
ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ನಿರ್ದೇಶಕ ದ್ವಾರಕೀಶ್ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಚಿತ್ರ ನಿರ್ದೇಶಿಸಲು ಸಾಲ ಪಡೆದ ಹಣವನ್ನು ಹಿಂತಿರುಗಿಸಲು ಸಾಧ್ಯವಾಗದ ಕಾರಣ ಫೈನಾನ್ಷಿಯರ್ ಮನೆ ಬಾಗಿಲಿಗೆ ಬಂದು ಗಲಾಟೆ ಮಾಡಿದ್ದಾರೆ.
ಶಿವಣ್ಣ ಅಂದ್ರೆ ಫೆಂಟಾಸ್ಟಿಕ್, ವೆರಿ ಹಂಬಲ್, ವೆರಿ ಸಿನ್ಸಿಯರ್:ದ್ವಾರಕೀಶ್
ದ್ವಾರಕೀಶ್ ನಿರ್ದೇಶನದ 'ಆಯುಷ್ಮಾನ್ ಭವ' ನವೆಂವರ್ 15,2019 ರಂದು ರಾಜ್ಯಾದ್ಯಾಂತ ತೆರೆ ಕಂಡಿದ್ದು ಬಾಕ್ಸ್ ಆಫೀಸ್ ಮುಟ್ಟುವುದರಲ್ಲಿ ವಿಫಲವಾಗಿದೆ. ಚಿತ್ರ ನಿರ್ದೆಶಿಸಲು ದ್ವಾರಕೀಶ್ ಫೈನಾನ್ಷಿಯರ್ ಬಳಿ 5 ಕೋಟಿ ಸಾಲ ಪಡೆದಿದ್ದಾರೆ ಎನ್ನಲಾಗಿದೆ. ಲಾಸ್‌ನಲ್ಲಿ ಇದ್ದ ಕಾರಣ ಹಣವನ್ನು ಹಿಂತಿರುಗಿಸಲು ವಿಫಲರಾಗಿದ್ದಾರೆ.
ಸಾಲ ಹಿಂತಿರುಗಿಸಲು ಫೈನಾನ್ಷಿಯರ್ 1 ವರ್ಷ ಸಮಯ ನೀಡಿದ್ದರು. ಆದರೆ ಸಮಯ ಮೀರಿದ ಕಾರಣ ರಮೆಶ್ HSR Layoutನಲ್ಲಿರುವ ದ್ವಾರಕೀಶ್ ಮನೆಗೆ ಹೋಗಿ ಏರುಧ್ವನಿಯಲ್ಲಿ ಮಾತನಾಡಿದ್ದಾರೆ.
ತೆರೆಗೆ ಬರಲು ಸಿದ್ಧವಾಗಿದೆ 'ಆಯುಷ್ಮಾನ್ ಭವ'; ಸುವರ್ಣ ನ್ಯೂಸ್ ಜೊತೆ ಶಿವಣ್ಣ, ದ್ವಾರಕೀಶ್
ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆಗೆ ದ್ವಾರಕೀಶ್ ಪುತ್ರ ಯೋಗಿ ದೂರು ನೀಡಿದ್ದಾರೆ. ನಮ್ಮ ಕುಟುಂಬ ಭಯದಲ್ಲಿದೆ. ದಯವಿಟ್ಟು ರಕ್ಷಣೆ ಕೊಡಿ ಏನಾದ್ರೂ ಆದ್ರೆ ಅದಕ್ಕೆ ರಮೇಶ್ ಕಾರಣವಾಗುತ್ತಾರೆ ಎಂದು ದೂರು ನೀಡಿದ್ದಾರೆ. ಈ ವಿಚಾರದ ಬಗ್ಗೆ ಕೋರ್ಟ್ ಮೊರೆ ಹೋಗುತ್ತೇವೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.