ಕೆಜೆಎಫ್ ಭಾಗ ಎರಡರಿಂದ ಅನಂತ್ ನಾಗ್ ಹೊರಕ್ಕೆ ಬಂದ್ರಾ/ ಎಲ್ಲಿಂದ ಹೊರಟ ಸುದ್ದಿ ಇದು/ ಇಡೀ ಚಿತ್ರರಂಗಕ್ಕೆ ಶಾಕ್ ಕೊಟ್ಟ ಸುದ್ದಿ/ ಊಹಾಪೋಹ ಅಲ್ಲಗಳೆದ ಚಿತ್ರತಂಡ
ಬೆಂಗಳೂರು(ಫೆ.24) ಕನ್ನಡ ಚಿತ್ರರಸಿಕರಿಗೆ ಮಾತ್ರ ಅಲ್ಲ ಇಡೀ ಭಾರತೀಯ ಚಿತ್ರರಂಗಕ್ಕೆ ಇದೊಂದು ಶಾಕಿಂಗ್ ನ್ಯೂಸ್ ಎಂದೇ ಹೇಳಬಹುದು. ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್-2 ದಿಂದ ಹಿರಿಯ ನಟ ಅನಂತ್ ನಾಗ್ ಹೊರಕ್ಕೆ ಬಂದಿದ್ದಾರೆ ಎಂಬ ಸುದ್ದಿ ಸಂಚಲನ ತಂದಿದೆ. ಆದರೆ ಇದರ ಸತ್ಯಾಸತ್ಯೆ ಬಗ್ಗೆಯೂ ಚರ್ಚೆ ಆರಂಭವಾಗಿದೆ.
ರಾಕಿಂಗ್ ಸ್ಟಾರ್' ಯಶ್ ಅಭಿನಯದ 'ಕೆಜಿಎಫ್ ಚಾಪ್ಟರ್ 2' ಚಿತ್ರದ ಮೇಲೆ ಇಡೀ ದೇಶವೇ ಕಣ್ಣಿಟ್ಟಿದೆ. ರಾಕಿ ಭಾಯ್ ಅವತಾರದಲ್ಲಿ ಇನ್ನೊಮ್ಮೆ ಯಶ್ ಅವರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳ ಆತುರ ಹೆಚ್ಚಾಗಿದೆ. ಇದೆಲ್ಲದರ ನಡುವೆ ಅನಂತ್ ನಾಗ್ ಸುದ್ದಿ ಬಂದಿದೆ.
ಅಧೀರನ ನೆದುರು ರಾಕಿಭಾಯ್ ಫೈಟ್ ನೋಡಿದ್ದೀರಾ?
ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್ ಚಾಪ್ಟರ್ 1'ರಲ್ಲಿ ಆನಂದ್ ಇಂಗಳಗಿ ಎಂಬ ಪತ್ರಕರ್ತನ ಪಾತ್ರದಲ್ಲಿ ಅನಂತ್ ನಾಗ್ ಕಾಣಿಸಿಕೊಂಡಿದ್ದರು.. ರಾಕಿ ಭಾಯ್‌ನ ಇಡೀ ವೃತ್ತಾಂತವನ್ನು ಹೇಳುವುದೇ ಇದೇ ಇಂಗಳಗಿ. 'ಕೆಜಿಎಫ್ ಚಾಪ್ಟರ್ 1'ರಲ್ಲಿ ಅನಂತ್ ನಾಗ್-ಮಾಳವಿಕಾ ಅವಿನಾಶ್ ಕಾಂಬಿನೇಷನ್‌ನ ದೃಶ್ಯಗಳು ಪ್ರೇಕ್ಷಕರಿಗೆ ಹಿಡಿಸಿದ್ದವು. ಈಗ ಅನಂತ್ ನಾಗ್ ಅವರೇ ಚಿತ್ರದಲ್ಲಿ ಇಲ್ಲ ಎಂದಾದರೆ!
ಆದರೆ ಚಿತ್ರತಂಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಅನಂತ್ ನಾಗ್ ಅವರ ಕೆಲವು ದೃಶ್ಯಗಳ ಚಿತ್ರೀಕರಣ ಬಾಕಿ ಇದ್ದರೂ ಅವರು ಚಿತ್ರದಿಂದ ಹೊರಗೆ ಬಂದಿಲ್ಲ. ಅವರು ಚಿತ್ರದ ಭಾಗವಾಗಿಯೇ ಮುಂದುವರಿಯಲಿದ್ದಾರೆ ಎಂದು ನಿರ್ಮಾಪಕರ ಕಡೆಯಿಂದ ಉತ್ತರ ಸಿಕ್ಕಿದೆ.