ನಾನು ಫ್ಯಾಮಿಲಿ ಜೊತೆಗಿಂತ ಕಿಟ್ಟಿ ಜೊತೆಗೆ ಜಾಸ್ತಿ ಟೈಮ್ ಕಳೀತೀನಿ. ಕಿಟ್ಟಿ ಇನ್ ಟೈಂ ಬರ್ತಾರೆ. ನಾನು ಚೆನ್ನಾಗಿ ಕಂಡರೂ ಅವ್ರೇ ಕಾರಣ. ನಾನು ಚೆನ್ನಾಗಿ ಕಾಣದಿದ್ರೂ ಅವರೇ ಕಾರಣ. ಕಿಟ್ಟಿ ತುಂಬಾನೆ ಸ್ಟ್ರಿಕ್ಟ್. ಶೂಟಿಂಗ್ ಇದ್ದಾಗ ಬೇಗ ಎದ್ದು ವರ್ಕೌಟ್ ಮಾಡ್ತೀನಿ ಎಂದು ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್ ಹೇಳಿದರು.
ನಾನು ಫ್ಯಾಮಿಲಿ ಜೊತೆಗಿಂತ ಕಿಟ್ಟಿ ಜೊತೆಗೆ ಜಾಸ್ತಿ ಟೈಮ್ ಕಳೀತೀನಿ. ಕಿಟ್ಟಿ ಇನ್ ಟೈಂ ಬರ್ತಾರೆ. ನಾನು ಚೆನ್ನಾಗಿ ಕಂಡರೂ ಅವ್ರೇ ಕಾರಣ. ನಾನು ಚೆನ್ನಾಗಿ ಕಾಣದಿದ್ರೂ ಅವರೇ ಕಾರಣ. ಕಿಟ್ಟಿ ತುಂಬಾನೆ ಸ್ಟ್ರಿಕ್ಟ್. ಶೂಟಿಂಗ್ ಇದ್ದಾಗ ಬೇಗ ಎದ್ದು ವರ್ಕೌಟ್ ಮಾಡ್ತೀನಿ ಎಂದು ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್ ಹೇಳಿದರು. ಈ ಏರಿಯಾ ನನಗೆ ತುಂಬಾ ಪರಿಚಯ. ಇಲ್ಲೊಂದು ಮನೆಯಿದೆ. ನನ್ನ ತಂಗಿ ಇರೋದು ಇಲ್ಲೆ.
ತುಂಬಾ ದಿನ ಆದ್ಮೇಲೆ ಈ ಏರಿಯಾಗೆ ಬಂದಿದ್ದೀನಿ. ಶೂಟಿಂಗ್ ಇಲ್ಲಾಂತ ನಾನು ಸುಮ್ಮನೇ ಕೂತಿಲ್ಲ. ನಾನು ತುಂಬಾ ಬ್ಯುಸಿ ಇದ್ದೀನಿ. ನಾನು ಯಾವ ವಿಚಾರದಲ್ಲೂ ಚೀಟ್ ಮಾಡಿಲ್ಲ. ಚೀಟ್ ಮಾಡೋದಾದ್ರೆ ನಾನು ಹೇಳಿನೇ ಚೀಟ್ ಮಾಡ್ತೀನಿ ಎಂದರು. ಇವತ್ತು ವ್ಯಾಲೆಂಟೈನ್ ಡೇ ಅಂತಾ ಗೊತ್ತಿರಲಿಲ್ಲ. ಅವ್ರು ಕರೆದ್ರು ನಾನೂ ಒಪ್ಪಿಕೊಂಡೆ. ಈಗ ಫ್ಯಾಮಿಲಿ ಜೊತೆ ಹೋಗಿ ಸೆಲೆಬ್ರೇಷನ್ ಮಾಡ್ಬೇಕು. ನನ್ನಿಂದ ಕನ್ನಡ ಚಿತ್ರರಂಗ ಅಲ್ಲ. ಚಿತ್ರರಂಗಕ್ಕಾಗಿ ನಾನು ಏನು ಮಾಡ್ಬೇಕು ಅಂತಾ ಸದಾ ಯೋಚನೆ ಮಾಡ್ತಿದ್ದೀನಿ. ಹೊಸ ಹೀರೋಗಳಿಗೆ ಸಪೋರ್ಟ್ ಮಾಡಿ.
ಆಪ್ತ ಸಹಾಯಕನ ಮಗುವಿಗೆ ಯಶ್ ದಂಪತಿ ದುಬಾರಿ ಗಿಫ್ಟ್: ಚಿನ್ನದ ಸರ ಗಿಫ್ಟ್ ಕೊಟ್ಟ ರಾಕಿ ಭಾಯ್!
ನಾಲ್ಕು ಜನ ಹೀರೋಗಳಿಗಷ್ಟೇ ಸಿನಿಮಾ ಮಾಡಿ ಅಂತಾ ಹೇಳೋದಲ್ಲ. ಮಾಡಿದ ಸಿನಿಮಾ ಎಲ್ಲ ಚೆನ್ನಾಗಿಲ್ಲ ಅಂತಾ ಹೇಳೋದಲ್ಲ. ಮಾಡಿರೋ ಸಿನಿಮಾಗಳೆಲ್ಲ ಹಿಟ್ ಆಗಲ್ಲ.. ಬರ್ತಿರೋ ಸಿನಿಮಾಗಳಿಗೆ ಸಪೋರ್ಟ್ ಮಾಡಿ. ಚಾಲೆನ್, ಸ್ಯಾಟಲೈಟ್ ರೈಟ್ಸ್ ತಗೋಬೇಕು. ಆಗ ಸಿನಿಮಾಗಳ ಸಂಖ್ಯೆ ಜಾಸ್ತಿ ಆಗುತ್ತೆ. ಇಂಡಸ್ಟ್ರಿಯವ್ರು ನೆಗಟಿವ್ ಆಗಿ ಥಿಂಕ್ ಆಗ್ಬೇಡಿ. ಪ್ರಶಾಂತ್ ನೀಲ್ ಉಗ್ರಂ ಮಾಡಿದಾಗ ಯಾರೂ ಸ್ಯಾಟಲೈಟ್ ರೈಟ್ಸ್ ತಗೋಳ್ಳಿಲ್ಲ. ರಿಲೀಸ್ ಆದ್ಮೇಲೆ ಎಲ್ಲಾ ಮಾತಾಡಿದ್ರು ಎಂದು ಯಶ್ ತಿಳಿಸಿದರು.