ರೊಮ್ಯಾಂಟಿಕ್‌ ಕಾಮಿಡಿ 'ಬೆಂಗಳೂರು ಬಾಯ್ಸ್' ಚಿತ್ರದ ಫಸ್ಟ್‌ ಲುಕ್‌ ಟೀಸರ್‌ ಬಿಡುಗಡೆ

By Govindaraj S  |  First Published Apr 16, 2022, 12:51 PM IST

ಸಚಿನ್‌ ಚೆಲುವರಾಯ ಸ್ವಾಮಿ, ವೈನಿಧಿ ಜಗದೀಶ್‌, ಸೋನಿ, ಅಭಿಷೇಖ್‌ ದಾಸ್‌, ರೋಹಿತ್‌ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ‘ಬೆಂಗಳೂರು ಬಾಯ್ಸ್’ ಚಿತ್ರದ ಫಸ್ಟ್‌ ಲುಕ್‌ ಟೀಸರ್‌ ಬಿಡುಗಡೆ ಆಗಿದೆ.


ಸಚಿನ್‌ ಚೆಲುವರಾಯ ಸ್ವಾಮಿ, ವೈನಿಧಿ ಜಗದೀಶ್‌, ಸೋನಿ, ಅಭಿಷೇಖ್‌ ದಾಸ್‌, ರೋಹಿತ್‌ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ‘ಬೆಂಗಳೂರು ಬಾಯ್ಸ್’ (Bangalore Boys) ಚಿತ್ರದ ಫಸ್ಟ್‌ ಲುಕ್‌ ಟೀಸರ್‌ (Firstlook Teaser) ಬಿಡುಗಡೆ ಆಗಿದೆ. ‘ಅಂತ’, ‘ರಣಧೀರ’, ‘ಓಂ’ ಹಾಗೂ ‘ಎ’ ಚಿತ್ರಗಳ ಹೀರೋಗಳ ಗೆಟಪ್‌ಗಳನ್ನು ನೆನಪಿಸುವ ರೀತಿಯಲ್ಲಿ ಚಿತ್ರದ ಟೀಸರ್‌ ಮೂಡಿ ಬಂದಿದೆ. ಹೀಗಾಗಿ ಟೀಸರ್‌ ಸಾಕಷ್ಟು ಗಮನ ಸೆಳೆಯುತ್ತಿದೆ. ಇದೊಂದು ರೊಮ್ಯಾಂಟಿಕ್‌ ಕಾಮಿಡಿ ಮನರಂಜನೆಯ ಚಿತ್ರವಾಗಿದೆ. ಕಾಲೇಜು, ಎಮೋಷನ್‌, ಪ್ರೇಮ ಕತೆ ಹೀಗೆ ಎಲ್ಲ ಅಂಶಗಳೂ ಚಿತ್ರದಲ್ಲಿವೆ. ರ್ಯಾಪರ್ ಅಲೋಕ್ ಸಂಗೀತ ನಿರ್ದೇಶನ, ಧರ್ಮ ವಿಷ್ ಸಂಗೀತ ಸಂಯೋಜನೆ ಸಿನಿಮಾಕ್ಕಿದೆ.

ವಿಕ್ರಮ್ ಕೆ ವೈ (Vikram KY) ಸಿನಿಮಾದ ಸಿನಿಮಾಗೆ ಬಂಡವಾಳ ಹೂಡಿದ್ದು, ಪ್ರಶಾಂತ್ ರಾವ್ ಪುರಂ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು, 'ಅಂಬಿ ನಿಂಗೆ ವಯಸ್ಸಾಯ್ತೋ' ಖ್ಯಾತಿಯ ಗುರುದತ್ ಗಾಣಿಗ (Gurudat Ganiga) ಕ್ರಿಯೇಟಿವ್ ಡೈರೆಕ್ಟರ್ ಆಗಿ ಬೆಂಗಳೂರು ಬಾಯ್ಸ್ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡುವ ಮೂಲಕ ಪ್ರಮೋಷನ್‌ಗೆ ಮುನ್ನುಡಿ ಬರೆದಿದೆ.

Tap to resize

Latest Videos

'ಗಿರ್ಕಿ' ಟೀಸರ್‌ ಬಿಡುಗಡೆ ಮಾಡಿದ ಕಾಮಿಡಿ ಕಿಂಗ್ ಶರಣ್

ಮಾಜಿ ಸಚಿವ ಚಲುವರಾಯಸ್ವಾಮಿ ಪುತ್ರ ಸಚಿನ್ (Sachin Cheluvarayaswamy) 'ಹ್ಯಾಪಿ ಬರ್ತಡೇ' ಸಿನಿಮಾದ ನಂತರ 'ಬೆಂಗಳೂರು ಬಾಯ್ಸ್' ಒಪ್ಪಿಕೊಂಡಿದ್ದಾರೆ. ಈ ಸಿನಿಮಾದ ಬಗ್ಗೆ ಮಾಹಿತಿ ನೀಡುವ ಅವರು, 'ಬೆಂಗಳೂರು ಬಾಯ್ಸ್‌'ನಲ್ಲಿ ಇವತ್ತಿನ ಟ್ರೆಂಡ್‌ಗೆ ತಕ್ಕಂತಹ ಕಥೆಯಿದೆ. ನಾಲ್ವರು ಹುಡುಗರು ಇಂದಿನ ಜಮಾನದಲ್ಲಿ ಹೇಗೆ ಜೀವನ ಮಾಡುತ್ತಾರೆ ಎಂಬುದನ್ನು ಹೇಳಲಾಗಿದೆ. ಇದರಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ತುಂಬಾ ಯೋಚನೆ ಮಾಡಿ ತೆಗೆದುಕೊಳ್ಳುವಂತಹ ಪಾತ್ರ ನನ್ನದು. ಬಂದ ಎಲ್ಲಾ ಸಿನಿಮಾಗಳನ್ನು ಒಪ್ಪಿಕೊಳ್ಳುವುದಕ್ಕಿಂತ ಉತ್ತಮ ಕಥೆಯಿರುವ ಸಿನಿಮಾ ಒಪ್ಪಿಕೊಂಡರೆ ಒಳ್ಳೆಯದು ಎಂಬ ಕಾರಣಕ್ಕೆ ಇಷ್ಟು ವರ್ಷಗಳಿಂದ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ' ಎಂದು ಹೇಳಿದ್ದಾರೆ.

ಪ್ರೀತ್ಸು ಧ್ವನಿ ಸುರುಳಿ ಬಿಡುಗಡೆ: ಇಡೀ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಛಾಪು ಮೂಡಿಸಿದಂತ ಮೇರು ಪ್ರತಿಭೆ ಇಳಯರಾಜ ಅವರು ಸಂಗೀತ ನೀಡಿರುವ ಹಾಗೂ ಕೆ.ಗಣೇಶನ್ ನಿರ್ದೇಶಿಸಿರುವ 'ಪ್ರೀತ್ಸು' ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ನಿರ್ಮಾಪಕರುಗಳಾದ ಭಾ.ಮ.ಹರೀಶ್, ಟೇ.ಶಿ.ವೆಂಕಟೇಶ್, ಸೇವನ್ ರಾಜ್ ಹಾಗೂ ರವಿ ವಿಠಲ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಈ ಹಾಡುಗಳನ್ನು ಬಿಡುಗಡೆ ಮಾಡಿ ತಂಡಕ್ಕೆ ಶುಭ ಕೋರಿದರು. ಕಳೆದ ಮೂವತ್ತು ದಶಕಗಳಿಂದ ಕನ್ನಡ ಚಿತ್ರರಂಗಲ್ಲಿದ್ದೀನಿ. ನವಭಾರತ ಸೇರಿದಂತೆ ಕನ್ನಡದಲ್ಲಿ ಸಾಕಷ್ಟು ಚಿತ್ರಗಳನ್ನು ನಿರ್ದೇಶಿಸಿದ್ದೇನೆ. 

Notary Movie: ಪವನ್‌ ಒಡೆಯರ್‌ ನಿರ್ದೇಶನದ ಹಿಂದಿ ಚಿತ್ರ 'ನೋಟರಿ'

ಈಗ ವಿಭಿನ್ನ ಕಥೆಯುಳ್ಳ 'ಪ್ರೀತ್ಸು' ಚಿತ್ರವನ್ನು ನಿರ್ದೇಶನ ಮಾಡಿದ್ದೀನಿ. ನನಗೆ ನಿರ್ಮಾಣದಲ್ಲಿ ಮಲೇಷಿಯಾದ ಗಾನ ವಿನೋದನ್ ಸಾಥ್ ನೀಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಈ ಚಿತ್ರಕ್ಕೆ ಸಂಗೀತ ನೀಡಿರುವುದು ನಿಜಕ್ಕೂ ಸಂತಸ ತಂದಿದೆ. ನನಗೆ ಇಳಯರಾಜ ಅವರು ಬಹುದಿನಗಳ ಪರಿಚಯ. ಅವರು ಈ ಕಾರ್ಯಕ್ರಮಕ್ಕೆ ಬರಬೇಕಿತ್ತು. ಆದರೆ ವೈದ್ಯರ ಸಲಹೆ ಮೇರೆಗೆ ಕೊನೆಯಲ್ಲಿ ಅವರು ಬರುವುದು ರದ್ದಾಯಿತು. ವಿಡಿಯೋ ಮೂಲಕ ಅವರು ಸಂದೇಶ ಕಳುಹಿಸಿದ್ದಾರೆ. ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ನೋಡಿ ಹರಸಿ ಎಂದರು ನಿರ್ದೇಶಕ ಕೆ.ಗಣೇಶನ್. ಈ ಚಿತ್ರದಲ್ಲಿ ನಾಯಕ ಸುಭಾಷ್ ಅವರಿಗೆ ಜೋಡಿಯಾಗಿ ನೇಹ ಅಭಿನಯಿಸಿದ್ದಾರೆ.
 

click me!