
ಸಂದರ್ಭ: ಮುನಿರತ್ನ ಕುರುಕ್ಷೇತ್ರ ಚಿತ್ರದ ಶತದಿನೋತ್ಸವ ಸಂಭ್ರಮ. ಬೆಂಗಳೂರಿನ ಮತ್ತಿಕೆರೆಯಲ್ಲಿರುವ ಜೆಪಿ ಪಾರ್ಕ್ ಮೈದಾನದಲ್ಲಿ ನಡೆದ ಕಾರ್ಯಕ್ರಮ ಇದು.
‘ನನಗೆ ಒಂದು ಆಸೆ ಇದೆ. ಅದು ಡಿ ಬಾಸ್ ಚಿತ್ರದಲ್ಲಿ ಖಳನಾಯಕನಾಗಿ ನಟಿಸಬೇಕು. ದರ್ಶನ್ ಅವರಿಗೇ ನಾನೇ ವಿಲನ್ ಆಗಬೇಕು. ಈ ಆಸೆಯನ್ನು ದಯವಿಟ್ಟು ನಿರ್ಮಾಪಕ ಮುನಿರತ್ನ ಅವರೇ ಈಡೇರಿಸಬೇಕು’ ಎಂದು ವೇದಿಕೆ ಮೇಲೆ ಹೇಳಿದರು.
ದರ್ಶನ್ ಹೀರೋ ಆದ್ರೆ ನಾನು ವಿಲನ್ ಆಗ್ಲೇಬೇಕು; ಅಭಿಷೇಕ್ ಅಂಬರೀಶ್ ಹೊಸ ಡಿಮ್ಯಾಂಡ್!
ಇಷ್ಟಕ್ಕೂ ಅಭಿಷೇಕ್ ಯಾಕೆ ವಿಲನ್ ಆಗಬೇಕು ಅನಿಸಿದ್ದು. ಅದಕ್ಕೆ ಅವರೇ ವಿವರಣೆ ಕೊಟ್ಟರು. ‘ನನ್ನ ತಂದೆ ಬಿಟ್ಟರೆ ನನಗೆ ಅವರಷ್ಟೇ ಹೆಚ್ಚು ಬೈಯ್ದು ಬುದ್ಧಿ ಹೇಳುವುದು ದರ್ಶನ್ ಅವರು. ಒಮ್ಮೆ ನಮ್ಮ ತಂದೆಯವರೇ ನೀನು ನನ್ನ ಮಾತು ಕೇಳಲ್ಲ, ನಿನಗೆ ಆ ದರ್ಶನ್ ಸರಿ ಎನ್ನುತ್ತಿದ್ದರು. ಹೀಗಾಗಿ ನನ್ನ ಗದರುವುದು, ಬುದ್ಧಿ ಹೇಳುವುದು ದರ್ಶನ್ ಮಾತ್ರ. ಇದನ್ನೇ ಅವರು ತೆರೆ ಮೇಲೆ ಮಾಡಲಿ. ಅವರಿಂದ ಬೈಯಿಸಿಕೊಳ್ಳುವ, ಬುದ್ಧಿ ಹೇಳಿಕೊಂಡು ಸರಿ ಹೋಗುವ ವಿಲನ್ ಪಾತ್ರ ಮಾಡುತ್ತೇನೆ’ ಎಂದರು ಅಭಿಷೇಕ್.
ಎಕ್ಸಾಂ ಟೆನ್ಷನ್‌ಗೆ ನೋ ಹೇಳಿ; ಡಿ-ಬಾಸ್ ಕೊಟ್ಟ ಟಿಪ್ಸ್ ನೋಡಿ!
ಅಂದಹಾಗೆ ಹೀಗೆ ಅಭಿಷೇಕ್ ಮತ್ತು ದರ್ಶನ್ ಅವರ ಕಾಂಬಿನೇಷನ್ ಚಿತ್ರವನ್ನು ನಿರ್ಮಾಪಕ ಮುನಿರತ್ನ ಅವರೇ ಮಾಡಬೇಕು ಎಂದು ಅಭಿಷೇಕ್ ಹೇಳಿದ್ದಕೂ ಒಂದು ಕಾರಣ ಇದೆ. ‘ನಿಮ್ಮ ಬ್ಯಾನರ್ನಲ್ಲಿ ನಮ್ಮ ತಂದೆ ನಟಿಸಿದ್ದಾರೆ. ನಮ್ಮ ತಾಯಿ ನಟಿಸಿದ್ದಾರೆ. ಈಗ ನನಗೂ ಒಂದು ಅವಕಾಶ ಕೊಡಿ’ ಎಂದು ಅಭಿಷೇಕ್ ಹೇಳಿದಾಗ ‘ನಿಮ್ಮ ಆಸೆಯನ್ನು ಈ ವರ್ಷವೇ ಈಡೇರಿಸುತ್ತೇನೆ’ ಎಂದು ಮುನಿರತ್ನ ಭರವಸೆ ಕೊಟ್ಟರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.