ಅಪ್ಪ-ಅಮ್ಮಂಗೆ ಹುಟ್ಟಿದವ್ರೇ ನಾವೂನೂ, ಅವ್ರ ಬಗ್ಗೆ ಮಾತಾಡ್ತಾ ಇದ್ರೂ ನಮ್ ಇಮೇಜು ಅಂತ ಸುಮ್ನಿರ್ಬೇಕಾ..?

By Shriram Bhat  |  First Published Jul 6, 2024, 11:59 AM IST

ಅದೀಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಮೇಲೆ ಬಂದು ಸಖತ್ ವೈರಲ್ ಆಗುತ್ತಿದೆ. ಕಾರಣ, ತಮಗೆ ಸಮಸ್ಯೆ ಬಂದಾಗ ನಟ ಯಶ್ ಏನು ಮಾಡಿದ್ದರು? ಅದನ್ನು ಹೇಗೆ ಬಗೆಹರಿಸಿಕೊಂಡಿದ್ದರು? ಪರ್ಸನಲ್ ಆಗಿ ಅದನ್ನು ಹ್ಯಾಂಡಲ್‌ ಮಾಡಲು ಯಶ್ ಪ್ರಯತ್ನಿಸಿದ್ದರೇ? ಹೀಗೆಲ್ಲಾ ಚರ್ಚೆಗಳು...


ಕನ್ನಡದ ಹೆಮ್ಮೆಯ ನಟ ರಾಕಿಂಗ್ ಸ್ಟಾರ್ ಯಶ್ (Rocking Star Yash) ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತು. ಯಶ್ ನಟನೆ ಹಾಗು ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ 'ಕೆಜಿಎಫ್' ಹಾಗು 'ಕೆಜಿಎಫ್ 2' ಸಿನಿಮಾಗಳ ಖ್ಯಾತಿ ಹಾಗು ಗಳಿಕೆ ಬಗ್ಗೆ ಜಗತ್ತೇ ತಿಳಿದಿದೆ. ಕೆಜಿಎಫ್‌ ಚಿತ್ರಕ್ಕಿಂತಲೂ ಕೆಜಿಎಫ್ 2 ಚಿತ್ರದ ಕಲೆಕ್ಷನ್ ಬಹಳಷ್ಟು ಜಾಸ್ತಿ ಆಗಿದ್ದು, ಈ ಸಿನಿಮಾ ಸ್ಯಾಂಡಲ್‌ವುಡ್ ಮಟ್ಟಿಗೆ ಹೊಸ ದಾಖಲೆ ಎನಿಸಿದೆ. 

ದಂಗಲ್ ಹಾಗೂ ಬಾಹುಬಲಿ-2 ಚಿತ್ರಗಳ ಬಳಿಕ ಯಶ್ ನಟನೆಯ 'ಕೆಜಿಎಫ್2' KGF 2 ಚಿತ್ರವು ಭಾರತದಲ್ಲಿ ಅತೀ ಹೆಚ್ಚಿನ ಗಳಿಕೆ ಕಂಡಿರುವ ಮೂರನೆಯ ಚಿತ್ರವಾಗಿ ಹೊರಹೊಮ್ಮಿದೆ. ಈ ಮೂಲಕ ಕೆಜಿಏಫ್-2 ಚಿತ್ರವು ಜೂನಿಯರ್ ಎನ್‌ಟಿಆರ್ ಹಾಗು ರಾಮ್ ಚರಣ್ ನಟನೆಯ 'ಆರ್‌ಆರ್‌ಅರ್‌' ಚಿತ್ರವನ್ನು ಕೆಳಕ್ಕೆ ತಳ್ಳಿದೆ. ಸದ್ಯ ರಾಕಿಂಗ್ ಸ್ಟಾರ್ ಯಶ್ ಅವರು ಸದ್ಯ ಬಾಲಿವುಡ್‌ನ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ, ಗೀತೂ ಮೋಹನ್‌ದಾಸ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ 'ಟಾಕ್ಸಿಕ್‌'ನಲ್ಲಿಯೂ ಯಶ್ ನಟಿಸುತ್ತಿದ್ದಾರೆ. 

Tap to resize

Latest Videos

undefined

ನಿಮ್ ಮಾತು ಕೇಳಿ ಕೇಳಿ ಸಾಕಾಗೋಗಿದೆ, ನಮ್ Bossಗೆ ಈ ತರ ಚಿತ್ರಹಿಂಸೆ ಕೊಡಬೇಡಿ, ಜೈ ಡಿ ಬಾಸ್..!

ಆದರೆ, ಸುದ್ದಿ ಅದಲ್ಲ, ಯಶ್ ಮಾತನಾಡಿರುವ ಹಳೆಯ ವೀಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗುತ್ತಿದೆ. ಹಾಗಿದ್ದರೆ ಅದೇನು ಗೊತ್ತಾ? ಹಾಸನದಲ್ಲಿ ನಟ ಯಶ್ ಫ್ಯಾಮಿಲಿ ತೆಗೆದುಕೊಂಡಿರುವ ಜಮೀನಿಗೆ ಸಂಬಂಧಿಸಿ ವಿವಾದವೊಂದು ಏರ್ಪಟ್ಟಿತ್ತು. ಆಗ ಯಶ್ ಪೊಲೀಸ್ ಸ್ಟೇಷನ್‌ಗೆ ಹೋಗಿ ಕಂಪ್ಲೇಂಟ್ ಕೊಟ್ಟು ಅಲ್ಲಿಯೇ ಜಗಳವಾಡಿದ್ದ ಜನರ ಜೊತೆ ಮಾಧ್ಯಮದ ಮೈಕ್-ಕ್ಯಾಮೆರಾ ಮುಂದೆಯೇ ಮಾತನಾಡಿದ್ದರು.

ಅದೀಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಮೇಲೆ ಬಂದು ಸಖತ್ ವೈರಲ್ ಆಗುತ್ತಿದೆ. ಕಾರಣ, ತಮಗೆ ಸಮಸ್ಯೆ ಬಂದಾಗ ನಟ ಯಶ್ ಕಾನೂನಿನ ಪ್ರಕಾರವೇ ಅದನ್ನು ಬಗೆಹರಿಸಿಕೊಳ್ಳಲು ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದರು. ನಟ ಯಶ್ ವೈಯಕ್ತಿಕವಾಗಿ ಅದನ್ನು ಬಗೆಹರಿಸಿಕೊಳ್ಳಲು ಹೋಗಿರಲಿಲ್ಲ. ಅಲ್ಲಿ, ತಮ್ಮ ಜಮೀನು ವಿವಾದಕ್ಕೆ ಸಂಬಂಧಿಸಿ ಮಾಧ್ಯಮಗಳ ಎದುರು ಪೊಲೀಸ್ ಸ್ಟೇಷನ್ ಮುಂದೆಯೇ ತಮ್ಮ ಜಮೀನಿಗೆ ಸಂಬಂಧಿಸಿದ ವಿವಾದ ಏನಾಗಿತ್ತು, ಮುಂದೆ ಮಾಡಲಿರುವುದು ಏನು ಎಂಬುದನ್ನು ಹೇಳಿದ್ದರು. 

ಜೈಲಲ್ಲಿ ನಟ ದರ್ಶನ್ ಭೇಟಿಯಾದ ಸುಮಲತಾ ಅಂಬರೀಷ್ ಬಗ್ಗೆ D BOSS ಫ್ಯಾನ್ಸ್ ಏನಂತಿದಾರೆ..?

ಆಗ ಮಾತನಾಡುತ್ತ ನಟ ಯಶ್ ಅವರು 'ಅವ್ರು ಹಳ್ಳಿ ಜನ, ನಮ್ ತಂದೆ ತಾಯಿನೂ ಹಳ್ಳಿ ಜನನೇ.. ಆ ಮಾತುಕತೆಗಳು ಆಗುತ್ತೆ.. ಆದ್ರೆ ಯಾವ್ ರೀತಿ ಮಾತಾಡ್ಬೇಕೋ ಆ ರೀತಿ ಮಾತಾಡ್ಬೇಕು.. ಆದ್ರೆ, ಮೀಡಿಯಾ ಇದೆ ಅಂತ, ಎಲ್ಲಾನೂ ಇದೇ ಆಗ್ಬಿಟ್ಟಿದೆ ನಮ್ಗೆ.. ಇಲ್ಲಿ ಇವತ್ತು ಯಾಕೆ ಬಂದಿದೀವಿ ಗೊತ್ತಾ? ಇರ್ಲಿ ಬಿಡ್ರಿ, ನಾವೂ ಅಪ್ಪ-ಅಮ್ಮನಿಗೆ ಹುಟ್ಟಿದ ಮಕ್ಕಳೇ.. ತಂದೆ-ತಾಯಿಗೆ ಮಾತಾಡ್ತಾ ಇದ್ರೂ ನಮ್ ಇಮೇಜು ಅದೂ ಇದೂ ಅಂತ ನೋಡ್ತಾ ಕೂತ್ಕೊಳ್ಳೋಕೆ ಆಗಲ್ಲಾರೀ..'ಎಂದಿದ್ದರು. ಅದೀಗ ಸಾಂದರ್ಭಿಕವಾಗಿ ವೈರಲ್ ಆಗುತ್ತಿದೆ ಎನ್ನಬಹುದೇನೋ!

ಜೈಲಿಂದ ಹೊರಗ್ ಬಂದ್ಮೇಲೆ ಕನ್ನಡ ಚಿತ್ರರಂಗ ಬಿಟ್ಬಿಡು: ದರ್ಶನ್‌ಗೆ ಹಿಂಗದಿದ್ದು ಯಾರು?

click me!