Tharun Sudhir Sonal Monteiro Marriage Food Items Details ಸ್ಯಾಂಡಲ್‌ವುಡ್‌ನ ಸ್ಟಾರ್ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂತೆರೋ ಮದುವೆ ಸಂಭ್ರಮ ಕಳೆ ಕಟ್ಟಿದೆ. ಅರಿಶಿನ ಶಾಸ್ತ್ರ ಅದ್ದೂರಿಯಾಗಿ ನಡೆದಿದ್ದು, ಇಂದು ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಅದ್ದೂರಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.
ಬೆಂಗಳೂರು (ಆ.10): ಕನ್ನಡ ಚಿತ್ರರಂಗದ ಹಿರಿಯ ನಟ ದಿವಂಗತ ಸುಧೀರ್ ಅವರ ಪುತ್ರ ಹಾಗೂ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಲ್ ಮೊಂತೆರೋ ಮದುವೆ ಸಂಭ್ರಮ ಶುರುವಾಗಿದೆ. ಶುಕರವಾರ ಅದ್ದೂರಿಯಾಗಿ ಅರಿಶಿಣ ಶಾಸ್ತ್ರ ಸಂಭ್ರಮ ನಡೆದಿದೆ. ಇದರಲ್ಲಿ ಚಿತ್ರರಂಗದಲ್ಲಿ ತರುಣ್ ಸುಧೀರ್ ಅವರ ಆಪ್ತರು ಭಾಗವಹಿಸಿದ್ದರು. ಶನಿವಾರ ಬೆಂಗಳೂರಿನ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಅದ್ದೂರಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಚಿತ್ರರಂಗದ ಗಣ್ಯರು ಹಾಗೂ ರಾಜಕಾರಣಿಗಳು ಭಾಗವಹಿಸುವ ನಿರೀಕ್ಷೆ ಇದೆ. ಅದರೊಂದಿಗೆ ರಿಸಪ್ಶನ್‌ನಲ್ಲಿ ಯಾವ ರೀತಿಯ ಊಟ ಇರಲಿದೆ. ಯಾವೆಲ್ಲಾ ಭಕ್ಷ್ಯಗಳನ್ನ ರೆಡಿ ಮಾಡ್ತಿದ್ದಾರೆ ಅನ್ನೋದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ. ತರುಣ್ ಸುಧೀರ್ ಹಾಗೂ ಸೋನಲ್ ಮಂಥೆರೋ ರಿಸೆಪ್ಷನ್‌ಗೆ ಸನ್ನಿಧಿ ಕೆಟರರ್ಸ್ ಅಡುಗೆಯ ಜವಾಬ್ದಾರಿ ವಹಿಸಿಕೊಂಡಿದೆ. ಇನ್ನು ರಿಸೆಪ್ಶನ್‌ನಲ್ಲಿ ಏನೆಲ್ಲಾ ಸ್ಪೆಷಲ್ ಮೆನ್ಯು ಇದೆ ಅನ್ನೋದನ್ನ ನೋಡೋದಾದರೆ, ಸುಮಾರು 10 ಸಾವಿರಕ್ಕೂ ಅಧಿಕ ಜನರಿಗೆ ಅಡುಗೆ ಸಿದ್ಧವಾಗುತ್ತಿದೆ ಎಂದು ತಿಳಿಸಲಾಗಿದೆ.
ಬಾಣಸಿಗರು ನಾಲ್ಕು ಕಿಚನ್‌ಗಳಲ್ಲಿ ಅಡುಗೆಯನ್ನು ಸಿದ್ಧ ಮಾಡುತ್ತಿದ್ದಾರೆ 20ಕ್ಕೂ ಅಧಿಕ ಬಗೆಯ ಸ್ವೀಟ್ ಗಳು, ವಿವಿಧ ರೀತಿಯ ದೋಸೆಗಳು, ಶ್ಯಾವಿಗೆ ಸೇರಿದಂತೆ ವಿವಿಧ ಖಾದ್ಯಗಳನ್ನು ಸಿದ್ಧ ಮಾಡಲಾಗುತ್ತಿದೆ. ಏಷಿಯಾನೆಟ್ ಸುವರ್ಣ ನ್ಯೂಸ್ ಜೊತೆ ಕೆಟರರ್ಸ್ ಮಾಲಿಕ ಸುಭಾಷ್ ಹಾಗೂ ಸಂತೋಷ್ ಮಾತನಾಡಿದ್ದು, ನಾವು ಈ ಅಡುಗೆ ವಹಿಸಿಕೊಂಡಿದ್ದಕ್ಕೆ ಸಂತೋಷವಿದೆ. ತರುಣ್ ಸರ್ ಹಾಗೂ ಸೋನಲ್ ಮೇಡಂ ಈ ಹಿಂದೆ ನಮ್ಮ ಕೆಟರಿಂಗ್ ಅಡುಗೆ ರುಚಿ ನೋಡಿದ್ದಾರೆ. ಹಾಗಾಗಿಯೇ ಅವರು ರಿಸೆಪ್ಶನ್ ಆರ್ಡರ್ ಪಡೆದುಕೊಂಡಿದ್ದೇವೆ. ಸೋನಲ್ ಮೇಡಂ ಗಾಗಿಯೇ ಹಲಸಿನ ಹಲ್ವಾ, ತರುಣ್ ಗೋಸ್ಕರ ಒಂದು ಸ್ಪೆಷಲ್ ಸ್ಪೈಸಿ ಐಟಂ ಮಾಡುತ್ತಿದ್ದೇವೆ. ಎಷ್ಟು ಜನ ಬಂದ್ರೂ ಮ್ಯಾನೇಜ್ ಮಾಡುತ್ತೇವೆ. ಯಾರಿಗೂ ಊಟ ಕಡಿಮೆ ಆಗಬಾರದು ಅನ್ನೋ ರೀತಿಯಲ್ಲಿ ಸಿದ್ಧತೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
undefined
ಇನ್ನು ತರುಣ್ ಸುಧೀರ್ ಹಾಗೂ ಸೋನಲ್ ಅವರ ಮದುವೆಯ ಊಟ ಕೂಡ ವಿಶೇಷವಾಗಿ ಇರಲಿದೆ. ಮದುವೆಗಾಗಿಯೇ ವಿಶೇಷವಾಗಿ ಡೈನಿಂಗ್ ಹಾಲ್‌ಅನ್ನು ರೆಡಿ ಮಾಡಲಾಗಿದೆ. ಡೈನಿಂಗ್ ಹಾಲ್ ಎಂಟ್ರಿ ಮಾಡುವಾಗಲೇ ವಿವಿಧ ಕಲಾಕೃತಿಗಳು ಖಂಡಿತವಾಗಿ ಗಮನ ಸೆಳೆಯಲಿದೆ. ಹಣ್ಣು ತರಕಾರಿಗಳಿಂದ ವಿವಿಧ ಕಲಾಕೃತಿಗಳು ತಯಾರಾಗಿವೆ. ಕಲ್ಲಂಗಡಿ ಹಣ್ಣಿನಲ್ಲಿ ಸುಧೀರ್, ತರುಣ್ ಸುಧೀರ್ ಹಾಗೂ ಸೋನಲ್ ಅವರ ಕಲಾಕೃತಿಯನ್ನು ಮೂಡಿಸಲಾಗಿದೆ. ಸಂಪೂರ್ಣ ಸೌತ್ ಇಂಡಿಯನ್ ಶೈಲಿಯಲ್ಲಿಯೇ ಮದುವೆ ಊಟ ಇರಲಿದೆ. ಮದುವೆಗೆ ಸುಮಾರು 60 ಬಗೆಯ ವಿವಿಧ ಭಕ್ಷ್ಯಗಳಿರುವ ಅಡುಗೆಗೆ ರೆಡಿಯಾಗುತ್ತಿದ್ದಾರೆ. ಈ ವೇಳೆ ಸೋನಲ್ ಅವರ ತಾಯಿ ಮದುವೆಗೆ ಬಾಳೆ ಎಲೆಯಲ್ಲಿಯೇ ಊಟ ಹಾಕಬೇಕು ಎಂದು ಮನವಿ ಮಾಡಿದ್ದಾರೆ. ಮಂಗಳೂರು ಶೈಲಿಯ ಒತ್ತು ಶ್ಯಾವಿಗೆ ಒಳಗೊಂಡ ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ.
ದರ್ಶನ್ ಫ್ರೆಂಡ್, ಕಾಟೇರ ನಿರ್ದೇಶಕ ತರುಣ್ ಸುಧೀರ್ ಪಟ್ಟಣಗೆರೆ ಶೆಡ್ ಹತ್ತಿರವೇ ಮದುವೆ ಆಗ್ತಿರೋದಾ?
ಮೈಸೂರು ರಸ್ತೆಯಲ್ಲಿ ಪೂರ್ಣಿಮಾ ಪ್ಯಾಲೇಸ್ ಇದ್ದು, ರಿಸೆಪ್ಶನ್‌ಗಾಗಿ ಸಭಾಂಗಣವನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗುತ್ತಿದೆ. ಸಂಪೂರ್ಣವಾಗಿ ಕೆಂಪು ಬಣ್ಣದ ಅಲಂಕಾರದಿಂದ ಸಭಾಂಗಣವನ್ನು ಅಲಂಕರಿಸಲಾಗಿದೆ. ರಿಸಪ್ಶನ್‌ನ ವೇದಿಕೆಗೆ ಗುಲಾಬಿ ಹೂವುಗಳ ಅಲಂಕಾರ ಮಾಡಲಾಗಿದೆ. ನಾಲ್ಕು ವರ್ಷಗಳ ಪ್ರೀತಿ ಬಳಿಕ ತರುಣ್ - ಸೋನಲ್ ಮದುವೆಯಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪ್ರೀತಿಯ ಅರಮನೆಯಂತೆ ಸಭಾಂಗಣ ರೆಡಿ ಮಾಡಲಾಗುತ್ತಿದೆ.
Haldi Ceremony: ತರುಣ್ ಸುಧೀರ್-ಸೋನಲ್ ಮೊಂತೆರೋ ಮದುವೆ ಸಮಾರಂಭ ಶುರು: ಹಳದಿ ಶಾಸ್ತ್ರದ ಸ್ಟೈಲಿಶ್ಫೋಟೊಸ್ ವೈರಲ್!