ಈ ನಟಿ ಆ ನಟನ ಜೊತೆ ಏನ್ ಮಾಡ್ತಿದಾರೆ? ಯಾಕೆ ಅವರಿಬ್ರೂ ಒಟ್ಟಿಗಿದಾರೆ?

By Shriram Bhat  |  First Published Jun 6, 2024, 10:43 PM IST

ಸೆಲ್ಫೀ ಫೋಟೋ ಪೋಸ್ಟ್‌ನಲ್ಲಿ ನಟಿ ಮೇಘಾ ಶೆಟ್ಟಿ 'ಅದ್ಭುತ ನಟನೊಂದಿಗೆ ಮತನಾಡುತ್ತಾ ಸಮಯ ಕಳೆದಿದ್ದೇನೆ. ಇದು ಒಳ್ಳೆಯ ಕಲಿಕೆಯ ಅನುಭವ' ಎಂದು ಬರೆದುಕೊಂಡಿದ್ದಾರೆ...


ಕನ್ನಡ ಕಿರುತೆರೆಯಲ್ಲಿ ಮಿಂಚಿ ಬಳಿಕ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ನಟಿಯರ ಪೈಕಿ ಮೇಘಾ ಶೆಟ್ಟಿ ಕೂಡ ಒಬ್ಬರು. 'ಜೊತೆಜೊತೆಯಲಿ' ಸೀರಿಯಲ್‌ನ ಅನು ಸಿರಿಮನೆ ಎಂದರೆ ಬಹುತೇಕ ಎಲ್ಲರಿಗೂ ಅರ್ಥವಾಗುತ್ತದೆ ಈ ಮೇಘಾ ಶೆಟ್ಟಿ ಯಾರೆಂದು. ಜೊತೆಜೊತೆಯಲಿ ಸೀರಿಯಲ್‌ನಿಂದ ಹೊರಗೆ ಹೋದ ಬಳಿಕ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟಿ ಮೇಘಾ ಶೆಟ್ಟಿ ಇತ್ತೀಚೆಗೆ ಕನ್ನಡವೂ ಸೇರಿದಂತೆ ಹಲವು ಪ್ಯಾನ್ ಇಂಡಿಯಾ ಸಿನಿಮಾಳಲ್ಲಿಯೂ ನಟಿಸುತ್ತಿದ್ದಾರೆ. 

Tap to resize

Latest Videos

ಇದೀಗ, ಮೇಘಾ ಶೆಟ್ಟಿ ಬೇರೊಂದು ಕಾರಣಕ್ಕೆ ಸುದ್ದಿಯಾಗುತ್ತಿದ್ದಾರೆ. ಮೇಘಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ಪೋಸ್ಟ್ ಒಂದು ಭಾರೀ ವೈರಲ್ ಆಗುತ್ತಿದೆ. ನಟಿ ಮೇಘಾ ಶೆಟ್ಟಿ ಬಹುಭಾಷಾ ನಟ ಆರ್ ಮಾಧವನ್ ಅವರೊಂದಿಗಿನ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಅವರಿಬ್ಬರ ಸೆಲ್ಫೀ ಫೋಟೋ ಬಹಳಷ್ಟು ವೈರಲ್ ಆಗುತ್ತಿದ್ದಂತೆ, ನೀವು ಪರಭಾಷೆ ಚಿತ್ರಗಳಲ್ಲಿ ನಟಿಸಲಿದ್ದೀರ ಅನ್ನಿಸುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. 

ಎತ್ತಿನಬಂಡಿಯಿಂದ ಬಿದ್ದು ಸಾಯುತ್ತಿದ್ದರು ಡಾ ರಾಜ್‌ಕುಮಾರ್; ಬದುಕಿಸಿದ ಪುಣ್ಯಾತ್ಮ ಯಾರು?

ಸೆಲ್ಫೀ ಫೋಟೋ ಪೋಸ್ಟ್‌ನಲ್ಲಿ ನಟಿ ಮೇಘಾ ಶೆಟ್ಟಿ 'ಅದ್ಭುತ ನಟನೊಂದಿಗೆ ಮತನಾಡುತ್ತಾ ಸಮಯ ಕಳೆದಿದ್ದೇನೆ. ಇದು ಒಳ್ಳೆಯ ಕಲಿಕೆಯ ಅನುಭವ' ಎಂದು ಬರೆದುಕೊಂಡಿದ್ದಾರೆ. ನಟ ಆರ್ ಮಾಧವ್ ಅವರು ನಟಿ ಮೇಘಾಗೆ ಎಲ್ಲಿ ಭೇಟಿಯಾದರು? ಅವರಿಬ್ಬರೂ ಮಾತನಾಡಿದ್ದೇನು? ಈ ಇಬ್ಬರೂ ಯಾವುದಾದರೂ  ಸಿನಿಮಾ ಶೂಟಿಂಗ್‌ಗೆ ಜತೆಯಾದರೇ? ಅಥವಾ ಸದ್ಯದಲ್ಲೇ ಒಂದೇ ಚಿತ್ರದಲ್ಲಿ ನಟಿಸಲಿದ್ದಾರಾ? ಈ ಯಾವ ಪ್ರಶ್ನೆಗಳಿಗೂ ಅಲ್ಲಿ ಉತ್ತರವಿಲ್ಲ. 

ಸಿನಿಮಾ ಫೀಲ್ಡ್‌ಗೆ ಬರುವ ಮೊದಲು ರಕ್ಷಿತ್ ಶೆಟ್ಟಿ ಸಿಮೆಂಟ್, ಇಟ್ಟಿಗೆ ಹೊತ್ತಿದ್ದು ನಿಜವೇ?

ಹೀಗಾಗಿ ಸದ್ಯ ಮೇಘಾ ಶೆಟ್ಟಿ ಅಭಿಮಾನಿಗಳಿಗೆ ತಲೆಯಲ್ಲಿ ಹುಳ ಬಿಟ್ಟಂತಾಗಿದೆ. ನಟಿಯ ಪೋಸ್ಟ್‌ಗೆ ಶುಭಾಶಯ ತಿಳಿಸಿರುವ ಹಲವು ಅಭಿಮಾನಿಗಳು,  ನೀವು ಕನ್ನಡ ಸೇರದಮತೆ ಬೇರೆ ಚಿತ್ರರಂಗದಲ್ಲಿಯೂ ಮಿಂಚಬೇಕು. ಆರ್. ಮಾಧವನ್ ಜೊತೆಗೆ ಸಿನಿಮಾ ಮಾಡುತ್ತೀರಾ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನೀವು ತಮಿಳು, ತೆಲುಗು ಚಿತ್ರರಂಗದ ಬದಲಾಗಿ ನೇರವಾಗಿ ಯಾಕೆ ಬಾಲಿವುಡ್‌ಗೆ ಹೋಗಬಾರದು ಎಂದು ತಮ್ಮ ನೆಚ್ಚಿನ ನಟಿಗೆ ವಿಶ್ ಮಾಡಿದ್ದಾರೆ.

ಶ್ರುತಿ ಹರಿಹರನ್: ಕ್ಯಾಮೆರಾ ಮುಂದೆ ಎಲ್ಲಾ ಮರೆತೋಯ್ತು, ಮರುದಿನ ಮತ್ತೆ ಹೋದೆ!

ಕಿರುತೆರೆಯಿಂದ ಬೆಳ್ಳಿ ತೆರೆಗೆ ಬಂದು ಕೆಲವು ಸಿನಿಮಾಗಳನ್ನು ಮಾಡಿದ್ದ ನಟಿ ಮೇಘಾ ಶೆಟ್ಟಿಯವರು ಒಂದು ದೊಡ್ಡ ಯಶಸ್ಸಿಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ತ್ರಿಬಲ್ ರೈಡಿಂಗ್', ಡಾರ್ಲಿಂಗ್ ಕೃಷ್ಣ ಜೊತೆ 'ದಿಲ್ ಪಸಂದ್' ಹಾಗೂ 'ಕೈವ 'ಮೊದಲಾದ ಸಿನಿಮಾಗಳಲ್ಲಿ ಮೇಘಾ ಶೆಟ್ಟಿ ನಟಿಸಿದ್ದಾರೆ. 

ಮಗು ಅಳ್ತಾ ಇದ್ರೆ ನಂಗೆ ಟೆನ್ಷನ್ ಆಗುತ್ತೆ, ಎಲ್ರೂ ಹಾಲು ಕೊಡು ಅಂತಾರೆ, ಆದ್ರೆ... ; ಶ್ರುತಿ ಹರಿಹರನ್

ಸದ್ಯ ಅವರು ಹೊಸ ಪ್ಯಾನ್ ಇಂಡಿಯಾ ಸಿನಿಮಾ 'ಆಪರೇಷನ್ ಲಂಡನ್ ಕೆಫೆ' ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಜ್ವಲ್ ದೇವರಾಜ್ ಅಭಿನಯದ 'ಚೀತಾ' ಸಿನಿಮಾಗೂ ಮೇಘಾ ಶೆಟ್ಟಿ ಆಯ್ಕೆಯಾಗಿದ್ದಾರೆ. ಇದೀಗ, ಸ್ಟಾರ್ ನಟ ಆರ್ ಮಾಧವನ್ ಜೊತೆಗಿನ ಸೆಲ್ಫೀ ಫೋಟೋ ಹಂಚಿಕೊಳ್ಳುವ ಮೂಲಕ ಸುದ್ದಿಯ ಮುನ್ನೆಲೆಗೆ ಬಂದಿದ್ದಾರೆ. 

click me!