ರಾಷ್ಟ್ರವಾದಿ, ದೂರದೃಷ್ಟಿಯುಳ್ಳ ಶಂಕರ್‌ನಾಗ್ ಹುಟ್ಟುಹಬ್ಬ: ಆಟೋರಾಜನ ಸ್ಮರಿಸಿದ ಫ್ಯಾನ್ಸ್!

By Shriram BhatFirst Published Nov 9, 2023, 2:42 PM IST
Highlights

ಕನ್ನಡ ಚಿತ್ರರಂಗವನ್ನು ಜಗತ್ತಿನಲ್ಲೇ ಅತೀ ಎತ್ತರಕ್ಕೆ ಒಯ್ಯುವ ಕನಸು ಹೊಂದಿದ್ದ ಶಂಕರ್‌ ನಾಗ ಅವರು ಅದನ್ನು ಸಾಧಿಸುವ ಮೊದಲೇ ಇಹಲೋಕ ತ್ಯಜಿಸಿದ್ದು ಅತ್ಯಂತ ದುಃಖಕರ ಸಂಗತಿ. ಆದರೆ, ದಿವಂಗತ ಶಂಕರ್‌ ನಾಗ್ ಕಂಡಿದ್ದ ಕನಸು ನಿಧಾನವಾಗಿ ಅವರ ಮುಂದಿನ ಪೀಳಿಗೆ ಮೂಲಕ ಈಡೇರುತ್ತಿದೆ ಎಂದು ಹೇಳಬಹುದು. 

ಇಂದು (9 ನವೆಂಬರ್) ಸ್ಯಾಂಡಲ್‌ವುಡ್ ನಟ, ನಿರ್ದೇಶಕ ಶಂಕರ್‌ ನಾಗ್ ಜನ್ಮದಿನ. 1954ರ ನವೆಂಬರ್ 9 ರಂದು ಹೊನ್ನಾವರದ ನಾಗರಕಟ್ಟೆ ಯಲ್ಲಿ ಜನಿಸಿದ್ದರು ಶಂಕರ್‌ ನಾಗ್. ನಟ, ನಿರ್ದೇಶಕ, ಬರಹಗಾರ, ನಿರ್ಮಾಪಕ ಹೀಗೆ  ಬಹಳಷ್ಟು ದಾರಿಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು ದಿವಂಗತ ಶಂಕರ್ ನಾಗ್. ಅವರ ಜನ್ಮದಿನವನ್ನು "ಆಟೋ ರಿಕ್ಷಾ ಡೇ" ಅಂತ ನಮ್ಮ ಕರ್ನಾಟಕ ಆಟೋ ಚಾಲಕರ ಸಂಘ ಆಚರಣೆ ಮಾಡುತ್ತದೆ. ಇದು ಶಂಕರ್ ನಾಗ್ ಅವರಿಗೆ ಸಲ್ಲಿಸುವ ನಿಜವಾದ ಗೌರವವೂ ಹೌದು. 

1980ರಲ್ಲಿ ಬಿಡುಗಡೆಯಾದ ಮಿಂಚಿನ ಓಟ ಚಿತ್ರದ ಮೂಲಕ ನಟ ಶಂಕರ್‌ ನಾಗ್ ಅವರು ಕನ್ನಡ ಚಿತ್ರರಂಗದಲ್ಲಿ ಮಿಂಚಿನ ಸಂಚಲನವನ್ನು ಸೃಷ್ಟಿಸಿದರು. ಬಳಿಕ, 1981ರಲ್ಲಿ ಗೀತಾ ಚಿತ್ರದ ಮೂಲಕ ಶಂಕರ್‌ ನಾಗ್ ರೊಮ್ಯಾಂಟಿಕ್ ಹೀರೋ ಆಗಿ ಕೂಡ ಮನೆಮಾತಾದರು. ಅಷ್ಟರಲ್ಲೇ ಶಂಕರ್ ನಾಗ್ ಕಿರುತೆರೆ ಧಾರಾವಾಹಿಗಳ ನಟನೆ ಹಾಗೂ ನಿರ್ದೇಶನದ ಮೂಲಕವೂ ಕಲಾವಿದ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ನಟ ಅನಂತ್ ನಾಗ್ ಕೂಡ ಹಲವು ಧಾರಾವಾಹಿ ಹಾಗು ಸಿನಿಮಾಗಳ ಮೂಲಕ ನಟರಾಗಿ ಪರಿಚಿತರಾಗಿದ್ದರು. 

ಡಾ ರಾಜ್ ಕುಮಾರ್ ನಟನೆಯ ಒಂದು ಮುತ್ತಿನ ಕಥೆ ಮೂಲಕ ನಟ, ನಿರ್ದೇಶಕ ಶಂಕರ್ ನಾಗ್ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿದರು. ಒಂದು ಮುತ್ತಿನ ಕಥೆಯಲ್ಲಿ ನಿರ್ದೇಶನದ ಜತೆ ನಟನೆ ಕೂಡ ಮಾಡುವ ಮೂಲಕ ಶಂಕರ್‌ ನಾಗ್ ತಮ್ಮ ಪ್ರತಿಭೆ ಏನೆಂಬುದನ್ನು ಇಡೀ ಭಾರತಕ್ಕೇ ತೋರಿಸಿದ್ದರು. ಒಂದು ಮುತ್ತಿನ ಕಥೆ ಚಿತ್ರ ಅಂದುಕೊಂಡಷ್ಟು ಗೆಲುವು ಸಾಧಿಸದಿದ್ದರೂ, ಶಂಕರ್‌ ನಾಗ್ ಅವರು ಅಂದು ತಮ್ಮ ಸಿನಿಮಾದಲ್ಲಿ ತೋರಿಸಿದ್ದ ತಂತ್ರಜ್ಞಾನವನ್ನು ಕಂಡು ಇಡೀ ಸಿನಿಮಾರಂಗ ಮೂಗಿನ ಮೇಲೆ ಬೆರಳಿಟ್ಟುಕೊಂಡಿತ್ತು. 

ಕೊನೆಗೂ ಶಂಕರ್ ನಾಗ್ ಮಗಳು ಸಿಕ್ಕೇ ಬಿಟ್ರು; ಎಲ್ಲಿದ್ದಾರೆ, ಹೇಗಿದ್ದಾರೆ?

ಕನ್ನಡ ಚಿತ್ರರಂಗವನ್ನು ಜಗತ್ತಿನಲ್ಲೇ ಅತೀ ಎತ್ತರಕ್ಕೆ ಒಯ್ಯುವ ಕನಸು ಹೊಂದಿದ್ದ ಶಂಕರ್‌ ನಾಗ ಅವರು ಅದನ್ನು ಸಾಧಿಸುವ ಮೊದಲೇ ಇಹಲೋಕ ತ್ಯಜಿಸಿದ್ದು ಅತ್ಯಂತ ದುಃಖಕರ ಸಂಗತಿ. ಆದರೆ, ದಿವಂಗತ ಶಂಕರ್‌ ನಾಗ್ ಕಂಡಿದ್ದ ಕನಸು ನಿಧಾನವಾಗಿ ಅವರ ಮುಂದಿನ ಪೀಳಿಗೆ ಮೂಲಕ ಈಡೇರುತ್ತಿದೆ ಎಂದು ಹೇಳಬಹುದು. ಶಂಕರ್ ಅಂದುಕೊಂಡಂತೆ ಇಂದು ಕನ್ನಡ ಚಿತ್ರರಂಗವನ್ನು ಜಗತ್ತೇ ಗುರುತಿಸಿದೆ, ಗಮನಿಸುತ್ತಿದೆ. ಶಂಕರ್‌ ನಾಗ್ ಅವರು ತೀರಿಕೊಂಡು ಬರೋಬ್ಬರಿ 33 ವರ್ಷಗಳು ಕಳೆದಿದ್ದರೂ ಇಂದಿಗೂ ಕೂಡ ಚಿತ್ರಂಗ ಸೇರಿದಂತೆ, ಕರ್ನಾಟಕದ ಜನತೆ ಅವರನ್ನು ಸ್ಮರಿಸುತ್ತದೆ. ಈ ಮೂಲಕ, ದಿವಂಗತ್ ಶಂಕರ್‌ ನಾಗ ಅವರಿಗೊಂದು ನಮನ.

ನಟ ದರ್ಶನ್ ಬಗ್ಗೆ 'ಗರಡಿ' ಹೀರೋ ಸೂರ್ಯ ಹೀಗೆ ಹೇಳಿದ್ರಾ; ಭಾರೀ ವೈರಲ್ ಆಯ್ತು ನ್ಯೂಸ್!

ನಟ, ನಿರ್ದೇಶಕ, ನಿರ್ಮಾಪಕ, ಚಿಂತಕ ಶಂಕರ್ ನಾಗ್ 80ರ ದಶಕದಲ್ಲೇ ಕರ್ನಾಟಕದಲ್ಲಿ ಮೆಟ್ರೋ ಕನಸು ಕಂಡಿದ್ದವರು, ಬದುಕಿದ್ದು ಕೇವಲ ೩೫ವರ್ಷ ಅಷ್ಟೆ,  ಅತೀ ಕಡಿಮೆ ಸಮಯದಲ್ಲಿ ಅತೀ ಹೆಚ್ಚು ಸಾಧಿಸಿದ ಕರ್ನಾಟಕದ ಅಮೂಲ್ಯ ರತ್ನ. ನಟನೆ, ನಿರ್ದೇಶನ, ನಿರ್ಮಾಣ, ಬರವಣಿಗೆ ಎಲ್ಲಾ ವಿಭಾಗದಲ್ಲೂ ತೊಡಗಿಸಿಕೊಂಡಿದ್ದರು. ಸಂಕೇತ್ ರೆಕಾರ್ಡಿಂಗ್ ಸ್ಟುಡಿಯೋ ಮಾಡಿದ್ದು, ರಾಜಕಾರಣದಲ್ಲೂ ಸಕ್ರಿಯರಾಗಿದ್ದರು. ಅನಂತ್ ನಾಗ್ ಸ್ವಂತ ತಮ್ಮನಾಗಿದ್ದ ಶಂಕರ್‌ ನಾಗ್ ಅವರು ಸೆಪ್ಟೆಂಬರ್ 30, 1990 ರಂದು ದಾವಣಗೆರೆ ಬಳಿ ರಸ್ತೆ ಅಪಘಾತದಲ್ಲಿ ನಿಧನರಾದರು.

click me!