ಈ ಪ್ರಪಂಚಕ್ಕೆ ಅವ್ಳನ್ನ ತಂದಿರೋದು ನಾನು, ಅದು ನನ್ನ ಜವಾಬ್ದಾರಿ ಅಂದ್ರೆ ಒಪ್ಕೋತೀನಿ: ಕಿಚ್ಚ ಸುದೀಪ್

By Shriram Bhat  |  First Published Sep 4, 2024, 12:02 PM IST

ಹುಟ್ಟುಹಬ್ಬದ ಸಂದರ್ಭದಲ್ಲಿ ನಟ ಸುದೀಪ್ ಬಹಳಷ್ಟು ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ. ಅವೆಲ್ಲವೂ ಈಗ ಸೋಷಿಯಲ್ ಮೀಡಿಯಾಗಳಲ್ಲಿ, ಯೂಟ್ಯೂಬ್‌ಗಳಲ್ಲಿ ಬಹಳಷ್ಟು ವೈರಲ್ ಆಗುತ್ತಲೇ ಇರುತ್ತವೆ. ಇದೀಗ..


ಮೊನ್ನೆ, ಅಂದರೆ ಸೆಪ್ಟೆಂಬರ್ 2ರಂದು ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ (Kichcha Sudeep) ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ಗೊತ್ತೇ ಇದೆ. ಈ ವೇಳೆ ಅವರು ಸುದ್ದಿಗೋಷ್ಠಿಯಲ್ಲಿ ಬಹಳಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದು ಗೊತ್ತೇ ಇದೆ. ಅಲ್ಲಿ ಸಾಕಷ್ಟು ವಿಷಯಗಳ ಕುರಿತು ಮಾಧ್ಯಮಗಳು ನಟ ಸುದೀಪ್ ಅವರನ್ನು ಪ್ರಶ್ನೆ ಮಾಡಿವೆ. ಅದರಲ್ಲಿ ನಟ ದರ್ಶನ್ ಬಗ್ಗೆ ಸಹ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಉತ್ತರ ಕೊಡುತ್ತ ನಟ ಸುದೀಪ್ ಬೇರೊಂದು ಸಂಗತಿ ಬಗ್ಗೆ ಬೆಳಕುಇ ಚೆಲ್ಲಿದ್ದಾರೆ. 

ನಟ ದರ್ಶನ್ ಬಗ್ಗೆ ಮಾತನಾಡುತ್ತ ನಟ ಸುದೀಪ್ 'ನಾನು ಯಾರೋ ಬೇರೆಯವರನ್ನು ತಿದ್ದುವಷ್ಟು ದೊಡ್ಡ ವ್ಯಕ್ತಿಯೇನೂ ಅಲ್ಲ. 'ಈಗ ನನ್ನ ಜವಾಬ್ದಾರಿ ನನ್ನ ಮಗಳು. ಈ ಪ್ರಪಂಚಕ್ಕೆ ಅವ್ಳನ್ನ ತಂದಿರೋದು ನಾನು.. ಅದು ನನ್ನ ಜವಾಬ್ದಾರಿ ಅಂದ್ರೆ ಒಪ್ಕೋತೀನಿ.. ಅದನ್ನ ತಿದ್ಬೇಕಾ ಮಾಡ್ಬೇಕಾ. ಅಲ್ಲೇ ಕೂತ್ಕೊಂಡು ಒಪಿನಿಯನ್ ಕೇಳ್ತಾ ಇರ್ತೀವಿ, ತಿದ್ದೋಕಿಂತ ಮೊದ್ಲು, ನಿನಗೇನು ಬೇಕು ಹೇಳು..' ಅಂತ ಕೇಳ್ತೀವಿ' ಅಂದಿದ್ದಾರೆ ಕಿಚ್ಚ ಸುದೀಪ್. 

Tap to resize

Latest Videos

ಹೆಲೋ, ನಿಮ್ಮ ಅಚ್ಚುಮೆಚ್ಚಿನ ಸ್ಯಾಂಡಲ್‌ವುಡ್ ತಾರೆಗಳ ಮನೆ ಹೆಸರುಗಳು ಹೀಗಿವೆ ನೋಡಿ..!

ನಟ ಕಿಚ್ಚ ಸುದೀಪ್ ಹಾಗು ಪ್ರಿಯಾ ಸುದೀಪ್ ಜೋಡಿಗೆ ಸಾನ್ವಿ ಹೆಸರಿನ ಮಗಳಿದ್ದಾಳೆ ಎಂಬುದು ಬಹುತೇಕ ಎಲ್ಲರಿಗೂ ಗೊತ್ತು. ಮೊನ್ನೆ ಸುದೀಪ್ ಹುಟ್ಟುಬ್ಬದ ದಿನ ಸಾನ್ವಿ ಕೂಡ ಕ್ಯಾಮೆರಾ ಎದುರು ಕಾಣಿಸಿಕೊಂಡಿದ್ದರು. ಅಪ್ಪ-ಮಗಳು ಪರಸ್ಪರ ಕೇಕ್ ಸವಿದಿದ್ದನ್ನು ಇಡೀ ಲೋಕವೇ ನೋಡಿದೆ. ಸುದೀಪ್ ಮತ್ತು ಸಾನ್ವಿ ಹುಟ್ಟುಹಬ್ಬ ಅಂತೇನಲ್ಲ, ಬಹಳಷ್ಟು ಸಾರಿ ಒಟ್ಟಿಗೇ ಕಾಣಿಸಿಕೊಳ್ಳುತ್ತಾರೆ. ಸಾನ್ವಿ ಯಾವಾಗಲೂ ಅಪ್ಪನ ಬಗ್ಗೆ ತುಂಬಾ ಪ್ರೀತಿ ವ್ಯಕ್ತಪಡಿಸುತ್ತಲೇ ಇರುತ್ತಾರೆ ಎಂಬುದು ಹೊಸ ಸಂಗತಿಯೇನೂ ಅಲ್ಲ!

ಅದೇನೇ ಇರಲಿ, ಹುಟ್ಟುಹಬ್ಬದ ಸಂದರ್ಭದಲ್ಲಿ ನಟ ಸುದೀಪ್ ಬಹಳಷ್ಟು ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ. ಅವೆಲ್ಲವೂ ಈಗ ಸೋಷಿಯಲ್ ಮೀಡಿಯಾಗಳಲ್ಲಿ, ಯೂಟ್ಯೂಬ್‌ಗಳಲ್ಲಿ ಬಹಳಷ್ಟು ವೈರಲ್ ಆಗುತ್ತಲೇ ಇರುತ್ತವೆ. ಇದೀಗ, ಸಾಮಾಜಿಕ ಜಾಲತಾಣಗಳಲ್ಲಿ ನಟ ಸುದೀಪ್ ತಮ್ಮ ಮಗಳು ಸಾನ್ವಿ ಬಗ್ಗೆ, ಆ ಜವಾಬ್ದಾರಿ ಬಗ್ಗೆ ಮಾತನಾಡಿರುವುದು ತುಂಬಾನೇ ವೈರಲ್ ಆಗುತ್ತಿವೆ. 

ಶೆಟ್ರೇ, ನೀವು ಎಷ್ಟು ಸಲ ಅಂತ ನಮ್ ಹೃದಯ ಗೆಲ್ತೀರಾ? ನಿಮ್ಮನ್ನ ನೋಡಿ ತುಂಬಾ ಕಲಿಯೋದಿದೆ ಅಂದಿದ್ಯಾರು?

ಅಂದಹಾಗೆ, ಸುದೀಪ್ ನಟನೆಯ 'ಮ್ಯಾಕ್ಸ್' ಚಿತ್ರವು ಬಿಡುಗಡೆಗೆ ಸಿದ್ಧವಾಗಿದ್ದು, ಪ್ರಮೋಶನ್ ಹಂತದಲ್ಲಿದೆ. ಇತ್ತೀಚೆಗೆ ಮ್ಯಾಕ್ಸ್ ಚಿತ್ರದ ಮೊದಲ ಹಾಡು ಬಿಡುಗಡೆ ಆಗಿದ್ದು ಸಖತ್ ಕ್ರೇಜ್ ಹುಟ್ಟುಹಾಕಿದೆ. ಇನ್ನೇನು ಮ್ಯಾಕ್ಸ್ ಚಿತ್ರ ತೆರೆಗೆ ಬರಲಿದೆ ಅನ್ನೋ ಈ ಸಮಯದಲ್ಲಿ ಕಿಚ್ಚ ಸುದೀಪ್ ನಟನೆ ಹಾಗು ಅನೂಪ್ ಭಂಡಾರಿ ನಿರ್ದೇಶನದ ಹೊಸ ಸಿನಿಮಾ 'ಬಿಲ್ಲ ರಂಗ ಭಾಷಾ' ಸೆಟ್ಟೇರಿದೆ. ಸದ್ಯ ಈ ಚಿತ್ರದ ಶೂಟಿಂಗ್ ಶುರುವಾಗಲಿದೆ ಎನ್ನಲಾಗಿದೆ. 

click me!