Breaking: ಸೌಂದರ್ಯ ಜಗದೀಶ್ ಪ್ರಕರಣ: ಆತ್ಮಹತ್ಯೆ ಪ್ರಚೋದನೆ ಅರ್ಜಿ ವಜಾಗೊಳಿಸಿದ ಹಕೋರ್ಟ್!

By Sathish Kumar KH  |  First Published Sep 3, 2024, 9:04 PM IST

ಕನ್ನಡದ ಖ್ಯಾತ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಪತ್ನಿ ದಾಖಲಿಸಿದ್ದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆಂಬ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಸೌಂದರ್ಯ ಜಗದೀಶ್ ಅವರದ್ದೆನ್ನಲಾದ ಪತ್ರದ ಆಧಾರದ ಮೇಲೆ ಈ ಪ್ರಕರಣವನ್ನು ರದ್ದುಗೊಳಿಸಲಾಗಿದೆ.


ಬೆಂಗಳೂರು (ಸೆ.03): ಕನ್ನಡದ ಖ್ಯಾತ ನಿರ್ಮಾಪಕ ಸೌಂದರ್ಯ ಜಗದೀಶ್ ಅವರಿಗೆ ಹಣಕಾಸಿನ ವಿಚಾರವಾಗಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆಂದು ಅವರ ಪತ್ನಿ ವಿ.ಎಸ್. ಸುರೇಶ್, ಎಸ್.ಪಿ.ಹೊಂಬಣ್ಣ ಹಾಗೂ ಎಸ್.ಸುಧೀಂದ್ರ ವಿರುದ್ಧದ ಪ್ರಕರಣ ದಾಖಲಿಸಿದ್ದರು. ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್, ಕಳೆದ ತಿಂಗಳು ಸಿಕ್ಕ ಪತ್ರದಲ್ಲಿ ಮೂವರ ಮೇಲೆ ಆತ್ಮಹತ್ಯೆ ಪ್ರಚೋದನೆ ಕುರಿತು ಯಾವುದೇ ಅಂಶಗಳಿದ್ದ ಎಂದು ದೂರು ಅರ್ಜಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಪ್ರಚೋದನೆ ಆರೋಪ ಪ್ರಕರಣ ರದ್ದು ಕೋರಿ ವಿ.ಎಸ್. ಸುರೇಶ್, ಎಸ್.ಪಿ.ಹೊಂಬಣ್ಣ, ಎಸ್. ಸುಧೀಂದ್ರ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.  ಆತ್ಮಹತ್ಯೆ ಮಾಡಿಕೊಂಡ ತಿಂಗಳ‌ ಬಳಿಕ ಸಿಕ್ಕ  ಪತ್ರ ಆಧರಿಸಿ ಕೇಸ್  ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಚೋದನೆ ಆರೋಪ ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಸಿರುವ ಮೂವರು ಆಪ್ತರು ಆತ್ಮಹತ್ಯೆ ಪತ್ರದಲ್ಲಿ ಪ್ರಚೋದನೆ ಬಗ್ಗೆ ಆರೋಪವಿಲ್ಲ. ಹೀಗಾಗಿ ಕೇಸ್ ರದ್ದು ಪಡಿಸಿ ಎಂದು ನ್ಯಾಯಾಲಯದಲ್ಲಿ ತಮ್ಮ ಪರವಾದ ವಕೀಲರ ಮೂಲಕ ಮನವಿ ಮಾಡಿದ್ದರು.

Latest Videos

undefined

ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಪ್ರಚೋದನೆ ಆರೋಪ ಪ್ರಕರಣ ರದ್ದುಗೊಳಿಸುವಂತೆ ಸಹಪಾಲುದಾರರಿಂದ ಕೋರ್ಟ್‌ಗೆ ಮೊರೆ

ಸೌಂದರ್ಯ ಜಗದೀಶ್ ಬ್ಲಾಕ್ ಮೇಲ್ ಗೆ ಒಳಗಾಗಿದ್ದರೆಂಬ ಆರೋಪವಿದೆ. ಜಗದೀಶ್ ಪವಿತ್ರಾಗೌಡಗೆ ಹಣ ವರ್ಗಾವಣೆ ಮಾಡಿದ್ದಾರೆಂದು ಆರೋಪಿ ಹೇಳಿದ್ದರು. ಹಲವು ಅಂಶಗಳನ್ನು ಬಹಿರಂಗಪಡಿಸುವುದಾಗಿ ಆರೋಪಿ ಸುರೇಶ್ ಹೇಳಿದ್ದರು. ಸೌಂದರ್ಯ ಜಗದೀಶ್  ಬ್ಲಾಕ್ ಮೇಲ್ ಗೆ ಒಳಗಾಗಿರುವ ಸಾಧ್ಯತೆಯಿದೆ. ಪ್ರಕರಣದ ತನಿಖೆಗೆ ತಡೆ ನೀಡಬಾರದೆಂದು ಪತ್ನಿ ಶಶಿರೇಖಾ ಪರ ವಕೀಲರ ಮನವಿ ಮಾಡಿದ್ದಾರೆ. ವಿಚಾರಣೆ ಪೂರ್ಣಗೊಳಿಸಿ ಆದೇಶವನ್ನು ಹೈಕೋರ್ಟ್ ಕಾಯ್ದಿರಿಸಿತ್ತು. ಈ ಕುರಿತು ಇಂದು ಆದೇಶ ನೀಡಿದ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಪ್ರಕರಣ ರದ್ದುಪಡಿಸಿ ಆದೇಶ ಹೊರಡಿಸಿದೆ. ಇನ್ನು ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆದೇಶದಲ್ಲಿನ ಅಭಿಪ್ರಾಯಗಳು ಇವರ ನಡುವಿನ ಬೇರೆ ವಿವಾದಗಳಿಗೆ ಅನ್ವಯವಾಗುವುದಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಲಾಗಿದೆ.

click me!