
ಕುಮಾರ ಫಿಲಂಸ್ ಹಾಗೂ ಶೈಲಜಾ ಪಿಕ್ಚರ್ಸ್ ಸಹಭಾಗಿತ್ವದೊಂದಿಗೆ ಭರತ್ ಕುಮಾರ್ ಹಾಗೂ ಹೇಮಂತ್ ಕುಮಾರ್ ನಿರ್ಮಾಣದ ಚಿತ್ರವಿದು. ಸದ್ದಿಲ್ಲದೆ ಚಿತ್ರೀಕರಣವೂ ಮುಗಿದಿದೆ. ಸದ್ಯಕ್ಕೆ ಕೊಚ್ಚಿನ್ ಸೂತ್ರ ಎಂಬ ಸ್ಟುಡಿಯೋದಲ್ಲಿ ಸೌಂಡ್ ಡಿಸೈನ್ ಶುರುವಾಗಿದೆ. ಫ್ಯಾಂಟಸಿ ಹಾಗೂ ಕಾಲ್ಪನಿಕ ಕಥಾ ಹಂದರದ ಈ ಚಿತ್ರದಲ್ಲಿ ಸುನೀಲ್ ರಾವ್ ಹೊಸ ಬಗೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.
ಸಚಿನ್ ತೆಂಡೂಲ್ಕರ್ ಜೊತೆ ಸಿಹಿ ಕಹಿ ಚಂದ್ರು ಪುತ್ರಿ; ವೈರಲ್ ಫೋಟೋ ಹಿಂದಿನ ಕಥೆ!
ಅವರ ಹಾಗೆಯೇ ಇಲ್ಲಿ ರಾಜ್ ಬಿ. ಶೆಟ್ಟಿಚಿತ್ರದ ಮತ್ತೊರ್ವ ಪ್ರಮುಖ ಪಾತ್ರದಾರಿ. ಸಂಯುಕ್ತ ಹೆಗಡೆ ಈ ಚಿತ್ರದ ನಾಯಕಿ. ಅವರೊಂದಿಗೆ ಸುಧಾರಾಣಿ, ಅಮೃತ ರಾಮಮಮೂರ್ತಿ, ಅಚ್ಯುತ್ ಕುಮಾರ್ ಕೂಡ ಚಿತ್ರದಲ್ಲಿದ್ದಾರೆ. ಹೇಮಂತ್ ಕುಮಾರ್ ಇದರ ನಿರ್ದೇಶಕ. ಅವರಿಗಿದು ಚೊಚ್ಚಲ ಚಿತ್ರ. ಗೋಧಿ ಬಣ್ಣ ಸಾದಾರಣ ಮೈ ಕಟ್ಟು ಚಿತ್ರದ ನಿರ್ದೇಶಕ ಹೇಮಂತ್ ರಾವ್ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದವರು. ಇದೇ ಮೊದಲು ತುರ್ತು ನಿರ್ಗಮನದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಚಿತ್ರದಲ್ಲಿ ಆರು ಹಾಡುಗಳಿದ್ದು ಧೀರೇಂದ್ರ ದಾಸ್ ಸಂಗೀತ ನೀಡಿದ್ದಾರೆ. ಪ್ರಯಾಗ್ ಮುಕುಂದನ್ ಛಾಯಾಗ್ರಹಣ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.