
ಈ ಭಾರಿ ಸ್ವಾತಂತ್ರ್ಯ ದಿನಾಚರಣೆಯ ರಜೆಗೆ ಪ್ರೇಮಿಗಳಿಗಾಗೆ ಒಂದು ಸರ್ಪ್ರೈಸ್ ಕಾದಿದೆ. ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh), ತನ್ನ ಪ್ರಣಯ ಸಖಿ ಜೊತೆ ಸಖಿ ಸಖಿ ಅಂತ ಹಾಡುತ್ತಾ ಪ್ರ್ಯೂರ್ ಲವ್ ಸ್ಟೋರಿ ಹೊತ್ತು ತೆರೆ ಮೇಲೆ ಬರುತ್ತಾರೆ. ಗಣೇಶ್ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಮತ್ತೊಂದು ಹಾಡು ರಿಲೀಸ್ ಆಗಿದೆ..
ಸ್ವಾತಂತ್ರ್ಯ ದಿನಾಚರಣೆಗೆ ಗೋಲ್ಡನ್ ಸ್ಟಾರ್ ಸರ್ಪ್ರೈಸ್! 'ಕೃಷ್ಣಂ ಪ್ರಣಯ ಸಖಿ' ಮತ್ತೊಂದು ಸಾಂಗ್ ರಿಲೀಸ್..!
ಗೋಲ್ಡನ್ ಸ್ಟಾರ್ ಗಣೇಶ್ ಸಿನಿ ಪ್ರೇಮಿಗಳಿಗೆ ಆಗಸ್ಟ್ 15 ಮತ್ತೊಂದು ಸಂಭ್ರಮ. ಬೆಳಗ್ಗೆಯೆಲ್ಲಾ ಸ್ವಾತಂತ್ರ್ಯ ದಿನಾಚರಣೆ ಆಚರಿಸಿ ಬಳಿಕ ಒಂದೊಳ್ಳೆ ಲವ್ ಸ್ಟೋರಿ ಸಿನಿಮಾ ನೋಡೋಕೆ ಚಿತ್ರಮಂದಿರಕ್ಕೆ ಹೋಗಬಹುದು. ಆ ದಿನ ಗಣೇಶ್ ನಟನೆಯ ಹಾಡುಗಳಿಂದ ಭಾರಿ ಟಾಕ್ ಎಬ್ಬಿಸಿರೋ ಕೃಷ್ಣಂ ಪ್ರಣಯ ಸಖಿ ಸಿನಿಮಾ ರಿಲೀಸ್ ಆಗ್ತಿದೆ.
ಗೋಲ್ಡನ್ ಸ್ಟಾರ್ ಈ ಬಾರಿ ಗುರಿ ತಪ್ಪಲ್ಲ! ಕೃಷ್ಣಂ ಪ್ರಣಯ ಸಖಿ ಸಖತ್ ಸಾಂಗ್ ಕೇಳಿದ್ರಾ ?
ಶ್ರೀನಿವಾಸ್ ರಾಜು ನಿರ್ದೇಶನದ ಈ ಸಿನಿಮಾದ ಮತ್ತೊಂದು ಹಾಡು ಈಗ ರಿಲೀಸ್ ಆಗಿದೆ. ಪ್ರಶಾಂತ್ ಜಿ.ರುದ್ರಪ್ಪ ಬಂಡವಾಳ ಹೂಡಿರೋ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಐದನೇ ಹಾಡನ್ನ ಕವಿರಾಜ್ ಸಾಹಿತ್ಯ ಬರೆದಿದ್ದು, ಸಾಯಿಕಾರ್ತಿಕ್ ಸಂಗೀತ ನೀಡಿದ್ದಾರೆ. ಖ್ಯಾತ ಗಾಯಕಿ ಕೆ.ಎಸ್.ಚಿತ್ರಾ ಕಂಠಸಿರಿಯಲ್ಲಿ ಈ ಮಧುರ ಗೀತೆ ಮೂಡಿಬಂದಿದೆ.
ಕೆ.ಎಸ್.ಚಿತ್ರಾ ಕಂಠಸಿರಿಯಲ್ಲಿ ರೊಮ್ಯಾಂಟಿಕ್ ಸಾಂಗ್.! 'ಕೃಷ್ಣಂ ಪ್ರಣಯ ಸಖಿ' ಹಾಡಿಗೆ ಮನಸೋತ ಸಂಗೀತ ಪ್ರೀಯರು. ಶ್ರೀನಿವಾಸ್ ರಾಜು ನಿರ್ದೇಶನದ ಸಿನಿಮಾ..! 'ಕೃಷ್ಣಂ ಪ್ರಣಯ ಸಖಿ', ಈ ಹಾಡನ್ನು ಥಿಯೇಟರ್‌ನಲ್ಲಿ ಕಲಾವಿದರ ಮುಖ ನೋಡುತ್ತ ಎಂಜಾಯ್ ಮಾಡಲು ಕನ್ನಡ ಸಿನಿಪ್ರೇಕ್ಷಕರು ಕಾಯುತ್ತಿದ್ದಾರೆ.
ಅಂತೆಕಂತೆ ಸುದ್ದಿಗಳು ನಿಜವಾಗಿದೆ, ನಟಿ ಸಮಂತಾ ಒಡೆದ ಹೃದಯದ ಎಮೋಜಿಗೆ ಏನರ್ಥ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.