ಶಿವಣ್ಣ ಜೊತೆಗಿನ ಮಾತುಕತೆಯಲ್ಲಿ ಪುನೀತ್ ರಾಜ್‌ಕುಮಾರ್ ಸವಿ ನೆನಪು ಬಿಚ್ಚಿಟ್ಟ ಸದ್ಗುರು!

By Suvarna NewsFirst Published Jun 27, 2022, 4:38 PM IST
Highlights
  • ಸದ್ಗುರು ಜೊತೆ ನಟ ಶಿವರಾಜ್ ಕುಮಾರ್ ಮಾತುಕತೆ
  • ಮಣ್ಣು ಉಳಿಸಿ ಅಭಿಯಾನ ಹಿನ್ನಲೆಯಲ್ಲಿ ಮಾತುಕತೆ
  • ಪುನೀತ್ ರಾಜ್‌ಕುಮಾರ್ ನೆನೆಪಿಸಿದ ಸದ್ಗುರು

ಬೆಂಗಳೂರು(ಜೂ.27): ಮಣ್ಣು ಉಳಿಸಿ ಅಭಿಯಾನದ ಮೂಲಕ ಈಶಾ ಫೌಂಡೇಷನ್ ಮುಖ್ಯಸ್ಥ ಸದ್ಗುರು ಜಗ್ಗಿ ವಾಸುದೇವ್ 27 ದೇಶಗಳ ಪ್ರಮುಖ ನಗರಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಗಿದೆ. ಮಣ್ಣು ಉಳಿಸಿ ಅಭಿಯಾನದ ಹಿನ್ನಲೆಯಲ್ಲಿ ಸದ್ಗುರು ಜೊತೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆಯಲ್ಲಿ ಸದ್ಗುರು, ಪುನೀತ್ ರಾಜ್‌ಕುಮಾರ್ ನೆನೆಪಿಸಿಕೊಂಡಿದ್ದಾರೆ.

ನಾನು ಹಲವು ವಿಚಾರಗಳಲ್ಲಿ ನಿಮ್ಮಿಂದ ಪ್ರಭಾವಿತನಾಗಿದ್ದೇನೆ. ಇದೀಗ ಅತೀವ ಸಂತಸದಲ್ಲಿದೆ. ಕಾರಣ ನಾನು ತುಂಬಾ ಸರಳ, ಮಾನವೀಯ ಮೌಲ್ಯಗಳನ್ನು ಹೊಂದಿರುವ ವ್ಯಕ್ತಿಯನ್ನು ಭೇಟಿಯಾಗಿರುವ ಸಂತಸ ನನಗಿದೆ ಎಂದು ಶಿವರಾಜ್ ಕುಮಾರ್ ಸದ್ಗುರು ಕುರಿತು ಹೇಳಿದ್ದಾರೆ.

ಬೆಕ್ಕಿಗೆ ಗಂಟೆ ಕಟ್ಟೋಕೆ ಒಬ್ಬ ಮುಠ್ಠಾಳ ಬೇಕಿತ್ತು, ಅದಕ್ಕಾಗಿ ನಾನೇ ಬಂದಿದ್ದೇನೆ: ಸದ್ಗುರು

ಮಾತುಕತೆಯಲ್ಲಿ ಸದ್ಗುರು ಪ್ರಮುಖವಾಗಿ ಪುನೀತ್ ರಾಜ್ ಕುಮಾರ್ ನೆನೆಪಿಸಿಕೊಂಡಿದ್ದಾರೆ. ಪುನೀತ್ ರಾಜ್ ಕುಮಾರ್ ಸಾಮಾಜಿಕ ಕಳಕಳಿ ಕುರಿತು ಸದ್ಗುರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ನಮ್ಮ ಕಾವೇರಿ ಕೂಗು ಅಭಿಯಾನದಲ್ಲಿ ಕೈಜೋಡಿಸಿದ್ದರು. ಕಾವೇರಿ ಕೂಗು ಹಾಡನ್ನು ನಾನು ಬರೆದಿದ್ದ. ಇದಕ್ಕೆ ಪುನೀತ್ ರಾಜ್‌ಕುಮಾರ್ ಧ್ವನಿ ನೀಡಿದ್ದರು. ಈ ಹಾಡು ಅತ್ಯಂತ ಜನಪ್ರಿಯವಾಗಿದೆ. ಈಗಲೂ ಈ ಹಾಡು ಹಾಗೂ ಅಭಿಯಾನದ ಕುರಿತು ಜನರು ಮಾತನಾಡುತ್ತಾರೆ. ಕಾವೇರಿ ಕೂಗು ಅತ್ಯಂತ ಯಶಸ್ವಿ ಅಭಿಯಾನವಾಗಿದೆ. ಈ ಯಶಸ್ವಿ ಅಭಿಯಾನದಿಂದ ಭಾರತ ಸರ್ಕಾರ 13 ನದಿ ಪಾತ್ರದ ಪ್ರದೇಶಗಳಲ್ಲಿ ಅಧ್ಯಯನ ನಡೆಸಿ ವರದಿ ತಯಾರಿಸಿದೆ. ಇಷ್ಟೇ ಅಲ್ಲ 13 ನದಿ ಪಾತ್ರದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸಮ್ಮತಿಸಿದೆ. ನಮಗೆಲ್ಲಾ ಸಂತಸ ತರುವ ವಿಷಯ ಅಂದರೆ ಈ ಯಶಸ್ವಿ ಅಭಿಯಾನದಲ್ಲಿ ಪುನೀತ್ ಕೂಡ ಪಾಲ್ಗೊಂಡಿದ್ದರು ಎಂದು ಸದ್ಗುರು ಹೇಳಿದ್ದಾರೆ.

ಕಾವೇರಿ ಕೂಗು ಅಭಿಯಾನದ ಬಳಿಕ ಸದ್ಗುರು ಕೈಗೊಂಡಿದ್ದ ಅತೀ ದೊಡ್ಡ ಅಭಿಯಾನ ಮಣ್ಣು ಉಳಿಸಿ ಅಭಿಯಾನವಾಗಿದೆ. ಕಾವೇರಿ ಕೂಗು ವಿಶೇಷ ಭಾರತ ಕಾವೇರಿ ನದಿ ಪಾತ್ರ ಪ್ರದೇಶಗಳಲ್ಲಿನ ಕಾಡುಗಳ ಬೆಳೆಸುವಿಕೆ, ನದಿಯನ್ನು ಸಂರಕ್ಷಿಸುವುದಾಗಿತ್ತು. ಕಾವೇರಿ ಕೂಗಿನ ಮೂಲಕ ಭಾರತದ ನದಿಗಳನ್ನು ಸಂರಕ್ಷಿಸುವ ಜಾಗೃತಿ ಮೂಡಿಸಲಾಗಿತ್ತು. ಇದೀಗ ಮಣ್ಣು ಉಳಿಸಿ ಅಭಿಯಾನ ಇಡೀ ವಿಶ್ವಕ್ಕೆ ನೀಡಿದ ಸಂದೇಶವಾಗಿದೆ.

ಅಭಿಯಾನದ 100 ದಿನಗಳಲ್ಲಿ 600ಕ್ಕೂ ಹೆಚ್ಚು ಮಣ್ಣು ಉಳಿಸಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. 27 ದೇಶಗಳ ಬೈಕ್‌ ಪ್ರಯಾಣ ತುಂಬಾ ಅಪಾಯಕಾರಿಯಾಗಿತ್ತು. ಮುಂದಿನ ಹೋರಾಟದ ಭಾಗವಾಗಿ ಇಂಗ್ಲೆಂಡ್‌, ಉತ್ತರ ಮತ್ತು ದಕ್ಷಿಣ ಅಮೆರಿಕ ಮತ್ತು ಕೆರಿಬಿಯನ್‌ ರಾಷ್ಟ್ರಗಳು ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ರಾಷ್ಟ್ರಗಳಿಗೆ ಭೇಟಿ ನೀಡಲಾಗುವುದು. ಮಣ್ಣನ್ನು ಸಂರಕ್ಷಿಸಲು ಮತ್ತು ಪುನರುಜ್ಜೀವನಗೊಳಿಸಲು ಸ್ಪಷ್ಟವಾದ ಕಾರ್ಯನೀತಿಗಳನ್ನು ಆ ದೇಶಗಳಲ್ಲಿ ಜಾರಿಗೊಳಿಸಲು ಒತ್ತಾಯಿಸಲಾಗುತ್ತದೆ ಎಂದರು.

ಅಪ್ಪು ಪತ್ನಿ ಅಶ್ವಿನಿ ಮತ್ತು ಮಕ್ಕಳಿಗೆ ಧನ್ಯವಾದ ತಿಳಿಸಿದ ಶಿವರಾಜ್‌ಕುಮಾರ್!

ಅಭಿಯಾನ 320 ಕೋಟಿ ಜನರಿಗೆ ತಲುಪಿದೆ:
100 ದಿನಗಳ ಅಭಿಯಾನವು 320 ಕೋಟಿ ಜನರಿಗೆ ತಲುಪಿದೆ. 27 ದೇಶಗಳಲ್ಲಿ ಸಂಚರಿಸಿ, 598 ಕಾರ್ಯಕ್ರಮ ನಡೆಸಲಾಗಿದೆ. ಈವರೆಗೂ 74 ದೇಶಗಳು, ಕರ್ನಾಟಕ ಸೇರಿದಂತೆ ಭಾರತದ 9 ರಾಜ್ಯಗಳು ಮಣ್ಣನ್ನು ಉಳಿಸುವ ಕ್ರಮಗಳನ್ನು ಕೈಗೊಳ್ಳುವುದಾಗಿ ಒಡಂಬಡಿಕೆ ಮಾಡಿಕೊಂಡಿವೆ ಎಂದು ಈಶ ¶ೌಂಡೇಶನ್‌ ಪ್ರಕಟಣೆಯಲ್ಲಿ ತಿಳಿಸಿದೆ.

click me!