ಹುಲಿ ನಾಯಕ ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡಿದ ಕಿಚ್ಚ ಸುದೀಪ್‌!

Published : Nov 11, 2023, 11:01 PM IST
ಹುಲಿ ನಾಯಕ ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡಿದ ಕಿಚ್ಚ ಸುದೀಪ್‌!

ಸಾರಾಂಶ

ಮಿಲಿಂದ್‌ ಗೌತಮ್‌ ನಟನೆಯ, ಡಿ ಜೆ ಚಕ್ರವರ್ತಿ ನಿರ್ದೇಶನದ, ಮಂಜುನಾಥ್‌ ಡಿ ನಿರ್ಮಾಣದ ‘ಹುಲಿ ನಾಯಕ’ ಚಿತ್ರದ ಮೋಷನ್‌ ಪೋಸ್ಟರ್‌ ಅನ್ನು ಕಿಚ್ಚ ಸುದೀಪ್‌ ಬಿಡುಗಡೆ ಮಾಡಿದ್ದಾರೆ.  ಒಳ್ಳೆಯ ಕತೆ ಇರುವ ಸಿನಿಮಾ ಮಾಡಬೇಕು ಎಂದುಕೊಂಡಾಗ ಹುಟ್ಟಿಕೊಂಡಿದ್ದೇ ಹುಲಿ ನಾಯಕ ಸಿನಿಮಾ.   

ಮಿಲಿಂದ್‌ ಗೌತಮ್‌ ನಟನೆಯ, ಡಿ ಜೆ ಚಕ್ರವರ್ತಿ ನಿರ್ದೇಶನದ, ಮಂಜುನಾಥ್‌ ಡಿ ನಿರ್ಮಾಣದ ‘ಹುಲಿ ನಾಯಕ’ ಚಿತ್ರದ ಮೋಷನ್‌ ಪೋಸ್ಟರ್‌ ಅನ್ನು ಕಿಚ್ಚ ಸುದೀಪ್‌ ಬಿಡುಗಡೆ ಮಾಡಿದ್ದಾರೆ.  ಒಳ್ಳೆಯ ಕತೆ ಇರುವ ಸಿನಿಮಾ ಮಾಡಬೇಕು ಎಂದುಕೊಂಡಾಗ ಹುಟ್ಟಿಕೊಂಡಿದ್ದೇ ಹುಲಿ ನಾಯಕ ಸಿನಿಮಾ. ಜಸ್ಟೀಸ್‌ ಅಡಿಪಾಯದಲ್ಲಿ ಜೀವ ಪಡೆದುಕೊಳ್ಳುತ್ತಿರುವ ಸಿನಿಮಾ ಇದು’ ಎಂದು ನಿರ್ದೇಶಕ ಡಿ ಜೆ ಚಕ್ರವರ್ತಿ ಹೇಳಿದರು. ಬಿಡುಗಡೆಯಾದ ಪೋಸ್ಟರ್‌ನಲ್ಲಿ ಹತ್ತು ಹಲವು ಕೌತುಕದ ವಿಷಯಗಳು ತುಂಬಿವೆ. ವೀರ ಸಂಗೊಳ್ಳಿ ರಾಯಣ್ಣನ ಗಿಗಿ ಪದವನ್ನು ಬಳಸಿಕೊಂಡು ಅನ್ಯಾಯಕ್ಕೊಳಗಾದವರ ನ್ಯಾಯ ಕೇಳುತ್ತಿದ್ದಾರೆ ನಿರ್ದೇಶಕ. 

ಟ್ಯಾಗ್ ಲೈನ್ ಆಗಿ ಜಸ್ಟಿಸ್ ಫಾರ್ ಸೌಮ್ಯ ಎಂದು ಹೆಸರಿಟ್ಟಿದ್ದಾರೆ. ಹೀಗಾಗಿ ಈ ಸಿನಿಮಾದಲ್ಲಿ ಏನೆಲ್ಲ ವಿಷಯಗಳು ಇರಲಿವೆ ಎನ್ನುವುದು ಸದ್ಯಕ್ಕಿರುವ ಕ್ಯೂರಿಯಾಸಿಟಿ. ಜನವರಿಯಿಂದ ಚಿತ್ರೀಕರಣಕ್ಕೆ ನಿರ್ದೇಶಕರು ಪ್ಲ್ಯಾನ್ ಮಾಡಿದ್ದು, ಅದಕ್ಕೂ ಮುನ್ನ ತಮ್ಮ ಚಿತ್ರದ ನಾಯಕನಿಗೆ ಭರ್ಜರಿ ತಯಾರಿಯನ್ನೂ ಮಾಡಿಸುತ್ತಿದ್ದಾರೆ ಚಕ್ರವರ್ತಿ. ಸಿನಿಮಾ ಶುರುವಾಗುವ ಮುನ್ನವೇ ಆಡಿಯೋ ರೈಟ್ಸ್ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದ್ದು, ಚಿತ್ರದ ಬಗ್ಗೆ ಈಗಿನಿಂದಲೇ ಹೈಪ್ ಕ್ರಿಯೇಟ್ ಆಗುತ್ತಿದೆ.
 


ಚಿತ್ರದ ಹೆಸರು ‘ಹುಲಿ ನಾಯಕ’ ಎಂದು ಘೋಷಣೆ ಮಾಡಿದ ಉಪೇಂದ್ರ, ಈ ಐತಿಹಾಸಿಕ ಚಿತ್ರ ಯಶಸ್ವಿಯಾಗಲಿ‌. ನಿರ್ದೇಶಕ ಡಿ.ಜೆ.ಚಕ್ರವರ್ತಿ, ನಿರ್ಮಾಪಕ ಮಂಜುನಾಥ್ ಹಾಗೂ ನಾಯಕ ಮಿಲಿಂದ್ ಗೌತಮ್ ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದರು. ವರ ಮಹಾಲಕ್ಷ್ಮಿ ಹಬ್ಬದ ಶುಭ ಸಂದರ್ಭದಂದು ರಿಯಲ್ ಸ್ಟಾರ್ ಉಪೇಂದ್ರ ತುಂಬು ಪ್ರೀತಿಯಿಂದ ಮಯೂರ ಮೋಶನ್ ಪಿಕ್ಚರ್ಸ್ ಸಂಸ್ಥೆ ಲಾಂಛನದಲ್ಲಿ ಮಂಜುನಾಥ್. ಡಿ ನಿರ್ಮಿಸುತ್ತಿರುವ, ಡಿ.ಜೆ ಚಕ್ರವರ್ತಿ ನಿರ್ದೇಶನದ ಹಾಗೂ ಮಿಲಿಂದ್ ಗೌತಮ್ ನಾಯಕರಾಗಿ ನಟಿಸಲಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿದ್ದರು. 

ಪಾಚಿ ಕಲರ್ ಸೀರೆಯಲ್ಲಿ ಲವ್ ಮಾಕ್ಟೇಲ್ ಸುಂದರಿ: ಮಿಲನಾ ಪೋಟೋ ನೋಡಿದ ಫ್ಯಾನ್ಸ್ ಹೀಗೆ ಅನ್ನೋದಾ!

ಅನ್ ಲಾಕ್  ರಾಘವ ನಂತರ ಮಿಲಿಂದ್ ಗೌತಮ್ ಸತತ ಮೂರು ತಿಂಗಳುಗಳಿಂದ ಈ ಸಿನಿಮಾಗಾಗಿ ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಬೇರೆ ಬೇರೆ ನಿರ್ದೇಶಕರಿಗೆ ಹಲವು ಸಿನಿಮಾಗಳನ್ನು ಬರೆಯುತ್ತಿರುವ ಚಕ್ರವರ್ತಿ ಈ ಸಿನಿಮಾವನ್ನು ತಾವೇ ಬರೆದು ನಿರ್ದೇಶಿಸುತ್ತಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ, ಮಧು ತುಂಬನಕೆರೆ ಸಂಕಲನ, ಯೋಗೇಶ್ವರನ್ ಛಾಯಾಗ್ರಹಣ, ಕಾರ್ಯಕಾರಿ ನಿರ್ಮಾಪಕರಾಗಿ ಪ್ರಶಾಂತ್ ಬಾಗೂರು, ಡಿಜಿಟಲ್ ಮಾರ್ಕೆಟಿಂಗ್ ಸುನೀಲ್ ಮಾನೆ, ಸಹ ನಿರ್ದೇಶಕರಾಗಿ ಚಂದ್ರಶೇಖರ ಮುದಬಾವಿ ಮುಂತಾದವರ ತಂಡವಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?