ರಾಮನಗರದ ಜನತೆಗೆ ಸಿಕ್ತು ನಿಖಿಲ್‌ ಲಗ್ನ ಪತ್ರಿಕೆ; 'ಕುಮಾರಣ್ಣ' ಬರೆದ ಪತ್ರ ಓದಿ!

Suvarna News   | Asianet News
Published : Feb 24, 2020, 03:59 PM ISTUpdated : Feb 25, 2020, 11:32 AM IST
ರಾಮನಗರದ ಜನತೆಗೆ ಸಿಕ್ತು ನಿಖಿಲ್‌ ಲಗ್ನ ಪತ್ರಿಕೆ; 'ಕುಮಾರಣ್ಣ' ಬರೆದ ಪತ್ರ ಓದಿ!

ಸಾರಾಂಶ

ಏಪ್ರಿಲ್‌ 17ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಮತ್ತು ರೇವತಿ ಮದುವೆ ಆಮಂತ್ರಣ ಪತ್ರಿಕೆಯನ್ನು ರಾಮನಗರದ ಜನತೆಗೆ ಹಂಚುತ್ತಿದ್ದಾರೆ, ಆದರೆ, ಇದು ಫೇಕ್ ಎಂಬುವುದೀಗ ಬಹಿರಂಗವಾಗಿದೆ. 

ಸ್ಯಾಂಡಲ್‌ವುಡ್‌ ಉದಯೋನ್ಮುಖ ಪ್ರತಿಭೆ, 'ಜಾಗ್ವಾರ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರ್‌ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ವಿಭಿನ್ನ ಪಾತ್ರಗಳಲ್ಲಿ ಗುರುತಿಸಿಕೊಂಡಿರುವ ನಿಖಿಲ್‌, ಚಿತ್ರರಂಗದಲ್ಲಿ ಮಾತ್ರವಲ್ಲದೇ ರಾಜಕೀಯದಲ್ಲೂ ಹೆಸರು ಮಾಡಿದವರು. 

ಡಿಫರೆಂಟ್‌ ಆಗಿ ಕಾಣಿಸಿಕೊಂಡ ನಿಖಿಲ್‌- ರೇವತಿ; ರಿವೀಲ್‌ ಆಯ್ತು 10 ಫೋಟೋ!

ಇತ್ತೀಚಿಗೆ ಬೆಂಗಳೂರಿನ ತಾಜ್‌ ವೆಸ್ಟೆಂಡ್‌ನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ನಿಖಿಲ್‌, ರೇವತಿ ಏಪ್ರಿಲ್‌ 17ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ವೃತ್ತಿ ಜೀವನದಲ್ಲಿ ಕುಮಾರಸ್ವಾಮಿ ಅವರಿಗೆ ಮರು ಜನ್ಮನೀಡಿ, ಪುಣ್ಯ ಭೂಮಿ ಎಂದೇ ಭಾವಿಸಿರುವ ರಾಮನಗರದಲ್ಲಿ ಪುತ್ರನ ಮದುವೆ ಆಗಬೇಕೆಂಬುವುದು ದೊಡ್ಡ ಗೌಡರ ಮಗನ ಆಶಯ. ರಾಮನಗರ-ಚನ್ನಪಟ್ಟಣ ಮಧ್ಯೆ ಇರುವ 'ಜಾನಪದ ಲೋಕ'ದ ಬಳಿ ಅದ್ಧೂರಿಯಾಗಿ ಮದುವೆ ನಡೆಯಲಿದ್ದು, ಸಿದ್ದತೆಗಳು ಈಗಾಗಲೆ ಶುರುವಾಗಿದೆ. 

  

ರಾಮನಗರ ಜನತೆಗೆ 'ನಿಮ್ಮ ಪ್ರೀತಿಯ ಕುಮಾರಣ್ಣ' ಎಂದು ಪತ್ರ ಬರೆದು ಮನೆ-ಮನೆಗೂ ಆಮಂತ್ರಣ ಪತ್ರಿಕೆಯನ್ನು ಹಂಚಿದ್ದಾರೆ, ಎಂಬೊಂದು ಸುದ್ದಿ ಹರಿದಾಡುತ್ತಿದೆ. ಇದು ಫೇಕ್ ಪತ್ರಿಕೆ, ಅಲ್ಲದೇ ಕುಮಾರಸ್ವಾಮಿ ಅವರ ಸಹಿ ಇರುವ ಪತ್ರವೂ ಫೇಕ್ ಎಂದು ಹೇಳಲಾಗುತ್ತಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

34th Wedding Anniversary : ಅಂಬಿ ನೆನಪಲ್ಲಿ ಸುಮಲತಾ ಭಾವನಾತ್ಮಕ ಪೋಸ್ಟ್
ಡೆವಿಲ್ ಸಿನಿಮಾ ಬಿಡುಗಡೆಗೂ ಮುನ್ನವೇ ದರ್ಶನ್‌ಗೆ ಗುಡ್ ನ್ಯೂಸ್; ಅಭಿಮಾನಿಗಳೂ ಫುಲ್ ಖುಷ್!