ಪೋಷಕರು ಕಲಿಸಿದ ಲೈಫ್ ಲೆಸನ್ ಸೀಕ್ರೆಟ್ ಕೊನೆಗೂ ಬಾಯ್ಬಿಟ್ಟ ನಟಿ ಅದಿತಿ ಪ್ರಭುದೇವ!

By Shriram Bhat  |  First Published Oct 24, 2024, 6:26 PM IST

ಅದಿತಿ ಪ್ರಭುದೇವ ಅವರು ಹಲವಾರು ಸಂದರ್ಶನಗಳಲ್ಲಿ ಭಾಗಿಯಾಗುತ್ತಾರೆ. ಹೀಗೇ, ರಾಪಿಡ್ ರಶ್ಮಿ ಇಂಟರ್‌ವ್ಯೂದಲ್ಲಿ ಕಾಣಿಸಿಕೊಂಡಿರುವ ನಟಿ ಆದಿತಿ ಪ್ರಭುದೇವ ಅವರು, 'ಮೋಟಿವೇಶನಲ್ ಸ್ಪೀಚ್' ಮಾಡಿದ್ದಾರೆ. ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿ, ತಮಗೆ ತಮ್ಮ ಪೋಷಕರು..


ಕನ್ನಡದ ನಟಿ ಅದಿತಿ ಪ್ರಭುದೇವ (Aditi Prabhudeva) ಅವರು ಇತ್ತೀಚೆಹೆ ಹೆಚ್ಚು ಹೆಚ್ಚು ಯೂಟ್ಯೂಬ್ ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅಂದರೆ, ಸಂದರ್ಶನಗಳಲ್ಲಿ ಭಾಗಿಯಾಗುತ್ತಾರೆ. ಹೀಗೆ ರಾಪಿಡ್ ರಶ್ಮಿ (Rapid Rashmi)ಇಂಟರ್‌ವ್ಯೂದಲ್ಲಿ ಕಾಣಿಸಿಕೊಂಡಿರುವ ನಟಿ ಆದಿತಿ ಪ್ರಭುದೇವ ಅವರು, 'ಮೋಟಿವೇಶನಲ್ ಸ್ಪೀಚ್' ಮಾಡಿದ್ದಾರೆ. ಅಂದರೆ, ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿ ತಮಗೆ ತಮ್ಮ ಪೋಷಕರು ಬಡತನದಲ್ಲಿ ಕುಗ್ಗದೇ ಸಿರಿತನದಲ್ಲಿ ಹಿಗ್ಗದೇ ಬದುಕುವುದನ್ನು ಕಲಿಸಿಕೊಟ್ಟಿದ್ದಾರೆ ಎಂದಿದ್ದಾರೆ. 

ಆದಿತಿ ಪ್ರಭುದೇವ ಅದೇನು ಹೇಳಿದ್ದಾರೆ ಎಂದು ಅವರದೇ ಮಾತುಗಳಲ್ಲಿ ಕೇಳಿ... 'ನನ್ ತಂದೆಗೆ, ತಾಯಿಗೆ ನಾನು ತುಂಬಾ ಥ್ಯಾಂಕ್ಸ್ ಹೇಳ್ತೀನಿ.. ಯಾಕೆ ಅಂದ್ರೆ, ಅವ್ರು ಆಸ್ತಿ ಮಾಡ್ಲಿಲ್ಲ, ನಮ್ಮನ್ನೇ ಆಸ್ತಿ ತರ ಬೆಳೆಸಿಬಿಟ್ರು.. ಒಂದು ರೂಪಾಯಿ ಇದ್ರೂ ನೂರು ರೂಪಾಯಿ ಇದ್ರೂ ಹೆಂಗೆ ಬದುಕ್ಬೇಕು ಅಂತ ಗೊತ್ತು. ಕಷ್ಟ ಬಂದಾಗ ಹೇಗೆ ಸಹಿಸ್ಕೋಬೇಕು, ಏನ್ ಮಾಡ್ಬೇಕು ಅಂತ ಗೊತ್ತು. ಅದೇರೀತಿ, ಸುಖ ಬಂದಾಗ ಅದನ್ನು ತಲೆಗೆ ಏರಿಸಿಕೊಳ್ಳದೇ ಹೇಗೆ ನಾರ್ಮಲ್ ಆಗಿ ಜೀವನ ನಡೆಸ್ಬೇಕು ಅಂತ ಗೊತ್ತು..' ಎಂದಿದ್ದಾರೆ. 

Tap to resize

Latest Videos

undefined

ಟಾಕ್ಸಿಕ್ ಸೆಟ್​​ನಲ್ಲಿ ರಾಕಿಂಗ್ ಸ್ಟಾರ್ ಮಾತು; ಮುಂಬೈನಿಂದ ಬಿಗ್ ನ್ಯೂಸ್ ಕೊಟ್ಟ ನಟ ಯಶ್!

ಸ್ಯಾಂಡಲ್‌ವುಡ್‌ನಲ್ಲಿ ಧೈರ್ಯಂ, ರಂಗನಾಯಕಿ, ತೋತಾಪುರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಆದಿತಿ ಪ್ರಭುದೇವ, ಮದುವೆ ಬಳಕ ಸಿನಿಮಾರಂಗದಿಂದ ಕೊಂಚ ದೂರ ಇದ್ದಾರೆ. ಯಶಸ್ ಮದುವೆಯಾಗಿ ಇದೀಗ ಮುದ್ದಿನ ಮಗುವೊಂದಕ್ಕೆ ಅಮ್ಮನಾಗಿರುವ ಅದಿತಿ ಪ್ರಭುದೇವ, ಜೀವನದಲ್ಲಿ ಬಹಳಷ್ಟು ಅನುಭವಸ್ಥೆಯಂತೆ ಮಾತನಾಡುತ್ತಾರೆ. ಅವರಿಗೆ ಕನ್ನಡ ಚಿತ್ರರಂಗದ ಸಿನಿಪ್ರೇಕ್ಷರಲ್ಲಿ ಸಾಕಷ್ಟು ಅಭಿಮಾನಿಗಳೂ ಸಹ ಇದ್ದಾರೆ. 

ಆರ್‌ಜೆ ರಶ್ಮಿ ಅವರು ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ಸಂದರ್ಶನ ಮಾಡುತ್ತಾರೆ. ಆಗಾಗ ರಶ್ಮಿಯವರ ಯೂಟ್ಯೂಬ್ ಸಂದರ್ಶನಗಳಲ್ಲಿ ನಟಿ ಅದಿತಿ ಕಾಣಿಸಿಕೊಂಡು, ಸಿನಿಮಾ, ಅಡುಗೆ, ಫ್ಯಾಷನ್ ಕ್ಷೇತ್ರ ಹೀಗೆ ಹಲವು ವಿಭಿನ್ನ ಆಯಾಮಗಳಲ್ಲಿ ತಮಗಿರುವ ಪ್ರತಿಭೆ ಹಾಗೂ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಸದ್ಯ ತಮ್ಮ ಮುದ್ದು ಮಗುವಿನ ಆರೈಕೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಅದಿತಿ ಪ್ರಭುದೇವ ಅವರು, ನಟನೆಯಿಂದ ಕೊಂಚ ವಿಶ್ರಾಂತಿ ತೆಗೆದುಕೊಂಡಿದ್ದಾರೆ.

ಇದ್ದಿದ್ದು ಇಪ್ಪತ್ತು ದಿನ, ಮಾಡಿದ್ದು ಇನ್ನೂರು ದಿನಗಳ ಇಂಫಾಕ್ಟ್; ಜಗ್ಗ ಯಾರಿಗೂ ಬಗ್ಗಲ್ಲ!

ಬಳಿಕ, ಸಿನಿಮಾ ನಟನೆ ಮುಂದುವರಿಸಬಹುದು ಎಂದು ಅವರ ಅಭಿಮಾನಿಗಳು ಕಾಯುತ್ತಿರಬಹುದು. ಆ ಬಗ್ಗೆ ಅವರೇ ಅಪ್‌ಡೇಟ್ಸ್ ಕೊಡುತ್ತಾರೆ ಬಿಡಿ..! ಏಕೆಂದರೆ, ಅದಿತಿ ಅವರು ಸೋಷಿಯಲ್ ಮೀಡಿಯಾಗಳಲ್ಲಿ ಬಹಳಷ್ಟು ಕ್ರಿಯಾಶೀಲರಾಗಿಯೇ ಇರುತ್ತಾರೆ. ಅಂದಮೇಲೆ, ತಮ್ಮ ಬಗ್ಗೆ ತಮ್ಮದೇ ಅಭಿಮಾನಿಗಳಿಗೆ ಹೇಳದೇ ಇರುತ್ತಾರೆಯೇ? 

click me!