ಮರ್ಫಿ ಸಿನಿಮಾದಲ್ಲಿ ಕಮಾಲ್ ಮಾಡಿದ ರೋಶನಿ ಪ್ರಕಾಶ್....ಸ್ಕಾಲರ್ಶಿಪ್ ಬಿಟ್ಟು ಸಿನಿಮಾ ಕಡೆ ಮುಖ ಮಾಡಿದ ಸುಂದರಿ.....
ಮರ್ಫಿ ಚಿತ್ರದ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿರುವ ರೋಶಿನಿ ಪ್ರಕಾಶ್ ಇದೀಗ ಆಸ್ಟ್ರೇಲಿಯಾ ಯೂನಿವರ್ಸಿಟಿಯಲ್ಲಿ ಸಿಕ್ಕಿರುವ ಸ್ಕಾಲರ್ಶಿಪ್ ಸೀಟ್ ಬಿಟ್ಟು ಬಣ್ಣದ ಪ್ರಪಂಚದ ಕಡೆ ಮುಖ ಮಾಡಿದ್ದಾರೆ. ಯಾಕೆ ಲೈಮ್‌ಲೈಟ್ ಪ್ರಪಂಚದ ಮೇಲೆ ಇಷ್ಟೋಂದು ಆಸಕ್ತಿ ಹುಟ್ಟಿದ್ದು ಎಂದು ಪ್ರಶ್ನೆ ಮಾಡಿದಾಗ 'ನಾನು ಥಿಯೇಟರ್ ಒಳಗೆ ಪ್ರವೇಶ ಮಾಡಿದಾಗ ತುಂಬಾ ಸೈಲೆಂಟ್ ಆಗಿತ್ತು ಆಗ ವೀಕ್ಷಕರಲ್ಲಿ ಒಬ್ಬರಾಗಿದ್ದ ಹಿರಿಯ ವ್ಯಕ್ತಿ ನನ್ನ ಬಳಿ ಬಂದು ಜಜನಿ ಎಂದು ಹೇಳುತ್ತಾರೆ...ಅದು ನನ್ನ ಪಾತ್ರದ ಹೆಸರು. ನಿಮ್ಮ ಮುಖವನ್ನು ಕೆಲವು ನಿಮಿಷಗಳ ಕಾಲ ನೋಡಬೇಕಿತ್ತು ಅಷ್ಟೇ ಎಂದು ಸೈಲೆಂಟ್ ಆಗಿ ನಡೆದುಕೊಂಡು ಹೋಗಿ ಬಿಡುತ್ತಾರೆ. ಆ ಕ್ಷಣ ನನಗೆ ಆಶ್ಚರ್ಯವಾಯ್ತು ಹಾಗೇ ಮನಸ್ಸಿನಲ್ಲಿ ಸಂಚಲನ ಸೃಷ್ಟಿ ಆಯ್ತು' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ರೋಶಿನಿ ಮಾತನಾಡಿದ್ದಾರೆ.
ಆ ದೇವರೇ ದಾರಿ ಮಾಡಿಕೊಟ್ಟಿದ್ದು:
undefined
'ಒಮ್ಮೆ ಶ್ರೀರಂಗಪಟ್ಟಣದಲ್ಲಿ ಇರುವ ನಿಮಿಷಾಂಭ ದೇವಸ್ಥಾನಕ್ಕೆ ಭೇಟಿ ನೀಡಿದ್ದೆ ಆಗ ನನಗೆ 14 ವರ್ಷ...ಆಗ ನಿರ್ದೇಶಕರೊಬ್ಬರು ನನ್ನನ್ನು ನೋಡಿ ಸಿನಿಮಾ ಆಫರ್ ಮಾಡುತ್ತಾರೆ. ಆಗ ನಾನು ಸಿನಿಮಾ ಒಪ್ಪಿಕೊಳ್ಳಲಿಲ್ಲ ಹಾಗೂ ನನ್ನ ಪೋಷಕರಿಗೂ ಹೇಳಲಿಲ್ಲ. ಆದರೆ ನನ್ನ ಇಂಜಿನಿಯರಿಂಗ್‌ನ ಮೂರನೇ ವರ್ಷ ವ್ಯಾಸಂಗ ಮಾಡುತ್ತಿರುವಾಗ ಹಲವು ಸಿನಿಮಾಗಳ ಆಫರ್ ಬಂತು. ಆಗ ಅರ್ಥವಾಗಲು ಶುರುವಾಗಿತ್ತು...ಬಹುಷ ಆ ದೇವರೇ ನನ್ನ ಜೀವದ ಹಾದಿ ಇದು ಎಂದು ತೋರಿಸುತ್ತಿರಬೇಕು ಅಂತ.
ನನಗೂ ಸಮಸ್ಯೆ ಇದೆ ಚಿಕಿತ್ಸೆ ಪಡೆಯುತ್ತಿರುವೆ, ನಾಲ್ಕು ಸೆಷನ್ ಉಳಿದಿದೆ: ಆರೋಗ್ಯದ ಬಗ್ಗೆ
ಸ್ಕಾಲರ್ಶಿಪ್ ಬಿಟ್ಟೆ:
'ನಾನು ಒಳ್ಳೆಯ ವಿದ್ಯಾರ್ಥಿನಿ ಆಗಿ ಒಳ್ಳೆ ಅಂಕಗಳನ್ನು ಪಡೆಯುತ್ತಿದೆ, ಕೊನೆ ಕ್ಷಣದಲ್ಲಿ ಓದಿದ್ದರೂ ಮಾರ್ಕ್ಸ್ ಬರುತ್ತಿತ್ತು. ಹೀಗಾಗಿ ಆಸ್ಟ್ರೇಲಿಯಾ ಯೂನಿವರ್ಸಿಟಿಯಲ್ಲಿ ಮಾಸ್ಟರ್ಸ್ ಮಾಡಲು ನನಗೆ ಒಳ್ಳೆ ಸ್ಕಾಲರ್ಶಿಪ್ ಅವಕಾಶ ಸಿಕ್ಕಿತ್ತು ಆದರೆ ಒಂದೆರಡು ಸಲ ಯೋಚನೆ ಮಾಡದೆ ನಾನು ನಟನೆಯ ಕೈಗೆತ್ತುಕೊಂಡೆ. ಈ ಹಿಂದೆ ಬ್ಯೂಟಿ ಪೇಜೆಂಟ್‌ನಲ್ಲಿ ಸ್ಪರ್ಧಿಸಲು ಸಹಿ ಮಾಡಿದ್ದೆ...ನನ್ನ ಸ್ವಿಮ್ಮಿಂಗ್ ರೌಂಡ್‌ಗೆ ನನ್ನ ತಾಯಿನೇ ನನಗೆ ಮೊದಲು ಬಿಕಿನಿ ತಂದುಕೊಟ್ಟಿದ್ದು. ಆರಂಭದಲ್ಲಿ ನನಗೆ ತುಂಬಾ ನಾಚಿಕೆ ಆಗುತ್ತಿತ್ತು ಅದರೆ ಅಮ್ಮನೇ ಧೈರ್ಯ ತುಂಬಿದ್ದು.