ನನಗೂ ಸಮಸ್ಯೆ ಇದೆ ಚಿಕಿತ್ಸೆ ಪಡೆಯುತ್ತಿರುವೆ, ನಾಲ್ಕು ಸೆಷನ್ ಉಳಿದಿದೆ: ಆರೋಗ್ಯದ ಬಗ್ಗೆ ಶಿವರಾಜ್‌ಕುಮಾರ್ ಸ್ಪಷ್ಟನೆ

Published : Nov 08, 2024, 03:01 PM IST
ನನಗೂ ಸಮಸ್ಯೆ ಇದೆ ಚಿಕಿತ್ಸೆ ಪಡೆಯುತ್ತಿರುವೆ, ನಾಲ್ಕು ಸೆಷನ್ ಉಳಿದಿದೆ: ಆರೋಗ್ಯದ ಬಗ್ಗೆ ಶಿವರಾಜ್‌ಕುಮಾರ್ ಸ್ಪಷ್ಟನೆ

ಸಾರಾಂಶ

ತಮ್ಮ ಆರೋಗ್ಯದ ಬಗ್ಗೆ ಜನರಿಗೆ ಮಾಹಿತಿ ನೀಡಿದ ಶಿವಣ್ಣ. ಚಿಕಿತ್ಸೆ ನಡೆಯುತ್ತಿದೆ ಅಂದರೂ ಅಭಿಮಾನಿಗಳಲ್ಲಿ ಆತಂಕ....

ಕನ್ನಡ ಚಿತ್ರರಂಗ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ತಮ್ಮ 62ನೇ ವಯಸ್ಸಿನಲ್ಲೂ ಬ್ಯಾಕ್ ಟು ಬ್ಯಾಕ್ ಸಿನಿಮಾ ಪ್ರಾಜೆಕ್ಟ್‌ಗಳಿಗೆ ಸಹಿ ಮಾಡುತ್ತಾ, ಹಲವು ಪ್ರಾಜೆಕ್ಟ್‌ಗಳು ರಿಲೀಸ್‌ಗೆ ಸಜ್ಜಾಗಿದೆ. ಸದ್ಯ ಭೈರತಿ ರಣಗಲ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಶಿವಣ್ಣ ಎನರ್ಜಿ ಬಗ್ಗೆ ಜನರು ಚರ್ಚೆ ಮಾಡುತ್ತಿದ್ದಾರೆ. ಶಿವಣ್ಣ ಇದ್ದಲ್ಲಿ ಫುಲ್ ಎಂಟರ್ಟೈನ್ಮೆಂಟ್, ಸೆಂಟಿಮೆಂಟ್ ಆಂಡ್ ಮಾಸ್ ಇದ್ದೇ ಇರುತ್ತದೆ. ರುಶ್ಮಿಣಿ ವಸಂತ್ ಮತ್ತು ಛಾಯಾ ಸಿಂಗ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದು, ಶಿವಣ್ಣ ಪ್ರಚಾರದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. 

ಕೆಲವು ದಿನಗಳಿಂದ ಇಂಡಸ್ಟ್ರಿಯಲ್ಲಿ ಶಿವಣ್ಣ ಆರೋಗ್ಯದ ಬಗ್ಗೆ ಚರ್ಚೆ ಶುರುವಾಗಿದೆ. ಹುಷಾರಿ ಹುಷಾರಿಲ್ಲ ಎಂದು ಅನೇಕರು ಮಾತನಾಡುತ್ತಿದ್ದಾರೆ ಈ ಗೊಂದಲಕ್ಕೆ ಸ್ವತಃ ಶಿವಣ್ಣ ಖಾಸಗಿ ಯೂಟ್ಯೂಬ್ ಚಾನೆಲ್‌ನಲ್ಲಿ ಸ್ಪಷ್ಟನೆ ನೀಡಿದ್ದರು.'ನಾನು ಮನುಷ್ಯ ನನಗೂ ಸಮಸ್ಯೆ ಇದೆ. ನನಗೆ ಬಂದಿದೆ ನಾನು ಚಿಕಿತ್ಸೆ ಪಡೆಯುತ್ತಿರುವೆ. ನನಗೆ ನಾಲ್ಕು ಸೆಷನ್‌ ಟ್ರೀಟ್ಮೆಂಟ್ ಉಳಿದಿದೆ' ಎಂದು ಹೇಳಿದ್ದಾರೆ. ಯಾವ ಚಿಕಿತ್ಸೆ ಏನು ಸಮಸ್ಯೆ ಎಂಬ ಕ್ಲಾರಿಟಿ ಯಾರಿಗೂ ಇಲ್ಲ ಆದರೆ ಚಿಕಿತ್ಸೆಗೆಂದು ವಿದೇಶಕ್ಕೆ ಹಾರಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ. 

ಫೇಮಸ್ ಆಗಮ್ಮ ನೋಡೋದಕ್ಕೆ ತುಂಬಾ ಚಲೋ ಇದ್ಯಾ; ಈ ಕಿರುತೆರೆ ನಟಿ ಯಾರೆಂದು ಗೆಸ್ ಮಾಡಿ

ಇನ್ನು ಶಿವಣ್ಣ ಆರೋಗ್ಯದಲ್ಲಿ ಏರುಪೇರು ಆಗುತ್ತಿರುವ ವಿಚಾರ ಅಭಿಮಾನಿಗಳ ಕಿವಿಗೆ ಬೀಳುತ್ತಿದ್ದಂತೆ ಆತಂಕ ಶುರುವಾಗಿದೆ. ಸಿನಿಮಾ ಶೂಟಿಂಗ್ ಮತ್ತು ರಿಯಾಲಿಟಿ ಶೋ ಶೂಟಿಂಗ್‌ಗಳು ಆದಷ್ಟು ಮುಗಿಸಿ ಇನ್ನು ಉಳಿದ ಭಾಗವನ್ನು ಮುಂದಿನ ದಿನಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದಾರೆ. ಅಣ್ಣನಿಗೆ ಏನೇ ಆದರೂ ಜೊತೆಯಲ್ಲಿ ನಾವಿದ್ದೀವಿ ಅನ್ನೋ ಧೈರ್ಯವನ್ನು ದೊಡ್ಡಮನೆ ಅಭಿಮಾನಿಗಳು ನೀಡುತ್ತಿದ್ದಾರೆ. ಆರೋಗ್ಯದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಚಿಕಿತ್ಸೆ ಹೋಗಿ ಬಂದ ಬಳಿಕ ನನ್ನ ಕೆಲಸವನ್ನು ಮುದುವರೆಸಲಿದ್ದೇನೆ ಎಂದು ಶಿವಣ್ಣ ಭರವಸೆ ಕೊಟ್ಟಿದ್ದಾರೆ. 

ಬರ್ತ್​​ಡೇ ಸಂಭ್ರಮದಲ್ಲಿ ಸ್ವೀಟಿ ಅನುಷ್ಕಾ ಶೆಟ್ಟಿ; ಘಾಟಿ ಅವತಾರದಲ್ಲಿ ಮಾಸ್ ಎಂಟ್ರಿ!

ನಿರ್ಮಾಣ ಸಂಸ್ಥೆ 'ಗೀತಾ ಪಿಕ್ಚರ್ಸ್‌'ನ ಅಡಿಯಲ್ಲಿ ಪ್ರೊಡಕ್ಷನ್ ನಂ 3 ಹೆಸರಿನಲ್ಲಿ ಶಿವಣ್ಣ ಸಿನಿಮಾವನ್ನು ಪತ್ನಿ ಗೀತಾ ನಿರ್ಮಾಣ ಮಾಡುತ್ತಿದ್ದಾರೆ. ಪ್ರಭುದೇವ ಶಿವಣ್ಣ ನಟನೆಯ ಕರಟಕ ದಮನಕ ಸಿನಿಮಾ ಅಷ್ಟಾಗಿ ಯಶಸ್ಸು ಕಾಣಲಿಲ್ಲ ಆದರೆ ಹಾಡುಗಳು ಸೂಪರ್ ಹಿಟ್ ಆಗಿದೆ. ಈ ಹಿಂದೆ ತೆರೆ ಕಂಡಿರುವ ಕ್ಯಾಪ್ಟನ್ ಮಿಲ್ಲರ್, ವೇದ, ಗೋಸ್ಟ್‌, ಜೈಲರ್ ಸೇರಿದಂತೆ ಹಲವು ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಧೂಳ್ ಎಬ್ಬಿಸಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?