ಸಿಂಪಲ್ ಸುನಿ ನಿರ್ದೇಶನದ, ಕೆವಿಎನ್ ಪ್ರೊಡಕ್ಷನ್(KVN Production) ಸಂಸ್ಥೆ ನಿರ್ಮಾಣದ, ಗೋಲ್ಡನ್ ಸ್ಟಾರ್(Golden star) ಗಣೇಶ್ (Ganesh)ಅಭಿನಯದ ‘ಸಖತ್’(Sakath) ಸಿನಿಮಾ ನ.26ರಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಪ್ರೀ ರಿಲೀಸ್ ಈವೆಂಟ್ ಅದ್ದೂರಿಯಾಗಿ ನಡೆದಿದೆ.
ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಸಿಂಪಲ್ ಸುನಿ, ‘ಇದು ಎರಡೂವರೆ ಗಂಟೆ ನಗಿಸುವ ಸಿನಿಮಾ. ಪುಟಾಣಿ ಮಗುವಿನಿಂದ ಹಿಡಿದು ಅಜ್ಜಿ, ಅಜ್ಜಿಯವರೆಗೆ ಎಲ್ಲರೂ ನೋಡಬಹುದಾದ ಸಿನಿಮಾ’ ಎಂದರು. ಗಣೇಶ್, ‘200 ರೂಪಾಯಿ ಹಿಡಿದುಕೊಂಡು ಬೆಂಗಳೂರಿಗೆ ಬಂದವನು ನಾನು. ದೇವರು ತುಂಬಾ ಕೊಟ್ಟುಬಿಟ್ಟಿದ್ದಾನೆ. ಪ್ರತೀಕ್ಷಣ ಖುಷಿಯಾಗಿರಬೇಕು ಅಂತ ಬಯಸುತ್ತೇನೆ. ಯಾರಿಗೆ ಸಿಕ್ಕರೂ ಅವರಿಂದ ಕಲಿಯಬೇಕು ಅಥವಾ ಕಲಿಸುತ್ತಿರಬೇಕು ಎಂದು ನಂಬಿಕೊಂಡಿದ್ದೇನೆ. ಈ ಸಿನಿಮಾ ನಿಮಗೆ ಖುಷಿ ಕೊಡಲಿದೆ’ ಎಂದರು.
Sakath Song Release: ರ್‍ಯಾಪ್ ಹಾಡಿಗೆ ಗೋಲ್ಡನ್ ಸ್ಟೆಪ್ಸ್ ಹಾಕಿದ ಗಣೇಶ್
ನಿರ್ಮಾಪಕರಾದ ನಿಶಾ ವೆಂಕಟ್ ಕೋಣಂಕಿ ಮತ್ತು ವೆಂಕಟ್ ನಾರಾಯಣ್ ದಂಪತಿ ತಮ್ಮ ಸಂಸ್ಥೆ ನಿರ್ಮಿಸುತ್ತಿರುವ ಮೊದಲ ಸಿನಿಮಾ ಬಿಡುಗಡೆ ಖುಷಿಯನ್ನು ಹಂಚಿಕೊಂಡರು. ಶ್ರದ್ಧೆಯಿಂದ ಒಳ್ಳೆಯ ಸಿನಿಮಾ ನಿರ್ಮಾಣ ಮಾಡುವ ಆಸೆಯನ್ನು ಹಂಚಿಕೊಂಡರು. ನಿರ್ಮಾಪಕ ಸುಪ್ರೀತ್, ನಾಯಕ ನಟಿಯರಾದ ನಿಶ್ವಿಕಾ ನಾಯ್ಡು, ಸುರಭಿ ಪುರಾಣಿಕ್ ಸಂತೋಷವಾಗಿದ್ದರು. ಕಲಾವಿದರಾದ ರಂಗಾಯಣ ರಘು, ಧರ್ಮಣ್ಣ, ಸಂಗೀತ ನಿರ್ದೇಶಕ ಜೂಡಾ ಸ್ಯಾಂಡಿ, ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಮತ್ತಿತರರು ಭಾಗಿಯಾಗಿದ್ದರು.
'ಸಖತ್' (Sakath) ಸಿನಿಮಾದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದ್ದು, ರ್‍ಯಾಪ್ ಹಾಡಿಗೆ (Rap Song) ಗಣೇಶ್ ಗೋಲ್ಡನ್ ಸ್ಟೆಪ್ಸ್ ಹಾಕಿದ್ದರು. ರೊಮ್ಯಾಂಟಿಕ್ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥಾಹಂದರವನ್ನು ಹೊಂದಿರುವ ಈ ಚಿತ್ರವು ಇದೇ ತಿಂಗಳ 12ರಂದು ಬಿಡುಗಡೆಯಾಗಬೇಕಿತ್ತು.
ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ 'ಸಖತ್' ಚಿತ್ರದ ಟೈಟಲ್ ಹಾಡಿಗೆ ನಿಂತಲ್ಲೇ ಡ್ಯಾನ್ಸ್ ಮಾಡುವಂತ ರ್‍ಯಾಪ್ ಸಾಹಿತ್ಯವನ್ನು ಸಿಂಪಲ್ ಸುನಿ ಹಾಗೂ ರ್‍ಯಾಪರ್ ಸಿದ್ (Rapper Sid) ಬರೆದಿದ್ದಾರೆ. ಜೂಡಾ ಸ್ಯಾಂಡಿ (Judah Sandhy) ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಪಂಚಮ್ ಜೀವಾ, ಜೂಡಾ ಸ್ಯಾಂಡಿ, ರ್‍ಯಾಪರ್ ಸಿದ್ ಕಂಠಸಿರಿಯಲ್ಲಿ ಮೂಡಿಬಂದಿದ್ದು, ಬಿ.ಧನಂಜಯ್ (B.Dhananjay) ಹಾಡಿಗೆ ಕೊರಿಯೋಗ್ರಾಫಿ ಮಾಡಿದ್ದಾರೆ. ಟಿ.ವಿ. ರಿಯಾಲಿಟಿ ಶೋ ಮತ್ತು ಕೋರ್ಟ್ ಕೇಸ್ ಸುತ್ತ ಈ ಸಿನಿಮಾ ಕಥೆ ಹೆಣೆಯಲಾಗಿದ್ದು, ಗಣೇಶ್ ರಿಯಾಲಿಟಿ ಶೋ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ.
ಸಿಂಪಲ್ ಸುನಿ 'ಸಖತ್'ನಲ್ಲಿ ಕುರುಡನಾದ ಗಣೇಶ್
ಈ ಚಿತ್ರದಲ್ಲಿ ಗಣೇಶ್ ಅವರು ಕಣ್ಣು ಕಾಣದ ವ್ಯಕ್ತಿ (Blind) ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರಿಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು (Nishvika Naidu) ನಟಿಸಿದ್ದಾರೆ. ಮುಖ್ಯವಾಗಿ ಈ ಚಿತ್ರದ ಮೂಲಕ ಗಣೇಶ್ ಪುತ್ರ ವಿಹಾನ್ (Vihan) ಮತ್ತೆ ಬಿಗ್ ಸ್ಕ್ರೀನ್‌ಗೆ ಎಂಟ್ರಿ ಕೊಡುತ್ತಿದ್ದು, ಅಪ್ಪನ 'ಸಖತ್' (Sakkat) ಸಿನಿಮಾದಲ್ಲಿ ಬಾಲ ನಟನ ಪಾತ್ರ ಮಾಡಿದ್ದಾರೆ. ಗಣೇಶ್ ಅವರ ಬಾಲ್ಯದ ದಿನಗಳ ಪಾತ್ರವನ್ನು ಬಾಲು ಪಾತ್ರದಲ್ಲಿ ವಿಹಾನ್ ಅಭಿನಯಿಸುತ್ತಿದ್ದು, ತಮ್ಮ ಪಾತ್ರಕ್ಕೆ ತಾವೇ ಡಬ್ಬಿಂಗ್ (Dubbing) ಕೂಡ ಮಾಡಿರುವ ಮಗನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಇತ್ತಿಚೆಗಷ್ಟೇ ಗಣೇಶ್ ಹಂಚಿಕೊಂಡಿದ್ದರು.
ಸ್ಯಾಂಡಲ್‌ವುಡ್‌ನ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಮತ್ತು ನಿರ್ದೇಶಕ ಸಿಂಪಲ್ ಸುನಿ (Simple Suni) ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ 'ಸಖತ್' (Sakath) ಸಿನಿಮಾದ 'ಸಖತ್ ಬಾಲು' (Sakath ) ಟೀಸರ್ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್‌ನಲ್ಲಿ ಇಂದು ಬಿಡುಗಡೆಯಾಗಿದೆ. ಇದೇ ಮೊದಲ ಬಾರಿಗೆ ಚಿತ್ರದಲ್ಲಿ ಕಣ್ಣು ಕಾಣದ ವ್ಯಕ್ತಿಯಾಗಿ ಗಣೇಶ್ ಕಾಣಿಸಿಕೊಂಡಿದ್ದಾರೆ. ಹೀರೋ ಪಾತ್ರಕ್ಕೆ ನಿಜಕ್ಕೂ ಕಣ್ಣಿಲ್ಲವೋ ಅಥವಾ ಕಣ್ಣಿಲ್ಲದ ರೀತಿಯಲ್ಲಿ ಆತ ನಾಟಕ ಮಾಡುತ್ತಾನೋ ಎಂಬ ಕೌತುಕದ ಪ್ರಶ್ನೆಯನ್ನು ಟೀಸರ್ (Teaser) ಹುಟ್ಟುಹಾಕಿದೆ. ಅಲ್ಲದೇ ಕಚಗುಳಿ ಇಡುವ ಡೈಲಾಗ್ಗಳು, ಭರ್ಜರಿ ಕಾಮಿಡಿ ಟೀಸರ್‌ನಲ್ಲಿ ಕಾಣಬಹುದಾಗಿದೆ.