ನಿಖಿಲ್‌ ಕುಮಾರಸ್ವಾಮಿಗೆ ಜೋಡಿಯಾದ ಕಿರುತೆರೆ ನಟಿ!

By Suvarna News  |  First Published Feb 1, 2020, 10:18 AM IST

ನಿಖಿಲ್‌ ಕುಮಾರ್‌ ಅಭಿನಯದ ಹೊಸ ಚಿತ್ರಕ್ಕೆ ಮುಹೂರ್ತ ಮುಗಿದಿದೆ. ಸದ್ಯಕ್ಕಿನ್ನು ಈ ಚಿತ್ರಕ್ಕೆ ಟೈಟಲ್‌ ಫಿಕ್ಸ್‌ ಆಗಿಲ್ಲ. ಹಾಗೆಯೇ ನಾಯಕಿ ಆಯ್ಕೆ ಕೂಡ ಬಾಕಿಯಿದೆ. ಆದರೆ ಈ ಚಿತ್ರದಲ್ಲಿ ಎರಡನೇ ನಾಯಕಿ ಆಗಿ ಕಿರುತೆರೆ ನಟಿ ಸಂಪದ ಆಯ್ಕೆ ಆಗಿದ್ದಾರೆ.


 ಈಗಾಗಲೇ ಕನ್ನಡ ಕಿರುತೆರೆ ಲೋಕದಲ್ಲಿ ಮನೆ ಮಾತಾದ ನಟಿ. ಇದೇ ಮೊದಲು ನಿಖಿಲ್‌ ಕುಮಾರ್‌ ಅಭಿನಯದ ಅದ್ಧೂರಿ ವೆಚ್ಚದ ಚಿತ್ರದ ಮೂಲಕ ಹಿರಿತೆರೆಗೆ ಎಂಟ್ರಿ ಆಗುತ್ತಿದ್ದಾರೆ.

ನಿಶ್ಚಿತಾರ್ಥಕ್ಕೂ ಮುನ್ನವೇ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟ ನಿಖಿಲ್!

Tap to resize

Latest Videos

ಎಂಟ್ರಿಯಲ್ಲಿಯೇ ಸಂಪದ ಅವರಿಗೆ ನಿಖಿಲ್‌ ಕುಮಾರ್‌ ಕಾಂಬಿನೇಷನ್‌ ಮೂಲಕ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದೆ.‘ ಈ ಅವಕಾಶ ಸಿಗುತ್ತೆ ಎನ್ನವ ನಿರೀಕ್ಷೆ ಇರಲಿಲ್ಲ. ನನ್ನ ಪಾಲಿಗೆ ಇದೊಂದು ಆಕಸ್ಮಿಕವಾಗಿ ಸಿಕ್ಕ ಅವಕಾಶ. ಚಿತ್ರದ ಆಡಿಷನ್‌ಗೆ ಹೋಗಿದ್ದೆ. ಅಲ್ಲಿ ನಿರ್ದೇಶಕರು ನನ್ನನ್ನು ಆಯ್ಕೆ ಮಾಡಿಕೊಂಡರು. ಆನಂತರ ಚಿತ್ರದ ಪೂರ್ಣ ಕತೆ ಕೇಳಿದೆ. ಸಿನಿಮಾ ಸೂಪರ್‌ ಹಿಟ್‌ ಆಗುವುದರಲ್ಲಿ ಅನುಮಾನವೇ ಇಲ್ಲ ಎನಿಸಿತು. ನನ್ನ ಪಾತ್ರದ ಬಗ್ಗೆಯೂ ಹೇಳಿದರು. ಮರು ಮಾತನಾಡದೆ ಅಭಿನಯಿಸಲು ಒಪ್ಪಿಕೊಂಡೆ ಎನ್ನಾತ್ತಾರೆ ನಾಯಕಿ ಸಂಪದ.

ಸ್ಯಾಂಡಲ್‌ವುಡ್ ಯುವರಾಜ ನಿಖಿಲ್‌ ನಿಶ್ಚಿತಾರ್ಥ ಡೇಟ್‌ ಫಿಕ್ಸ್!

ಕಿರುತೆರೆಯಲ್ಲಿ ಸಂಪದ ನೆಗೆಟಿವ್‌ ಪಾತ್ರಗಳಲ್ಲಿ ಮಿಂಚಿದವರು. ಸಹಜವಾಗಿಯೇ ಇಲ್ಲೂ ಅಂತಹದೇ ಪಾತ್ರ ಇದೆಯಾ ಎನ್ನುವ ಪ್ರಶ್ನೆಗೆ ಅವರು ಉತ್ತರಿಸಲು ನಿರಾಕರಿಸದರು. ಮೊದಲ ಸಿನಿಮಾದಲ್ಲಿ ನಟನೆಗೆ ಹೆಚ್ಚು ಅವಕಾಶ ಇರುವ ಪಾತ್ರವೇ ಸಿಕ್ಕಿದೆ ಎನ್ನುವುದಷ್ಟೇ ಅವರ ಉತ್ತರವಾಗಿತ್ತು.

click me!