ನಮ್ಮನೆನಲ್ಲೆಲ್ಲ ಪೂಜೆ ಮಾಡ್ತಾರೆ. ದೇವಸ್ಥಾನಕ್ಕೆ ಕರ್ಕೊಂಡು ಹೋಗ್ತಾರೆ. ಫ್ರೆಂಡ್ಸ್ ಜೊತೆ ದೇವಸ್ಥಾನಕ್ಕೆ ಹೋಗ್ತೀನಿ. ನಿರ್ಮಾಪಕರು ಸ್ಕ್ರಿಪ್ಟ್ ಪೂಜೆಗೆ ಕರ್ಕೊಂಡು ಹೋಗ್ತಾರೆ. ನಾನು ಕೂಡ ಚಾಮುಂಡಿ ಬೆಟ್ಟಕ್ಕೆ ಹೋಗ್ತೀನಿ.
'ನಾನು ಚಿಕ್ಕ ಹುಡುಗ ಆಗಿದ್ದಾಗ, ಅಂದ್ರೆ ಸ್ಕೂಲ್‌ಗೆ ಹೋಗೋದಕ್ಕೆ ಮುಂಚೆ, ದೇವರ ಕೋಣೆ ಕ್ಲೀನ್ ಮಾಡ್ತಾ ಇದ್ದಿದ್ದೇ ನಾನು. ನಾನು ನನ್ ದೊಡ್ಡಪ್ಪನ ಮನೆಯಲ್ಲಿ ಓದ್ತಾ ಇದ್ದೆ. ಹೂವಾ ಎತ್ತಿಡ್ತಿದ್ದಿದ್ದು ನಾನು, ತುಂಬಾ ಭಕ್ತಿ. ಏನೋ ಒಂದು ಶಕ್ತಿ ನಮ್ಮನ್ನ ಕಾಪಾಡುತ್ತೆ ಅನ್ನೋ ನಂಬಿಕೆ. ಆ ತರ, ಯಾವುದೋ ಒಂದು ಶಕ್ತಿ ನಮ್ಮನ್ನ ಕಾಪಾಡುತ್ತೆ ಅನ್ನೋದು ನನ್ ನಂಬಿಕೆ ಕೂಡ. ಆದ್ರೆ, ಬೆಳಿಗ್ಗೆ ಎದ್ದು ನನ್ ಪಾಡಿಗೆ ನಾನು ಕೆಲಸಕ್ಕೆ ಹೋಗ್ತೀನಿ. ಹಿಂಗೇ ಮಾಡ್ಬೇಕು, ಪೂಜೆ ಹಂಗೇ ಮಾಡ್ಬೇಕು ಅಂತೇನಿಲ್ಲ.
ನಮ್ಮನೆನಲ್ಲೆಲ್ಲ ಪೂಜೆ ಮಾಡ್ತಾರೆ. ದೇವಸ್ಥಾನಕ್ಕೆ ಕರ್ಕೊಂಡು ಹೋಗ್ತಾರೆ. ಫ್ರೆಂಡ್ಸ್ ಜೊತೆ ದೇವಸ್ಥಾನಕ್ಕೆ ಹೋಗ್ತೀನಿ. ನಿರ್ಮಾಪಕರು ಸ್ಕ್ರಿಪ್ಟ್ ಪೂಜೆಗೆ ಕರ್ಕೊಂಡು ಹೋಗ್ತಾರೆ. ನಾನು ಕೂಡ ಚಾಮುಂಡಿ ಬೆಟ್ಟಕ್ಕೆ ಹೋಗ್ತೀನಿ. ಮೈಸೂರಿಗೆ ಹೋದಾಗ, ಇದ್ದಾಗೆಲ್ಲಾ ಚಾಮುಂಡಿ ಬೆಟ್ಟಕ್ಕೆ ಹೋಗ್ತೀನಿ, ಮಲೈ ಮಹದೇಶ್ವರ ಬೆಟ್ಟಕ್ಕೆ ಹೋಗ್ತೀನಿ. ನಮ್ಮ ಎಲ್ಲಾ ಸಿನಿಮಾ ಸ್ಕ್ರಿಪ್ಟ್ ಪೂಜೆ ಬಂಡಿಕಾಳಮ್ಮ ದೇವಸ್ಥಾನದಲ್ಲಿ ಮಾಡ್ತೀವಿ. ಎಲ್ಲಾನೂ ಒಂದು ಶಕ್ತಿ ನಡೆಸುತ್ತೆ ಅಂತ ನಾನು ನಂಬ್ತೀನಿ. ಆದ್ರೆ, ಜಾಸ್ತಿ ನಾನು ನನ್ ಕೆಲಸದ ಮೇಲೆ ಫೋಕಸ್ ಮಾಡ್ತೀನಿ ಅಷ್ಟೇ.' ಎಂದಿದ್ದಾರೆ ರ್‍ಯಾಪಿಡ್ ರಶ್ಮಿ ಸಂದರ್ಶನ ನಟ ಡಾಲಿ ಖ್ಯಾತಿಯ ನಟ ಧನಂಜಯ್.
undefined
ದರ್ಶನ್ ನಟನೆಯ 'ಇಂದ್ರ' ಚಿತ್ರಕ್ಕೆ ರಾತ್ರೋ ರಾತ್ರಿ ಹೀರೋಯಿನ್ ಬದಲಾಗಿದ್ದು ಯಾಕೆ?
ಸೋಷಿಯಲ್ ಮೀಡಿಯಾದಲ್ಲಿ ಮೂಡಿಬರುವ ಟೀಕೆ, ಕಾಮೆಂಟ್‌ಗಳ ಬಗ್ಗೆ ಮಾತನಾಡಿದ್ದಾರೆ. ಹಾಗಿದ್ರೆ ನಟ ಧನಂಜಯ್ ಆ ಬಗ್ಗೆ ಅದೇನು ಹೇಳಿದ್ದಾರೆ ಗೊತ್ತಾ? 'ಸುಮ್‌ಸುಮ್ನೆ ಕಾಂಟ್ರೋವರ್ಸಿಗಳಾದಾಗ ನಿಜ ಹೇಳ್ಬೇಕು ಅಂದ್ರೆ ಹಿಂಸೆನೇ ಆಗಿದೆ. ಅದಾದ್ಮೇಲೆ ಒಂದು ಧೈರ್ಯನೂ ಬಂತು. ಓಕೆ, ಹೇಗಿದ್ರೂ ಕೂಡ ಇಲ್ಲಿ ಏನ್ ಬೇಕಾದ್ರೂ ಆಗ್ಬಹುದು ಅಂತ..
ಸಡನ್ನಾಗಿ ಹಾಗೆ ಬರೋಕಾಗಲ್ಲ, ಅಲ್ಲಿ ಬಂದು ನಾನು ಏನ್ ಮಾಡೋದು ಅಂದೆ; ಅಶ್ವಿನಿ ಪುನೀತ್ ರಾಜ್‌ಕುಮಾರ್
ನೀವು ಎಷ್ಟೇ ಸರಿ ಇದ್ರೂ ಆಗಬಹುದು, ಹೆಂಗಿದ್ದರೂ ಆಗ್ಬಹುದು. ನೀವು ಎಷ್ಟೇ ಪ್ರೀತಿಸ್ತಾ ಇದ್ರೂನೂ ಅದೇನ್ ಬೇಕಾದ್ರೂ ಆಗ್ಬಹುದು. ನೀವು ಎಷ್ಟೇ ಆನೆಷ್ಟ್ ಆಗಿದ್ರೂ ಏನ್ ಬೇಕಾದ್ರೂ ಆಗಬಹುದು. ಆಮೇಲೆ ನಾನು ಒಂದ್ ಬಾರಿ ಯೋಚ್ನೆ ಮಾಡ್ತಾ ಬಂದೆ. ಇವತ್ತು, ಸೋಷಿಯಲ್ ಮೀಡಿಯಾ, ಅದೂ ಇದೂ ಬಂದ್ಮೇಲೆ ಯಾರನ್ನ ಬಿಟ್ಟಿದಾರೆ ಹೇಳಿ? ಹೇಳಿ ನೋಡೋಣ, ಯಾರನ್ನ ಬಿಟ್ಟಿದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಪ್ರತಿ ದಿನ ನೋಡಿದ್ರೆ, ಯಾರನ್ನ ಬಿಟ್ಟಿದಾರೆ?
ಅದೇ ಫೇಕ್ ಐಡಿಯಿಂದ ನನಗೂ ಅಶ್ಲೀಲ ಮೆಸೇಜ್ ಬಂದಿತ್ತು; ಕಿರುತೆರೆ ನಟಿಯೊಬ್ಬರ ಆರೋಪ!
ಯಾವ್ ಸ್ಟಾರ್ ನಟರನ್ನ ಬಿಟ್ಟಿದಾರೆ? ಹಳೇ ನಟರನ್ನ ಬಿಟ್ಟಿದಾರಾ? ಯಾರು ಯಾರನ್ನೂ ಬಿಡಲ್ಲ.. ಅವ್ರ ಸಾಡಿಸಂನ ಆಚೆ ಹಾಕೋಕೆ ಒಂದು ಜಾಗ ತರ ಸಿಕ್ಕಿಬಿಟ್ಟಿದೆ ಅದು.. ನೀವು ಎಲ್ಲಿ ಫೇಕ್ ಅಕೌಂಟ್ ಮಾಡ್ಕೊಂಡು.. ನೀವು ಒರಿಜಿನಲ್ ಅಂತೇನೂ ಆಗಿರಲ್ಲ. ಅವ್ರು ಯಾರು ಅಂತಾನೂ ನಿಜವಾಗಿ ಗೊತ್ತಿರಲ್ಲ. ಅದಕ್ಕೆ, ಒಂದೇ ಒಂದು ಸೊಲ್ಯೂಷನ್ ಅಂದ್ರೆ, ಅದಕ್ಕೆ ತಲೆ ಕೆಡಿಸ್ಕೊಳ್ಳೋದು ಬಿಡ್ಬೇಕು.. ಅದನ್ನ ನೋಡೋದೇ ಬಿಡ್ಬೇಕು' ಎಂದಿದ್ದಾರೆ ನಟ ಡಾಲಿ ಖ್ಯಾತಿಯ ಧನಂಜಯ್.
ಅಪ್ಪು ಸಾವಿನ ಹಿಂದಿನ ರಾತ್ರಿ, ರಮೇಶ್ ಅರವಿಂದ್ ಜೊತೆಗಿನ ಚರ್ಚೆಯಲ್ಲಿ ಬುದ್ಧ ಬಂದಿದ್ದು ಯಾಕೆ?
ಅಂದಹಾಗೆ, ನಟ ಧನಂಜಯ್ ಅವರು ಇಂದು ಮಾಸ್ಕ್ ಧರಿಸಿ ಮೆಟ್ರೋದಲ್ಲಿ ಸಾಮಾನ್ಯ ಜನರಂತೆ ಓಡಾಡಿದ್ದಾರೆ ಎನ್ನಲಾಗಿದೆ. ಐಷಾರಾಮಿ ಕಾರು ಬಿಟ್ಟು, ಮಾಸ್ಕ್ ಹಾಗು ಗ್ಲಾಸ್ ಧರಿಸಿದ್ದ ನಟ ಧನಂಜಯ್ ಅವರನ್ನು ಮೆಟ್ರೋದಲ್ಲಿ ಯಾರೂ ಗುರುತು ಹಿಡಿಯಲಿಲ್ಲ. ಮುಖ ಸರಿಯಾಗಿ ಕಂಡರೆ ತಾನೇ ಗುರುತು ಸಿಗುವುದು? ಒಟ್ಟಿನಲ್ಲಿ ನಟ ಧನಂಜಯ್, ತಮ್ಮ ಹೀರೋಯಿಸಂ, ಸ್ಟಾರ್‌ಗಿರಿ ಬಿಟ್ಟು ಜನಸಾಮಾನ್ಯರಂತೆ ಮೆಟ್ರೋದಲ್ಲಿ ಓಡಾಡಿ ಆ ಅನುಭವವನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.
ನಂಗೆ 86 ವರ್ಷಕ್ಕೆ ಕಂಟಕವಿದೆ, ಒಮ್ಮೆ ಹೋದರೆ ದುಃಖಿಸಬೇಡ, ಮತ್ತೆ ಬರುವೆ ಅಂದಿದ್ರು; ನಟ ಜಗ್ಗೇಶ್