ಇಲ್ಲ ಮೇಡಂ, ಆ ತರ ಏನೂ ಇಲ್ಲ, ರ್‍ಯಾಪಿಡ್ ರಶ್ಮಿ ಮಾತಿಗೆ ಅಡ್ಡಡ್ಡ ತಲೆ ಅಲ್ಲಾಡಿಸಿದ ಹಿತಾ ಚಂದ್ರಶೇಖರ್!

By Shriram Bhat  |  First Published Aug 10, 2024, 6:19 PM IST

'ಮಧ್ಯೆ ನಾನು ಜಾಹೀರಾತು ಕೂಡ ಮಾಡಿ ಬಂದಿದ್ದು. ಅಷ್ಟೇ ಅಲ್ಲ, ಒಂದು ಸಿನಿಮಾ ಅಂತ ಶುರುವಾದ್ರೆ ಅದು ಯಾವಾಗ ಮುಗಿಯುತ್ತೆ ಅಂತ ಗೊತ್ತಾಗಲ್ಲ. ಒಂದು ಶೆಡ್ಯೂಲ್ ಮುಗಿದ್ಮೇಲೆ ಮತ್ತೊಂದು ಶೆಡ್ಯೂಲ್ ಯಾವಾಗ ಅಂತಾನೇ ಗೊತ್ತಿರಲ್ಲ..



'ಕನ್ನಡ ಇಂಡಸ್ಟ್ರಿಯಲ್ಲಿ ಸಿನಿಮಾ ಹೀರೋಯಿನ್‌ಗಳಿಗೆ ಇನಿಶಿಯಲ್ ಕೆರಿಯರ್ ಅಂತ ಬಂದಾಗ ರೆಮ್ಯೂನರೇಶನ್ 2 ಲಕ್ಷದಿಂದ 10 ಲಕ್ಷ ಇರುತ್ತೆ.. ' ಅಂತ ರ್‍ಯಾಪಿಡ್ ರಶ್ಮಿ ಹೇಳುತ್ತಿದ್ದಂತೆ ನಟಿ ಹಿತಾ ಚಂದ್ರಶೇಖರ್ (Hitha Chandrashekhar) ಅವರು 'ಇಲ್ಲ ಮೇಡಂ' ಎಂದು ನಗುತ್ತಾ ತಲೆ ಅಲ್ಲಾಡಿಸುತ್ತಾರೆ. ಆಗ ಪ್ರಶ್ನೆ ಕೇಳಿದ್ದ ರ್‍ಯಾಪಿಡ್ ರಶ್ಮಿ ಅವರಿಗೆ ಅರ್ಧ ಉತ್ತರ ಅಲ್ಲೇ ಸಿಕ್ಕಿ ಬಿಡುತ್ತದೆ. ಇಬ್ಬರೂ ನಗುತ್ತಾರೆ. ಅಂದರೆ, ರ್‍ಯಾಪಿಡ್ ರಶ್ಮಿ ತಿಳಿದುಕೊಂಡಿದ್ದಕ್ಕೆ ವಿರುದ್ಧವಾಗಿಯೇ ಇದೆಯಾ ವಿಷ್ಯ? ಅದೇನು ಅಂತ ನೋಡಿಯೇ ಬಿಡೋಣ ಅಲ್ಲವೇ..?

ಬಳಿಕ ರ್‍ಯಾಪಿಡ್ ರಶ್ಮಿ ಪ್ರಶ್ನೆಗೆ ಹಿತಾ ಚಂದ್ರಶೇಖರ್ ತಮ್ಮ ಉತ್ತರ ಮುಂದುವರೆಸುತ್ತಾರೆ. ಈ ಬಗ್ಗೆ ನಟಿ ಹಿತಾ ಚಂದ್ರಶೇಖರ್ ಅವರು 'ಇಲ್ಲ, ಈವಾಗ ಬಹಳಷ್ಟು ಎಸ್ಟಾಬ್ಲಿಶ್ ಪ್ರೊಡಕ್ಷನ್ ಹೌಸ್, ಅಥವಾ ಒಳ್ಳೇ ಸ್ಟಾರ್ ಫಿಲಂ, ಅಥವಾ ಈಗಾಗ್ಲೇ ಒಂದು ಹಿಟ್ ಚಿತ್ರ ಕೊಟ್ಟಿರೋ ತಂಡ, ಅವ್ರ ಜೊತೆ ಮೇ ಬಿ ಸ್ಟಾಟಿಂಗ್ ಎರಡು ಲಕ್ಷ ಅಂದ್ಕೋಬಹುದು. ನಾನು ನಾಲ್ಕೈದು ಸಿನಿಮಾಗಳನ್ನ ಕೇವಲ ಒಂದು ಲಕ್ಷಕ್ಕೆ ಮಾಡದೀನಿ' ಎಂದಿದ್ದಾರೆ.

Tap to resize

Latest Videos

undefined

ಚಂದನ್ ಶೆಟ್ಟಿಗೆ ಚಿರಂಜೀವಿ ಸರ್ಜಾ ಏನ್ ಮಾಡಿದ್ರು? ಗುಟ್ಟು ರಟ್ಟು ಮಾಡಿದಾರೆ ರ್‍ಯಾಪಿಡ್ ರಶ್ಮಿ!

ಅದಕ್ಕೆ ರ್‍ಯಾಪಿಡ್ ರಶ್ಮಿ 'ಸಿಹಿಕಹಿ ಚಂದ್ರು-ಗೀತಾ ದಂಪತಿಗಳ ಮಗಳಾಗಿ, ಆಕ್ಟಿಂಗ್ ಕೋರ್ಸ್ ಕೂಡ ಮಾಡಿನೂ' ಅಂದಾಗ ನಟಿ ಹಿತಾ ಚಂದ್ರಶೇಖರ್ ಅವರು 'ಹೌದು' ಎಂಬಂತೆ ನಟಿಸುತ್ತ 'ಮಧ್ಯೆ ನಾನು ಜಾಹೀರಾತು ಕೂಡ ಮಾಡಿ ಬಂದಿದ್ದು. ಅಷ್ಟೇ ಅಲ್ಲ, ಒಂದು ಸಿನಿಮಾ ಅಂತ ಶುರುವಾದ್ರೆ ಅದು ಯಾವಾಗ ಮುಗಿಯುತ್ತೆ ಅಂತ ಗೊತ್ತಾಗಲ್ಲ. ಒಂದು ಶೆಡ್ಯೂಲ್ ಮುಗಿದ್ಮೇಲೆ ಮತ್ತೊಂದು ಶೆಡ್ಯೂಲ್ ಯಾವಾಗ ಅಂತಾನೇ ಗೊತ್ತಿರಲ್ಲ, ಹೇಳಿದ್ಮೇಲೆನೇ ಗೊತ್ತಾಗೋದು. 

ಅಂತ ಪರಿಸ್ಥಿತಿಯಲ್ಲಿ ನಟನೆ ಮುಂದುವರೆಸಬೇಕಾಗುತ್ತೆ. ಕೆಲವೊಂದು ಸಿನಿಮಾಗಳಂತೂ ಮೂರು, ನಾಲ್ಕು ವರ್ಷಗಳಷ್ಟು ಶೂಟಿಂಗ್ ಆಗಿದ್ದೂ ಇದೆ. ಅಂದ್ರೆ, ಬಿಟ್ಟು ಬಿಟ್ಟು ಶೆಡ್ಯೂಲ್ ಹಾಕಿದ್ದಕ್ಕೆ. ಹೀಗಿರುವಾಗ ನಾನು ನಟಿ, ಸಿನಿಮಾ ಕೈನಲ್ಲಿ ಇದೆ ಅಂದ್ರೂ ನನ್ನ ಸಂಪಾದನೆಯಲ್ಲಿ ಬದುಕೋದು, ನನ್ನ ಕಾಲ್ ಮೇಲೆ ನಾನು ನಿಂತ್ಕೋತೀನಿ ಅನ್ನೋದೆಲ್ಲಾ ಕನಸಿನ ಮಾತು' ಅಂದಿದ್ದಾರೆ ನಟಿ ಹಿತಾ ಚಂದ್ರಶೇಖರ್. 

ಅಂತೆಕಂತೆ ಸುದ್ದಿಗಳು ನಿಜವಾಗಿದೆ, ನಟಿ ಸಮಂತಾ ಒಡೆದ ಹೃದಯದ ಎಮೋಜಿಗೆ ಏನರ್ಥ?

click me!