Latest Videos

ಇಷ್ಟೊಂದು ಲೇಟ್ ಆಗಿ ಸೀಕ್ರೆಟ್ ಗೊತ್ತಾಯ್ತು, ಏನ್ರೀ ಇದೂ, ಯಾರೂ ಮಾಡದೇ ಇರೋದ್ನ ಮಾಡಿದ್ರು ವಿಷ್ಣುವರ್ಧನ್!

By Shriram BhatFirst Published Jun 27, 2024, 7:26 PM IST
Highlights

ಕನ್ನಡ ಚಿತ್ರರಂಗದ ಮೇರು ನಟ ಡಾ ವಿಷ್ಣುವರ್ಧನ್ ಬಗೆಗಿನ ಆಸಕ್ತಿಕರ ಸಂಗತಿಯೊಂದು ಬಯಲಾಗಿದೆ. ಸ್ಯಾಂಡಲ್‌ವುಡ್‌ನ ನಟರಲ್ಲಿ ಹಲವರು ಹಲವು ರೀತಿಯಲ್ಲಿ ಫೇಮಸ್ ಆಗಿ ಹೊಸ ಹೊಸ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ಮೇರು ನಟ ಡಾ ವಿಷ್ಣುವರ್ಧನ್ ಬಗೆಗಿನ ಆಸಕ್ತಿಕರ ಸಂಗತಿಯೊಂದು ಬಯಲಾಗಿದೆ. ಸ್ಯಾಂಡಲ್‌ವುಡ್‌ನ ನಟರಲ್ಲಿ ಹಲವರು ಹಲವು ರೀತಿಯಲ್ಲಿ ಫೇಮಸ್ ಆಗಿ ಹೊಸ ಹೊಸ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಅದೇ ರೀತಿ, ನಟ ವಿಷ್ಣುವಧ್ನ್ ಅವರ ಹೆಸರಿನಲ್ಲಿ ಒಂದು ದಾಖಲೆಯಿದೆ. ಅದು ಅತ್ಯಂತ ಮುಖ್ಯವಾಗಿದೆ ಕೂಡ. ಏಕೆಂದರೆ, ಯಾರಾದರೂ ಡಿಬೇಟ್ ಮಾಡಿದರೂ ಕೂಡ ಅದಕ್ಕಿದೆ ಸಾಕ್ಷಿ. ಹೀಗಾಗಿ ಈ ಸಂಗತಿಯನ್ನು ನಿಜವಾಗಿಯೂ ತಿಳಿದುಕೊಳ್ಳಲೇಬೇಕು. 

ಹಾಗಿದ್ದರೆ ಏನದು? ಹೌದು, ಕನ್ನಡದ ನಟ ವಿಷ್ಣುವರ್ಧನ್ ಅವರನ್ನು ಭಾರತದ ಅತ್ಯಂತ ಹ್ಯಾಂಡ್‌ಸಮ್ ಹೀರೋ ಎಂದು ಘೋಷಿಸಲಾಗಿದೆ. ಅದನ್ನು ಹೇಳಿದ್ದು ಯಾರು ಗೊತ್ತಾ? ಕೊಡಕ್ (Kodak) ಹಾಗೂ ಫ್ಯೂಜಿ (Fuji) ಸಂಸ್ಥೆ. ಅಂದು ರೀಲ್ಸ್‌ನಲ್ಲಿ ಶೂಟಿಂಗ್ ಮಾಡುತ್ತಿದ್ದ ಕಾಲ. ಈಗಿನಂತೆ ಡಿಜಿಟಲ್ ಯುಗ ಬಂದಿರಲಿಲ್ಲ. ಅಂದು ಸಿನಿಮಾಗಳಿಗೆ ರೀಲ್ಸ್  ಸರಬರಾಜು ಮಾಡಿತ್ತಿದ್ದುದು ಕೊಡಕ್ ಮತ್ತು ಫ್ಯೂಜಿ ಕಂಪನಿಗಳು ಮಾತ್ರ. ಅವುಗಳು ಒಮ್ಮೆ 'ಇಂಡಿಯಾದ ಬೆಸ್ಟ್ ಆಕ್ಟರ್ ಫೇಸ್ ಯಾರು' ಎಂದು ಸರ್ವೇ ಮಾಡಿಲಾಗಿ, ತಿಳಿದುಬಂದಿದ್ದ ರಿಸಲ್ಟ್‌ ಇದಾಗಿತ್ತು. 

ಆ್ಯಂಕರ್​ ಅನುಶ್ರೀ ವೀಡಿಯೋ ಮತ್ತೆ ವೈರಲ್, ಎಕ್ಸ್‌ಕ್ಯೂಸ್‌ ಮೀ ನಟನ ಮನೇಲಿ ಮಾತಿನ ಮಲ್ಲಿ ಓಡಾಡಿದ್ದೇಕೆ..?

ಎಲ್ಲ ಕ್ಯಾಮೆರಾಗೂ ಪರ್ಫೆಕ್ಟ್ ಫೋಟೋಜೆನಿಕ್ ಫೇಸ್ ಇತ್ತು ವಿಷ್ಣುವರ್ಧನ್‌ಗೆ ಎನ್ನುವುದು ಅಂದಿನ ಎಲ್ಲ ನಿರ್ದೇಶಕರ ಮಾತಾಗಿತ್ತು. ಯಾವುದೇ ಆಂಗಲ್‌ನಲ್ಲಿ ತೋರಿಸಿದರೂ ನಟ ವಿಷ್ಣುವರ್ಧನ್ ಮುಖ ಚೆನ್ನಾಗಿಯೇ ಕಾಣುತ್ತಿತ್ತು ಎನ್ನಲಾಗುತ್ತಿತ್ತು. ಸರ್ವೇಯಲ್ಲೂ ಬಹಳಷ್ಟು ಜನರು ನಟ ವಿಷ್ಣುವರ್ಧನ್ ಅವರ ಹೆಸರನ್ನೇ ಹೇಳಿದ್ದರು. ಬೇರೆಯವರಿಗಿಂತ ವೋಟಿಂಗ್‌ನಲ್ಲಿ ನಟ ವಿಷ್ಣುವರ್ಧನ್ ಭಾರೀ ಮುಂದಿದ್ದರಂತೆ!

ಎತ್ತಿ ಆಡಿಸಿದ ಇದೇ ಕೈಗಳಿಂದ ನಟಿ ಅಮೂಲ್ಯ ಬಾಡಿ ಟಚ್ ಮಾಡಲಾರೆ; ನಟ ದರ್ಶನ್!

ಅಂದಿನ ಸಿನಿಮಾ ಪ್ರೇಕ್ಷಕರು ಕೂಡ ಅದನ್ನೆ ಅಂದರೆ, ನಟ ವಿಷ್ಣುವರ್ಧನ್ ತುಂಬಾ ಹ್ಯಾಂಡ್‌ಸಮ್ ನಟ ಎಂದೇ ಹೇಳುತ್ತಿದ್ದರು ಎಂಬುದು ಗುಟ್ಟಿನ ಸಂಗತಿಯೇನೂ ಅಲ್ಲ. ಈಗಿನ ಜನರೇಶನ್ನಿನವರು ನಿಮ್ಮನಿಮ್ಮ ಅಮ್ಮ, ಅಕ್ಕ, ಅತ್ತಿಗೆ, ಆಂಟಿ, ದೊಡ್ಡಮ್ಮ, ಚಿಕ್ಕಮ್ಮ ಸಿಕ್ಕಾಗ ಕೇಳಿ, ಅವರೇ ಹೇಳುತ್ತಾರೆ. ಅಥವಾ, ನಿಮ್ಮ ಅಪ್ಪ, ದೊಡ್ಡಪ್ಪ, ಚಿಕ್ಕಪ್ಪ, ಮಾವ, ಬಾವ ಹಾಗೂ ನಿಮ್ಮ ಸ್ಕೂಲ್-ಕಾಲೇಜು ಟೀಚರ್ಸ್ ಕೇಳಿ ನೋಡಿ, ಅವರೆಲ್ಲಾ ಹೊಟ್ಟೆಕಿಚ್ಚು ಹೊರಹಾಕಬಹುದು. 

ಮೆಜೆಸ್ಟಿಕ್‌ನಲ್ಲಿ ನಟ ದರ್ಶನ್ ಏನ್ ಮಾಡಿದ್ರು ಅನ್ನೋ ಗುಟ್ಟು ಬಿಚ್ಚಿಟ್ಟ ಸಾಧು ಕೋಕಿಲ..!

ಒಟ್ಟಿನಲ್ಲಿ, ಕನ್ನಡ ಚಿತ್ರರಂಗದಲ್ಲಿ ಯಾರಿಗೂ ಸಿಗದ ಬಹುಮಾನವೊಂದು ನಟ ವಿಷ್ಣುವರ್ಧನ್ ಅವರಿಗೆ ಸಿಕ್ಕಿದೆ, ಈ ಬಗ್ಗೆ ತಿಳಿದುಕೊಂಡು ಹೇಳಿದ್ದು ನಟ ಲವ್ಲೀ ಸ್ಟಾರ್ ಪ್ರೇಮ್ ಅವರಂತೆ. ಅದನ್ನು ಹೇಳಿದ್ದು ನಟ ಮನತನ ಖ್ಯಾತಿಯ ರಾಜೇಶ್. ಕಿರುತೆರೆ ವೇದಿಕೆ ಮೇಲೆ ಮಾತನಾಡುತ್ತ ನಟ ಮನೆತನ ರಾಜೇಶ್ ಈ ಸಂಗತಿಯನ್ನು ಹೊರಜಗತ್ತಿಗೆ ಹೇಳಿದ್ದಾರೆ, ಅದೀಗ ಇಡೀ ಜಗತ್ತನ್ನು ಸುತ್ತು ಹೊಡೆಯುತ್ತಿದೆ. 

ನಾನು ನಿವಿ ವರ್ಷದಿಂದ ಬೇರೆ ಇದ್ವಿ, ಪರ್ಸನಲ್ ವಿಷ್ಯಕ್ಕೆ ಪಬ್ಲಿಕ್‌ನಲ್ಲಿ ಉತ್ತರ ಕೊಡ್ಬೇಕಾಯ್ತು; ಚಂದನ್ ಶೆಟ್ಟಿ

click me!