ನಟ ದರ್ಶನ್‌ಗೆ ದೀಪಾವಳಿ ವೇಳೆ ಸಿಹಿ-ಕಹಿ ಸಂಗಮ; ಪೊಲೀಸ್‌ ನೋಟಿಸ್, ಕಾಟೇರ ಪೋಸ್ಟರ್ ಎರಡೂ ಬಂತು!

By Shriram Bhat  |  First Published Nov 12, 2023, 6:16 PM IST

ನಟ ದರ್ಶನ್ ನಾಯಿ ಕೇರ್ ಟೇಕರ್ ಹೇಮಂತ್ ಮೊದಲ ಆರೋಪಿ ಹಾಗೂ ನಾಯಿ ಸಾಕಿರುವ ದರ್ಶನ್ ಎರಡನೇ ಆರೋಪಿ ಎಂದು ಕೇಸ್ ದಾಖಲಾಗಿದೆ ಎನ್ನಲಾಗಿದೆ. ಇದೀಗ ಮೂರು ದಿನಗಳೊಳಗೆ ಪೊಲೀಸ್ ಸ್ಟೇಷನ್‌ಗೆ ಹಾಜರಾಗಲು ದರ್ಶನ್ ಅವರಿಗೆ ನೊಟೀಸ್ ನೀಡಲಾಗಿದ್ದು, ಮುಂದೇನು ಎಂಬುದನ್ನು ಕಾದು ನೋಡಬೇಕಿದೆ. 


ನಟ ದರ್ಶನ್ ಅವರಿಗೆ ಮತ್ತೆ ಸಂಕಷ್ಟ ಎದುರಾಗುತ್ತಿದೆಯಾ? ಹೀಗೊಂದು ಸಂದೇಹ ಬರುವುದಕ್ಕೆ ಕಾರಣ, ನಟ ದರ್ಶನ್ ಅವರಿಗೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಿಂದ 3 ದಿನಗಳ ಒಳಗಾಗಿ ಹಾಜರಾಗುವಂತೆ ನೊಟೀಸ್ ನೀಡಲಾಗಿದೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಕಾರಣ, ಇತ್ತೀಚೆಗೆ ವಕೀಲೆ ಅಮಿತಾ ಜಿಂದಾಲ್ ಅವರಿಗೆ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಮನೆಯ ಸಾಕು ನಾಯಿ ಕಚ್ಚಿತ್ತು. ಈ ಸಂಬಂಧ ಸಂತ್ರಸ್ತೆ, ವಕೀಲೆ ಅಮಿತಾ ಅವರು ಪೊಲೀಸ್ ಕಂಪ್ಲೇಂಟ್ ದಾಖಲಿಸಿದ್ದರು. ಇದೀಗ ನಟ ದರ್ಶನ್ ಅವರಿಗೆ ನೊಟೀಸ್ ನೀಡಲಾಗಿದೆ. 

ಆಸ್ಪತ್ರೆಯ ಕಾರ್ಯಕ್ರಮಕ್ಕೆ ಬಂದಿದ್ದ ವಕೀಲೆ ಅಮಿತಾ ಜಿಂದಾಲ್ ಅವರು ನಟ ದರ್ಶನ್ ಮನೆಯ ಸಮೀಪ ಇರುವ ಖಾಲಿ ಜಾಗದಲ್ಲಿ ಕಾರು ಪಾರ್ಕಿಂಗ್ ಮಾಡಿ ಹೋಗಿದ್ದರಂತೆ. ಅವರು ವಾಪಸ್ ಬಂದಾಗ, ದರ್ಶನ್ ಕೇರ್ ಟೇಕರ್ ಹಾಗೂ ಸಿಬ್ಬಂದಿಗಳು ಕಾರು ಅಲ್ಲಿ ಪಾರ್ಕ್‌ ಮಾಡಿದ್ದಕ್ಕಾಗಿ ಜಗಳ ಮಾಡಿದ್ದಾರೆ. ಅಲ್ಲಿ ಮೂರು ನಾಯಿಗಳು ಇದ್ದವು. ಬಳಿಕ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗುತ್ತಿದ್ದಂತೆ ದರ್ಶನ್ ಸಿಬ್ಬಂದಿಗೆ ಅಲ್ಲಿದ್ದ ನಾಯಿಗಳನ್ನು ಹಿಡಿದುಕೊಳ್ಳಲು ಹೇಳಿದ್ದೆ. ಆದರೆ, ಅವರು ಹಿಡಿದುಕೊಳ್ಳಲಿಲ್ಲ, ಅವು ಬಂದು ನನ್ನ ಮೇಲೆರಗಿ ಕಚ್ಚಿದವು ಎಂದು ಅಮಿತಾ ಅಂದೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. 

Tap to resize

Latest Videos

undefined

ನಟ ದರ್ಶನ್ ನಾಯಿ ಕೇರ್ ಟೇಕರ್ ಹೇಮಂತ್ ಮೊದಲ ಆರೋಪಿ ಹಾಗೂ ನಾಯಿ ಸಾಕಿರುವ ದರ್ಶನ್ ಎರಡನೇ ಆರೋಪಿ ಎಂದು ಕೇಸ್ ದಾಖಲಾಗಿದೆ ಎನ್ನಲಾಗಿದೆ. ಇದೀಗ ಮೂರು ದಿನಗಳೊಳಗೆ ಪೊಲೀಸ್ ಸ್ಟೇಷನ್‌ಗೆ ಹಾಜರಾಗಲು ದರ್ಶನ್ ಅವರಿಗೆ ನೊಟೀಸ್ ನೀಡಲಾಗಿದ್ದು, ಮುಂದೇನು ಎಂಬುದನ್ನು ಕಾದು ನೋಡಬೇಕಿದೆ. ದೀಪಾವಳಿ ಹಬ್ಬದ ವೇಳೆ ನಟ ದರ್ಶನ್‌ಗೆ ಈ ಮೂಲಕ ಸಂಕಷ್ಟ ಎದುರಾಗಿದೆ ಎನ್ನಬಹುದು. 

ಪ್ರಭಾಸ್-ಪ್ರಶಾಂತ್ ಜೋಡಿಯ ಸಲಾರ್ ಚಿತ್ರದ ವಿತರಣೆ ಹೊಣೆ ಹೊತ್ತಿದ್ಯಾರು; ಹೊರಬಿತ್ತು ಘೋಷಣೆ!

ಅಂದಹಾಗೆ, ನಟ ದರ್ಶನ್ ಅಭಿನಯದ 'ಕಾಟೇರ' ಚಿತ್ರದ ಪೋಸ್ಟರ್‌ ಒಂದು ದೀಪಾವಳಿ ಹಬ್ಬದ ಪ್ರಯುಕ್ತ ಇಂದು ಬಿಡುಗಡೆಯಾಗಿ ಭಾರೀ ವೈರಲ್ ಆಗುತ್ತಿದೆ. ಡಾರ್ಕ್‌ ಪಿಂಕ್ ಬಣ್ಣದ ಕುರ್ತಾ-ಧೋತಿ ಧರಸಿ ವಾಕಿಂಗ್ ಸ್ಟೈಲಿನಲ್ಲಿ ಪೋಸ್ ಕೊಟ್ಟಿರುವ ದರ್ಶನ್ ನೋಡಿ ಅವರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಸಾಕಷ್ಟು ಬಗೆಬಗೆಯ ಮೆಚ್ಚುಗೆಯ ಕಾಮೆಂಟ್‌ಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಈ ಮೂಲಕ ದರ್ಶನ್ ಅಭಿಮಾನಿಗಳಿಗೆ ಒಂದು ಖುಷಿ ಇನ್ನೊಂದು ದುಃಖದ ಸಮಾಚಾರ ಎದುರಾಗಿದೆ ಎನ್ನಬಹುದು. 

ಮನೆಯೊಳಗೆ ಬಿಟ್ಕೊಂಡ ಮೋನಾಗೆ ಕಿವಿ ಊದಿದ್ರು ಮಿಥುನ್ ಚಕ್ರವರ್ತಿ; ಬೋನಿ ಕಪೂರ್‌ಗೆ ರಾಕಿ ಕಟ್ಟಿದ್ರು ಶ್ರೀದೇವಿ

ಪೋಸ್ಟರ್ ಹಂಚಿಕೊಂಡು ನಟ ದರ್ಶನ್ ಅವರು 'ಈ ದೀಪಾವಳಿ ನಿಮ್ಮ ಬದುಕಿನಲ್ಲಿ ಖುಷಿಯ ಬೆಳಕನ್ನು ತುಂಬಲಿ. ಈ ಹಬ್ಬ ಸಂತೋಷ, ಸಮೃದ್ಧಿ, ಶಾಂತಿ, ನೆಮ್ಮದಿಯನ್ನು ಹೊತ್ತು ತರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳು' ಎಂದು ಸಂದೇಶ ಬರೆದಿದ್ದಾರೆ. ಅಂದಹಾಗೆ, ಕಾಟೇರತ ಚಿತ್ರದಲ್ಲಿ ನಟ ದರ್ಶನ್‌ಗೆ ಜೋಡಿಯಾಗಿ ಮಾಲಾಶ್ರೀ ಮಗಳು ಆರಾಧನಾ ನಟಿಸಿದ್ದಾರೆ. ಅವರಿಗೆ ಇದು ಮೊದಲ ಚಿತ್ರವಾಗಿದೆ. ಈ ಚಿತ್ರವನ್ನು ರಾಕ್‌ಲೈನ್ ವೆಂಕಟೇಶ್‌ ನಿರ್ಮಾಣ ಮಾಡಿದ್ದಾರೆ. 

 

 

click me!