'100' ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಇನ್ಫೋಸಿಸ್ ಮುಖ್ಯಸ್ಥೆ​ ಸುಧಾಮೂರ್ತಿ

By Suvarna News  |  First Published Nov 22, 2021, 3:24 PM IST

ಬಹಳ ದಿನಗಳ ಬಳಿಕ ಒಂದು ಒಳ್ಳೆಯ ಸಿನಿಮಾ ನೋಡಿದೆ. ಸೈಬರ್ ಕ್ರೈಂ ಕಥೆ ಆಧಾರಿತ ಈ ಸಿನಿಮಾ, ಸೋಷಿಯಲ್ ಮೀಡಿಯಾದಿಂದ ಯುವ ಜನಾಂಗ ಹೇಗೆ ತೊಂದರೆ ಅನುಭವಿಸುತ್ತಿದೆ ಎನ್ನುವುದನ್ನು ಅಚ್ಚುಕಟ್ಟಾಗಿ ನಿರ್ದೇಶಕ ರಮೇಶ್ ಅರವಿಂದ್ ತೋರಿಸಿದ್ದಾರೆ ಎಂದು ಸುಧಾಮೂರ್ತಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.


ರಮೇಶ್‌ ಅರವಿಂದ್‌ (Ramesh Aravind) ನಟಿಸಿ, ನಿರ್ದೇಶನ ಮಾಡಿರುವ '100' ಚಿತ್ರ ಹೆಚ್ಚು ಮೆಚ್ಚುಗೆಯನ್ನು ಪಡೆದಿದೆ. ಬಿಡುಗಡೆಗೂ ಮುನ್ನವೇ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra), ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ (Shalini Rajneesh) ಹಾಗೂ ಸಿಐಡಿ ಅಧಿಕಾರಿಗಳು ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದರು. ಇದೀಗ ಇನ್ಫೋಸಿಸ್ ಮುಖ್ಯಸ್ಥೆ​ ಸುಧಾಮೂರ್ತಿ (Infosys Sudha Murthy) '100' ಚಿತ್ರವನ್ನು ವೀಕ್ಷಿಸಿ, ಬಳಿಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಹೌದು! ನವೆಂಬರ್ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ರಮೇಶ್ ಅರವಿಂದ್ ಅಭಿನಯದ '100' ಚಿತ್ರವನ್ನು ಸಿನಿಮಾ ಪ್ರೇಕ್ಷಕರು ಮಾತ್ರವಲ್ಲದೇ ರಾಜಕಾರಣಿಗಳು ಹಾಗು ಗಣ್ಯ ವ್ಯಕ್ತಿಗಳು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವಿಶೇಷವಾಗಿ ಸುಧಾ ಮೂರ್ತಿ ಅವರು ಕೂಡ ಚಿತ್ರವನ್ನು ವೀಕ್ಷಿಸಿದ್ದು, ಮನಸಾರೆ ಹೊಗಳಿದ್ದಾರೆ. ಬಹಳ ದಿನಗಳ ಬಳಿಕ ಒಂದು ಒಳ್ಳೆಯ ಸಿನಿಮಾ ನೋಡಿದೆ. ಸೈಬರ್ ಕ್ರೈಂ ಕಥೆ ಆಧಾರಿತ ಈ ಸಿನಿಮಾ, ಸೋಷಿಯಲ್ ಮೀಡಿಯಾದಿಂದ ಯುವ ಜನಾಂಗ ಹೇಗೆ ತೊಂದರೆ ಅನುಭವಿಸುತ್ತಿದೆ ಎನ್ನುವುದನ್ನು ಅಚ್ಚುಕಟ್ಟಾಗಿ ನಿರ್ದೇಶಕ ರಮೇಶ್ ಅರವಿಂದ್ ತೋರಿಸಿದ್ದಾರೆ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Tap to resize

Latest Videos

Movie Review: ಆತಂಕ ನೀಡಿ ಆಹ್ಲಾದ ಉಳಿಸುವ ಇಂಟರ್‌ನೆಟ್ ಸಿನಿಮಾ 100

ನಿಜಕ್ಕೂ ಕುಟುಂಬ ಸಮೇತ ನೋಡಬಹುದಾದ ಚಿತ್ರ. ರಮೇಶ್ ಅರವಿಂದ್ ಜೊತೆಗೆ ನಟಿ ಪೂರ್ಣ ಹಾಗೂ ರಚಿತಾ ರಾಮ್‌ ಸೇರಿದಂತೆ ಸಾಕಷ್ಟು ಕಲಾವಿದರು ಬಹಳ ಸೊಗಸಾಗಿ ಅಭಿನಯಿಸಿದ್ದಾರೆ‌. ನಿರ್ಮಾಪಕ ಎಂ.ರಮೇಶ್ ರೆಡ್ಡಿ, ಸೂರಜ್‌ ಪ್ರೊಡಕ್ಷನ್‌ ಹೌಸ್ ಅಡಿ ಸಂದೇಶ ಸಾರುವ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರವನ್ನು ಎಲ್ಲರೂ ಕುಟುಂಬ ಸಮೇತರಾಗಿ ನೋಡಿ ಹಾಗೂ ಚಿತ್ರದಲ್ಲಿ ತೋರಿಸಲಾದ ವಿಷಯಗಳ ಬಗ್ಗೆ ನಿಮ್ಮ ಕುಟುಂಬದೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಿ ಎಂದು ಸುಧಾ ಮೂರ್ತಿ ಅವರು ಹೇಳಿದ್ದಾರೆ.



ಇತ್ತೀಚೆಗಷ್ಟೇ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಈ ಸಿನಿಮಾ ಯುವಜನಾಂಗದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಅಪರಾಧದ ಜಗತ್ತನ್ನು ಎಚ್ಚರಿಸುತ್ತದೆ. ಇಂಥ ಒಳ್ಳೆಯ ಸಿನಿಮಾ ನೀಡಿದ ನಿರ್ಮಾಪಕ ರಮೇಶ್​ ರೆಡ್ಡಿ ಅವರಿಗೆ ಅಭಿನಂದನೆ ತಿಳಿಸುತ್ತೇನೆ. ಕಲಾವಿದರಾದ ರಮೇಶ್​, ರಚಿತಾ ರಾಮ್​, ಪೂರ್ಣಾ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಎಂದು ಗೃಹ ಸಚಿವರು ಮೆಚ್ಚುಗೆ ಸೂಚಿಸಿದ್ದರು. ಹಾಗೂ ನಮ್ಮ ಯುವಕ-ಯುವತಿಯರಿಗೆ ಇಂದು ತಂತ್ರಜ್ಞಾನ ಎಷ್ಟು ಅನುಕೂಲ ನೀಡುತ್ತದೆಯೋ ಅಷ್ಟೇ ಕೆಟ್ಟ ಪರಿಣಾಮವನ್ನೂ ಬೀರುತ್ತದೆ ಎಂಬ ಎಚ್ಚರಿಕೆಯನ್ನು ಈ ಸಿನಿಮಾದ ಮೂಲಕ ಹೇಳಲಾಗಿದೆ. ಈ ಚಿತ್ರದಿಂದ ಯುವ ಜನತೆ ಒಂದು ಪಾಠ ಕಲಿಯಲಿದೆ ಎಂದು ಶಾಲಿನಿ ರಜನೀಶ್ ತಿಳಿಸಿದ್ದರು.

ಸೈಬರ್ ಲೋಕದ 100 ಟ್ರೇಲರ್ ರಿಲೀಸ್: ಫ್ಯಾಮಿಲಿ ಥ್ರಿಲ್ಲರ್‌ನಲ್ಲಿ ರಮೇಶ್ ಅರವಿಂದ್

'100' ಸಿನಿಮಾ ಸೈಬರ್‌ ಕ್ರೈಮ್‌ ಆಧಾರಿತ ಸಿನಿಮಾವಾಗಿದೆ. ರಮೇಶ್‌ ಅರವಿಂದ್‌ ಜತೆ ರಚಿತಾ ರಾಮ್‌, ಪೂರ್ಣಾ ನಟಿಸಿದ್ದು, ಇದು ಫ್ಯಾಮಿಲಿ ಥ್ರಿಲ್ಲರ್‌ ಜಾನರ್‌ನ ಸಿನಿಮಾವಾಗಿದೆ. ವಿಶೇಷ ಎಂದರೆ ರಮೇಶ್‌ ಅರವಿಂದ್‌ ಫ್ಯಾಮಿಲಿ ಮ್ಯಾನ್ ಆಗಿ ಕುಟುಂಬದ ರಕ್ಷಣೆ ಮತ್ತು ಪೊಲೀಸ್ ನಾಗಿ ತಮ್ಮ ಕರ್ತವ್ಯ ಎರಡು ಶೆಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸುರ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಚಿತ್ರ ತಯಾರಾಗಿದ್ದು, ಉಮಾ, ಎಂ. ರಮೇಶ್ ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸತ್ಯ ಹೆಗಡೆ ಕ್ಯಾಮರಾ ಕೈಚಳಕ, ಶ್ರೀನಿವಾಸ್ ಕಲಾಲ್ ಸಂಕಲನ, ಗುರು ಕಶ್ಯಪ್ ಸಂಭಾಷಣೆ,  ಧನ೦ಜಯ ನೃತ್ಯ ಸಂಯೋಜನೆ, ಜಾಲಿ ಬಾಸ್ಟಿನ್, ಡಾ.ರವಿವರ್ಮ ಸಾಹಸ ಈ ಚಿತ್ರಕ್ಕಿದೆ. ರಚಿತಾ ರಾಮ್, ಪೂರ್ಣ, ಪ್ರಕಾಶ್ ಬೆಳವಾಡಿ, ಶೋಭರಾಜ್, ರಾಜು ತಾಳಿಕೋಟೆ,  ಮಾಲತಿ ಸುಧೀರ್, ಬೇಬಿ ಸ್ಮಯ ಸೇರಿದಂತೆ ಮುಂತಾದವರ ತಾರಾಬಳಗ ಚಿತ್ರಕ್ಕಿದೆ.

"

click me!