ಆತ್ಮಹತ್ಯೆ ಮಾಡಿಕೊಂಡ ನಿರ್ಮಾಪಕ ಸೌಂದರ್ಯ ಜಗದೀಶ್ ಕೊಟ್ಟ ಹಣದಲ್ಲಿ ಪವಿತ್ರಾಗೌಡ ಮನೆ ಖರೀದಿ?

By Sathish Kumar KH  |  First Published Jun 24, 2024, 1:56 PM IST

ಇತ್ತೀಚೆಗೆ ಉದ್ಯಮದಲ್ಲಿ ನಷ್ಟವಾಗಿದೆ ಎಂದು ಆತ್ಮಹತ್ಯೆಗೆ ಶರಣಾದ ಕನ್ನಡ ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್ ಕೊಟ್ಟ 2 ಕೋಟಿ ರೂ. ಹಣದಲ್ಲಿ ನಟಿ ಪವಿತ್ರಾಗೌಡ ಮನೆ ಖರೀದಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.


ಬೆಂಗಳೂರು (ಜೂ.24): ಕನ್ನಡ ಸಿನಿಮಾ ನಿರ್ಮಾಪಕ ಹಾಗೂ ಉದ್ಯಮಿ ಸೌಂದರ್ಯ ಜಗದೀಶ್ ಅವರ ಆತ್ಮಹತ್ಯೆ ಕೇಸ್‌ಗೆ ಸಂಬಂಧಪಟ್ಟಂತೆ ಬಿಗ್ ಟ್ವಿಸ್ಟ್ ಲಭ್ಯವಾಗಿದೆ. ಇನ್ನು ಸೌಂದರ್ಯ ಜಗದೀಶ್ ಅವರ ಪತ್ನಿ ಕೂಡ ನನ್ನ ಗಂಡನ ಆತ್ಮಹತ್ಯೆಗೆ ಉದ್ಯಮ ಪಾಲುದಾರರ ಕೈವಾಡವಿದೆ ಎಂದು ಆರೋಪಿಸಿ ದೂರು ಕೂಡ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಈಗ ಕೇಸ್‌ಗೆ ಬಿಗ್ ಟ್ವಿಸ್ಟ್ ಲಭ್ಯವಾಗುತ್ತಿದೆ. ನಟಿ ಪವಿತ್ರಾಗೌಡ ಅವರಿಗೆ ನಿರ್ಮಾಪಕ ಬರೋಬ್ಬರಿ 2 ಕೋಟಿ ರೂ. ಹಣ ಕೊಟ್ಟಿರುವುದು ಬೆಳಕಿಗೆ ಬಂದಿದೆ.

ಹೌದು, ಸೌಂದರ್ಯ ಜಗದೀಶ್ ಆತ್ಮಹತ್ಯೆ ಬಳಿಕ ಅವರ ಪತ್ನಿ ಪತ್ನಿ ರೇಖಾ ಸೌಂದರ್ಯ ಜಗದೀಶ್ ಅವರು ಪಾಲುದಾರರ ಮೇಲೆ ಆರೋಪ ಮಾಡಿದ್ದರು. ಈ ಸಂಬಂಧಪಟ್ಟಂತೆ ತಮ್ಮ ಗಂಡ ಸೌಮದರ್ಯ ಜಗದೀಶ್ ಅವರಿಗೆ ಪಾಲುದಾರರಿಂದ 60 ಕೋಟಿ ರೂ. ನಷ್ಟವಾಗಿದೆ ಎಂದು ಜಗದೀಶ್ ಪತ್ನಿ ರೇಖಾ ದೂರು ನೀಡಿದ್ದರು. ಈಗ ಸೌಂದರ್ಯ ಜಗದೀಶ್ ಆತ್ಮಹತ್ಯೆಗೂ ಮೊದಲು ನಟ ದರ್ಶನ್​, ಪವಿತ್ರಾಗೌಡ ನಡುವೆ ವ್ಯವಹಾರ ನಡೆದಿತ್ತಾ ಎಂಬ ಅನುಮಾನವೂ ವ್ಯಕ್ತವಾಗಿದೆ. ಇದರ ನಡುವೆ ದರ್ಶನ್​ ಹಾಗೂ ಪವಿತ್ರಾಗೌಡಗೆ ಸೌಂದರ್ಯ ಜಗದೀಶ್ ದುಡ್ಡು ಕೊಟ್ಟಿದ್ರಾ ಎಂಬ ತನಿಖೆಯೂ ನಡೆಯಬೇಕಿದೆ?

Tap to resize

Latest Videos

ನಟ ದರ್ಶನ್ ನೋಡಲು ಜೈಲಿಗೆ ಬಂದ ಹೆಂಡ್ತಿ ವಿಜಯಲಕ್ಷ್ಮೀ ಮತ್ತು ನಟ ವಿನೋದ್ ಪ್ರಭಾಕರ್

ಪವಿತ್ರಾಗೌಡ ಖರೀದಿಸಿದ ಮನೆಗೆ ದುಡ್ಡು ಕೊಟ್ಟಿದ್ರಾ ಸೌಂದರ್ಯ ಜಗದೀಶ್ ? ಪವಿತ್ರಾಗೌಡ ಮನೆ ಖರೀದಿಗೆ 2 ಕೋಟಿ ಕೊಟ್ರಾ ಸೌಂದರ್ಯ ಜಗದೀಶ್ ? ಸೌಂದರ್ಯ ಜಗದೀಶ್ ಹಣ ಕೊಟ್ಟ ಮಾರನೇ ದಿನವೇ ಮನೆ ಪವಿತ್ರಾಗೌಡ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೌಂದರ್ಯ ಜಗದೀಶ್ - ಪವಿತ್ರಾಗೌಡ ನಡುವೆ ಹಣದ ವ್ಯವಹಾರ ನಡೆದಿತ್ತು ಎಂಬ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ದಾಖಲೆಗಳು ಲಭ್ಯವಾಗಿವೆ. ಇನ್ನು ಸೌಂದರ್ಯ ಜಗದೀಶ್ ಅವರ ಉದ್ಯಮದ ಪಾಲುದಾರ ಸುರೇಶ್ ಎನ್ನುವವರು ಹಣದ ವ್ಯವಹಾರದ ದಾಖಲೆಯನ್ನು ಪೊಲೀಸರಿಗೆ ನೀಡಿದ್ದಾರೆ. 

ನಿರ್ಮಾಪಕ ಸೌಂದರ್ಯ ಜಗದೀಶ್ ಅವರಿಂದ 2017 ನವೆಂಬರ್​ 13 ರಂದು ಪವಿತ್ರಾಗೌಡಗೆ 1 ಕೋಟಿ ರೂ. ವರ್ಗಾವಣೆ, 2018ರ ಜನವರಿ 23 ರಂದು ಪವಿತ್ರಾಗೌಡಗೆ ಮತ್ತೆ 1 ಕೋಟಿ ರೂ. ವರ್ಗಾವಣೆಯಾಗಿದೆ. ದಿರ ಬೆನ್ನಲ್ಲಿ ನಟಿ ಪವಿತ್ರಾಗೌಡ ಅವರು 2018ರ ಜನವರಿ 24 ರಂದು ಮನೆ ಖರೀದಿಸಿದ್ದಾರೆ. ರಾಜರಾಜೇಶ್ವರಿ ನಗರದ ಬಳಿಯ ಕೆಂಚನಹಳ್ಳಿಯಲ್ಲಿ 1.75 ಕೋಟಿ ರೂ. ಮೌಲ್ಯದ ಮನೆಯನ್ನು ನಟಿ ಪವಿತ್ರಾಗೌಡ ಖರೀದಿ ಮಾಡಿದ್ದಾರೆ. ಇನ್ನು ಪವಿತ್ರಾಗೌಡ ಮನೆ ಖರೀದಿ ಪತ್ರದಲ್ಲಿ ಸಾಕ್ಷಿಯಾಗಿ ಸೌಂದರ್ಯ ಜಗದೀಶ್​ ಸಹಿ ಹಾಕಿದ್ದಾರೆ. ಆದರೆ, ಈ ಹಣದ ವ್ಯವಹಾರವನ್ನು ನಿರ್ಮಾಪಕ  ಸೌಂದರ್ಯ ಜಗದೀಶ್​ ಅವರು ಉದ್ಯಮ ಪಾಲುದಾರರಿಂದ ಮುಚ್ಚಿಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ.

ಸಲಿಂಗ ಕಾಮ ಕೇಸಲ್ಲಿ ಸೆಂಟ್ರಲ್ ಜೈಲ್ ಸೇರಿದ ಸೂರಜ್ ರೇವಣ್ಣಗೆ ಲಿಂಗತ್ವ, ಲೈಂಗಿಕ ಸಾಮರ್ಥ್ಯ ಪರೀಕ್ಷೆ

ಇನ್ನು ಸೌಂದರ್ಯ ಜಗದೀಶ್ ಆತ್ಮಹತ್ಯೆ ಬಳಿಕ ಪಾಲುದಾರರ ವಿರುದ್ಧವೇ ಪತ್ನಿ ದೂರು ನೀಡಿದ್ದಾರೆ. ಸೌಂದರ್ಯ ಜಗದೀಶ್ ವ್ಯವಹಾರದ ದಾಖಲೆ ಕಲೆಹಾಕಿರುವ ಪಾಲುದಾರರು ತಮಗೆ ಸಿಕ್ಕ ದಾಖಲೆಯಲ್ಲಿ ದರ್ಶನ್​- ಪವಿತ್ರಾ, ಜಗದೀಶ್ ವ್ಯವಹಾರ ಪತ್ತೆಯಾಗಿದೆ. ಇನ್ನು ಸೌಂದರ್ಯ ಜಗದೀಶ್ ಅವರು ನಟ ದರ್ಶನ್ ಸಿನಿಮಾ ನಾಯಕನೆಂಬ​ ಕಾರಣಕ್ಕೆ ಆತನ ಗೆಳತಿ ಪವಿತ್ರಾಗೌಡಗೆ 2 ಕೋಟಿ ರೂ. ಕೊಟ್ಟಿದ್ದಾರಾ? ಅಥವಾ ಬೇರೆ ಯಾವುದಾದರೂ ವ್ಯವಹಾರ ಇತ್ತಾ ಎಂಬುದರ ಬಗ್ಗೆ ತನಿಖೆ ಆಗಬೇಕಿದೆ. ಪವಿತ್ರಾಗೌಡಗೆ ಸೌಂದರ್ಯ ಜಗದೀಶ್​ ಹಣ ಕೊಟ್ಟ ದಾಖಲೆ ಮಾತ್ರ ಲಭ್ಯವಾಗಿದೆ. ಆದರೆ, ಪವಿತ್ರಾಗೌಡ ಈವರೆಗೂ ಸೌಂದರ್ಯ ಜಗದೀಶ್‌ ಅವರಿಗೆ ಹಣ ವಾಪಸ್​ ನೀಡಿಲ್ಲ.

ದರ್ಶನ್ ಒತ್ತಡಕ್ಕೆ ಮಣಿದು ಪವಿತ್ರಾಗೌಡಗೆ ಹಣ ನೀಡಿದ್ರಾ ಸೌಂದರ್ಯ ಜಗದೀಶ್​? ದರ್ಶನ್ ಒತ್ತಡದಿಂದಲೇ ಸೌಂದರ್ಯ ಜಗದೀಶ್ ಹಣ ಕೊಟ್ಟಿದ್ದರೆಂಬ ಅನುಮಾನ ವ್ಯಕ್ತವಾಗಿದೆ. ದರ್ಶನ್​ ಒತ್ತಡದ ಅನುಮಾನದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

click me!