ಹೌದು, ನಾವ್ಯಾರೂ ಹುಟ್ಟುವಾಗಲೇ ಅಪ್ಪನಾಗಿ ಇರೋದಿಲ್ಲ, ಆಮೇಲೆ ಅಪ್ಪ ಆಗುತ್ತೇವೆ. ಹುಟ್ಟುವಾಗ ಎಲ್ಲರೂ ಮಕ್ಕಳೇ ಆಗಿ ಹುಟ್ಟುತ್ತೇವೆ. ಮಕ್ಕಳಿದ್ದಾಗ ಮಕ್ಕಳ ಬುದ್ಧಿ ..
ಸ್ಯಾಂಡಲ್‌ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಅವರಿಗೆ ಪ್ರೆಸ್‌ಮೀಟ್‌ನಲ್ಲಿ ಪ್ರಶ್ನೆಯೊಂದು ಎದುರಾಗಿದೆ. 'ನೀವು ಇತ್ತೀಚಿಗೆ ಡಾ ರಾಜ್‌ಕುಮಾರ್ (Dr Rajkumar) ಫ್ಯಾಮಿಲಿಯೊಂದಿಗೆ ಒಳ್ಳೆಯ ಸಂಬಂಧ ಮೆಂಟೇನ್ ಮಾಡುತ್ತಿದ್ದೀರಿ, ಹೇಗೆ?' ಎಂದು ಕೇಳಲಾಗಿದೆ. ಅದಕ್ಕೆ ಕಿಚ್ಚ ಸುದೀಪ್ ಅವರು ಸ್ವಲ್ಪವೂ ಯೋಚಿಸದೇ ತಮಗೆ ಅನ್ನಿಸಿದ್ದನ್ನು ನೇರವಾಗಿ, ಮನಮುಟ್ಟುವ ಹಾಗೆ ಹೇಳಿದ್ದಾರೆ. ಹಾಗಿದ್ರೆ, ಸುದೀಪ್ ಅದೇನು ಹೇಳಿದ್ದಾರೆ? ಇಲ್ಲಿದೆ ನೋಡಿ ಉತ್ತರ..
'ಡಾ ರಾಜ್‌ಕುಮಾರ್ ಫ್ಯಾಮಿಲಿ ಜೊತೆ ಸುದೀಪ್ ವರ್ತನೆಯಲ್ಲಿ ಬಹಳಷ್ಟು ಬದಲಾವಣೆ ಆಗಿದೆ' ಎಂಬ ಮಾತಿಗೆ ಸುದೀಪ್ 'ಹೌದು, ನಾವ್ಯಾರೂ ಹುಟ್ಟುವಾಗಲೇ ಅಪ್ಪನಾಗಿ ಇರೋದಿಲ್ಲ, ಆಮೇಲೆ ಅಪ್ಪ ಆಗುತ್ತೇವೆ. ಹುಟ್ಟುವಾಗ ಎಲ್ಲರೂ ಮಕ್ಕಳೇ ಆಗಿ ಹುಟ್ಟುತ್ತೇವೆ. ಮಕ್ಕಳಿದ್ದಾಗ ಮಕ್ಕಳ ಬುದ್ಧಿ ಹೇಗಿರುತ್ತದೆಯೋ ಹಾಗೆ ಇರುತ್ತದೆ. ಎಲ್ಲರಂತೆ ನಾವೂ ಕೂಡ ಇದ್ದೇವೆ. ಆದರೆ, ಬೆಳೆಯುತ್ತ ಹೋದಂತೆ ನಮಗೆಲ್ಲಗೂ ಜೀವನದ ಅನುಭವ ಆಗುತ್ತದೆ. ಬಹಳಷ್ಟು ಪಾಠ ಕಲಿಯುತ್ತೇವೆ.
undefined
ಕಿಚ್ಚ ಸುದೀಪ್ ಬಿಗ್ ಬಾಸ್ ಶೋಗೆ 'ಟಾಟಾ ಬೈಬೈ' ಹೇಳಲು ಕಾರಣ ಇದು, ಮತ್ತೇನೂ ಇಲ್ಲ!
ನಾವು ಮಕ್ಕಳಾಗಿರುವಾಗ ನಮಗೆ ಅಪ್ಪನ ಮನಸ್ಥಿತಿ ಹಾಗೂ ಪರಿಸ್ಥಿತಿಗಳು ಗೊತ್ತಾಗುವುದಿಲ್ಲ. ನಾವು ಅಪ್ಪನಾದ ಮೇಲೆ ನಮಗದು ತಿಳಿಯುತ್ತದೆ. ಅದೇ ರೀತಿ, ಯಾರೇ ಆಗಿರಲಿ ವಯಸ್ಸು ಹೆಚ್ಚಾಗುತ್ತ ಹೋದಂತೆ ನಮ್ಮ ಸಂಬಂಧಗಳ ವ್ಯಾಪ್ತಿ ಹೆಚ್ಚಾಗುತ್ತದೆ. ನಮ್ಮನಮ್ಮ ಕೆಲಸಗಳಲ್ಲಿ, ವೃತ್ತಿಯಲ್ಲಿ ಸಹಜವಾದ ಪೈಪೋಟಿಗಳೂ ಇದ್ದೇ ಇರುತ್ತವೆ. ಆದರೆ, ವಯಸ್ಸು ಮತ್ತು ವೃತ್ತಿ ಒಂದು ಹಂತಕ್ಕೆ ಬಂದು ನಿಂತಾಗ ಪ್ರತಿಯೊಬ್ಬರಿಗೂ ತಾವ್ಯಾರು, ತಮ್ಮ ಸ್ಥಾನವೇನು, ಇನ್ನೊಬ್ಬರು ಯಾರು, ಅವರ ಸ್ಥಾನವೇನು ಎಂಬುದು ಅರ್ಥವಾಗುತ್ತದೆ.
ಈ ಹಂತಕ್ಕೆ ಬಂದಾಗ ಸಹಜವಾಗಿಯೇ ನಾವು ಗೌರವವನ್ನು ಕೊಡುತ್ತೇವೆ, ಗೌರವವನ್ನು ತೆಗೆದುಕೊಳ್ಳುತ್ತೇವೆ ಕೂಡ. ಲೈಫು ಆ ಹಂತಕ್ಕೆ ಬಂದು ತಲುಪುವವರೆಗೆ ಆಡುವುದೆಲ್ಲವೂ ಅದು ಮಕ್ಕಳ ಆಟ. ಅದು ನಾನೇ ಆಗಿರಲಿ ಅಥವಾ ಇನ್ಯಾರೇ ಆಗಿರಲಿ, ಒಂದು ಹಂತಕ್ಕೆ ಜೀವನ ಬಂದು ನಿಂತಾಗಲೇ ಪರಸ್ಪರ ಗೌರವ ಮೂಡಲು ಸಾಧ್ಯವಾಗುತ್ತದೆ. ಅದೇ ನನ್ನ ವಿಷಯದಲ್ಲೂ ಆಗಿದೆ, ಆಗಲೇಬೇಕು' ಎಂದು ಅತ್ಯಂತ ಮಾರ್ಮಿಕವಾಗಿ ಉತ್ತರ ನೀಡಿದ್ದಾರೆ ನಟ ಕಿಚ್ಚ ಸುದೀಪ್.
ದೊಡ್ಮನೆ ಜನರನ್ನು ಸುದೀಪ್ ಹ್ಯಾಂಡಲ್ ಮಾಡೋ ಗುಟ್ಟು ಕೊನೆಗೂ ರಟ್ಟಾಯ್ತು!