ಎತ್ತಿನಬಂಡಿಯಿಂದ ಬಿದ್ದು ಸಾಯುತ್ತಿದ್ದರು ಡಾ ರಾಜ್‌ಕುಮಾರ್; ಬದುಕಿಸಿದ ಪುಣ್ಯಾತ್ಮ ಯಾರು?

Published : Jun 06, 2024, 07:54 PM ISTUpdated : Jun 06, 2024, 08:02 PM IST
ಎತ್ತಿನಬಂಡಿಯಿಂದ ಬಿದ್ದು ಸಾಯುತ್ತಿದ್ದರು ಡಾ ರಾಜ್‌ಕುಮಾರ್; ಬದುಕಿಸಿದ ಪುಣ್ಯಾತ್ಮ ಯಾರು?

ಸಾರಾಂಶ

ಆ ಚಿತ್ರದಲ್ಲಿ ಎತ್ತಿನ ಬಂಡಿ ರೇಸ್‌ ದೃಶ್ಯವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಆದರೆ, ಆ ಚಿತ್ರದ ಶೂಟಿಂಗ್ ವೇಳೆ ಡಾ ರಾಜ್‌ಕುಮಾರ್ ಅವರ ಜೀವ ಹೊರಟು ಹೋಗಬಹುದಾದ ಘಟನೆ ನಡೆದಿತ್ತ ಎನ್ನಲಾಗಿದೆ. 

ಒಡಹುಟ್ಟಿದವರು ಸಿನಿಮಾ ಶೂಟಿಂಗ್ ವೇಳೆ ನಡೆದ ಘಟನೆಯಿದು. ಇದನ್ನು ಶೂಟಿಂಗ್ ಸ್ಥಳದಲ್ಲಿದ್ದ ಭಗವಾನ್ ಅವರೇ ಸ್ವತಃ ಸಾಕಷ್ಟು ಬಾರಿ ಹಂಚಿಕೊಂಡಿದ್ದರು. ಡಾ ರಾಜ್‌ಕುಮಾರ್ (Dr Rajkumar) ಹಾಗೂ ಅಂಬರೀಷ್ (Ambareesh) ಜೋಡಿಯ ನಟನೆಯ ಚಿತ್ರವಾದ ಒಡಹುಟ್ಟಿದವರು (Odahuttidavaru Movie) ಶೂಟಿಂಗ್ ಸಮಯದಲ್ಲಿ ನಡೆದ ಒಂದು ಅವಘಡ ನಿಜವಾಗಿಯೂ ಶಾಕ್ ಹುಟ್ಟಿಸುವಂತಿದೆ. ಆ ಚಿತ್ರದಲ್ಲಿ ಎತ್ತಿನ ಬಂಡಿ ರೇಸ್‌ ದೃಶ್ಯವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಆದರೆ, ಆ ಚಿತ್ರದ ಶೂಟಿಂಗ್ ವೇಳೆ ಡಾ ರಾಜ್‌ಕುಮಾರ್ ಅವರ ಜೀವ ಹೊರಟು ಹೋಗಬಹುದಾದ ಘಟನೆ ನಡೆದಿತ್ತ ಎನ್ನಲಾಗಿದೆ. 

ಹಾಗಿದ್ದರೆ ಏನಾಗಿತ್ತು? ಡಾ ರಾಜ್‌ಕುಮಾರ್ ಹಾಗೂ ಅಂಬರೀಷ್ ಅವರಿಬ್ಬರೂ ಒಂದು ಎತ್ತಿನ ಬಂಡಿಯಲ್ಲಿ ಹೋಗುತ್ತಿದ್ದರು. ಮಿಕ್ಕವರು ಬೇರೆ ಬೇರೆ ಬಂಡಿಯಲ್ಲಿದ್ದರು. ಅದೇನಾಯ್ತೋ ಗೊತ್ತಿಲ್ಲ, ಗಾಡಿಯ ಚಕ್ರದ ಕಡಾಣಿ ಮುರಿದು ಹೋಯ್ತಂತೆ. ತಕ್ಷಣ ಚಕ್ರ ಗಾಡಿಯಿಂದ ಹೊರಗೆ ಬಂತಂತೆ. ಆ ದೃಶ್ಯವನ್ನು ನೋಡಿ ಅಲ್ಲಿದ್ದ ಎಲ್ಲರೂ ಶಾಕ್ ಆಗಿದ್ದರಂತೆ. ಅಲ್ಲಿದ್ದ ಕೆಲವರು ಈಗಲೂ ಆ ಹಳೆಯ ದೃಶ್ಯವನ್ನು ನೆನಪಿಸಿಕೊಂಡರೆ ಮೈ ಝುಂ ಎನ್ನುತ್ತದೆ ಎನ್ನುತ್ತಾರೆ. 

ಸಿನಿಮಾ ಫೀಲ್ಡ್‌ಗೆ ಬರುವ ಮೊದಲು ರಕ್ಷಿತ್ ಶೆಟ್ಟಿ ಸಿಮೆಂಟ್, ಇಟ್ಟಿಗೆ ಹೊತ್ತಿದ್ದು ನಿಜವೇ?

ಸರಿ, ಕಡಾಯಿ ಕಳಚಿಕೊಂಡಿದ್ದೇ ತಡ, ಚಕ್ರ ಹೊರಗೆ ಬಂತು. ಗಾಡಿಯಲ್ಲಿದ್ದ ಡಾ ರಾಜ್‌ಕುಮಾರ್ ಅವರು ಬ್ಯಾಲೆನ್ಸ್ ಕಳೆದುಕೊಂಡರು. ಇನ್ನೇನು ಅವರು ಕೆಳಗೆ ಬೀಳಬೇಕು ಎನ್ನವಷ್ಟರಲ್ಲಿ ಪಕ್ಕದಲ್ಲಿದ್ದ ರೆಬಲ್ ಸ್ಟಾರ್ ಅಂಬರೀಷ್ ಡಾ ರಾಜ್‌ ಅವರನ್ನು ಗಟ್ಟಿಯಾಗಿ ಹಿಡದುಕೊಂಡರಂತೆ. ಅಂಬಿ ಅದೆಷ್ಟು ಬಿಗಿಯಾಗಿ ಡಾ ರಾಜ್‌ ಅವರನ್ನು ತಬ್ಬಿ ಹಿಡಿದುಕೊಂಡಿದ್ದರಂತೆ ಎಂದರೆ, ಸ್ವತಃ ಡಾ ರಾಜ್‌ಕುಮಾರ್ ಅವರಿಗೆ ತಾವು ಬೀಳುವುದಿಲ್ಲ ಎಂಬ ಧೈರ್ಯ ಬಂದಿತ್ತಂತೆ. 

ಶ್ರುತಿ ಹರಿಹರನ್: ಕ್ಯಾಮೆರಾ ಮುಂದೆ ಎಲ್ಲಾ ಮರೆತೋಯ್ತು, ಮರುದಿನ ಮತ್ತೆ ಹೋದೆ!

ಆವತ್ತು ಒಮ್ಮೆ ಡಾ ರಾಜ್‌ಕುಮಾರ್‌ ಅವರೇನಾದರೂ ಕೆಳಗೆ ಬಿದ್ದಿದ್ದರೆ ಅವರ ಜೀವಕ್ಕೇ ಅಪಾಯವಿತ್ತು ಎನ್ನುತ್ತಾರೆ ಪ್ರತ್ಯಕ್ಷ ದರ್ಶಿಗಳು. ಏಕೆಂದರೆ, ಡಾ ರಾಜ್‌ಕುಮಾರ್ ಬಿದ್ದಿದ್ದರೆ, ಅವರಿಗೆ ತಕ್ಷಣ ಎದ್ದು ಅಲ್ಲಿಂದ ದೂರ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಹಿಂದೆ ಬರುತ್ತಿದ್ದ ಗಾಡಿಗಳೂ ಸಹ ರೇಸ್‌ ಸೀನ್ ಆಗಿದ್ದ ಕಾರಣಕ್ಕೆ ತುಂಬಾನೇ ಜೋರಾಗಿ ಬರುತ್ತಿದ್ದವು. ಹೀಗಾಗಿ ಅವುಗಳನ್ನು ಕೂಡ ನಿಲ್ಲಿಸಲು ಸಾಧ್ಯವೇ ಇರಲಿಲ್ಲ. ಹೀಗಾಗಿ ಬಿದ್ದಿದ್ದ ಅಣ್ಣಾವ್ರ ಮೇಲೆ ಹಿಂದಿನ ಗಾಡಿಗಳು ಹತ್ತಿ ಹೋಗುತ್ತಿದ್ದವು. ಆಗ ಅವರು ಬದುಕಿ ಉಳಿಯುವ ಯಾವುದೇ ಅವಕಾಶ ಇರುತ್ತಿರಲಿಲ್ಲ. 

ಬೃಂದಾವನ ವೈಂಡ್‌ಅಪ್ ಆಗೋಕೆ ವರುಣ್ ಆರಾಧ್ಯ ಕಾರಣನಾ? ಏನಂದ್ರು ರಾಮ್‌ಜಿ?

ಪ್ರತ್ಯಕ್ಷದರ್ಶಿಗಳು ಹೇಳುವಂತೆ, ಅಂದು ಅಂಬರೀಷ್ ಡಾ ರಾಜ್‌ಕುಮಾರ್ ಅವರನ್ನು ಅಷ್ಟು ಗಟ್ಟಿಯಾಗಿ ಹಿಡಿದುಕೊಳ್ಳದಿದ್ದರೆ ಅಣ್ಣಾವ್ರು ಆ ದಿನದ ಬಳಿಕ ಕೇವಲ ಈಗಿನಂತೆ ನೆನಪಾಗಿ ಉಳಿಯುತ್ತಿದ್ದರು. ಆದರೆ ನಟ ಅಂಬರೀಷ್ ಅವರ ಸಮಯಪ್ರಜ್ಞೆ ಅಂದು ಡಾ ರಾಜ್‌ಕುಮಾರ್ ಅವರ ಜೀವವನ್ನು ಉಳಿಸಿತ್ತು. ಅಂದಹಾಗೆ, ಡಾ ರಾಜ್‌ಕುಮಾರ್ ಹಾಗೂ ಅಂಬೃಇಷ್ ಮುಖ್ಯ ಭೂಮಿಕೆಯ 'ಒಡಹುಟ್ಟಿದವರು' ಸಿನಿಮಾ 1994ರಲ್ಲಿ ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಪಡೆದಿತ್ತು. ದೊರೆರಾಜ್ ಭಗವಾನ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. 

ಶಿವಣ್ಣ 'ಜೋಗಿ' ಸಿನಿಮಾ ಬಗ್ಗೆ ನಟ ವಿಷ್ಣುವರ್ಧನ್‌ ಭವಿಷ್ಯ ಏನಿತ್ತು? ಆಮೇಲೆ ಏನಾಯ್ತು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ