ಬದಲಾದ್ರು ಯಶ್‌ 'ರಾಜಧಾನಿ' ರಘು ಜಯ; 'ಪಟಾಲಂ' ಜತೆ ಬರ್ತಿದಾರೆ ಎಸ್‌ಎಲ್ ಭೈರವ್, ದಾರಿ ಬಿಡಿ!

By Shriram Bhat  |  First Published Jan 25, 2024, 2:18 PM IST

ಬೆಂಗಳೂರಿನ ನಾಗರಬಾವಿ ಬಳಿ ಇರುವ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಚಿತ್ರಕ್ಕೆ ಮುಹೂರ್ತವನ್ನು ಮಾಡಲಾಯಿತು. ಪಟಾಲಂನ ಹೊಸ ಹುಡುಗರ ತಂಡ ಮುಹೂರ್ತ ಕಾರ್ಯಕ್ರಮದಲ್ಲಿ ಸಖತ್ ಜೋಶ್‌ನೊಂದಿಗೆ ಪಾಲ್ಗೊಂಡಿತ್ತು.


ರಾಜಧಾನಿ ಎಂಬ ಅತ್ಯದ್ಭುತ ಸಿನಿಮಾವನ್ನ ನಿರ್ದೇಶನ ಮಾಡಿದ್ದ ರಘು ಜಯ ಅವರು, ಇವತ್ತಿನಿಂದ ಎಸ್ಎಲ್ ಭೈರವ್ ಆಗಿ ಹೆಸರು ಬದಲಾಯಿಸಿಕೊಂಡಿದ್ದಾರೆ. ಹೊಸ ಹೆಸರು, ಹೊಸ ಹುಡುಗರೊಂದಿಗೆ ಭಾರೀ ಉತ್ಸಾಹದೊಂದಿಗೆ ಹೊಸ ಸಿನಿಮಾವೊಂದನ್ನು ಘೋಷಣೆ ಮಾಡಿದ್ದಾರೆ. ಅದೇ ಹೊಸ ಹುಡುಗರ ಟೀಮ್‌ ನಟನೆಯ 'ಪಟಾಲಂ'. 

ರಾಕಿಂಗ್ ಸ್ಟಾರ್ ಯಶ್ ಅವರ ರಾಜಧಾನಿ ಸಿನಿಮಾವನ್ನ ನಿರ್ದೇಶನ ಮಾಡಿದ್ದ ರಘು ಜಯ (Raghu Jaya) ನಂತರದ ದಿನಗಳಲ್ಲಿ 'ಗೋಲಿ ಸೋಡಾ' ಎಂಬ ರಿಮೇಕ್ ಸಿನಿಮಾ ಕೂಡ ಮಾಡಿದ್ದರು. ಈಗ ಎಸ್‌ ಎಲ್‌ ಬೈರವ್‌ ಅವರು (ರಘು ಜಯರವರು) ಹೊಸ ಹುಡುಗರನ್ನು ಹಾಕಿಕೊಂಡು ಪಟಾಲಮ್ ಎಂಬ ಸಿನಿಮಾ ಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಮುಂದಿನ ತಿಂಗಳು ಫೆಬ್ರವರಿಯಲ್ಲಿ (ಫೆಬ್ರವರಿ 2024) ಶೂಟಿಂಗ್ ಶುರುವಾಗಲಿದೆ ಎಂಬ ಸಂಗತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.

Tap to resize

Latest Videos

ಕ್ರೈಸ್ತ ಕೌನ್ಸಿಲರ್ ಆಗಿರುವ 'ಶ್ರೀರಾಮಚಂದ್ರ' ನಟಿ ಮೋಹಿನಿ; ಬದಲಾಗಿದೆ ಬದುಕು, ವಿಭಿನ್ನ ನಿಲುವು!

ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಭರವಸೆ ಮೂಡಿಸಿದ ನಿರ್ದೇಶಕರಲ್ಲಿ ಒಬ್ಬರಾದ ರಘು ಜಯರವರು (SL Bhairav), ಪಟಾಲಂ ಮೂಲಕ ಈಗಿನ ಯುವಕರು ಹಾಗೂ ಯುವಕರ ಮನಸ್ಥಿತಿ ಹಾಗೂ ಇನ್ನಿತರ ವಿಷಯಗಳ ಮೇಲೆ ಕತೆ ಹೆಣೆದು ಸಿನಿಮಾ ಮಾಡುತ್ತಿದ್ದಾರೆ. ಕಥೆಯಲ್ಲಿ ತೀರಾ ವಿಭಿನ್ನತೆಯನ್ನುಕಾಯ್ದುಕೊಂಡಿರುವುದಾಗಿ ತಿಳಿಸಿರುವ ನಿರ್ದೇಶಕ ಎಸ್‌ಎಲ್ ಭೈರವ್ ಅವರು ಕಥೆ ಗುಟ್ಟನ್ನು ಸಹಜವಾಗಿ ಸ್ವಲ್ಪ ಮಾತ್ರ ಬಿಟ್ಟುಕೊಟ್ಟಿದ್ದಾರೆ.

ಮಾಜಿ ಭುವನ ಸುಂದರಿಗೆ ಭಾರೀ ಹಾರ್ಟ್ ಅಟ್ಯಾಕ್; ಹೃದಯದಿಂದ ಬಂದವು ಗೋಲ್ಡನ್ ಟಿಪ್ಸ್!

ಬೆಂಗಳೂರಿನ ನಾಗರಬಾವಿ ಬಳಿ ಇರುವ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಚಿತ್ರಕ್ಕೆ ಮುಹೂರ್ತವನ್ನು ಮಾಡಲಾಯಿತು. ಪಟಾಲಂನ ಹೊಸ ಹುಡುಗರ ತಂಡ ಮುಹೂರ್ತ ಕಾರ್ಯಕ್ರಮದಲ್ಲಿ ಸಖತ್ ಜೋಶ್‌ನೊಂದಿಗೆ ಪಾಲ್ಗೊಂಡಿತ್ತು. ಹೊಸ ಹುಡುಗರು ಹಾಗು ಹೊಸ ಹೆಸರಿನ ಹಳೆಯ ನಿರ್ದೇಶಕರ ಹುರುಪು ನೋಡಿದರೆ ಸ್ಯಾಂಡಲ್‌ವುಡ್‌ನಲ್ಲಿ ಯಶಸ್ಸಿನ ಹೊಸ ಗಾಳಿ ಬೀಸಿದಂತೆ ಭಾಸವಾಗುವಂತಿತ್ತು. 

ಸುಂದರ ನಟ ಸುನಿಲ್ ದುರ್ಮರಣ; ಅಪಘಾತಕ್ಕೆ ಯಾರು ಕಾರಣ, ಕಾಣದ ಕೈ ಕೆಲಸ ಮಾಡಿದ್ಯಾ?

ಮುಹೂರ್ತದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ಎಸ್‌ ಎಲ್‌ ಭೈರವ್ (ರಘು ಜಯ) ರವರು ಚಿತ್ರೀಕರಣವನ್ನು ಫೆಬ್ರುವರಿ ಮೊದಲ ವಾರದಿಂದ ಶುರು ಮಾಡುವದಾಗಿ ಹೇಳಿದ್ದಾರೆ. ಅಕ್ಷಿತ ಕುಮಾರ್, ಕಾರ್ತಿಕ್ (ಮೈಕೋ ನಾಗರಾಜ್ ಮಗ), ಅಜಯ್ ಪೃಥ್ವಿ, ಸಾಯಿ ಪ್ರಗತಿ, ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದಾರೆ. 

ಕಲಾವಿದರ ದುನಿಯಾ ಕಂಡು ಕಂಗಾಲಾಗ್ಬೇಡಿ; ಬರ್ತಿದೆ 'ಸತ್ಯಂ ಶಿವಂ', ಸೈಡ್‌ಗೆ ಹೋಗ್ಬೇಡಿ, ನೋಡಿ!

click me!