ಇದೇನು ಈ ತರ ಪೋಸ್ಟ್, ಖುಷಿಯಾಗಿ ಇರೋದಕ್ಕಿಂತ ಹೆಚ್ಚು ಸುಖ ಇನ್ನೆಲ್ಲಿದೆ ಅಂದಿದ್ಯಾಕೆ ಕಿಚ್ಚ ಸುದೀಪ್..!

By Shriram Bhat  |  First Published Jul 6, 2024, 1:14 PM IST

ನಟ ಸುದೀಪ್ ಅಂದರೆ ಹಾಗೇ.. ಅವರಿಗೆ ಅನ್ನಿಸಿದ್ದನ್ನು ನೇರವಾಗಿ ಹೇಳುತ್ತಾರೆ. ಅಥವಾ, ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಮೂಲಕ ಪೋಸ್ಟ್ ಮಾಡಿ ಸುಮ್ಮನಾಗುತ್ತಾರೆ. ಕೆಲವೊಮ್ಮೆ ಅದಕ್ಕೆ ಗೂಡಾರ್ಥಗಳು ಇರುತ್ತವೆ..


ಸ್ಯಾಂಡಲ್‌ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಬಹಳಷ್ಟು ಖುಷಿಯಾಗಿದ್ದಾರೆ. ಹಾಗಂತ ನಾವೇನೂ ಹೇಳುತ್ತಿಲ್ಲ, ಬದಲಿಗೆ ಅವರೇ ಹೇಳುತ್ತಿದ್ದಾರೆ. ಅವ್ರೇನು ಬಂದು ಮೈಕ್ ಮುಂದೆ ಹೇಳಿದ್ದಲ್ಲ, ಬದಲಿಗೆ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ. ಹಾಗಿದ್ದರೆ ಅದೇನು ಅಂತಹ ಪೋಸ್ಟ್ ಅಂತೀರಾ? ಇಲ್ಲಿದೆ ನೋಡಿ.. Nothing is more satisfying than feeling Good..'ಎಂದು ನಟ ಸುದೀಪ್ ಒಂದು ಫೋಟೋ ಹಾಕಿ ಅದಕ್ಕೆ ಕ್ಯಾಪ್ಶನ್ ಕೊಟ್ಟಿದ್ದಾರೆ. 

ಹೌದು, ನಟ ಸುದೀಪ್ ಅಂದರೆ ಹಾಗೇ.. ಅವರಿಗೆ ಅನ್ನಿಸಿದ್ದನ್ನು ನೇರವಾಗಿ ಹೇಳುತ್ತಾರೆ. ಅಥವಾ, ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಮೂಲಕ ಪೋಸ್ಟ್ ಮಾಡಿ ಸುಮ್ಮನಾಗುತ್ತಾರೆ. ಕೆಲವೊಮ್ಮೆ ಅದಕ್ಕೆ ಗೂಡಾರ್ಥಗಳು ಇರುತ್ತವೆ ಎನಿಸಿದರೂ ಹೆಚ್ಚಿನ ವೇಳೆ ಅವರ ಪೋಸ್ಟ್ ನೇರವಾಗಿ ಅರ್ಥ ಕೊಡುತ್ತವೆ. ಅದಕ್ಕೆ ಯಾವುದೇ ಸುತ್ತುಬಳಸಿ ಅರ್ಥ ಹುಡುಕಬೇಕಿಲ್ಲ. ಖುಷಿ ಕ್ಷಣಕ್ಕಿಂತ ತೃಪ್ತಿ ಬೇರೊಂದಿಲ್ಲ ಎನ್ನುವ ನಟ ಸುದೀಪ್ ಪೋಸ್ಟ್‌ಗೆ ಅದೇ ಅರ್ತವಷ್ಟೇ ಇದೆ. 

Tap to resize

Latest Videos

ತಂದೆ-ತಾಯಿ ಬಗ್ಗೆ ಮಾತಾಡ್ತಾ ಇದ್ರೂ ನಮ್ ಇಮೇಜೂ ಅಂತ ಕೂತ್ಕೊಳ್ಳೋಕೆ ಆಗಲ್ಲ: ನಟ ಯಶ್

ಕಾರಣ, ಕನ್ನಡ ಚಿತ್ರಂಗದಲ್ಲೀಗ ನಡೆಯಬಾರದ ಘಟನೆಯೊಂದು ನಡೆದುಹೋಗಿದೆ. ಅದಕ್ಕೆ ಒಮ್ಮೆ ಸುದೀಪ್ ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿದ್ದೂ ಆಗಿದೆ. ಅದನ್ನು ಬಿಟ್ಟು ನಟ ಸುದೀಪ್ ಅದೇ ವಿಷಯಕ್ಕೆ ಮತ್ತೆಮತ್ತೆ ಮಾತನಾಡುವವರಲ್ಲ. ಅದಿರಲಿ, ಅಂತಹ ವಿಷಯಗಳನ್ನು ಅವರು ಕೆಲಸವಿಲ್ಲದವರಂತೆ ಮತ್ತೆ ಮತ್ತೆ ಯೋಚಿಸುವುದೂ ಇಲ್ಲ. ಸುದೀಪ್ ಎಂದರೆ ಜಂಟಲ್‌ಮ್ಯಾನ್ ಎಂಬ ಇಮೇಜ್‌ ಅನ್ನು ಅವರು ಕಷ್ಟಪಟ್ಟು ಸಂಪಾದಿಸಿಕೊಂಡಿದ್ದಾತೆ. 

ಅದೆಲ್ಲಾ ಓಕೆ, ಸುದೀಪ್ ಈಗ ಸದ್ಯಕ್ಕೆ ಏನುಮಾಡುತ್ತಿದ್ದಾರೆ? ಈ ಪ್ರಶ್ನೆಗೆ ಉತ್ತರವಿದೆ. ಅದೇನೆಂದರೆ ಅವರು ತಮ್ಮ ಮುಂಬರುವ ಮ್ಯಾಕ್ಸ್‌ (Max)ಚಿತ್ರದ ಪ್ರಮೋಶನ್ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಮುಂದಿನ ತಿಂಗಳು, ಅಂದರೆ ಆಗಸ್ಟ್ 15ಕ್ಕೆ ಸುದೀಪ್ ನಟನೆಯ ಮ್ಯಾಕ್ಸ್ ಚಿತ್ರವು ತೆರೆಗೆ ಅಪ್ಪಳಿಸಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಅದು ಡೌಟ್. ಏಕೆಂದರೆ, ಇನ್ನೂ ಬಿಡುಗಡೆಗೆ ಸಾಕಷ್ಟುವೇಳೆ ಬೇಕಿದೆ ಎನ್ನಲಾಗುತ್ತಿವೆ ಮೂಲಗಳು. ಏಕೆಂದರೆ, ಹೇಳಿಕೇಳಿ ಕಿಚ್ಚ ನಟನೆಯ ಈ ಮ್ಯಾಕ್ಸ್ ಚಿತ್ರವು ಹೈ ಬಜೆಟ್ ಸಿನಿಮಾ. 

ನಿಮ್ ಮಾತು ಕೇಳಿ ಕೇಳಿ ಸಾಕಾಗೋಗಿದೆ, ನಮ್ Bossಗೆ ಈ ತರ ಚಿತ್ರಹಿಂಸೆ ಕೊಡಬೇಡಿ, ಜೈ ಡಿ ಬಾಸ್..!

ಒಟ್ಟಿನಲ್ಲಿ, ನಟ ಸುದೀಪ್ ತಮ್ಮ ಎಂದಿನ ಕೆಲಸಕಾರ್ಯಗಳಲ್ಲಿ ಬ್ಯುಸಿ ಆಗಿದ್ದಾರೆ. ಅದಕ್ಕಿಂತಲೂ ಹೆಚ್ಚು ಎನ್ನುವಂತೆ ಖುಷಿಯಾಗಿದ್ದಾರೆ. ಅದೆಷ್ಟು ಖುಷಿಯಾಗಿದ್ದಾರೆ ಎಂದರೆ, ತಮ್ಮ ಖುಷಿಯನ್ನು ಸೋಷಿಯಲ್ ಮೀಡಿಯಾ ಮೂಲಕ ಇಡೀ ಬ್ರಹ್ಮಾಂಡಕ್ಕೆ ಹಂಚುವಷ್ಟು,,!

D BOSS ಫ್ಯಾನ್ಸ್ ಏನಂತಿದಾರೆ ಸುಮಲತಾ ಅಂಬರೀಷ್ ಬಗ್ಗೆ, ಜೈಲಲ್ಲಿ ನಟ ದರ್ಶನ್ ಭೇಟಿಯಾದ್ರಲ್ಲಾ..!

 

 

click me!