ಹೆಣ್ಮಕ್ಕಳು ಅವರ ಮನೆಗೇನೇ ಗೆಸ್ಟ್​ ಆಗಿ ಬರೋದು ಎಂದ್ರೆ... ಮದ್ವೆಯಾದವರ ಮನದಾಳ ಬಿಚ್ಚಿಟ್ಟ ಹರಿಪ್ರಿಯ

By Suvarna News  |  First Published Nov 8, 2023, 6:45 PM IST

ಮದುವೆಯಾದ ಮೇಲೆ ಹುಟ್ಟಿಬೆಳೆದ ಮನೆಗೇ ಗೆಸ್ಟ್​ ಆಗಿ ಬರುವುದು ಎಂದರೆ ಹೇಗಿರುತ್ತದೆ ಎಂಬ ಬಗ್ಗೆ ವಿವಾಹಿತೆಯರ ಮನದಾಳದ ಮಾತು ಹೇಳಿದ ನಟಿ ಹರಿಪ್ರಿಯಾ.
 


ಹೆಣ್ಣಾಗಿ ಹುಟ್ಟಿದ ಮೇಲೆ ಗಂಡನ ಮನೆಯೇ ಸರ್ವಸ್ವ ಎನ್ನುವ ಮಾತಿದೆ. ಕೊಟ್ಟ ಹೆಣ್ಣು ಕುಲದಿಂದ ಹೊರಕ್ಕೆ ಎನ್ನುವ ನಾಣ್ಣುಡಿ ಮಾಡಿ ಶತಮಾನಗಳೇ ಕಳೆದಿರಬಹುದು. ಆದರೆ ಇದು ಎಷ್ಟೋ ಹೆಣ್ಣುಮಕ್ಕಳಿಗೆ ಸಹಿಸಲು ಆಗದ ಮಾತು. 20-25 ವರ್ಷಗಳವರೆಗೆ ಹುಟ್ಟಿ- ಬೆಳೆದು ಆಟವಾಡಿದ ಅಮ್ಮನ ಮನೆಯನ್ನು ತೊರೆದು ಗಂಡನ ಮನೆಗೆ ಹೋಗುವಾಗ ಆಗುವ ನೋವು ಅದನ್ನು ಅನುಭವಿಸುವ ಹೆಣ್ಣುಮಕ್ಕಳಿಗಷ್ಟೇ ತಿಳಿದಿದೆ. ಮದುವೆಯಾದ ಮೇಲೆ ಇನ್ನೊಂದು ಮನೆಯವರನ್ನು ಹೊಂದಿಕೊಂಡು ಹೋಗಬೇಕಲ್ಲಾ ಎನ್ನುವ ಆತಂಕ ಒಂದೆಡೆಯಾದರೆ, ತವರನ್ನು ಬಿಟ್ಟು ಹೋಗಬೇಕಲ್ಲಾ ಎಂಬ ಭಾರವಾದ ಮನಸ್ಸು ಆಕೆಯದ್ದು. ಕಾಲ ಎಲ್ಲವನ್ನೂ ಸರಿ ಮಾಡುತ್ತದೆಯಾದರೂ, ಹಲವು ಹೆಣ್ಣುಮಕ್ಕಳಿಗೆ ತವರು ಎಂದಾಕ್ಷಣ ಕಣ್ಣಲ್ಲಿ ಮಿಂಚಿನ ಸಂಚಾರ ಆಗುವುದು ಉಂಟು. ವಯಸ್ಸು ಎಷ್ಟೇ ಆದರೂ ತವರು ಮನೆಯ ಹೆಸರು ಕೇಳಿದರೆ ಪುಳಕಿತರಾಗುವುದೂ ಉಂಟು. 'ಅಮ್ಮನ ಮನೆ' ಎನ್ನುವ ಮಾತೇ ಹಾಗಲ್ಲವೆ? 


ಇದೇ ಮಾತನ್ನು ಈಗ ಹೇಳಿದ್ದಾರೆ ಸ್ಯಾಂಡಲ್​ವುಡ್​ ನಟಿ ಹರಿಪ್ರಿಯಾ.  ಹರಿಪ್ರಿಯಾ  ಯೂಟ್ಯೂಬ್ ಚಾನೆಲ್ ಶುರು ಮಾಡಿದ್ದು, ಅದರಲ್ಲಿ ತಮ್ಮ ಅಮ್ಮನ ಮನೆಯ ವಿಡಿಯೋ ಶೇರ್​ ಮಾಡಿದ್ದು, ಅದರ ಬಗ್ಗೆ ಮಾಹಿತಿ ನೀಡಿದ್ದಾರೆ. ಮೈಸೂರಿನ ಗಣಪತಿ ಸಚಿದಾನಂದ ಆಶ್ರಮದಲ್ಲಿ ಇದೇ ವರ್ಷದ  ಜನವರಿ 26ರಂದು ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ ಮದುವೆ ನಡೆದಿತ್ತು.  ಕೆಲ ವರ್ಷಗಳಿಂದ ಹರಿಪ್ರಿಯಾ (Hari Priya) ಹಾಗೂ ವಸಿಷ್ಠ ಸಿಂಹ (Vasishta Simha) ಆತ್ಮೀಯ ಸ್ನೇಹಿತರು. ಸ್ನೇಹ ಪ್ರೀತಿಗೆ ತಿರುಗಿ ದಾಂಪತ್ಯಕ್ಕೆ ಕಾಲಿರಿಸಿದರು.   ಡಿಸೆಂಬರ್ ತಿಂಗಳಿನಲ್ಲಿ ಇವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕುಟುಂಬಸ್ಥರ ಸಮ್ಮುಖದಲ್ಲಿ ಸಿಂಹಪ್ರಿಯಾ ಜೋಡಿ ಉಂಗುರ ಬದಲಾಯಿಸಿಕೊಂಡಿದ್ದರು. ಸರಳವಾಗಿ, ಶಾಸ್ತ್ರೋಕ್ತವಾಗಿ ಎಂಗೇಜ್‌ಮೆಂಟ್ ನಡೆದಿತ್ತು. ನಿಶ್ಚಿತಾರ್ಥದಲ್ಲಿ ಸಿಂಹದ ಡಿಸೈನ್ ಹೊಂದಿದ್ದ ಉಂಗುರಗಳನ್ನ 'ಸಿಂಹಪ್ರಿಯಾ' ಜೋಡಿ ಎಕ್ಸ್‌ಚೇಂಜ್ ಮಾಡಿಕೊಂಡರು. ಮದುವೆ ಕಾರ್ಯಕ್ರಮಕ್ಕೆ ಕನ್ನಡದ ಬಿಗ್ ಸ್ಟಾರ್ಸ್ ಹಾಗೂ ಹಿರಿಯ ಕಲಾವಿದರು ಈ ಲವ್ ಬರ್ಡ್ಸ್ ಆರತಕ್ಷತೆಗೆ ಬಂದು ಆಶೀರ್ವದಿಸಿದ್ದರು.  

Tap to resize

Latest Videos

ಮದುವೆಯಾಗ್ತಿದ್ದಂತೆಯೇ ವರುಣ್ ತೇಜ್- ಲಾವಣ್ಯ ಎಲ್ಲಾ ಸುಳ್ಳು ಎಂದು ಹೇಳಿದ್ಯಾಕೆ?

ಮದುವೆಯಾದ ಮೇಲೆ ಅಮ್ಮನ ಮನೆಗೆ ಹೋಗಿರುವ ಹರಿಪ್ರಿಯಾ, ಹಳ್ಳಿಯ ವಾತಾವರಣದಲ್ಲಿರುವ ಬೃಹತ್ ಮನೆಯನ್ನು ಪರಿಚಯಿಸಿದ್ದಾರೆ. ಅಮ್ಮ ಎಂದರೆ ನಟಿಗೆ ಪಂಚಪ್ರಾಣ. ಹಿಂದೊಮ್ಮೆ ಸಂದರ್ಶನದಲ್ಲಿ ಈಕೆ, ನಾನು ಈಗಲೂ ಅಮ್ಮನ ಪಕ್ಕನೇ ಮಲಗೋದು ಎಂದು ಹೇಳಿದ್ದರು. ನನಗೆ ಅಮ್ಮನನ್ನು ತಬ್ಬಿಕೊಂಡು ಮಲಗುವುದು ತುಂಬಾ ಇಷ್ಟ. ಈ ಬಗ್ಗೆ ನನ್ನ ಕೆಲವು ಸ್ನೇಹಿತರಿಗೆ ಮಾತ್ರ ಗೊತ್ತು. ಯಾರೂ ಈ ಬಗ್ಗೆ ಕಮೆಂಟ್ ಮಾಡ್ಬೇಡಿ ಪ್ಲೀಸ್ ಎಂದು ನಟಿ ವಿಡಿಯೋದಲ್ಲಿ ಕೇಳಿಕೊಂಡಿದ್ದರು. ಇದೀಗ ಅಮ್ಮನ ಮನೆಗೆ ಗೆಸ್ಟ್​ ಆಗಿ ಬರುವುದು ಎಂದರೆ ಮನಸ್ಸಿಗೆ ಹಿಂಸೆ ಎನಿಸುತ್ತದೆ. ನನ್ನದೇ ಮನೆಗೆ ಗೆಸ್ಟ್​ ಆಗಿ ಬರಬೇಕಾ ಎನ್ನಿಸುವುದು ಉಂಟು. ಅಮ್ಮನ ಮನೆಗೆ ಬರುವಾಗ ಬಟ್ಟೆ ಪ್ಯಾಕ್​ ಮಾಡುವಾಗಲೂ  ನನ್ನ ಮನಗೆ ಹೀಗೆ ಬರಬೇಕಾ ಅನಿಸುತ್ತದೆ. ಆದರೆ ಅದು ಹೆಣ್ಣಿನ ಲೈಫ್​. ಅದನ್ನು ಸ್ವೀಕಾರ ಮಾಡಲೇಬೇಕು ಎಂದ ನಟಿ ಮದುವೆಯಾದ ಮೇಲೆ ಹೆಣ್ಣುಮಕ್ಕಳನ್ನು ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು. ನನಗೆ ಎರಡೆರಡು ಮನೆಗಳಿವೆ, ಒಂದು ಗಂಡನ ಮನೆ, ಒಂದು ಅಮ್ಮನ ಮನೆ ಎಂದು ಅಂದುಕೊಂಡರೆ ಎಲ್ಲವೂ ಸುಲಭ ಎಂದಿದ್ದಾರೆ. 

ಈ ಹಿಂದೆ ನಟಿ, ತಾವು ನಟನಾ ಪ್ರಪಂಚಕ್ಕೆ ಬಂದ ಬಗ್ಗೆ ಹೇಳಿಕೊಂಡಿದ್ದರು.  ಹೀರೋಯಿನ್ ಆಗುವ ಕನಸು ನನಗೆ ಇರಲಿಲ್ಲ. ನಾನು ತುಂಬಾ ಚೆನ್ನಾಗಿ ಓದುತ್ತಿದ್ದೆ. ನಾನು ಉದ್ಯಮಿ ಆಗಬೇಕು ಎನ್ನುವ ಕನಸು ಹೊಂದಿದೆ. ನನ್ನ ಡ್ಯಾನ್ಸ್ ನೋಡಿ ಒಬ್ಬರು ತುಳು ಆಫರ್ ನೀಡಿದ್ರು. ಸಿನಿಮಾದಲ್ಲಿ ನಟಿಸೋದು ನನಗೆ ಇಷ್ಟವಾಗಿ ಹೋಯ್ತು ಎಂದಿದ್ದರು.

ಮದುವೆಯಾಗ್ತಿದ್ದಂತೆಯೇ ವರುಣ್ ತೇಜ್- ಲಾವಣ್ಯ ಎಲ್ಲಾ ಸುಳ್ಳು ಎಂದು ಹೇಳಿದ್ಯಾಕೆ?
 

click me!