ವಯಸ್ಸಾದಂತೆ ಸಹಜವಾಗಿಯೇ ಸಿನಿಮಾಗಳು ಮತ್ತು ನಾಟಕಗಳಲ್ಲಿ ಅವರಿಗೆ ಅವಕಾಶಗಳು ಕಡಿಮೆ ಆದವು. ಹೊಸ ನೀರು ಬಂದಾಗ ಹಳೆಯ ನೀರು ಹರಿದುಹೋದಂತೆ ಸಹಜವಾಗಿ ನಟ ಧೀರೇಂದ್ರ ಗೋಪಾಲ್ ಅವಕಾಶಗಳಿಂದ ವಂಚಿತರಾದರು.
ಹಾಸ್ಯ ನಟ ಧೀರೇಂದ್ರ ಗೋಪಾಲ್ ಕನ್ನಡ ಚಿತ್ರರಂಗದ ಮೇರು ಕಲಾವಿದರಲ್ಲಿ ಒಬ್ಬರು. ಹಾಸ್ಯ ನಟ ಎಂಬ ಹಣೆಪಟ್ಟಿ ಹೊತ್ತಿದ್ದರೂ ಅವರು ಸಾಕಷ್ಟು ವಿಲನ್ ರೋಲ್‌ಗಳಲ್ಲಿ ಕೂಡ ಮಿಂಚಿದ್ದರು. ಮೂಲತಃ ಹರಿಹರದವರಾದ ಧೀರೇಂದ್ರ ಗೋಪಾಲ್, ನಾಟಕ ಹಾಗೂ ಸಿನಿಮಾ ಎರಡೂ ರಂಗಗಳಲ್ಲಿ ಪ್ರಖ್ಯಾತಿ ಪಡೆದವರು. ಅವರನ್ನು ಬಲ್ಲ ಆಪ್ತರು ಆಗಿನ ಕಾಲದಲ್ಲಿ ನಟ ಧೀರೇಂದ್ರ ಗೋಪಾಲ್ ರನ್ನು 'ಕಲಿಯುಗದ ಕರ್ಣ' ಎಂದೇ ಕರೆಯುತ್ತಿದ್ದರಂತೆ.
ರಾಜಕೀಯ ವಿಡಂಬನೆ, ರಾಜಕಾರಣಿಗಳ ಬಗ್ಗೆ ಟೀಕೆ ಹೀಗೆ ಹಾಸ್ಯ ಚಟಾಕಿಗಳ ಕ್ಯಾಸೆಟ್‌ಗಳಿಂದಲೇ ಅಂದು ನಟ ಧೀರೇಂದ್ರ ಗೋಪಾಲ್ ಬಹಳಷ್ಟು ಹಣವನ್ನು ಗಳಿಸಿದ್ದರಂತೆ. ಇಂತಹ 350ಕ್ಕೂ ಅಧಿಕ ಕ್ಯಾಸೆಟ್‌ಗಳನ್ನು ಮಾಡಿದ್ದ ಧೀರೇಂದ್ರ ಗೋಪಾಲ್ ಅವರು ಬಂದ ಹಣವನ್ನೆಲ್ಲ ಬಡವರಿಗೆ, ಕೇಳಿದವರಿಗೆಲ್ಲ ದಾನ ಮಾಡಿಬಿಟ್ಟರಂತೆ. ತಮಗೆ ಬಂದ ಹಣದಲ್ಲಿ ಯಾವುದೇ ಆಸ್ತಿ, ಒಡವೆಗಳನ್ನು ಅವರು ಮಾಡಿಕೊಂಡಿರಲಿಲ್ಲ ಎನ್ನಲಾಗಿದೆ.
ವಯಸ್ಸಾದಂತೆ ಸಹಜವಾಗಿಯೇ ಸಿನಿಮಾಗಳು ಮತ್ತು ನಾಟಕಗಳಲ್ಲಿ ಅವರಿಗೆ ಅವಕಾಶಗಳು ಕಡಿಮೆ ಆದವು. ಹೊಸ ನೀರು ಬಂದಾಗ ಹಳೆಯ ನೀರು ಹರಿದುಹೋದಂತೆ ಸಹಜವಾಗಿ ನಟ ಧೀರೇಂದ್ರ ಗೋಪಾಲ್ ಅವಕಾಶಗಳಿಂದ ವಂಚಿತರಾದರು. ಆದರೆ, ಸಾವಾಗಿ ಕೊಟ್ಟ ಹಣವೂ ಅವರಿಗೆ ವಾಸಪ್ ಬರಲಿಲ್ಲ. ಹೀಗಾಗಿ ಬಾಳ ಇಳಿಸಂಜೆಯಲ್ಲಿ ಹಣಕಾಸಿನ ತೀವ್ರ ಮುಗ್ಗಟ್ಟು ಅನುಭವಿಸಿದರಂತೆ. ಅನಾರೋಗ್ಯ ಕಾಡಿ ಬಹಳಷ್ಟು ಕಷ್ಟ ಅನುಭವಿಸಿರಂತೆ. ಅದರೆ ಅವರು ಸಹಾಯ ಮಾಡಿದ್ದ ಹಲವರು ಇವರಿಗೆ ವಾಪಸ್ ಸಹಾಯ ಮಾಡಲೇ ಇಲ್ಲ ಎನ್ನಲಾಗಿದೆ.
1999ರಲ್ಲಿ ಜಾಂಡೀಸ್ ಖಾಯಿಲೆಗೆ ತುತ್ತಾದ ನಟ ಧೀರೇಂದ್ರ ಗೋಪಾಲ್ ಬಿಡಿಗಾಸೂ ಇಲ್ಲದೇ ಚಡಪಡಿಸಿದ್ದನ್ನು ಬಲ್ಲವರು ಹೇಳುತ್ತಾರೆ. 2000 ಇಸ್ವಿಯ ಡಿಸೆಂಬರ್ 25ರಂದು ನಟ ಧೀರೇಂದ್ರ ಗೋಪಾಲ್ ತಮ್ಮ ಹರಿಹರದ ಮೂಲ ಮನೆಯಲ್ಲಿ ನಿಧನರಾದರು. ಅವರ ಹೆಂಡತಿ ಸುನಂದಮ್ಮ ತಮ್ಮ ಗಂಡನ ಸಾವಿನ ಕೊರಗಿನಲ್ಲಿಯೇ ಸ್ವಲಪ್ ಕಾಲದಲ್ಲಿಯೇ ಸಾವನ್ನಪ್ಪಿದರಂತೆ.
ಸುಂದರ ನಟ ಸುನಿಲ್ ದುರ್ಮರಣ; ಅಪಘಾತಕ್ಕೆ ಯಾರು ಕಾರಣ, ಕಾಣದ ಕೈ ಕೆಲಸ ಮಾಡಿದ್ಯಾ?
ದೀರೇಂದ್ರ ಗೋಪಾಲ್ ಮಕ್ಕಳಾದ ವಿದ್ಯಾವತಿ, ನರೇಂದ್ರ ಬಾಬು ಹಾಗೂ ಸುಧೀಂದ್ರ ಎಂಬ ಮೂರು ಮಕ್ಕಳು ಅಪ್ಪನ ಸವಿನೆನಪಲ್ಲಿ ಕಾಲಕಳೆಯುತ್ತಿದ್ದಾರೆ ಎನ್ನಲಾಗಿದೆ. ದಾನಶೂರ ಕರ್ಣನಂತೆ ಬದುಕಿದವರು ನಮ್ಮಪ್ಪ ಎಂಬ ಹೆಮ್ಮೆ ಇಂದಿಗೂ ಅವರ ಮನದಲ್ಲಿ ಸವಿನೆನಪಾಗಿ ಉಳಿದುಕೊಂಡಿದೆಯಂತೆ. ಎಂಥ ಕಷ್ಟದಲ್ಲೂ ನಮ್ಮಪ್ಪ ಸಾಲ ವಾಪಸ್ ಕೇಳಲಿಲ್ಲ, ಕೊಡದಿದ್ದವರನ್ನು ಶಫಿಸಲಿಲ್ಲ ಎಂದು ಅವರೆಲ್ಲರೂ ಹೆಮ್ಮೆಯಿಂದ ಹೇಳುತ್ತಾರೆ ಎನ್ನಲಾಗಿದೆ.