಕ್​ ಬಗ್ಗೆ ಮತ್ತೆ ಟಾಕ್ ಎದ್ದಿದೆ. ಈ ಭಾರಿ ರಮ್ಯಾ ಸಿನಿಮಾ ಲಾಕ್ ಆಗೋದು ಪಕ್ಕಾ ಎನ್ನುತ್ತಿದೆ ಸ್ಯಾಂಡಲ್​ವುಡ್​. ಇದರ ಜೊತೆಗೆ ಹೆಣ್ಣುಮಕ್ಕಳ ಪರವಾಗಿ ಧ್ವನಿ ಎತ್ತೋ ರಮ್ತಾ ಈಗ ನ್ಯಾಷನಲ್ ಕ್ರಶ್​ ರಶ್ಮಿಕಾ ಮಂದಣ್ಣ (Rashmika Mandanna) ಪರ ಬ್ಯಾಟಿಂಗ್‌ ಮಾಡಿದ್ದಾರೆ. ರಶ್ಮಿಕಾ ಮಂದಣ್ಣಗೆ ಬುದ್ಧಿ ಕಲಿಸಬೇಕು ಎಂದ ಶಾಸಕ ರವಿ ಗಣಿಗ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ ರಮ್ಯಾ.. 


 
ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಬಗ್ಗೆ ಶಾಸಕ ಗಣಿಗ ರವಿ ಅವರು ಸಿನಿಮಾದವರು ಬಾಯಿಮುಚ್ಚಿಕೊಂಡು ಇರಬೇಕು. ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾದಿಂದ ಬೆಳೆದವರು. ಅವರನ್ನು ಕಳೆದ ವರ್ಷ ಚಲನಚಿತ್ರೋತ್ಸವಕ್ಕೆ ಆಹ್ವಾನ ಮಾಡಿದ್ವಿ. ಆದರೆ ನಾನು ಹೈದರಾಬಾದ್‌ನಲ್ಲಿ ಇರೋದು, ನನಗೆ ಟೈಂ ಇಲ್ಲ, ಬರಲ್ಲ ಎಂದು ಹೇಳಿದ್ದರು. ಇವರಿಗೆ ಬುದ್ದಿ ಕಲಿಸಬೇಕಲ್ವಾ? ಎಂದು ಕೆಂಡಕಾರಿದರು. ಈ ಬಗ್ಗೆ ಮಾತನಾಡಿರೋ ರಮ್ಯಾ ರಶ್ಮಿಕಾ ಬಗ್ಗೆ ಮಾತನಾಡೋದನ್ನ ನಿಲ್ಲಿಸಿ ಟ್ರೋಲ್ ಮಾಡಬೇಡಿ. ಇದರಿಂದ ನಟಿಯರಲ್ಲಿ ಮಾನಸಿಕ ಖಿನ್ನತೆ ಉಂಟು ಮಾಡಿಸುತ್ತೆ ಎಂದಿದ್ದಾರೆ. 

ರಮ್ಯಾ ಲೋಕದಲ್ಲಿ ಮೂಡಿದೆ ಹೊಸ ಸುದ್ದಿ.. ವಿಕಟಕವಿ ಚಿತ್ರದಲ್ಲಿ ಮತ್ತೆ ಸಿನಿಮಾಗೆ ಕಮ್‌ಬ್ಯಾಕ್!

ಸ್ಯಾಂಡಲ್‌ವುಡ್ ನಟಿ ರಮ್ಯಾ ಅವರು ಟ್ರೋಲ್ ಬಗ್ಗೆ ಮಾತನ್ನಾಡಿದ್ದಾರೆ. ಈ ಬಗ್ಗೆ ಮಾತನ್ನಾಡುತ್ತ ನಟಿ ರಮ್ಯಾ 'ನಾನು ಟ್ರೋಲ್‌ ಮಾಡೋದನ್ನು ಎಲ್ಲರೂ ನಿಲ್ಲಿಸಬೇಕು ಅಂತ ಹೇಳ್ತೀನಿ.. ಉದಾಹರಣೆಗೆ, ನಟಿ ರಶ್ಮಿಕಾ ಬಗ್ಗೆ ಟ್ರೋಲ್ ಕೆಟ್ಟದಾಗಿರುತ್ತೆ.. ಅದು ಸ್ಟಾಪ್ ಆಗಬೇಕು. ಅದರಲ್ಲೂ ಮುಖ್ಯವಾಗಿ ನಟಿಯರ ಬಗ್ಗೆ ಟ್ರೋಲ್ ಮಾಡೊದು ಹೆಚ್ಚು. ಕಾರಣ, ಅವರು ಸಾಫ್ಟ್ ಆಗಿರ್ತಾರೆ, ಅವರು ಅದಕ್ಕೆ ಏನೂ ಆಕ್ಷನ್ ತಗೊಳ್ಳೋದಿಲ್ಲ ಅನ್ನೋ ಕಾರಣಕ್ಕೆ.. ಆದರೆ, ಅದು ತಪ್ಪು, ಈ ಟ್ರೋಲ್ ಬಿಸಿನೆಸ್ ನಿಲ್ಲಬೇಕು; ಎಂದಿದ್ದಾರೆ ನಟಿ ರಮ್ಯಾ. 

ಯಾರನ್ನೂ ಟ್ರೋಲ್ ಮಾಡಬಾರದು.. ಎಲ್ಲರಿಗೂ ಅದನ್ನು ಸಹಿಸಿಕೊಳ್ಳೋ ಶಕ್ತಿ ಇರೋದಿಲ್ಲ.. ಅವ್ರ ಮೆಂಟಲ್ ಹೆಲ್ತ್‌ ಬಗ್ಗೆ ಇಮಾಜಿನ್ ಮಾಡ್ಕೊಳ್ಳಿ.. ಅವ್ರು ಎಷ್ಟು ಅಂತ ಸಹಿಸಿಕೊಳ್ತಾರೆ ಹೇಳಿ? ನೀವೇನೋ ಎಲ್ಲೋ ಕೂತ್ಕೊಂಡು ಇನ್‌ಸ್ಟಾಗ್ರಾಂನಲ್ಲಿ ಯಾರೋ ಒಬ್ರನ್ನ ಟ್ರೋಲ್ ಮಾಡ್ತೀರಾ.. ಆದ್ರೆ, ಆ ಕಡೆ ಅದನ್ನ ರಿಸೀವ್ ಮಾಡೋರ ಪರಿಸ್ಥಿತಿ ಹೇಗಿರಬಹುದು ಅಂತ ಊಹಿಸಿಕೊಳ್ಳಿ.. ಅವರು ಮಾನಸಿಕ ಖಿನ್ನತೆಗೆ ಹೋಗುವ ಎಲ್ಲಾ ಸಾಧ್ಯತೆ ಇರುತ್ತೆ.. ಆಗ ಯಾರು ಜಾವಾಬ್ದಾರಿ..?' ಎಂದು ಇನ್ನೊಂದು ಆಯಾಮ ತೆರೆದಿಟ್ಟಿದ್ದಾರೆ ನಟಿ ರಮ್ಯಾ.

ರಮ್ಯಾ ಲೋಕದಲ್ಲಿ ಮೂಡಿದೆ ಹೊಸ ಸುದ್ದಿ.. ವಿಕಟಕವಿ ಚಿತ್ರದಲ್ಲಿ ಮತ್ತೆ ಸಿನಿಮಾಗೆ ಕಮ್‌ಬ್ಯಾಕ್! 

ಅದಕ್ಕೆ ಯಾರೋ ಒಬ್ಬರು 'ಅಲ್ಲ ಮೆಡಂ, ರಶ್ಮಿಕಾ ಅವ್ರು ಅವ್ರ ಮನೆ ಹೈದ್ರಾಬಾದ್ ಅಂದ್ರಲ್ಲ..' ಎನ್ನುತ್ತಿದ್ದಂತೆ ನಟಿ ರಮ್ಯಾ ಅವರು 'ಅವ್ರ ಮನೆ ಅಲ್ಲಿ ಇರಬಹುದು..' ಎಂದು ಹೇಳುವ ಮೂಲಕ ಸತ್ಯದ ಇನ್ನೊಂದು ರೂಪವನ್ನು ಓಪನ್ ಮಾಡಿದ್ದಾರೆ ನಟಿ ರಮ್ಯಾ ಎನ್ನಬಹುದು. ನಟಿ ರಮ್ಯಾ ಉದ್ದೇಶ ತುಂಬಾ ಸ್ಪಷ್ಟವಾಗಿದೆ- ಯಾರೂ ಯಾರನ್ನೂ ಟ್ರೋಲ್ ಮಾಡಬಾರದು, ಎಲ್ಲರಿಗೂ ಅದನ್ನು ಸಹಿಸಿಕೊಳ್ಳೋ ಶಕ್ತಿ ಇರಲ್ಲ ಅನ್ನೋದು. ಇದಕ್ಕೆ ಇನ್ನೂ ಹಲವರು ಧ್ವನಿಗೂಡಿಸುವ ಚಾನ್ಸ್ ಇದೆ. 

ರಮ್ಯಾ ನಿಲುವನ್ನು ಸಮರ್ಥಿಸಿ ಸ್ಯಾಂಡಲ್‌ವುಡ್ ಹಲವು ನಟನಟಿಯರು ಸೇರಿದಂತೆ ಹಲವರು ಕಾಮೆಂಟ್ ಮಾಡಿದ್ದಾರೆ, ಅವರಲ್ಲಿ ಮಹಿಳೆಯರೇ ಹೆಚ್ಚು. ರಮ್ಯಾ ನಿಲುವು ಕೇವಲ ರಶ್ಮಿಕಾಗೆ ಮಾತ್ರ ಸೀಮಿತವಲ್ಲ, ಅವರು ಎಲ್ಲರ ಪರ ಧ್ವನಿ ಎತ್ತಿದ್ದಾರೆ. ಜೊತೆಗೆ, ನಟಿಯರನ್ನೇ ಹೆಚ್ಚು ಟಾರ್ಗೆಟ್ ಮಾಡಲಾಗುತ್ತದೆ ಎಂಬ ಅಂಶವನ್ನೂ ರಮ್ಯಾ ಬಯಲಿಗೆಳೆದಿದ್ದಾರೆ. ಇದು ಸತ್ಯ ಮತ್ತು ಒಳ್ಳೆಯ ಬೆಳವಣಿಗೆ..' ಎಂದು ಹಲವರು ರಮ್ಯಾ ಪರ ನಿಂತಿದ್ದಾರೆ. 

ನರಸಿಂಹರಾಜು ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ..! ಅಣ್ಣಾವ್ರಿಗೂ ಇರ್ಲಿಲ್ಲ ಅಷ್ಟು ದುಬಾರಿ ರೇಟ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?