ಯುಐ ಚಿತ್ರದ ಬಗ್ಗೆ ಹೇಳಬೇಕು ಎಂದರೆ, ಅರ್ಥವಾಗದೇ ಇರುವಂಥದ್ದು ಅಲ್ಲಿ ಏನಿದೆ ಎಂದೇ ಅರ್ಥವಾಗುವುದಿಲ್ಲ...! 'ಸಿನಿಮಾ ಒಂದಕ್ಕೆ ವಿಮರ್ಶೆ ಬರೆಯಲು ಸಾಧ್ಯವಾಗದೇ ಚಿತ್ರ ವಿಮರ್ಶಕನೊಬ್ಬ ತಲೆ ಕೆಡಿಸಿಕೊಂಡಿದ್ದಾನೆ. ಅದೆಷ್ಟೇ ಬಾರಿ ನೋಡಿದರೂ ಅವನಿಗೆ ಸಿನಿಮಾ ಅರ್ಥವೇ ಆಗುವುದಿಲ್ಲ. ಆಗ ಈ ಬಗ್ಗೆ ತಿಳಿದುಕೊಳ್ಳಲು ಆ ಚಿತ್ರದ ನಿರ್ದೇಶಕ ಉಪೇಂದ್ರ...
ಸ್ಯಾಂಡಲ್‌ವುಡ್ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ನಿರ್ದೇಶನದ ಬಹನಿರೀಕ್ಷಿತ ಯುಐ (UI) ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕೆಲವರು ಈ ಚಿತ್ರವನ್ನು ತುಂಬಾ ಮೆಚ್ಚಿಕೊಂಡಿದ್ದರೆ ಹಲವರು ಅರ್ಥವಾಗಿಲ್ಲ ಎನ್ನುತ್ತಿದ್ದಾರೆ. ಉಪೇಂದ್ರ ಡೈರೆಕ್ಷನ್ ಚಿತ್ರಗಳಿಗೆ ಯಾವಾಗಲೂ 'ಅರ್ಥವಾಗಿಲ್ಲ' ಎಂಬ ಮಾತು ಬಂದೇ ಬರುತ್ತದೆ. ಅದ್ಯಾಕೆ ಹಾಗೆ ಎಂಬುದು ಅರ್ಥವಾಗುವುದು ಕಷ್ಟವೇ ಆಗಿದೆ. ಏಕೆಂದರೆ, ಉಪೇಂದ್ರರಿಗೆ ಅರ್ಥವಾಗಿದ್ದು ಬೇರೆಯವರಿಗೆ ಅರ್ಥವಾಗುವುದಿಲ್ಲ. ಬೇರೆಯವರಿಗೆ ಅರ್ಥವಾಗುವುದು ಉಪೇಂದ್ರರಿಗೆ ಅರ್ಥವಾಗುತ್ತದೆ. ಅದೇ ಅವರಿಗೆ ಬೇಕಾಗಿದ್ದು ಎನ್ನಬಹುದೇ?
ಅದಿರಲಿ, ಈ ಯುಐ ಚಿತ್ರದ ಬಗ್ಗೆ ಹೇಳಬೇಕು ಎಂದರೆ, ಅರ್ಥವಾಗದೇ ಇರುವಂಥದ್ದು ಅಲ್ಲಿ ಏನಿದೆ ಎಂದೇ ಅರ್ಥವಾಗುವುದಿಲ್ಲ...! 'ಸಿನಿಮಾ ಒಂದಕ್ಕೆ ವಿಮರ್ಶೆ ಬರೆಯಲು ಸಾಧ್ಯವಾಗದೇ ಚಿತ್ರ ವಿಮರ್ಶಕನೊಬ್ಬ ತಲೆ ಕೆಡಿಸಿಕೊಂಡಿದ್ದಾನೆ. ಅದೆಷ್ಟೇ ಬಾರಿ ನೋಡಿದರೂ ಅವನಿಗೆ ಸಿನಿಮಾ ಅರ್ಥವೇ ಆಗುವುದಿಲ್ಲ. ಆಗ ಈ ಬಗ್ಗೆ ತಿಳಿದುಕೊಳ್ಳಲು ಆ ಚಿತ್ರದ ನಿರ್ದೇಶಕ ಉಪೇಂದ್ರ ಅವರನ್ನು ಹುಡುಕಿಕೊಂಡು ಹೋಗ್ತಾನೆ. ಅಲ್ಲಿ ಅವರು ಸಿಗಲ್ಲ. ಆದರೆ, ಅವರು ಬರೆದು ಸುಟ್ಟು ಹಾಕಲು ಹೋಗಿದ್ದ ಕಥೆಯ ಪ್ರತಿ ಸಿಗುತ್ತದೆ. ಅದನ್ನು ಆ ವಿಮರ್ಶಕ ಓದುತ್ತಾನೆ.
undefined
ಚಂದನ್ ಶೆಟ್ಟಿ ವಿಡಿಯೋ ವೈರಲ್, ಅದ್ಯಾಕೆ ಮುಖದ ತುಂಬಾ ಬೆವರು ಸುರಿದ್ರೂ ಬಿಡ್ತಿಲ್ಲ?
ಆ ನಾಮದ ಕಥೆ ಏನು? ಉಪೇಂದ್ರ ಅದನ್ನು ಸುಟ್ಟು ಹಾಕಲು ಯಾಕೆ ಬಯಸಿದ್ದು? ಅದೆಲ್ಲವನ್ನೂ ನೋಡುವ ಕಲ್ಕಿ, ಅದ್ಯಾಕೆ ಹಾಗೆ ನಡೆದುಕೊಳ್ಳುತ್ತಾನೆ? ಕಲ್ಕಿ-ಸತ್ಯ ಅವರಿಬ್ಬರ ಕಥೆಯೇನು? ಈ ಎಲ್ಲವೂ ಸರಿ, ಇನ್ನುಳಿದಿದ್ದೇ ಯುಐ ಸಿನಿಮಾ'. ಹಾಗಿದ್ದರೆ ಇಷ್ಟು ಸಿಂಪಲ್ ಕಥೆ ಸಿನಿಪ್ರೇಕ್ಷಕರಿಗೆ ಯಾಕೆ ಅರ್ಥವಾಗುವುದಿಲ್ಲ. ಅದರಲ್ಲಿ ಅರ್ಥವಾಗದೇ ಇರುವಂಥದ್ದು ಏನಿದೆ? ಅಥವಾ ಸಿನಿಮಾ ನೋಡಲು ಜನರಿಗೆ ಬರುವುದಿಲ್ಲವೇ? ಅಥವಾ, ಜನರಿಗೆ ಅರ್ಥವಾಗುವ ಸಿನಿಮಾ ಮಾಡಲು ಉಪೇಂದ್ರ ಅವರಿಗೆ ಆಗುವುದಿಲ್ಲವೇ? ಇಂಥದ್ದೊಂದು ಪ್ರಶ್ನೆ ಉಪೇಂದ್ರ ನಿರ್ದೇಶನದ ಚಿತ್ರಕ್ಕೆ ಯಾವತ್ತೂ ಎದುರಾಗುತ್ತದೆ.
ಆದರೆ, ನಿಜ ಹೇಳಬೇಕು ಎಂದರೆ, ಉಪೇಂದ್ರ ಅವರು ತುಂಬಾ ಮುಂದಿನ ಕಾಲವನ್ನು ಈಗಲೇ ನೋಡಿರುತ್ತಾರೆ. ಅಂದರೆ, ಚಿಂತನೆಯೆಲ್ಲವೂ 25-25 ವರ್ಷಗಳ ಮುಂದಿನ ಕಾಲದ್ದು. ಅದಕ್ಕಾಗಿಯೇ ಅವರು, ನಾವು ಹೀಗೇ ನಡೆದುಕೊಳ್ಳುತ್ತಿದ್ದರೆ 2040ರಲ್ಲಿ ಏನಾಗಬಹುದು ಎಂದು ಊಹಿಸಿ ಸಿನಿಮಾದಲ್ಲಿ ಆ ಅಂಶ ತಂದಿದ್ದು. ಸಾಮಾನ್ಯ ಜನರು 'ನಿನ್ನೆ ಮಾಡಿದ್ದು ಮರೆತುಹೊಗಿ ಇವತ್ತು ಯಾಕೆ ಹೀಗಾಯ್ತು' ಎಂತ ಯೋಚಿಸುವದನ್ನಷ್ಟೇ ಅಭ್ಯಾಸ ಮಾಡಿಕೊಂಡಿದ್ದಾರೆ. ಹೀಗಿರುವಾಗ 'ಇಂದಿನ ಮಕ್ಕಳೇ ನಾಳಿನ ಪ್ರಜೆಗಳು' ಎಂಬದನ್ನು ಕೂಡ ಅರ್ಥ ಮಾಡಕೊಳ್ಳಲಾಗದು.
ಭಾರತದ ವಿಶ್ವ ಚೆಸ್ ಚಾಂಪಿಯನ್ ಗುಕೇಶ್ ಸಕ್ಸಸ್ ಹಿಂದಿನ ಗುಟ್ಟು ರಿವೀಲ್ ಆಯ್ತು!
ನಾಳೆಯನ್ನೇ ಊಹಿಸಲಾಗದ ಸಾಮಾನ್ಯ ಜನರಿಗೆ ಇನ್ನು 20-25 ವರ್ಷಗಳ ಬಳಿಕ ಪ್ರಪಂಚ ಹೀಗಿರಬಹುದು ಎಂದು ತೋರಿಸಲು ಹೊರಟಾಗ ಹಲವರಿಗೆ ಅರ್ಥವಾಗದಿರುವುದು ಸಹಜ. ಈ ಸಿನಿಮಾವನ್ನು ಮುಂದೆ ಯಾವತ್ತೋ ಎಲ್ಲರೂ ಅರ್ಥ ಮಾಡಿಕೊಳ್ಳಬಹುದು. ಆದರೆ ಸದ್ಯಕ್ಕೆ ನೋಡಿದ ಕೆಲವರಿಗೆ ಅರ್ಥವಾಗಿದೆ, ಹಲವರಿಗೆ ಅರ್ಥವಾಗಿಲ್ಲ. ಈಗ ಏನು ಹೇಳಬಹುದು ಎಂದರೆ, 'ಅರ್ಥವಾಗುವಂಥವರಿಗೆ ಆಗುತ್ತದೆ, ಇಲ್ಲದಿರುವವರಿಗೆ ಇಲ್ಲ..'. ಸಿನಿಮಾ ನೋಡಿದರೆ ಅರ್ಥವಾಗುತ್ತದೆಯೋ ಇಲ್ಲವೋ ಎಂಬುದಾದರೂ ಅರ್ಥವಾಗುತ್ತದೆ; ಇಲ್ಲದಿದ್ದರೆ ಅದೂ ಇಲ್ಲ!