ಯಾಕಂದ್ರು ಕಿಚ್ಚ ಸುದೀಪ್: ನಾವು ರಿಯಾಕ್ಟ್ ಮಾಡೋಕೆ ಹೋದ್ರೆ ಅದು ದೀಪಕ್ಕೆ ಎಣ್ಣೆ ಹಾಕಿದ ಹಾಗೆ!

By Shriram Bhat  |  First Published Jun 24, 2024, 7:17 PM IST

ಅಪ್ಪುದು ತೂಕ ಏನು, ನಾವೇನು, ಇನ್ನು ನಮ್ಮ ಚಿತ್ರಂಗದಲ್ಲಿ ಹಲವಾರು ಕಲಾವಿದರು ಇದ್ದಾರೆ, ಅವ್ರೇನು.. ನಾವ್‌ನಾವು ಹೇಗಿದೀವಿ ಮಾತಾಡ್ಕೊಂಡು.. ನಾವೇನಾದ್ರೂ ಒಬ್ಬರಮೇಲೆ ಮತ್ತೊಬ್ಬರು ಮಾಡ್ಕೋತಾ ಇದೀವಾ ಹೇಳಿ.. ಯಾರೋ ಎಲ್ಲೋ ಕೂತ್ಕೊಂಡು..


ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಸಂದರ್ಶನವೊಂದರಲ್ಲಿ ಮಾತನಾಡುತ್ತ ಅಪ್ಪು ಬಗ್ಗೆ ಹೇಳಿದ್ದಾರೆ, ತಮ್ಮ ಹಾಗೂ ಅಪ್ಪು ಫ್ಯಾನ್ಸ್‌ದು ಎನ್ನಲಾದ ಟ್ರೋಲ್‌ ಪ್ರಶ್ನೆಗೂ ಉತ್ತರಿಸಿದ್ದಾರೆ. ಹಳೆಯ ವೀಡಿಯೋವೊಂದು ಇಧಿಗ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ನಟ ಸುದೀಪ್ ತುಂಬಾ ಸೆನ್ಸಿಬಲ್ ಆಗಿ ಮಾತನಾಡಿದ್ದಾರೆ, ಅರ್ಥಪೂರ್ಣವಾಗಿ ಮಾತನಾಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿ ಹಲವಾರು ಕಾಮೆಂಟ್‌ಗಳು ಬಂದಿವೆ. ಹಾಗಿದ್ರೆ, ಸುದೀಪ್ ತಮ್ಮದೇ ಸಮಕಾಲೀನರಾದ ನಟ ಪುನೀತ್ ರಾಜ್‌ಕುಮಾರ್ ಬಗ್ಗೆ ಅದೇನು ಹೇಳಿದ್ದರು ನೋಡಿ..  

'ಅಪ್ಪು ಸರ್‌ದು ಹಾಗು ನಿಮ್ ಫ್ಯಾನ್ಸ್‌ದು ಒಂದಿಷ್ಟು ಪೋಸ್ಟ್‌ಗಳನ್ನು ಹಾಕೋದು, ಆ ಥರದ್ದು ನಡಿತಾ ಇದೆ ಒಂದಷ್ಟು. ಒಂದು ಸಿನಿಮಾ ರಿಲೀಸ್ ಆಗುತ್ತೆ ಅಂದಾಗ ಆ ಥರ ಶುರುವಾಗ್ಬಿಡುತ್ತೆ.. ' ಎಂದು ಸಂದರ್ಶಕಿ ಹೇಳುತ್ತಿದ್ದಂತೆ, ನಟ ಕಿಚ್ಚ ಸುದೀಪ್ ಅವರು ಯಾವ್ ಥರ..' ಎಂದು ತಕ್ಷಣವೇ ಪ್ರಶ್ನೆ ಕೇಳುತ್ತಾರೆ. ಅದಕ್ಕೆ ನಿರೂಪಕಿ 'ಟ್ರೋಲ್ ಮಾಡುವಂಥಾದ್ದು..' ಎನ್ನುತ್ತಿದ್ದಂತೆ, ಸುದೀಪ್ 'ಐ ಟೆಲ್ ಯೂ, ನಾನೇನು ಹೇಳ್ತೀನಿ ಅನ್ನೋದನ್ನ ನೀವು ಕ್ಲಿಯರ್ ಆಗಿ ಅರ್ಥ ಮಾಡ್ಕೋಬೇಕು.

Latest Videos

ಅಶ್ಲೀಲ ಮೆಸೇಜ್ ಅನ್ನೋದು ಆನ್‌ಲೈನ್ ರೇಪ್, ಎಲ್ಲಿಂದಲೋ ಮಾಡುವ ಮಾನಸಿಕ ಹಿಂಸೆ; ನಟಿ ಚಿತ್ರಾಲ್! 

ಅಪ್ಪುದು ತೂಕ ಏನು, ನಾವೇನು, ಇನ್ನು ನಮ್ಮ ಚಿತ್ರಂಗದಲ್ಲಿ ಹಲವಾರು ಕಲಾವಿದರು ಇದ್ದಾರೆ, ಅವ್ರೇನು.. ನಾವ್‌ನಾವು ಹೇಗಿದೀವಿ ಮಾತಾಡ್ಕೊಂಡು.. ನಾವೇನಾದ್ರೂ ಒಬ್ಬರಮೇಲೆ ಮತ್ತೊಬ್ಬರು ಮಾಡ್ಕೋತಾ ಇದೀವಾ ಹೇಳಿ.. ಯಾರೋ ಎಲ್ಲೋ ಕೂತ್ಕೊಂಡು ಮಾಡೋದ್ರ ಬಗ್ಗೆ ನಾವು ರಿಯಾಕ್ಟ್ ಮಾಡೋಕೆ ಹೋದ್ರೆ ಅದು ದೀಪಕ್ಕೆ ಎಣ್ಣೆ ಹಾಕಿದ ಹಾಗೆ' ಎಂದಿದ್ದಾರೆ. ಜೊತೆಗೆ, ನಮ್ಮ ಪೈಲ್ವಾನ್ ಸಿನಿಮಾಗೆ ಅವ್ರು ಬಂದು ಆಡಿಯೋ ರಿಲೀಸ್ ಮಾಡಿದ್ರು, ಅವ್ರ ರಾಜ್‌ಕುಮಾರ್‌ಗೆ ನಾವು ಹೋಗಿ ವಿಶ್ ಮಾಡಿ ಬಂದ್ವಿ..

ಯಾವುದೋ ಒಂದು ಶಕ್ತಿ ನಮ್ಮನ್ನ ಕಾಪಾಡುತ್ತೆ ಅನ್ನೋದು ನನ್ ನಂಬಿಕೆ; ಡಾಲಿ ಧನಂಜಯ್

ಸಿನಿಮಾ ಅಂದಾಗ, ಆಫ್‌ಕೋರ್ಸ್.. ಅಲ್ಲಿ ಕಾಂಪಿಟೇಶನ್ ಇದ್ದೇ ಇರುತ್ತೆ ಒಬ್ರು ಇನ್ನೊಬ್ರಿಗಿಂತ ಬೆಟರ್ ಸಿನಿಮಾ ಮಾಡೋಕೆ ಅಷ್ಟೇ. ನನಗಿಂತ ಹೇಗೆ ಅವ್ರು ಬೆಟರ್ ಮಾಡ್ಬಹುದು, ಅವ್ರಿಗಿಂತ ನಾನು ಹೇಗೆ ಬೆಟರ್ ಮಾಡ್ಬಹುದು ಅನ್ನೋದು ಅದು ಸಹಜ ಸಂಗತಿ. ಯಾರೋ ಎಲ್ಲೋ ಕೂತ್ಕೊಂಡು ಟ್ರೋಲ್ ಪೇಜ್ ಓಪನ್ ಮಾಡ್ಬಹುದು, ನಿಮ್ದೂ ಟ್ರೋಲ್ ಪೇಜ್ ಇರ್ಬಹುದು ಯಾರದ್ದೋ ಬೇರೆಯವ್ರ ಹೆಸರಲ್ಲಿ, ನನಗೇನು ಗೊತ್ತು? ಸೋ, ಯಾರದ್ದೋ ಹೆಸರಲ್ಲಿ ಯಾರೋ ಏನೋ ಮಾಡ್ಕೊಂಡು ಕೂತಿದಾರೆ ಅಂದ್ಕೊಂಡಾಗ, ಅದಕ್ಕೆ ಏನ್ ಮಾಡೋದು? 

ದರ್ಶನ್ ನಟನೆಯ 'ಇಂದ್ರ' ಚಿತ್ರಕ್ಕೆ ರಾತ್ರೋ ರಾತ್ರಿ ಹೀರೋಯಿನ್ ಬದಲಾಗಿದ್ದು ಯಾಕೆ?

ಇಲ್ಲ ಅವ್ರು ಧೈರ್ಯವಾಗಿ ನಾನು ಇಂತವ್ನು, ಮನೆ ಅಡ್ರೆಸ್ ಇದು, ನಾನು ಇದನ್ನ ಮಾಡ್ತಾ ಇದೀನಿ ಅಂತ ಎದುರು ಬಂದು ಹೇಳಿದಾಗ ಅದು ಬೇರೇನೇ ಆಗುತ್ತೆ.. ನಾನು ಅಂತಲ್ಲ, ಯಾರದೇ ಕಲಾವಿದರ ಅಭಿಮಾನಿಗಳು ಆಮೇಲೆ ಮಾತಾಡ್ತಾರೆ, ಲೀಗಲ್‌ ಆಗಿಯೂ ಆಮೇಲೆ ಮಾತಾಡ್ಬಹುದು. ಇದನ್ನ ಇಟ್ಕೊಂಡು ಮಾತಾಡೋರ ಬಗ್ಗೆ ನಿಜವಾಗಿಯೂ ನಾವು ಮಾತಾಡ್ಬೇಕಾ? ಎಷ್ಟೊಂದು ಎಫರ್ಟ್ಸ್‌ ತಗೊಂಡು ನೀವು ಮಳೆನಲ್ಲೆಲ್ಲಾ ಬಂದು, ನೀವೇನಾದ್ರೂ ಕನ್ನಡದ ಇನ್ನೊಬ್ಬ ಕಲಾವಿದರ ಬಗ್ಗೆ ಮಾತಾಡಿದ್ರೆ ನಾನು ಮಾತಾಡ್ತಿದ್ದೆನೇನೋ! 

ಸಡನ್ನಾಗಿ ಹಾಗೆ ಬರೋಕಾಗಲ್ಲ, ಅಲ್ಲಿ ಬಂದು ನಾನು ಏನ್ ಮಾಡೋದು ಅಂದೆ; ಅಶ್ವಿನಿ ಪುನೀತ್ ರಾಜ್‌ಕುಮಾರ್

ಆದ್ರೆ, ನೀವು ಮಾತಾಡಿದ್ದು ಯಾರದ್ದೋ ಬಗ್ಗೆ! ನೀವು ಕೇಳಿದ್ದಕ್ಕೆ ನಾನು ಕೂಡ ಯಾರದ್ದೋ ಬಗ್ಗೆ ಮಾತಾಡೋ ಹಾಗಾಯ್ತು. ನನ್ ಪ್ರಕಾರ ಇದು ಲೈಫ್ ಮತ್ತು ಟೈಮ್ ವೇಸ್ಟಿಂಗ್ ಕೆಲಸ' ಎಂದಿದ್ದಾರೆ ನಟ ಕಿಚ್ಚ ಸುದೀಪ್. ಒಟ್ಟಿನಲ್ಲಿ, ನಟ ಸುದೀಪ್ ಕನ್ನಡ ಚಿತ್ರರಂಗದಲ್ಲಿ ಅಪ್ಪು ಖ್ಯಾತಿಯ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಒಂದು ತೂಕವಿದೆ. ಹಾಗೇ, ಎಲ್ಲ ಕಲಾವಿದರಿಗೂ ಅವರದ್ದೇ ಆದ ತೂಕವಿದೆ. ಯಾರೋ ಟ್ರೋಲ್ ಮಾಡುವವರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ' ಎಂದಿದ್ದಾರೆ ಕಿಚ್ಚ ಸುದೀಪ್. 

ಅಪ್ಪು ಸಾವಿನ ಹಿಂದಿನ ರಾತ್ರಿ, ರಮೇಶ್ ಅರವಿಂದ್ ಜೊತೆಗಿನ ಚರ್ಚೆಯಲ್ಲಿ ಬುದ್ಧ ಬಂದಿದ್ದು ಯಾಕೆ?

click me!