ಕನ್ನಡ ಹಾಡು ಹಾಡಿಸಿದ್ದು ಮೊದಲು ವಿಷ್ಣು ಸರ್, ಸೋನು ನಿಗಮ್ ಹೇಳಿದ ಗುಟ್ಟು!

By Shriram Bhat  |  First Published Nov 8, 2024, 1:18 PM IST

ಖ್ಯಾತ ಗಾಯಕ ಸೋನು ನಿಗಮ್ ಅವರು ಈಗ ಹೆಚ್ಚಾಗಿ ವಿದೇಶದಲ್ಲಿ ಗಾನಸುಧೆ ಹರಿಸುವುದರಲ್ಲಿಯೇ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಆರ್ಕೆಸ್ಟ್ರಾ ಒಂದರಲ್ಲಿ ಹಾಡುತ್ತ ಗಾಯಕ ಸೋನು ನಿಗಮ್ ಅವರು ಕನ್ನಡದ 'ದಾದಾ' ಖ್ಯಾತಿಯ ನಟ ಸಾಹಸಸಿಂಹ ವಿಷ್ಣುವರ್ಧನ್..


ಬಾಲಿವುಡ್ ಗಾಯಕ ಸೋನು ನಿಗಮ್ (Sonu Nigam) ಅವರು ಕನ್ನಡದವರೇ ಎಂಬಷ್ಟು ಕನ್ನಡಿಗರಿಗೆ ಆಪ್ತರಾಗಿದ್ದಾರೆ. ಯೋಗರಾಜ್ ಭಟ್ ನಿರ್ದೇಶನ, ಮನೋಮೂರ್ತಿ ಸಂಗೀತದ 'ಮುಂಗಾರು ಮಳೆ' ಸಿನಿಮಾ (Mungaru Male) ಮೂಲಕ ಹಿಂದಿ ಗಾಯಕ ಸೋನು ನಿಗಮ್ ಅವರು ಕನ್ನಡನಾಡಿನಲ್ಲಿ ಫೇಮಸ್ ಆದರು. ಅಲ್ಲಿಂದ ಮುಂದೆ ಅವರು ನಿರಂತರವಾಗಿ ಬಹಳಷ್ಟು ಕನ್ನಡದ ಸಿನಿಮಾ ಹಾಡುಗಳನ್ನು ಹಾಡಿದ್ದಾರೆ. ಇತ್ತೀಚೆಗೆ ಸೋನು ನಿಗಮ್ ಕನ್ನಡದಲ್ಲಿ ಹಾಡುವುದು ಕಡಿಮೆ ಎನ್ನಬಹುದು. ಆದರೆ, ಅವರು ಈಗ ಸಿನಿಮಾ ಹಾಡು ಹಾಡುವುದೇ ಕಡಿಮೆ ಆಗಿದೆ. 

ಖ್ಯಾತ ಗಾಯಕ ಸೋನು ನಿಗಮ್ ಅವರು ಈಗ ಹೆಚ್ಚಾಗಿ ವಿದೇಶದಲ್ಲಿ ಗಾನಸುಧೆ ಹರಿಸುವುದರಲ್ಲಿಯೇ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಆರ್ಕೆಸ್ಟ್ರಾ ಒಂದರಲ್ಲಿ ಹಾಡುತ್ತ ಗಾಯಕ ಸೋನು ನಿಗಮ್ ಅವರು ಕನ್ನಡದ 'ದಾದಾ' ಖ್ಯಾತಿಯ ನಟ ಸಾಹಸಸಿಂಹ ವಿಷ್ಣುವರ್ಧನ್ (Vishnuvardhan) ಅವರ ಬಗೆಗಿನ ಸೀಕ್ರೆಟ್‌ ಒಂದನ್ನು ರಿವೀಲ್ ಮಾಡಿದ್ದಾರೆ. ಸೋನು ನಿಗಮ್ ಈ ಬಗ್ಗೆ 'ವಿಷ್ಣು ಸರ್ ನನಗೆ ಈ ಸಾಂಗ್ ಹಾಡೋದಕ್ಕೆ ಹೇಳಿದ್ರು..' ಎಂದು ಹೇಳಿ ಹಾಡನ್ನು ಕೂಡ ಹಾಡಿದ್ದಾರೆ. ಅದು ಅವರು ಮೊಟ್ಟ ಮೊದಲು ಹಾಡಿದ ಕನ್ನಡ ಗೀತೆ ಎಂಬ ಸೀಕ್ರೆಟ್‌ ಸಹ ಸೋನು ನಿಗಮ್ ರೀವೀಲ್ ಮಾಡಿದ್ದಾರೆ. 

Latest Videos

ಹಾಗಿದ್ರೆ ಶಿವಣ್ಣಂಗೆ 'ಜೈ' ಅಂದೇಬಿಟ್ರು ದರ್ಶನ್ ಫ್ಯಾನ್ಸ್; ಶಿವರಾಜ್‌ಕುಮಾರ್ ಹೇಳಿದ್ದೇನು?

ಹಾಗಿದ್ದರೆ ಆ ಹಾಡು ಯಾವುದು? ಇಲ್ಲಿದೆ ನೋಡಿ.. ಹೋಗಬೇಕು ಬಂದೋರೆಲ್ಲಾ, ನಿರಂತರ ನಿಂತೋರಿಲ್ಲ, ಹೋದೋರು ಎಂದೂ ಪುಣ್ಯವಂತರು.. ಎಲ್ಲೋ ಯಾರೋ ಇದು, ಬಾಳಿನಲ್ಲಿ ಬಂದೆವು ಒಂದಾಗಿ.. ಆಟ ಆದ ಮೇಲೆ ವೇಷ ಬಿಚ್ಟಿ ಹೋಗಲು ದೂರಾಗಿ..' ಎಂದು ನೆನಪಿಸಿಕೊಂಡು ಹಾಡಿದ್ದಾರೆ. ಈ ಹಾಡು ಹಾಡಿ ಬಳಿಕ ಸೋನು ನಿಗಮ್ ಅವರು 'ಮುಝೆ ಯಾದ್ ಹೈ, ಫಸ್ಟ್ ಟೈಮ್ ವಿಷ್ಣು ಜೀನೇ ಹಮ್ ಕೋ ಮುಂಬೈ ಸೇ ಬುಲಾಯಾ ಥಾ ಯೇ ಸಾಂಗ್ ಗಾನೇ ಕೇಲಿಯೇ..' ಎಂದಿದ್ದಾರೆ. ಈಗ ಅದನ್ನು ನೆನಪಿಸಿಕೊಂಡು ಹಾಡಿ ದಾದಾ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ ಸೂನು ನಿಗಮ್!

ಒಟ್ಟಿನಲ್ಲಿ, ಸ್ಟಾರ್ ನಟ ಮಾತ್ರವಲ್ಲದೇ ಗೀತ ಸಾಹಿತಿ ಹಾಗೂ ಗಾಯಕರಾಗಿಯೂ ವಿಷ್ಣುವರ್ಧನ್ ತಮ್ಮಿಂದಾದ ಕೆಲಸ ಮಾಡಿದ್ದರು. ಈ ಹಾಡನ್ನು ನಟ ವಿಷ್ಣುವರ್ಧನ್ ಅವರೇ ಬರೆದಿದ್ದು ಎನ್ನಲಾಗಿದೆ. ಜೊತೆಗೆ, ಈ ಹಾಡಿನ ಟ್ಯೂನ್ ಕೂಡ ಅವರೇ ಕೊಟ್ಟು ಗಾಯಕ ಸೋನು ನಿಗಮ್ ಅವರ ಬಳಿ ಹಾಡಲು ಹೇಳಿದ್ದರು ಎಂಬ ಮಾಹಿತಿ ಇದೆ. ಸೋನು ನಿಗಮ್ ಅವರ ಕಂಠ ಮಾಧುರ್ಯಕ್ಕೆ ಮನಸೋತಿದ್ದ ನಟ ವಿಷ್ಣು ಅವರು, ಸೋನುರ ಅಪ್ಪಟ ಅಭಿಮಾನಿಯಾಗಿದ್ದರು ಎನ್ನಲಾಗಿದೆ. 

ಭೇಟಿಯಾದ ಒಂದು ತಿಂಗಳಲ್ಲೇ ನಾನು ಗರ್ಭಿಣಿಯಾದೆ, ಅಷ್ಟು ಆತುರ ಅವರಲ್ಲಿತ್ತು: ಅಮಲಾ ಪೌಲ್!

 

 

click me!